Amruthadhaare: ಭೂಮಿಕಾ ಕೊಟ್ಟ ಶಾಕ್‌ಗೆ ಶಕುಂತಲಾ ದೇವಿ ಸುಸ್ತೋಸುಸ್ತು

By Poorva

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ಛಾಯಾ ಸಿಂಗ್ ಸೊಗಸಾಗಿ ನಟಿಸುತ್ತಿದ್ದು ಧಾರವಾಹಿ ವೀಕ್ಷಕರ ಗಮನ ಸೆಳೆದಿದೆ. ಭೂಮಿಕಾ ತನ್ನ ಗಂಡನಿಗೆ ಮಲ ತಾಯಿ ಕೊಟ್ಟ ಕಷ್ಟವನ್ನು ನೆನಪಿಸಿಕೊಂಡು ಬಹಳ ಕೋಪ ಬರುತ್ತಿರುತ್ತದೆ.

ಭೂಮಿಕಾಗೆ ತನ್ನ ಗಂಡ ಈ ಮನೆಯವರಿಗಾಗಿ ತನ್ನ ಜೀವ ಸವೆಸಿದ್ದಾರೆ. ಹಾಗೆಯೇ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಅಂಥದರಲ್ಲಿ ಅತ್ತೆ ಈ ರೀತಿ ನಡೆದುಕೊಂಡಿದ್ದು ಮಾತ್ರ ಸ್ವಲ್ಪವೂ ಸರಿ ಕಾಣಿಸಲಿಲ್ಲ. ಆಕೆಗೆ ಬಹಳ ಸಿಟ್ಟು ಬರುತ್ತದೆ. ಅಮ್ಮನ ಬಳಿ ಕರೆ ಮಾಡಿ ಮಾತನಾಡಿದ ಭೂಮಿಕಾ, ಗುರುಗಳ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಯುಗಾದಿ ಸಂಭ್ರಮದಲ್ಲಿ ಇದ್ದ ಶಕುಂತಲಾ ದೇವಿಗೆ ಶಾಕಿಂಗ್ ನ್ಯೂಸ್ ಇರುವುದಂತೂ ಸತ್ಯ.

Amruthadhare kannada serial written update on 14th April episode

ಭೂಮಿಕಾ ಹಾಗೂ ಗೌತಮ್ ಯಾವತ್ತೂ ಒಂದಾಗಬಾರದು, ಅದಕ್ಕೆ ನಾನು ಏನು ಬೇಕಾದರೂ ಮಾಡಲು ರೆಡಿ ಎನ್ನುವ ಹಾಗೆ ಶಕುಂತಲಾ ಜ್ಯೋತಿಷ್ಯದವರನ್ನು ಕರೆಯಿಸಿ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದಳು. ಭೂಮಿಕಾ ಹಾಗೂ ಗೌತಮ್‌ನನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಳು. ಆದರೆ ಇದೀಗ ಭೂಮಿಕಾ ಒಬ್ಬ ಗುರುಗಳನ್ನು ಮನೆಗೆ ಕರೆಯಿಸಿದ್ದಾಳೆ. ಅವರನ್ನು ನೋಡಿದ ಕೂಡಲೇ ಶಕುಂತಲಾಗೆ ಶಾಕ್ ಆಗುತ್ತದೆ.

ಮನೆಗೆ ಆಗಮಿಸಿದ ಗುರುಗಳು

ಭೂಮಿಕಾ ಹಾಗೂ ಗೌತಮ್ ಇಬ್ಬರ ದಾಂಪತ್ಯದ ಬಗ್ಗೆ ಈಗಾಗಲೇ ಸುಳ್ಳು ಜ್ಯೋತಿಷ್ಯ ಹೇಳಿಸಿದ್ದೇನೆ. ಇದೀಗ ಇದು ಸುಳ್ಳು ಎಂದು ಗೊತ್ತಾದರೆ ಏನು ಮಾಡುವುದು ಎನ್ನುವ ಆಲೋಚನೆಯಲ್ಲಿ ಶಕುಂತಲಾ ಇರುತ್ತಾಳೆ. ಗುರುಗಳ ಬಗ್ಗೆ ಭೂಮಿಕಾ ಬಹಳ ಅದ್ಭುತವಾದ ಮಾತುಗಳನ್ನು ಆಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ.

Amruthadhare kannada serial written update on 14th April episode

ಯುಗಾದಿ ಹಬ್ಬದ ಸಂಭ್ರಮ

ಭೂಮಿಕಾ ಕೂಡಲೇ ಗುರುಗಳಿಗೆ ಉತ್ತಮ ಆತಿಥ್ಯ ನೀಡುತ್ತಾಳೆ. ಹಾಗೆಯೇ ತನ್ನ ಹಾಗೂ ಗೌತಮ್ ಜಾತಕವನ್ನು ಗುರುಗಳ ಬಳಿ ತೋರಿಸುತ್ತಾಳೆ. ಇದನ್ನು ನೋಡಿದ ಗೌತಮ್ ಮಾತ್ರ ಬೇಡ ಭೂಮಿಕಾ ಇದೆಲ್ಲವನ್ನೂ ಗುರುಗಳ ಬಳಿ ತೋರಿಸಬೇಡ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಇದನ್ನು ನೋಡಿದ ಭೂಮಿಕಾ ಏನು ಆಗುವುದಿಲ್ಲ. ನೀವು ಏನು ಟೆನ್ಷನ್ ಬೇಡ. ನಮ್ಮ ಜಾತಕದಲ್ಲಿ ತೊಂದರೆ ಇದ್ದರೆ ಗುರುಗಳು ಅದನ್ನು ಪರಿಹರಿಸಿಕೊಡುತ್ತಾರೆ ಎಂದು ಹೇಳಿದಾಗ ಭಯದಲ್ಲಿ ಶಕುಂತಲಾ ದೇವಿಗೆ ನಡುಗಿ ಹೋಗುತ್ತಾಳೆ.

ಗುರುಗಳ ಮಾತಿಗೆ ಭೂಮಿಕಾ ಖುಷ್

ಶಕುಂತಲಾ ದೇವಿಯನ್ನು ಸ್ವಲ್ಪ ಕೂಡ ಮಾತನಾಡಲು ಬಿಡದೆ ಬಾಯಿ ಮುಚ್ಚಿಸಿ ಬಿಡುತ್ತಾಳೆ ಭೂಮಿಕಾ. ಇನ್ನೂ ಗುರುಗಳು ಇಬ್ಬರ ಜಾತಕವನ್ನು ಪರಿಶೀಲನೆ ಮಾಡಿ ಇವರಿಬ್ಬರ ಜಾತಕವು ಬಹಳ ಉತ್ತಮವಾಗಿ ಇದೆ. 25 ಗುಣಗಳಲ್ಲಿ 24 ಗುಣಗಳು ನಮ್ಮಿಬ್ಬರಲ್ಲಿ ಇದ್ದು ಇಬ್ಬರ ಗುಣಗಳು ಒಬ್ಬರಿಗೊಬ್ಬರು ಸರಿಸಮಾನವಾಗಿ ಹೊಂದಾಣಿಕೆ ಆಗುತ್ತಿದೆ. ಬಹಳ ಅದ್ಭುತವಾದ ಜಾತಕ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭೂಮಿಕಾ ಹಾಗೂ ಗೌತಮ್‌ಗೆ ಬಹಳ ಖುಷಿ ಆಗುತ್ತದೆ. ಗೌತಮ್‌ಗೆ ಕೊಂಚ ಗಲಿಬಿಲಿ ಆಗುತ್ತದೆ. ಒಬ್ಬ ಗುರುಗಳು ಒಂದು ರೀತಿ ಹೇಳಿದರೆ ಇನ್ನೊಂದು ಗುರುಗಳು ಇನ್ನೊಂದು ರೀತಿ ಹೇಳುತ್ತಿದ್ದಾರೆ, ಇದನ್ನು ಕೇಳಿಸಿಕೊಂಡ ಗೌತಮ್‌ಗೆ ಯಾರ ಮಾತೂ ಕೇಳಬೇಕು ಯಾರ ಮಾತು ಕೇಳಬಾರದು ಎನ್ನುವುದೇ ಬಹಳ ದೊಡ್ಡ ತಲೆಬಿಸಿ ಆಗಿದೆ.

More from Filmibeat

English summary
Amruthadhare kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X