Amruthadhaare: ಗೌತಮ್- ಭೂಮಿಕಾ ಹನಿಮೂನ್‌ಗೆ ಸಿದ್ಧತೆ; ಶಕುಂತಲಾ ದೇವಿ ಹೊಸ ಲೆಕ್ಕಾಚಾರ
ಗೌತಮ್ ಹಾಗೂ ಭೂಮಿಕಾಗೆ ಅಜ್ಜಿ ಹನಿಮೂನ್ ಟ್ರಿಪ್ ಪ್ಲಾನ್ ಮಾಡುತ್ತಿದ್ದಾರೆ. ಇಬ್ಬರನ್ನೂ ದೂರದ ಊರಿಗೆ ಕಳುಹಿಸಬೇಕು. ಇವರಿಬ್ಬರೂ ಇಲ್ಲಿಯೇ ಇದ್ದರೆ ಅವರ ಸುಂದರವಾದ ಬದುಕನ್ನು ಎಂಜಾಯ್ ಮಾಡುವುದಾದರೂ ಹೇಗೆ ಎಂದು ತನ್ನಲ್ಲಿಯೇ ತಾನು ಹೇಳಿಕೊಳ್ಳುತ್ತಾರೆ. ಇನ್ನೂ ಭೂಮಿಕಾ ಹಾಗೂ ಗೌತಮ್ ಇಬ್ಬರು ಅಜ್ಜಿಯ ಬಳಿ ಬಂದು ಕೂರುತ್ತಾರೆ.
ಏನಪ್ಪಾ ಚಿಕ್ಕಮಗಳೂರಿಗೆ ಹೋಗ್ತಿದ್ದೀನಿ ಎಂದು ಹೇಳಿದೆ ಅಲ್ವಾ? ಅಲ್ಲಿಗೆ ಭೂಮಿಕಾನನ್ನು ಕರೆದುಕೊಂಡು ಹೋಗು. ಒಳ್ಳೆ ಜಾಗ ಅವಳಿಗೆ ತೋರಿಸು ಎಂದೆಲ್ಲ ಹೇಳಿದಾಗ ಗೌತಮ್ ಹೇಳುತ್ತಾನೆ. ನಾನು ಹೇಳುತ್ತಿರುವುದು ಕೇಳಿ, ಅಜ್ಜಿ ನಾನು ಹೋಗುತ್ತಿರುವುದು ಸಮಸ್ಯೆ ಒಂದನ್ನು ಬಗೆಹರಿಸಲು ಹೋಗುತ್ತಿದ್ದೇನೆ . ಅಲ್ಲಿಗೆ ಇವರನ್ನು ಕರೆದುಕೊಂಡು ಹೋದರೆ ಮತ್ತಷ್ಟು ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಅಜ್ಜಿ ಕೊಂಚ ಜೋರಾಗಿಯೇ ಹೇಳುತ್ತಾರೆ. ನಾನು ಹೇಳುತ್ತಿರುವುದು ಕೇಳು ಗುಂಡು. ನಿನ್ನ ಹೆಂಡತಿಗೆ ಕೂಡ ಬಹಳ ಆಸೆ ಇರುತ್ತದೆ. ಹನಿಮೂನ್‌ಗೆ ಹೋಗಬೇಕು ಗಂಡನ ಜೊತೆ ಜಾಲಿ ಆಗಿ ಇರಬೇಕು ಎಂದೆಲ್ಲ ಆಸೆ ಇರುತ್ತದೆ, ಅಜ್ಜಿ ಮಾತು ಕೇಳಿದ ಆಕೆಗೆ ಮಾತ್ರ ಬಹಳ ಖುಷಿ ಆಗುತ್ತದೆ. ತಾನು ಏನು ಮಾತನಾಡಬೇಕು ಅದನ್ನು ಅಜ್ಜಿಯೇ ಗೌತಮ್ ಬಳಿ ಹೇಳಿದ್ದಾರೆ ಎಂದು ಖುಷಿಯಲ್ಲಿ ಇರುತ್ತಾಳೆ. ಗೌತಮ್ ಹಿಂದೆ ಮುಂದೆ ನೋಡಿದ್ದಕ್ಕೇ ಜೋರಾಗಿ ಬೈಯುತ್ತಾರೆ.
ಜೀವಾನ ಲೈಪ್ ಅನ್ನ ಚೇಂಜ್ ಮಾಡಿದ್ದು ಆತನ ಭಾವ ಎಂದರೆ ತಪ್ಪಾಗದು. ಭಾವ ಮಾಡಿದ ಸಹಾಯದಿಂದ ಆಗಿ ಜೀವ ಇದೀಗ ತನ್ನದೇ ಆದ ಶಾಪ್ ಓಪನ್ ಮಾಡುತ್ತಾನೆ. ಜೀವನ ಸಂಗಾತಿ ಎಂದು ಹೆಸರು ಇಟ್ಟಿದ್ದಾರೆ. ಇದೀಗ ಅಕ್ಕ ಹಾಗೂ ಭಾವನನ್ನು ಶಾಪ್ ಓಪನಿಂಗ್ ಸೆರಮನಿಗೆ ಕರೆದಿರುತ್ತಾನೆ . ಆ ಕಾರ್ಯಕ್ರಮಕ್ಕೆ ದಂಪತಿ ಸಮೇತವಾಗಿ ಇಬ್ಬರು ಬರುತ್ತಾರೆ. ಅವರನ್ನು ನೋಡಿದವರಿಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ಮಗ ಹೊಸದಾದ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ ಎಂದು ಜೀವಾ ತಂದೆ ಖುಷಿಯಲ್ಲಿ ಇರುತ್ತಾರೆ.
ಜೀವಾಗೆ ಸಹಾಯ ಮಾಡಿದ ಗೌತಮ್
ಜೀವಾನಿಗೆ ಕಷ್ಟದ ಸಮಯದಲ್ಲಿ ಕೈ ಹಿಡಿದ ಭಾವನ ಮೇಲೆ ಅಪಾರವಾದ ಪ್ರೀತಿ ಇರುತ್ತದೆ . ಹಾಗೆಯೇ ಭೂಮಿಕಾ ಹಾಗೂ ಗೌತಮ್ ಕೈಯಿಂದಲೇ ಶಾಪ್ ಉದ್ಘಾಟನೆ ಮಾಡಿಸಬೇಕು ಎಂದು ಆಲೋಚನೆ ಮಾಡಿ ಭಾವನ ಬಳಿ ಕೇಳಿಕೊಂಡಾಗ ಗೌತಮ್ ಮಾತ್ರ ಒಪ್ಪಿಕೊಳ್ಳುವುದಿಲ್ಲ. ಯಾವತ್ತೂ ತಂದೆ ತಾಯಿಯ ಆಶೀರ್ವಾದದ ಮೂಲಕ ಶುರು ಮಾಡಬೇಕು ಎಂದಾಗ ಜೀವಾ ತಂದೆ ತಾಯಿ ಬಳಿ ಶಾಪ್ ಉದ್ಘಾಟನೆ ಮಾಡಲು ಕೇಳಿಕೊಳ್ಳುತ್ತಾನೆ. ಹಾಗೆಯೇ ಜೀವ ತನ್ನ ತಂದೆ ತಾಯಿ ಬಹಳ ಖುಷಿಯಿಂದ ರಿಬ್ಬನ್ ಕಟ್ ಮಾಡಿ ಶಾಪ್ ಉದ್ಘಾಟನೆ ಮಾಡಿದರು. ಹಾಗೆಯೇ ತನ್ನ ಮಗನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.

ಆನಂದ್ ಮಾತಿಗೆ ನಕ್ಕ ಗೌತಮ್
ಇನ್ನೂ ಗೌತಮ್ ಗೆಳೆಯ ಆನಂದ್ ಮನೆಯಲ್ಲಿ ಕಾಳೆಯುತ್ತಿದ್ದ. ಆದರೆ ಇದೀಗ ಭೂಮಿಕಾ ಮನೆಯವರ ಮುಂದೆ ಕಾಲು ಎಳೆಯುತ್ತಿದ್ದಾರೆ. ಆತನಿಗೆ ಗೌತಮ್‌ನ ಕಾಲೇಳೆದರೇನೆ ಒಂಥರಾ ಮಜಾ. ಆತ ಎಲ್ಲರ ಎದುರು ಹನಿಮೂನ್ ಬಗ್ಗೆ ಮಾತನಾಡುತ್ತಾನೆ. ಇದನ್ನು ಕೇಳಿದ ಭೂಮಿಕಾಗೆ ಬಹಳ ನಾಚಿಕೆ ಆಗುತ್ತದೆ. ಗೌತಮ್‌ಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ.
ಶಕುಂತಲಾ ಪ್ಲಾನ್ ವರ್ಕ್ ಆಗುತ್ತಾ?
ಗೌತಮ್- ಭೂಮಿಕಾರನ್ನು ಚಿಕ್ಕಮಗಳೂರಿಗೆ ಹನಿಮೂನ್ ಕಲಿಸುವ ಪ್ಲಾನ್ ಅಜ್ಜಿ ಮಾಡುತ್ತಿದ್ದಂತೆ ಶಕುಂತಲಾ ಹೊಸ ಪ್ಲಾನ್ ಮಾಡುತ್ತಿದ್ದಾಳೆ. ಅವರಿಬ್ಬರ ಜೀವಕ್ಕೆ ಕುತ್ತು ತರಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆಸ್ತಿ ಹೇಗಾದರೂ ನನ್ನ ಪಾಲಾಗಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಗೌತಮ್ ದಿವಾನ್‌ಗೆ ಬಿಡಿಗಾಸು ಸಿಗಬಾರದು ಎನ್ನುವುದು ಶಕುಂತಲಾ ಉದ್ದೇಶ.


Click it and Unblock the Notifications











