Amruthadhaare: ಶಕುಂತಲಾ ದೇವಿ ನಾಟಕಕ್ಕೆ ಮರುಳಾದ ಗೌತಮ್; ಪ್ರೀತಿ ಹೇಳಲು ಹಿಂಜರಿಯುತ್ತಾನ?

By Poorva

ಭೂಮಿಕಾ ಹಾಗೂ ಗೌತಮ್ ಒಬ್ಬರನ್ನು ಒಬ್ಬರು ಬಹಳ ಪ್ರೀತಿ ಮಾಡುತ್ತಿರುತ್ತಾರೆ. ಈ ವಿಚಾರವನ್ನು ಭೂಮಿಕಾಗೆ ಹೇಗಾದರೂ ಮಾಡಿ ತಿಳಿಸಬೇಕು ಎಂದು ಗೌತಮ್ ಸ್ನೇಹಿತ ಆನಂದ್ ಸಹಾಯವನ್ನು ಕೇಳುತ್ತಾನೆ. ಹಾಗೆಯೇ ಭೂಮಿಕಾಗೆ ಯಾವ ರೀತಿ ಪ್ರಪೋಸ್ ಮಾಡಬೇಕು ಎಂದು ರಿಹರ್ಸಲ್ ಕೂಡ ಮಾಡಿಕೊಂಡಿರುತ್ತಾನೆ. ಅದೇ ರೀತಿ ಭೂಮಿಕಾಳನ್ನು ಇಂಪ್ರೆಸ್ ಮಾಡಬೇಕು ಎಂದು ಅಂದುಕೊಂಡಿರುತ್ತಾನೆ.

ಗೌತಮ್ ಪ್ರಯತ್ನಕ್ಕೆ ಅಡ್ಡಿಯಾಗಿರುವುದು ಇದೀಗ ಶಕುಂತಲಾ ದೇವಿ. ಆಕೆಗೆ ಗೌತಮ್ ಹಾಗೂ ಭೂಮಿಕಾ ಒಂದಾಗುವುದು ಸ್ವಲ್ಪವೂ ಇಷ್ಟವಿಲ್ಲ. ಶಕುಂತಲಾ ದೇವಿ ಗೌತಮ್ ರಿಹರ್ಸಲ್ ಮಾಡುತ್ತಿರುವುದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಾಳೆ.

Amruthadhare kannada serial written update on 1st April episode

ಭೂಮಿಕಾ ಹಾಗೂ ಗೌತಮ್ ಒಂದಾದರೆ ನನಗೆ ಉಳಿಗಾಲವಿಲ್ಲ ಎಂದುಕೊಳ್ಳುತ್ತಾಳೆ. ಗೌತಮ್‌ನನ್ನು ಹೇಗಾದರೂ ಮಾಡಿ ತಡೆಯಬೇಕು, ಎಂದು ತನ್ನ ಮಗಳ ಬಳಿ ಹೇಳುತ್ತಿರುತ್ತಾಳೆ. ಅಷ್ಟು ಬೇಗ ಅದಕ್ಕೊಂದು ಮಾಸ್ಟರ್ ಐಡಿಯಾ ಕೂಡ ಮಾಡುತ್ತಾಳೆ. ಶಕುಂತಲಾ ದೇವಿ ತಲೆ ತಿರುಗಿ ಬಿದ್ದ ಹಾಗೆ ನಾಟಕ ಮಾಡುತ್ತಾಳೆ, ಇನ್ನು ತಾಯಿ ನಾಟಕ ಮಾಡುತ್ತಿರುವ ವೇಳೆ ಆಕೆಯ ಮಗಳು ಎಲ್ಲರನ್ನ ಜೋರಾಗಿ ಕರೆಯುತ್ತಾಳೆ. ಇದನ್ನು ಕೇಳಿದ ಗೌತಮ್, ಭೂಮಿಕಾ ಗಾಬರಿ ಆಗುತ್ತಾರೆ.

ಗೌತಮ್ ತಾಯಿಯ ಬಳಿ ಓಡಿ ಬರುತ್ತಾನೆ. ಭೂಮಿಕಾ ಕೂಡ ತಾನು ಬರೆದಿದ್ದ ಲವ್ ಲೆಟರ್ ಬಿಸಾಡಿ ತನ್ನ ಅತ್ತೆಗೆ ಏನಾಯಿತು ಎಂದು ಬರುತ್ತಾಳೆ. ತನ್ನ ತಾಯಿಯನ್ನು ಎಚ್ಚರಿಸುವ ಎಲ್ಲಾ ಪ್ರಯತ್ನ ಮಾಡುತ್ತಾನೆ. ಇನ್ನು ಶಕುಂತಲಾ ದೇವಿಯನ್ನು ಡಾಕ್ಟರ್ ಬಂದು ಪರೀಕ್ಷಿಸುತ್ತಾರೆ. ಬಳಿಕ ಮಾತ್ರೆ ಬರೆದುಕೊಡುತ್ತಾರೆ.

Amruthadhare kannada serial written update on 1st April episode

ತಾಯಿ ಬಳಿಯೇ ಇರುವ ಗೌತಮ್

ಗೌತಮ್‌ಗೆ ತನ್ನ ತಾಯಿಗೆ ಏನಾಗಿಬಿಡುತ್ತೋ ಎನ್ನುವ ಭಯ. ತನ್ನ ತಾಯಿ ಚೆನ್ನಾಗಿರಬೇಕು ಎಂದು ಆಲೋಚನೆ ಮಾಡುತ್ತಿರುತ್ತಾನೆ. ತನ್ನ ತಾಯಿ ಜೊತೆ ಯಾವತ್ತೂ ಖುಷಿಯಿಂದ ಮನೆಯವರೆಲ್ಲರೂ ಇರಬೇಕು. ಅದಕ್ಕಾಗಿ ತನ್ನ ತಾಯಿಗೆ ಏನು ಆಗಬಾರದು ಎಂದು ಆಲೋಚನೆ ಎಂದುಕೊಳ್ಳುತ್ತಾನೆ. ಶಕುಂತಲಾ ದೇವಿಯವರ ರೂಮಿಗೆ ಬಂದು ಆಕೆಗೆ ಮಾತ್ರೆಯನ್ನು ಕೊಟ್ಟು ನಿದ್ದೆ ಮಾಡುವಂತೆ ಹೇಳುತ್ತಾನೆ. ಆದರೆ ಶಕುಂತಲಾ ದೇವಿ ಮಾತ್ರೆಯನ್ನು ಮೆತ್ತಗೆ ಮಂಚದ ಕೆಳಗೆ ಎಸೆದು ಬಿಡುತ್ತಾಳೆ .

Mahanati: 'ವಿಕ್ರಾಂತ್ ರೋಣ' ಬೆಡಗಿಗೆ ಧ್ವನಿ ಕೊಟ್ಟವರು ಇವರೇ: 'ಮಹಾನಟಿ' ವೇದಿಕೆಯಲ್ಲಿ ಆಶಿಕಾ ಕಣ್ಣೀರ ಕಥೆ

ಶಕುಂತಲಾ ದೇವಿ ನಾಟಕ ಬಯಲಾಗುತ್ತಾ?

ತಾಯಿಯ ನಾಟಕ ಗೌತಮ್‌ಗೆ ತಿಳಿಯುವುದಿಲ್ಲ. ತನ್ನ ತಾಯಿ ಬಹಳ ಸುಸ್ತಾಗಿದ್ದಾರೆ ಎಂದು ಹೇಳಿ ಕೊರಗುತ್ತಿರುತ್ತಾನೆ. ಹಾಗೆಯೇ ತನ್ನ ತಾಯಿಯ ಕಾಲು ಒತ್ತುತ್ತಿರುತ್ತಾನೆ, ದಯವಿಟ್ಟು ಹಾಗೆಲ್ಲ ಮಾಡಬೇಡ ಎಂದು ಶಕುಂತಲಾ ದೇವಿ ನಾಟಕೀಯವಾಗಿ ಹೇಳಿದರೂ ಗೌತಮ್ ಮಾತ್ರ ಮಾತು ಕೇಳದೆ , ಅಮ್ಮ ನೀವು ಸುಮ್ಮನೆ ಮಲಗಿ, ದಯವಿಟ್ಟು ನೀವು ಬೇರೆ ಯೋಚನೆ ಮಾಡಬೇಡಿ ಎಂದು ಹೇಳುತ್ತಾನೆ. ಆಗ ಶಕುಂತಲಾ ಮನದಲ್ಲಿಯೇ ಇದುವೇ ನನಗೆ ಬೇಕಾಗಿ ರುವುದು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ .

ಗೌತಮ್ ಪ್ರೀತಿಯೇ ಶಕುಂತಲಾ ಆಯುಧ

ಗೌತಮ್‌ನನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಶಕುಂತಲಾ ದೇವಿಗೆ ತನ್ನ ಗಂಡನ ಮೊದಲ ಹೆಂಡತಿಯ ಮಗ ನನ್ನ ಮಾತನ್ನೇ ಕೇಳುತ್ತಿರಬೇಕು, ನನಗೆ ಕೂಡ ಅದೇ ಬೇಕಾಗಿರುವುದು, ಹೇಗಾದರೂ ಮಾಡಿ ಭೂಮಿಕಾ ಹಾಗೂ ಗೌತಮ್ ಒಂದಾಗದೇ ಇರುವ ಹಾಗೆ ನೋಡಿಕೊಳ್ಳುತ್ತೇನೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕು.

More from Filmibeat

English summary
Amruthadhare kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X