Amruthadhare: ಮಾನ್ಯಾಳನ್ನು ನೋಡಿ ನಡುಗುತ್ತಿರುವ ಗೌತಮ್; ಸತ್ಯ ಬಯಲಾಗುತ್ತಾ?
ಅಮೃತಧಾರೆ ಧಾರಾವಾಹಿಯಲ್ಲಿ ಎಲ್ಲರಿಗೂ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ ಏನೆಂದರೆ ಮಾನ್ಯ ಯಾರು ಎನ್ನುವುದು? ಮಾನ್ಯ, ಗೌತಮ್‌ನನ್ನು ಭೇಟಿ ಮಾಡಲು ಬಹಳ ಸಲ ಪ್ರಯತ್ನಪಟ್ಟಿದ್ದಳು. ಆದರೆ ಅದು ಸಾಧ್ಯ ಆಗಿರಲಿಲ್ಲ. ಯಾಕೆಂದರೆ ಅದಕ್ಕೆ ಅವಕಾಶ ಶಕುಂತಲಾ ಮಾಡಿಕೊಡುತ್ತಿರಲಿಲ್ಲ. ಶಕುಂತಲಾಗೆ ಮಾನ್ಯನಂತಹ ಹುಡುಗಿ ಈ ಮನೆಗೆ ಸೊಸೆ ಆಗಿ ಬರುವುದು ಸ್ವಲ್ಪವೂ ಕೂಡ ಇಷ್ಟ ಇಲ್ಲ.
ಶಕುಂತಲಾ ದೇವಿ ಏನಾದರೂ ಮಸಲತ್ತು ಮಾಡುತ್ತಿದ್ದಾಳಾ? ಎನ್ನನುವ ಅನುಮಾನ ಕೆಲವರದ್ದು. ಹಲವು ಬಾರಿ ಮಾನ್ಯ, ಗೌತಮ್ ಬಳಿ ಮಾತನಾಡಲು ಬಂದಿದ್ದಳು. ಆತನಿಗೆ ಮಾನ್ಯನನ್ನು ಕಂಡರೆ ಅದ್ಯಾಕೋ ಬಹಳ ಭಯ. ಒಂದು ಬಾರಿ ಆಫೀಸ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ. ಆದರೆ ಇದೀಗ ಮಾನ್ಯ, ಗೌತಮ್ ಮನೆಗೆ ಆಗಮಿಸಿದ್ದಾಳೆ. ಭೂಮಿಕಾ, ಮಾನ್ಯಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ನೇರವಾಗಿ ಮನೆಗೆ ಕರೆದುಕೊಂಡು ಬಂದಿರುತ್ತಾಳೆ.

ಮಾನ್ಯಳನ್ನು ನೋಡಿದ ಗೌತಮ್ ಹಾಗೂ ಶಕುಂತಲಾ ದೇವಿಗೆ ಆತಂಕ ಶುರು ಆಗಿದೆ. ಶಕುಂತಲಾ ದೇವಿಗೆ ಭಯ ಏಕೆಂದರೆ ನಾನು ಮಾಡಿದ ಎಲ್ಲಾ ಕೆಟ್ಟ ಕೆಲಸಗಳನ್ನು ಗೌತಮ್ ಮುಂದೆ ಹೇಳಿಬಿಟ್ಟರೆ ಎನ್ನುವ ಭಯ. ಮಾನ್ಯ ಮೆತ್ತಗೆ ಗೌತಮ್ ರೂಮ್‌ಗೆ ಹೋಗಿ ಮಾತನಾಡಲು ಶುರು ಮಾಡುತ್ತಾಳೆ. ಆದರೆ ಗೌತಮ್‌ಗೆ ಅದ್ಯಾಕೋ ಬಹಳ ನಡುಕ, ಹೇಗಪ್ಪಾ ನಾನು ಇವಳಿಂದ ತಪ್ಪಿಸಿಕೊಳ್ಳುವುದು? ಭೂಮಿಕಾ ನೋಡಿ ಬಿಟ್ಟರೆ ಎನ್ನುವ ಆಲೋಚನೆ.
ಗೌತಮ್ ಬಳಿ ಮಾನ್ಯ ಮಾತು
ನಾನು ಗೌತಮ್ ಬಳಿ ಏನೇ ಹೇಳಿದರು ಅದೆಲ್ಲವೂ ನೀರಿನಲ್ಲಿ ಹೋಮ ಮಾಡಿದ ಹಾಗೆಯೇ, ಭೂಮಿಕಾ ಬಳಿ ಹೇಳಿದರೆ ಈ ಮನೆಯವರ ಬಂಡವಾಳ ಹೊರಗೆ ಬೀಳಬಹುದು ಎಂದು ಮಾನ್ಯ ಆಲೋಚನೆ ಮಾಡುತ್ತಾಳೆ. ಇನ್ನೂ ಗೌತಮ್ ಜೊತೆ ಭೂಮಿಕಾ ಬಗ್ಗೆ ಬಹಳ ಹೊಗಳಿ ಮಾತನಾಡುತ್ತಾಳೆ, ಮಾನ್ಯಗೆ ಭೂಮಿಕಾಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಎಲ್ಲವೂ ಚೆನ್ನಾಗಿಯೇ ತಿಳಿದಿದೆ.
ಭೂಮಿಕಾಗೆ ಕಾದಿದೆ ಕಂಟಕ
ಭೂಮಿಕಾಗೆ ಕಂಟಕ ಇದೆ ಎಂದು ಆಕೆಯ ತಂದೆಗೆ ಗೊತ್ತಾದ ಬಳಿಕ ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಭೂಮಿಕಾಗೆ ಈ ಬಗ್ಗೆ ಹೇಗೆ ತಿಳಿಸುವುದು ಎಂದು ಆಲೋಚನೆ ಮಾಡುತ್ತಿರುತ್ತಾರೆ. ಆಗ ಮಾವನಿಗೆ ಮಹಿಮಾ ಸಮಾಧಾನ ಮಾಡುತ್ತಾಳೆ. ಅತ್ತಿಗೆ ನನಗೆ ಹೇಗೆ ಅನ್ನುವುದು ಚೆನ್ನಾಗಿ ತಿಳಿದಿದೆ. ಹಾಗೆಯೇ ಅವರು ಎಲ್ಲರ ಹಾಗೆ ಅಲ್ಲ, ಅವರಿಗೆ ಸೂಕ್ಷ್ಮಗಳು ಬಹಳ ಬೇಗ ಅರ್ಥ ಆಗುತ್ತದೆ.

ಭೂಮಿಕಾ ತಂದೆಗೆ ಮನೆಮಾಡಿದ ಆತಂಕ
ಭೂಮಿಕಾ ಯಾವತ್ತೂ ಸತ್ಯದ ಮಾತುಗಳಿಂದಲೇ ಎಲ್ಲರಿಗೂ ಹತ್ತಿರ ಆಗಿರುವವಳು, ಆಕೆಗೆ ಸುಳ್ಳು ಹೇಳಿ ತಿಳಿದಿಲ್ಲ, ಮನುಷ್ಯನನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದಾಳೆ. ಆದ್ದರಿಂದ ನಾನು ಅವರಿಗೆ ಈ ವಿಚಾರವನ್ನು ಹೇಳುತ್ತೇನೆ . ಅವರು ಅಷ್ಟು ಗಡಿ ಬಿಡಿ ಆಗುವುದು ಇಲ್ಲ, ಆ ಬಗ್ಗೆ ನೀವು ಏನು ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಮಹಿಮಾ ಹೇಳುತ್ತಾಳೆ. ಸೊಸೆಯ ಮಾತು ಕೇಳಿದ ಭೂಮಿಕಾ ತಂದೆ ಕೊಂಚ ಸಮಾಧಾನ ಆಗುತ್ತಾರೆ. ಶಕುಂತಲಾ ದೇವಿ ಗಾರ್ಡನ್ ಬಳಿ ಬಂದು ನಿಂತುಕೊಂಡು ಇರುತ್ತಾಳೆ. ಅದೇ ಹೊತ್ತಿಗೆ ಅಲ್ಲಿಗೆ ಮಾನ್ಯ ಬರುತ್ತಾಳೆ.
ಶಕುಂತಲಾಗೆ ಶುರು ಆತಂಕ
ಮಾನ್ಯಳನ್ನು ನೋಡಿದ ಶಕುಂತಲಾ ದೇವಿ ಕೋಪ ಮಾಡಿಕೊಂಡು ಇರುತ್ತಾಳೆ. ಯಾಕೆ ನೀನು ಇಲ್ಲಿಗೆ ಯಾಕೆ ಬಂದೆ ಎಂದು ಕೋಪದಲ್ಲಿ ಕೇಳುತ್ತಾಳೆ. ಆಗ ಮಾನ್ಯ, ಶಕುಂತಲಾ ದೇವಿ ಬಳಿ "ನಿಮ್ಮ ಎಲ್ಲಾ ಸಂಚನ್ನು ಬಯಲು ಮಾಡಬೇಕು ಎಂದು ಅಂದುಕೊಂಡು ಇದ್ದೇನೆ, ಇದನ್ನೆಲ್ಲ ಗೌತಮ್ ಬಳಿ ಹೇಳಿದರೆ ಏನು ಪ್ರಯೋಜನ ಇಲ್ಲ ಎಂದು ತಿಳಿಯಿತು ಅದಕ್ಕೆ ಭೂಮಿಕಾ ಬಳಿ ಹೇಳೋಣ ಎಂದು ತೀರ್ಮಾನ ಮಾಡಿದ್ದೇನೆ ಆಕೆಗೆ ಈ ವಿಚಾರ ಹೇಳಿಯೇ ಹೇಳುತ್ತೇನೆ, ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ" ಎನ್ನುತ್ತಾಳೆ. ಶಕುಂತಲಾ ಗೆ ಮತ್ತಷ್ಟು ಭಯ ಹೆಚ್ಚಾಗುತ್ತದೆ.


Click it and Unblock the Notifications











