Amruthadhare ;ಲವ್-ಧೋಖಾ ;ಮಲ್ಲಿ ಹೊಸ ಆರಂಭ-ಜೈದೇವ್ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಾನಾ ಪಿಎ?
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಕುತಂತ್ರದಿಂದ ಎಲ್ಲ ಆಸ್ತಿಯನ್ನು ಕಬಳಿಸಿದ್ದಾನೆ. ದಿವಾನ್ ಸಾಮ್ರಾಜ್ಯದ ರಾಜಾ ಆಗಿದ್ದಾನೆ. ಆದರೂ ಕೂಡ ಜೈದೇವ್ ಸಮಾಧಾನ ಇಲ್ಲ. ನೆಮ್ಮದಿ ಇಲ್ಲ. ತನ್ನ ಮೊದಲ ಮಡದಿ ಮಲ್ಲಿಯನ್ನು ದೂರ ಕೂಡ ಮಾಡದ.. ಕೇಳಿದರೂ ವಿಚ್ಛೇದನವನ್ನು ಕೂಡ ಕೊಡಲು ಒಪ್ಪದ ಜೈದೇವ್ ಸದ್ಯ ಮಲ್ಲಿಯ ನೆಮ್ಮದಿಯನ್ನು ಹಾಳು ಮಾಡಲು ಮುಂದಾಗಿದ್ದಾನೆ. ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು,
ಕಣ್ಣೀರಿನಲ್ಲಿಯೇ ಕೈ ತೊಳೆದುಕೊಳ್ಳಬೇಕು ಎಂದು ಅಂದುಕೊಂಡಿದ್ದಾನೆ. ದಿಯಾ ಎದುರು ಕೂಡ ಇದೇ ಮಾತನ್ನು ಹೇಳದ್ದು ದಿಯಾ ಮನದಲ್ಲಿಯೇ ಜೈದೇವ್‌ಗೆ ಶಾಪ ಹಾಕಿದ್ದಾಳೆ. ಇವನನ್ನು ಬೀದಿಗೆ ತರುವವರೆಗೆ ನನಗೆ ನೆಮ್ಮದಿ ಇಲ್ಲ ಎಂದುಕೊಂಡಿದ್ದಾಳೆ. ದಿಯಾಳ ಉದ್ದೇಶವನ್ನು ಅರಿಯದ ಜೈದೇವ್ ಸದ್ಯ ತನ್ನ ಪ್ಲ್ಯಾನ್‌ನ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾನೆ. ಧಾರಾವಾಹಿಯಲ್ಲಿ ದೊಪ್ಪನೆ ಪ್ರತ್ಯಕ್ಷವಾದ ತನ್ನ ಪಿಎಗೆ ಪ್ರಾಣ ಬೇಕಾದರೂ ಕೊಡ್ತೀಯಾ ಎಂದೆಲ್ಲಾ ಕೇಳಿ ಛೂ ಬಿಟ್ಟಿದ್ದಾನೆ.

ನೀನು ಒಬ್ಬಳನ್ನು ಲವ್ ಮಾಡಬೇಕು, ನೀನು ಇಲ್ಲದೇ ಬದುಕೇ ಇಲ್ಲ ಎಂಬ ಭಾವನೆ ಅವಳಲ್ಲಿ ಬರಬೇಕು ಎಂದು ಹೇಳಿದ್ದಾನೆ. ಅವಳನ್ನು ಇಂಪ್ರೆಸ್ ಮಾಡಬೇಕು ಎಂದಿದ್ದಾನೆ. ಆದರೆ, ಆರಂಭದಲ್ಲಿ ಇದಕ್ಕೆ ಹಿಂದೇಟು ಹಾಕುವ ಪಿಎ ಹುಡುಗಿಯರಿಗೂ ನನಗೂ ಆಗಿ ಬರಲ್ಲ ಬಾಸ್ ಎಂದು ಹೇಳಿದ್ದಾನೆ. ನನಗೆ ವಯಸ್ಸಿನಲ್ಲಿ ನನಗಿಂತ ದೊಡ್ಡವರು ಇರಬೇಕು ಹಾಗಿದ್ದರೆ ಮಾತ್ರ ಇಷ್ಟ ಎಂದು ಹೇಳುತ್ತಾನೆ. ಚೈಲ್ಡ್ ಚಪಾತಿಗಳ ಜೊತೆ ಲವ್ ಮಾಡಿದರೆ ದಿನ ನಿತ್ಯ ಕಿರಿಕಿರಿಯಾಗುತ್ತೆ ಎಂದೆಲ್ಲಾ ಕಥೆ ಹೊಡೆಯುತ್ತಾನೆ.
ಆದರೆ ನೀಡಿದ ಕೆಲಸ ಮಾಡಲೇಬೇಕು ಎಂಬ ಆದೇಶ ನೀಡಿದಾಗ ಮರು ಮಾತನಾಡದೇ ಒಪ್ಪಿಕೊಂಡಿದ್ದಾನೆ. ಹೀಗಾಗಿ ಈಗ ಮಲ್ಲಿಯನ್ನು ಲವ್ ಮತ್ತು ಧೋಖಾ ಖೆಡ್ಡಾಗೆ ಬೀಳಿಸುವ ಕಾರ್ಯಕ್ರಮ ಶುರುವಾಗಿದೆ. ಮಲ್ಲಿಯನ್ನು ನೋಡುತ್ತಿದ್ದಂತೆಯೇ ನನಗೆ ಮೊದಲೇ ಲವ್ ಆಗಿದೆ, ಇವರು ನೋಡಿದರೆ ಡ್ರಾಮಾ ಮಾಡಬೇಕು ಅಂತೇಳ್ತಿದ್ದಾರೆ ಎಂದು ಮನದಲ್ಲಿಯೇ ಮಂಡಿಗೆ ತಿಂದಿದ್ದಾನೆ. ಆದರೆ ಇದು ಲವ್ ಅಟ್ ಫಸ್ಟ್ ಸೈಟಾ..? ಅಥವಾ ಈ ಮೊದಲಿಂದ ಮಲ್ಲಿಗೆ ಪಿಎ ಪರಿಚಯ ಇದೆಯಾ..? ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಸದ್ಯ ಹಲವರು ಕಥೆಯನ್ನು ಊಹೆ ಮಾಡುತ್ತಿದ್ದು ಮಲ್ಲಿ ಮತ್ತು ಪಿಎ ನಡುವೆ ಪ್ರೇಮಾಂಕುರವಾಗುತ್ತೆ.. ಆ ನಂತರ ಸತ್ಯ ಗೊತ್ತಾಗುತ್ತೆ..ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ.. ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಮಲ್ಲಿ ಜೊತೆ ಪಿಎನೇ ತನ್ನ ಬಾಸ್ ಜೈದೇವ್ ಖೆಡ್ಡಾಗೆ ತೋಡಿದರೂ ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಳ್ಳೆ ಕಾನ್ಸೆಪ್ಟ್..ಮಲ್ಲಿ ಜೀವನಕ್ಕೆ ಹೊಸ ಆರಂಭ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಜೈದೇವ್ ಎದುರು ಎರಡನೇ ಪತ್ನಿ ದಿಯಾ ಮುಖವಾಡ ಕೂಡ ಇನ್ನೂ ಕಳಚಿ ಬಿದ್ದಿಲ್ಲ. ಮುಂದೆ ಗೊತ್ತಾದಾಗ ಜೈದೇವ್ ಪ್ರತಿಕ್ರಿಯೆ ಹೇಗಿರುತ್ತೆ..? ಅಷ್ಟರಲ್ಲಿ ಜೈದೇವ್ ಬೀದಿಗೆ ಬಿದ್ದಿರುತ್ತಾನಾ..? ಬೀದಿಗೆ ಬಂದ ಮೇಲೆ ಮಲ್ಲಿ ಹಿಂದೆ ಓಡುತ್ತಾನಾ..? ಮಲ್ಲಿ ಆಗ ಜೈದೇವ್‌ನ ಹತ್ರ ಸೇರಿಸಿಕೊಳ್ತಾಳಾ..? ಎಂಬ ಇತ್ಯಾದಿ ಪ್ರಶ್ನೆಗಳು ಕೂಡ ಧಾರಾವಾಹಿ ಪ್ರೇಕ್ಷಕರನ್ನು ಕಾಡುತ್ತಿವೆ.
ಮತ್ತೊಂದು ಕಡೆ ಭಾಗ್ಯ ಬಾಯಲ್ಲಿ ಮಾತು ಕೇಳಿ ಶಕುಂತಲಾ ಬೆಚ್ಚಿ ಬಿದ್ದಿದ್ದಾಳೆ. ಈ ಹಿನ್ನೆಲೆ ಅಮ್ಮ-ಮಗ ಇಬ್ಬರು ಸೇರಿ ಮುಂದೆ ಮತ್ಯಾವ ಪ್ಲ್ಯಾನ್ ಮಾಡುತ್ತಾರೆ ಎನ್ನುವ ಕುತೂಹಲ ಕೂಡ ಹಲವರಲ್ಲಿದೆ. ಒಟ್ನಲ್ಲಿ ಸದ್ಯ ಅಮೃತಧಾರೆ ಧಾರಾವಾಹಿ ಕುತೂಹಲ ಕೆರಳಿಸಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಯಾರನ್ನು ನಂಬಿ ಯಾರು ಹಾಳಾಗುತ್ತಾರೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











