Amruthadhaare ; ಮಗಳ ಹುಡುಕಾಟದಲ್ಲಿ ಕೈ ಜೋಡಿಸಿದ ಗೌತಮ್-ಭೂಮಿಕಾ ; ಪತ್ರ ಓದಿ ಗೊಂದಲಕ್ಕೀಡಾದ ಡುಮ್ಮ ಸರ್

''ಅಮೃತಧಾರೆ'' ಧಾರಾವಾಹಿಯಲ್ಲಿ ತನ್ನ ತಂದೆಯೇ ಗೌತಮ್ ಎಂಬ ವಿಚಾರ ತನಗೆ ಗೊತ್ತಿರುವುದಾಗಿ ಭೂಮಿಕಾಗೆ ಆಕಾಶ್ ಹೇಳಿದ್ದಾನೆ. ಗೌತಮ್ ಅವರನ್ನು ಪಪ್ಪಾ ಎಂದು ಕರಿಯಬೇಕು ಅಂತ ನಿನಗೆ ಅನಿಸಿಲ್ವಾ ಎಂದು ಆಕಾಶ್ ಬಳಿ ಭೂಮಿಕಾ ಕೇಳಿದ್ದು, ಆಕಾಶ್ ನೀಡಿದ ಉತ್ತರದಿಂದ ಭೂಮಿಕಾ ಕಣ್ಣೀರು ಹಾಕಿದ್ದಾಳೆ. ಇನ್ನು ಗೌತಮ್ ಎದುರು ಮಿಂಚು ಕೂಡ ತನಗೆ ಸತ್ಯ ಗೊತ್ತಾಗಿರುವುದನ್ನು ಹೇಳಿದ್ದು..

ನೀವು ಇಬ್ಬರು ಗಂಡ ಹೆಂಡ್ತಿಯಲ್ವಾ ? ಎಂದು ಪ್ರಶ್ನೆ ಮಾಡಿದ್ದಾಳೆ. ಕಾಣೆಯಾಗಿರುವ ನಿಮ್ಮ ಮಗುನ ಹುಡುಕಲು ಹೋಗ್ತಿದ್ದೀರಾ ಎಂದು ಕೇಳಿದ್ದಾಳೆ. ಮಿಂಚು ಮಾತುಗಳನ್ನು ಕೇಳಿ ಗೌತಮ್ ಶಾಕ್ ಆಗಿದ್ದಾನೆ.

Amruthadhare Jan 9 Desperate Search Will Bhoomika amp amp Gautham Find Their Daughter

ಸದ್ಯ ಗೌತಮ್ ಮತ್ತು ಭೂಮಿಕಾ ಪೊಲೀಸ್ ಠಾಣೆಗೆ ಬಂದಿದ್ದು ಆಶ್ರಮದಲ್ಲಿ 122 ಜನ ಮಕ್ಕಳಿದ್ದಾರೆ. ಆ ಪೈಕಿ 22 ಮಕ್ಕಳನ್ನು ಅಕ್ರಮವಾಗಿ ಮಾರಿದ್ದಾರೆ, ಅದರಲ್ಲಿ 9ಜನ ಗಂಡು ಮಕ್ಕಳು 13 ಜನ ಹೆಣ್ಣುಮಕ್ಕಳು ಇರುವ ವಿಚಾರವನ್ನು ಪೊಲೀಸ್‌ ಅಧಿಕಾರಿ ಗೌತಮ್‌ಗೆ ಹೇಳುತ್ತಾರೆ. ಕಷ್ಟದ ಕೆಲಸ ಅಸಾಧ್ಯವೇನು ಅಲ್ಲ, ನಮಗೆ ಸದ್ಯ ಒಂದು ಮಾಹಿತಿ ಸಿಕ್ಕಿದ್ದು ಅದರ ಆಧಾರದ ಮೇಲೆ ತನಿಖೆ ಮಾಡುವುದಾಗಿ ಭರವಸೆ ನೀಡುತ್ತಾರೆ. ಗೌತಮ್‌ ಮನವಿಯ ಮೇರೆಗೆ ಈಗಾಗಲೇ ಸಿಕ್ಕಿರುವ ಕೆಲ ಮಕ್ಕಳ ಹೆಸರು ಮತ್ತು ವಿಳಾಸವನ್ನು ನೀಡಿದ್ದಾರೆ.

ಇದೇ ಸಮಯದಲ್ಲಿ ಭೂಮಿಕಾಗೆ ಫೋನ್ ಬಂದಿದ್ದು ಭೂಮಿಕಾ ತಾನು ಗೌತಮ್‌ಗೆ ಬರೆದಿದ್ದ ಪತ್ರವನ್ನು ಕೆಳಗಡೆ ಬೀಳಿಸಿದ್ದಾಳೆ. ಆ ಪತ್ರವನ್ನು ಎತ್ತಿಕೊಂಡ ಗೌತಮ್ ಅದರ ಮೇಲೆ ಬರೆದ ಪ್ರೀತಿಯ ಗೌತಮ್ ಅವರೇ ಎಂಬ ಸಾಲು ನೋಡಿ ಕುತೂಹಲಗೊಳ್ಳುತ್ತಾನೆ. ಪತ್ರವನ್ನು ಓದುತ್ತಾನೆ.

Amruthadhare Jan 9 Desperate Search Will Bhoomika amp amp Gautham Find Their Daughter

ಆ ನಂತರ ಮನೆಗೆ ಬರುವ ಗೌತಮ್, ಆನಂದ್‌ಗೆ ಕರೆ ಮಾಡಿ ಗೌತಮ್ ಪತ್ರದ ವಿಚಾರ ಪ್ರಸ್ತಾಪಿಸಿದ್ದಾನೆ. ನನ್ನ ಹೆಸರು ನೋಡಿ ಕುತೂಹಲ ತಡೆಯಲಾರದೇ ಓದಿದೆ ಎನ್ನುತ್ತಾನೆ. ನೋಡಿದರೆ ಆ ಪತ್ರ ನನಗೆ ಬರೆದಿದ್ದು ಎಂದು ಪತ್ರದಲ್ಲಿ ಇರುವುದನ್ನೆಲ್ಲ ಹೇಳುತ್ತಾನೆ. ಮನದಲ್ಲಿ ಇಷ್ಟೆಲ್ಲ ಇಟ್ಕೊಂಡು ಯಾಕೆ ಇವರು ಹೀಗೆ ಇದ್ದಾರೆ ಎನ್ನುವುದೇ ನನಗೆ ಅರ್ಥ ಆಗ್ತಿಲ್ಲ ಎಂದು ಹೇಳುತ್ತಾನೆ.

ಇದಕ್ಕೆ ಸಂಕೋಚ ಬಿಟ್ಟು ನೀನೆ ಮಾತಾಡು ಎಂದು ಆನಂದ್ ಸಲಹೆ ನೀಡಿದ್ದು ಕೊನೆಯಲ್ಲಿ ಇಂತಿ ನಿಮ್ಮ ಪ್ರೀತಿಯ ಭೂಮಿಕಾ ಎಂದು ಅವರು ಬರೆದಿರಲಿಲ್ಲ ಎಂದು ಗೌತಮ್ ಹೇಳುತ್ತಾನೆ. ಆದರೂ ಗೌತಮ್‌ ಮಾತುಗಳನ್ನು ಕೇಳಿ ಖುಷಿ ಪಡುವ ಆನಂದ್ ಶೀಘ್ರದಲ್ಲಿಯೇ ನಾವು ಇಬ್ಬರು ಪಾರ್ಟಿ ಮಾಡುವ ಎಲ್ಲ ಲಕ್ಷಣ ಕಂಡು ಬರುತ್ತಿವೆ ಎಂದು ಹೇಳುತ್ತಾನೆ.

ಇನ್ನೊಂದು ಕಡೆ ಜೈದೇವ್ ಕಳುಹಿಸಿರುವ ಕಿಲಾಡಿ ಪಿಎ ಮಲ್ಲಿಯ ಹಿಂದೆ ಬಿದ್ದಿದ್ದು, ಮಲ್ಲಿ ಮನ ಗೆಲ್ಲುವ ಪ್ರಯತ್ನವನ್ನು ಮುಂದುವರೆಸಿದ್ದಾನೆ. ಮುಂದೇನಾಗುತ್ತೆ..? ಕಿಲಾಡಿ ಪಿಎಯ ಪ್ರೀತಿಯ ಬಲೆಯಲ್ಲಿ ಮಲ್ಲಿ ಸಿಲುಕಿಕೊಳ್ತಾಳಾ..? ಎನ್ನುವುದನ್ನು ನೋಡಬೇಕಿದೆ. ಇನ್ನು ಸದ್ಯ ಮಗಳ ಹುಡುಕಾಟದಲ್ಲಿ ಗೌತಮ್ ಮತ್ತು ಭೂಮಿಕಾ ಕೈ ಜೋಡಿಸಿದ್ದಾರೆ.

ಇಬ್ಬರು ಸೇರಿ ಮಗುವನ್ನು ಹುಡುಕುತ್ತಿದ್ದಾರೆ. ಈ ಹುಡುಕಾಟದಲ್ಲಿ ಇಬ್ಬರು ಇನ್ನೂ ಹತ್ತಿರವಾಗುವ ಸಾಧ್ಯತೆಗಳಿವೆ. ಮನಸ್ತಾಪ ಸಂಪೂರ್ಣ ದೂರವಾಗಿ ಇಬ್ಬರು ಮತ್ತೆ ಒಂದಾಗಿ ಒಂದೇ ಸೂರಿನಡಿ ಬಾಳುವ ಸಾಧ್ಯತೆ ಇವೆ. ಇನ್ನು ತಾನು ಓದಿದ ಪತ್ರ ಭೂಮಿಕಾ ಬರೆದಿರುವುದಲ್ಲ ಬದಲಿಗೆ ವಠಾರದ ಹುಡುಗಿ ಬರೆದಿದ್ದು ಎನ್ನುವುದು ಗೌತಮ್‌ಗೆ ಗೊತ್ತಾದರೆ ಗೌತಮ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ. ''ಅಮೃತಧಾರೆ''ಯಲ್ಲಿ ಕಳೆದು ಹೋದ ಆ ಮಗಳು ಬೇರೆ ಯಾರು ಅಲ್ಲ ಬದಲಿಗೆ ಮಿಂಚು ಎನ್ನುವ ಸತ್ಯ ಗೊತ್ತಾಗುವ ಕಾಲ ಕೂಡ ಸನ್ನಿಹಿತವಾದಂತೆ ಇದೆ.

More from Filmibeat

English summary
Amruthadhare Jan 9: Bound by pain, Bhoomika and Gautham join forces. See if a shocking secret lead finally brings their daughter home in this heart-wrenching update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X