Amruthadhare ; ಕ್ಲೈಮ್ಯಾಕ್ಸಾ ? ಶತ್ರುಗಳ ಸಂಹಾರನಾ ? - ಅಮೃತಧಾರೆಯಲ್ಲಿ ರೋಚಕ ತಿರುವು ? ಏನಿದು ಸರ್ಪ್ರೈಸ್?

''ಅಮೃತಧಾರೆ'' ಧಾರಾವಾಹಿಯಲ್ಲಿ ಸತ್ಯ ಅರಿತ ಭೂಮಿಕಾಗೆ ನಿಂತ ನೆಲ ಕುಸಿದಂತೆ ಆಗಿದೆ. ಹೀಗಾಗಿ ನೊಂದು ಬೆಂದ ಭೂಮಿಕಾ ತಡೆಯಲಾರದೆ ಗೌತಮ್ ಬಳಿ ಬಂದು ಕಣ್ಣೀರು ಹಾಕಿದ್ದಾಳೆ. ಅವತ್ತೇ ಸತ್ಯ ಹೇಳಬಾರದಿತ್ತಾ ಗೌತಮ್ ಅವರೇ ಎಂದು ಬಿಕ್ಕಿದ್ದಾಳೆ. ಭೂಮಿಕಾನ ಸಮಾಧಾನ ಮಾಡುವ ಗೌತಮ್ ಡಾಕ್ಟರ್ ಹೇಳಿದ್ದ ಎಚ್ಚರಿಕೆಯ ಮಾತು ಹೇಳುತ್ತಾನೆ. ಹೇಳಬೇಕೆಂದು ತುಂಬಾ ಪ್ರಯತ್ನ ಮಾಡದೇ ಆದರೆ...

ನೀವು ಎಲ್ಲಿ ಆಘಾತಕ್ಕೀಡಾಗುತ್ತೀರಾ ಎಂಬ ಭಯದಲ್ಲಿ ಸುಮ್ಮನಾದೆ ಎಂದು ಹೇಳುತ್ತಾನೆ. ಬದುಕಿರುವ ಮಗುನ ನಿಮ್ಮೆದುರು ಕರೆದುಕೊಂಡು ತಂದು ನಿಲ್ಲಿಸುವುದೇ ನನ್ನ ಉದ್ದೇಶ ಎಂದು ಹೇಳುತ್ತಾನೆ. ಭೂಮಿಕಾ ಕೂಡ ತಾನು ಈ ಪ್ರಯತ್ನದಲ್ಲಿ ಕೈ ಜೋಡಿಸುವುದಾಗಿ ಹೇಳುತ್ತಾಳೆ.

amruthadhare-jan-5-a-huge-surprise-for-gautham-bhoomika-fans-can-you-guess-what-s-coming

ಆ ನಂತರ ಮಲ್ಲಿ ಬಳಿ ಈ ವಿಚಾರದ ಕುರಿತು ಚರ್ಚ ಮಾಡಿರುವ ಭೂಮಿಕಾ ಕಳೆದು ಹೋದ ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಾಳೆ. ಮಲ್ಲಿ ಕೂಡ ಭೂಮಿಕಾ ಮಾತು ಕೇಳಿ ಖುಷಿಯಾಗಿದ್ದು ನನ್ನ ಸಹಾಯ ಏನಾದರೂ ಬೇಕಾ ಎಂದು ಕೇಳುತ್ತಾಳೆ. ಇದಕ್ಕೆ ಭೂಮಿಕಾ ಸದ್ಯ ಬೇಡ ಮುಂದೆ ಬೇಕಿದ್ರೆ ಕೇಳ್ತೀನಿ ಎಂದು ಹೇಳಿದ್ದು ಭೂಮಿಕಾ ಹುಷಾರಾಗಿರುವಂತೆ ಹೇಳಿದ್ದಾಳೆ. ಏನೇ ಇದ್ದರೂ ಫೋನ್ ಮಾಡುವಂತೆ ಹೇಳಿದ್ದಾಳೆ. ಮಲ್ಲಿ ಮತ್ತು ಭೂಮಿಕಾ ನಡುವೆ ನಡೆದ ಈ ಸಂಭಾಷಣೆಯನ್ನು ಆಕಾಶ್ ಕೇಳಿಸಿಕೊಂಡಿದ್ದಾನೆ.

ಮತ್ತೊಂದು ಕಡೆ ಭಾಗ್ಯಮ್ಮ ಬಾಯಲ್ಲಿ ಮಾತು ಕೇಳಿ ಶಕುಂತಲಾ ಬೆಚ್ಚಿ ಬಿದ್ದಿದ್ದಾಳೆ. ಆದರೆ ಸೋಲನ್ನೊಪ್ಪದ ಶಕುಂತಲಾ ಸದ್ಯ ಬೆದರಿಕೆಯ ತಂತ್ರ ಪ್ರಯೋಗ ಮಾಡಲು ಮುಂದಾಗಿದ್ದಾಳೆ. ಭಾಗ್ಯಮ್ಮನ ಎದುರು ಮತ್ತೆ ಬಂದಿರುವ ಶಕುಂತಲಾ ಮೊಮ್ಮಗ ಆಕಾಶ್ ಫೋಟೊ ತೋರಿಸಿ ಬೆದರಿಕೆ ಹಾಕಿದ್ದಾಳೆ. ಆಕಾಶ್ ಕಿಡ್ನ್ಯಾಪ್ ಮಾಡಿ ಭೂಮಿಕಾ ಮತ್ತು ಮಲ್ಲಿಯಿಂದ ಜೈದೇವ್ ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿರುವ ವಿಚಾರ ಹೇಳುತ್ತಾಳೆ.

ಇದೆಲ್ಲದರ ನಡುವೆ ಜೀ ಕನ್ನಡ ಹೊಸದೊಂದು ಪೋಸ್ಟ್ ಹಂಚಿಕೊಂಡಿದ್ದು ಅಮೃತಧಾರೆ ಅಭಿಮಾನಿಗಳಿಗೆ ಸರ್ ಪ್ರೈಸ್ ಇದೆ ಎಂದು ಹೇಳಿದೆ. ಈ ಪೋಸ್ಟ್ ಸದ್ಯ ಕುತೂಹಲಕ್ಕೆ ಕಾರಣವಾಗಿದ್ದು ಏನಿರಬಹುದು ಎಂದು ಹಲವು ಪ್ರೇಕ್ಷಕರು ಊಹೆ ಮಾಡುತ್ತಿದ್ದಾರೆ.

ಮುಂದೆ ಏನಿರಬಹುದು ? ಏನಾಗಬಹುದು ?

''ಜೀ ಕನ್ನಡ''ದ ಈ ಪೋಸ್ಟ್‌ಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬರು ಧಾರಾವಾಹಿ ಮುಗಿಯಬಹುದೇನೋ ಎಂದು ಹೇಳಿದರೆ ಮತ್ತೊಬ್ಬರು ಯಾವುದಾದರು ಪಾತ್ರವನ್ನು ಸಾಯಿಸಬಹುದು ಎಂದಿದ್ದಾರೆ. ಧಾರಾವಾಹಿ ಮುಗಿತು, ಈ ವಾರದಲ್ಲಿ ಗೌತಮ್ ಭೂಮಿಕಾ ಒಂದಾಗುತ್ತಾರೆ, ಅವರ ಹೆಣ್ಣು ಮಗಳು ಯಾರು ಎಂದು ಗೊತ್ತಾಗುತ್ತದೆ ಈ ವಾರ, ಮಿಂಚು ಅವರ ಮಗಳು ಅಂತ ಗೊತ್ತಾಗುತ್ತೆ, ಎಂದು ಹಲವರು ತಮ್ಮ ತಮ್ಮ ಕಲ್ಪನೆಗೆ ಅನುಸಾರ ಕಾಮೆಂಟ್ ಸೆಕ್ಷನ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತೊಡಿಸುತ್ತಿದ್ದಾರೆ. ಶಕುಂತಲಾ ಮತ್ತು ಜೈದೇವ್ ಹೊರತು ಪಡಿಸಿ ದಿವಾನ್ ಕುಟುಂಬ ಮತ್ತೆ ಒಂದಾಗುತ್ತೆ, ಶತ್ರುಗಳ ಸಂಹಾರ ಮಾಡುತ್ತೆ ಎಂದು ಕೂಡ ಊಹೆ ಮಾಡಿದ್ದಾರೆ.

amruthadhare-jan-5-a-huge-surprise-for-gautham-bhoomika-fans-can-you-guess-what-s-coming

ಕುತೂಹಲ ಕೆರಳಿಸಿದ ಪೋಸ್ಟ್

ಸದ್ಯ ವಾಹಿನಿಯ ಈ ಪೋಸ್ಟ್ ಕುತೂಹಲವನ್ನು ಕೆರಳಿಸಿದ್ದು, ಆ ಸರ್ಪ್ರೈಸ್ ಏನಿರಬಹುದು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ನಿಜಕ್ಕೂ ''ಅಮೃತಧಾರೆ'' ಮುಕ್ತಾಯದ ಹಂತಕ್ಕೆ ಬಂದಿದೆಯಾ..? ಎಲ್ಲರೂ ಸೇರಿ ಜೈದೇವ್ ಮತ್ತು ಶಕುಂತಲಾಗೆ ಬುದ್ದಿ ಕಲಿಸುತ್ತಾರಾ..? ಅಥವಾ ಕಳೆದು ಹೋದ ಆ ಮಗಳೇ ಮಿಂಚು ಎನ್ನುವ ಸತ್ಯ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಿ ಇಬ್ಬರು ಹಳೆಯ ಮುನಿಸು ಮರೆತು ಒಂದಾಗುತ್ತಾರಾ..? ಒಂದೇ ಸೂರಿನಡಿ ಬದುಕುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Love is in the air for Gautham and Bhoomika! Amruthadhare Jan 5 brings a super surprise that will leave fans stunned. Join the guessing game now! 💎
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X