Amruthadhare : ಆಕಾಶ್, ಮಿಂಚು ಮಾತು ಕೇಳಿ ಗೌತಮ್-ಭೂಮಿಕಾ ಶಾಕ್ ; ಮಲ್ಲಿ ಮುಂದೆ ಕಿಲಾಡಿ ಪಿಎಯ ಬಿಲ್ಡಪ್‌

''ಅಮೃತಧಾರೆ'' ಧಾರಾವಾಹಿಯಲ್ಲಿ ಭೂಮಿಕಾಗೆ ತನ್ನ ತಪ್ಪಿನ ಅರಿವು ಆಗಿದೆ. ಗೌತಮ್ ಎದುರು ಬಂದು ಕ್ಷಮೆ ಕೇಳಿ ಕಣ್ಣೀರನ್ನು ಹಾಕಿರುವ ಮಗು ಹುಡುಕುವ ಪ್ರಯತ್ನದಲ್ಲಿ ಗೌತಮ್‌ ಜೊತೆ ಕೈ ಜೋಡಿಸಲು ಮುಂದಾಗಿದ್ದಾಳೆ. ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಹೇಳಿ ಕೆಲಸಕ್ಕೆ ರಜೆ ಕೂಡ ಹಾಕಿದ್ದಾಳೆ. ಇನ್ನೂ ಆಕಾಶ್ ಮತ್ತು ಮಿಂಚುಗೆ ಗೌತಮ್ ಮತ್ತು ಭೂಮಿಕಾ..

ಇಷ್ಟು ವರ್ಷ ಮುಚ್ಚಿಟ್ಟಿದ್ದ ಸತ್ಯ ಎಲ್ಲವೂ ಗೊತ್ತಾಗಿದೆ. ಹೇಗಾದರೂ ಮಾಡಿ ತಮ್ಮ ತಂದೆ ತಾಯಿಯನ್ನು ಒಂದು ಮಾಡಬೇಕೆಂದು ಇಬ್ಬರು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಮಗು ಕಾಣೆಯಾದ ವಿಚಾರವನ್ನು ಮಿಂಚುಗೆ ಆಕಾಶ್ ಹೇಳಿದ್ದು ಗೌತಮ್ ಬಳಿ ಮಿಂಚು ಬಂದು ಮ್ಯಾಮ್‌ಗೆ ಇಬ್ಬರು ಮಕ್ಕಳಂತೆ, ಆಕಾಶ್ ಒಬ್ಬನೇ ಅಲ್ವಂತೆ ಇನ್ನೊಂದು ಮಗು ಕೂಡ ಇದೆಯಂತೆ ಎಂದು ಹೇಳುತ್ತಾಳೆ.

Amruthadhare Jan 6 Malli Trapped Jaidev s PA Stages Fake Robbery to Play Hero

ಕಾಣೆಯಾದ ಪಾಪು ಹುಡುಕೋಕೆ ಮ್ಯಾಮ್ ರಜಾ ಹಾಕಿದ್ದಾರಂತೆ ಎಂದು ಹೇಳುವ ಮಿಂಚು ಪಾಪ ಅಲ್ವಾ ಅದನ್ನು ಕೇಳಿ ನನಗೆ ಬೇಜಾರಾಯ್ತು ಇನ್ನು ಮ್ಯಾಮ್‌ಗೆ ಎಷ್ಟು ಬೇಜಾರಾಗಿರಬೇಕು ಅಲ್ವಾ ಎಂದು ಕೇಳುತ್ತಾಳೆ.

ಇಷ್ಟೇ ಅಲ್ಲ ಹಿಂದೊಮ್ಮೆ ಮಿಂಚುಗೆ ಗೌತಮ್‌ ಹೇಳಿದ್ದ ರಾಜಕುಮಾರನ ಕಥೆಯನ್ನು ಕೂಡ ನೆನಪು ಮಾಡುವ ಮಿಂಚು ನೀವು ಹೇಳಿದ್ದ ಕಥೆಯಲ್ಲಿ ಮತ್ತು ಈ ಕಥೆಯಲ್ಲಿ ಎಷ್ಟೊಂದು ಸಾಮ್ಯತೆ ಇದೆ ಅಲ್ವಾ ಪಪ್ಪಾ ಎನ್ನುತ್ತಾಳೆ. ಆಗ ನಾನು ಆ ತರ ಹೇಳಿದ್ದನಾ..? ನನಗೆ ನೆನಪಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ.

ಆದರೂ ಕೂಡ ಬಿಡದ ಮಿಂಚು ಪಾಪಾ ಮ್ಯಾಮ್‌ಗೆ ಎಷ್ಟು ಕಷ್ಟ ಆಗಿರಬೇಕು, ಮಕ್ಕಳಿಗೆ ಈ ತರ ಆದರೆ ಹೆತ್ತವರಿಗೆ ಕಷ್ಟ ಅಲ್ವಾ ಪಪ್ಪಾ ? ಎಂದು ಪ್ರಶ್ನೆ ಮಾಡುತ್ತಾಳೆ. ಆ ಮಗು ಎಲ್ಲಿದೆಯೋ..? ಏನು ಮಾಡ್ತಿದೆಯೋ..? ಒಂದು ಗೊತ್ತಾಗುತ್ತಿಲ್ಲ ಎನ್ನುತ್ತಾಳೆ. ಮಿಂಚು ಆಡಿದ ಈ ಮಾತುಗಳಿಂದ ಗೌತಮ್ ಭಾವುಕಗೊಳ್ಳುತ್ತಾನೆ.

ಮತ್ತೊಂದು ಕಡೆ ಗಂಡನಾಗಿ ತನ್ನ ಪತ್ನಿಯ ಹಿಂದೆಯೇ ಜೈದೇವ್ ಹುಡುಗನನ್ನು ಬಿಟ್ಟಿದ್ದಾನೆ. ತನ್ನ ಕಿಲಾಡಿ ಪಿಎಗೆ ಲವ್ ಡ್ರಾಮಾ ಮಾಡುವಂತೆ ಹೇಳಿದ್ದಾನೆ. ಜೈದೇವ್ ಆದೇಶವನ್ನುಕಣ್ಣಿಗೊತ್ತಿಕೊಂಡು ಸದ್ಯ ಪಿಎ ಪಾಲಿಸುತ್ತಿದ್ದು ಸದ್ಯ ಮಲ್ಲಿಯ ಎದುರು ಬಿಲ್ಡಪ್ ತಗೊಳ್ಳುವ ಪ್ರಯತ್ನ ಮಾಡಿದ್ದಾನೆ. ಮಲ್ಲಿಯ ಸರವನ್ನು ಕದಿಯಲು ರೌಡಿಗೆ ಸುಪಾರಿ ಕೊಟ್ಟಿದ್ದಾನೆ. ಮಲ್ಲಿ ಸಹಾಯಕ್ಕೆ ಅಂಗಲಾಚಿದಾಗ ಸಹಾಯಕ್ಕೆ ಬಂದಂತೆ ಮಾಡಿ ಹತ್ತಿರವಾಗುವ ಉದ್ದೇಶ ಪಿಎಯದ್ದು.

Amruthadhare Jan 6 Malli Trapped Jaidev s PA Stages Fake Robbery to Play Hero

ಪಿಎ ಮಾಡಿದ ಈ ಪ್ಲಾನ್ ಪ್ರಕಾರ ಕಳ್ಳ ಮಲ್ಲಿಯ ಚೈನ್ ಕದಿದ್ದಾನೆ. ಆದರೆ ಅದು ಚೈನ್ ಅಲ್ಲ ಬದಲಿಗೆ ಮಲ್ಲಿಯ ಮಾಂಗಲ್ಯ. ಹೀಗಾಗಿಯೇ ಡಮ್ಮಿ ತಾಳಿ ತಾನೇ ಎಂದು ಪಿಎ ಕೇಳಿದ್ದಾನೆ. ಆಗ ಮಲ್ಲಿ ತನಗೆ ಮದುವೆಯಾದ ವಿಚಾರ ಹೇಳಿದ್ದಾಳೆ. ಮಲ್ಲಿಯ ಮಾತು ಕೇಳಿ ಶಾಕ್ ನೀಡಲು ಬಂದಿದ್ದ ಪಿಎನೇ ಶಾಕ್ ಆಗಿದ್ದಾನೆ. ಮಲ್ಲಿಯೇ ಜೈದೇವ್‌ನ ಮೊದಲ ಪತ್ನಿ ಎನ್ನುವ ವಿಚಾರ ಪಿಎಗೆ ಇನ್ನೂ ಗೊತ್ತಿದ್ದಂತೆ ಇಲ್ಲ. ಗೊತ್ತಾದರೆ ಮುಂದೇನು ಆಗುತ್ತೆ ಎನ್ನುವುದನ್ನು ನೋಡಬೇಕಿದೆ.

ಇನ್ನೊಂದು ಕಡೆ ಗೌತಮ್ ಮತ್ತು ಭೂಮಿಕಾ ಬಳಿ ಆಕಾಶ್ ಮತ್ತು ಮಿಂಚು ಸತ್ಯ ಹೇಳಿದ್ದಾರೆ. ನೀವು ಇಬ್ಬರು ಗಂಡ ಹೆಂಡ್ತಿಯಲ್ವಾ ಎಂದು ಇಬ್ಬರು ಕೇಳಿದ್ದಾರೆ. ಮಕ್ಕಳ ಬಾಯಿಂದ ಬಂದ ಈ ಮಾತು ಕೇಳಿ ಗೌತಮ್ ಮತ್ತು ಭೂಮಿಕಾ ಶಾಕ್ ಆಗಿದ್ದು ಗೌತಮ್ ಅವರನ್ನು ಪಪ್ಪಾ ಎಂದು ಕರಿಯಬೇಕು ಅಂತ ನಿನಗೆ ಅನಿಸಿಲ್ವಾ ಎಂದು ಆಕಾಶ್ ಬಳಿ ಭೂಮಿಕಾ ಕೇಳಿದ್ದಾಳೆ. ಆಗ ಆಕಾಶ್ ನೀಡಿದ ಉತ್ತರ ಭೂಮಿಕಾಳನ್ನು ಭಾವುಕಳಾಗಿಸಿದೆ. ಸದ್ಯ ಇಂದು (ಜನವರಿ 6 ) ಬಿಡುಗಡೆಯಾದ ಈ ಪ್ರೋಮೋಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದು ಮುಂದೆ ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhare Jan 6 Update: Jaidev’s PA sends a goon to snatch Malli’s necklace. Discover the truth behind this "Love Trap" and see if Malli falls for the act.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X