Amruthadhaare: ಶಕುಂತಲಾ ದೇವಿ ಗೆಳತಿಯರಿಂದ ಮಂದಾಕಿನಿಗೆ ಅವಮಾನ; ಅಳಿಯನಿಂದ ಬಚಾವ್

By ಪೂರ್ವ

ಗೌತಮ್ ಬರ್ತ್ ಡೇಗೆ ಸರ್ಪ್ರೈಸ್ ಪಾರ್ಟಿಯನ್ನು ಭೂಮಿಕಾ ಅರೆಂಜ್ ಮಾಡಿರುತ್ತಾಳೆ. ಇದಕ್ಕಿಂತ ಮುಂಚೆ ಶಕುಂತಲಾ ದೇವಿಗೆ ಬರ್ತ್‌ಡೇ ಪಾರ್ಟಿ ಅರೆಂಜ್ ಮಾಡುತ್ತಿರೋ ವಿಚಾರವನ್ನು ಬಹಳ ನಯವಾಗಿ ಭೂಮಿಕಾ ಹೇಳಿರುತ್ತಾಳೆ. ಮನದಲ್ಲಿ ವಿಷ ಕಾರಿಕೊಂಡಿದ್ದರು ಶಕುಂತಲಾ ದೇವಿ ಮಾತ್ರ ಭೂಮಿಕಾ ಹೇಳಿದ ಮಾತಿಗೆ ತಲೆ ಆಡಿಸುತ್ತಿರುತ್ತಾಳೆ. ಆದರೆ ಮನದಲ್ಲಿ ಮಾತ್ರ ಬಹಳ ಕುಪಿತಗೊಂಡು ಇರುತ್ತಾಳೆ.

ಶಕುಂತಲಾಗೆ ಗೌತಮ್ ಹಾಗೂ ಭೂಮಿಕಾ ಒಟ್ಟಿಗೆ ಇರುವುದು ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಅವರಿಬ್ಬರನ್ನ ಹೇಗಾದರೂ ಮಾಡಿ ದೂರ ಮಾಡಲೇಬೇಕೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಅದಕ್ಕೆ ತಮ್ಮನ ಸಹಾಯ ಕೂಡ ಕೇಳುತ್ತಾಳೆ. ಭೂಮಿಕಾ ಇಷ್ಟೆಲ್ಲ ಶಕುಂತಲಾ ದೇವಿ ಬಳಿ ಕೇಳಿಕೊಂಡಾಗ ಶಕುಂತಲಾ ದೇವಿಯ ತಮ್ಮ ಮಾತ್ರ ನಗುತ್ತಲೇ ತಂಗಿಗೆ ಸಾಥ್ ನೀಡುತ್ತಾನೆ.

Amruthadhare kannada serial written update on 27th April episode

ಗೌತಮ್‌ಗೆ ಸರ್ಪ್ರೈಸ್ ನೀಡುತ್ತಾಳೆ ಭೂಮಿಕಾ. ಬರ್ತಡೇರ್ಟಿಗೆ ಶಕುಂತಲಾ ದೇವಿ ಆಕೆಯ ಗೆಳತಿಯರನ್ನ ಕರೆದಿರುತ್ತಾಳೆ. ಭೂಮಿಕಾಯಿ ಹಾಗೂ ಮನೆಯವರನ್ನ ಭೂಮಿಕಾ ಆಹ್ವಾನಿಸಿರುತ್ತಾಳೆ. ಳಿಯಂದಿರ ಬರ್ತಡೇ ಪಾರ್ಟಿಗೆ ಬರಗೈನಲ್ಲಿ ಹೋದರೆ ಚೆನ್ನಾಗಿ ಇರುವುದಿಲ್ಲ ಎಂದು ಭೂಮಿಕಾಯಿಗೆ ನೆನಪಾಗುತ್ತದೆ. ಆದರೆ ಕೈಯಲ್ಲಿ ಮಾತ್ರ ಒಂದು ಬಿಡಿಗಾಸು ಇರುವುದಿಲ್ಲ. ಆದ ಕಾರಣ ಆಕೆ ರೋಲ್ಡ್ ಗೋಲ್ಡ್‌ ತಂದು ಗೌತಮ್‌ಗೆ ಗಿಫ್ಟ್ ಆಗಿ ಕೊಡುತ್ತಾಳೆ. ಇನ್ನೂ ಶಕುಂತಲಾ ದೇವಿ ಗೆಳತಿಯರು ಬಿಡಬೇಕಲ್ಲ. ಈ ಗೋಲ್ಡ್ ಅನ್ನು ಎಲ್ಲಿ ತೆಗೆದುಕೊಂಡು ಬಂದಿದ್ದು ಅದರ ಡಿಸೈನ್ ಚೆನ್ನಾಗಿ ಇದೆ ಎಂದು ಕೇಳುತ್ತಾರೆ.

ಭೂಮಿಕಾ ಬಳಿ ನಿಜ ಹೇಳಿದ ತಾಯಿ

ಒಮ್ಮೆಗೆ ಭೂಮಿಕಾ ತಾಯಿಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಆಕೆ ಮಾತ್ರ ಒಂದು ಸುಳ್ಳು ಶಾಪ್ ಹೆಸರು ಹೇಳುತ್ತಾಳೆ. ಆ ಕೂಡಲೇ ಆ ಶಾಪ್‌ಗೆ ಕರೆ ಮಾಡಿ ಕೇಳಿದಾಗ ಅಂತಹ ಚೈನ್ ನಮ್ಮ ಬಳಿ ಇಲ್ಲ ಎಂದು ಹೇಳಿ ಬಿಡುತ್ತಾರೆ. ಇತ್ತ ಮಂದಾಕಿನಿ, ಭೂಮಿಕಾ ಬಳಿ ಬಂದು ಹೇಳುತ್ತಾಳೆ. ನಾನು ಅಳಿಯಂದಿರು ಕುತ್ತಿಗೆಗೆ ಹಾಕಿದ್ದು ರೋಲ್ಡ್ ಗೋಲ್ಡ್ . ಅದು ಚಿನ್ನ ಅಲ್ಲ ಎಂದಾಗ ಭೂಮಿಕಾಗೆ ಶಾಕ್ ಆಗುತ್ತದೆ.

ಅಮ್ಮನ ಮಾತು ಕೇಳಿ ಭೂಮಿಕಾ ಶಾಕ್

ಅಮ್ಮ ನೀನು ಚಿನ್ನ ಕೊಡದೇ ಇದ್ದರೂ ಪರವಾಗಿಲ್ಲ. ಮನೆಯವರಿಗೆ ಈ ವಿಚಾರ ತಿಳಿದರೆ ಮಾತ್ರ ಮರ್ಯಾದೆ ಹೋಗುತ್ತದೆ ಎಂದು ಭೂಮಿಕಾ ಹೇಳುತ್ತಾಳೆ. ಇದನ್ನು ಕೇಳಿದ ಮಂದಾಕಿನಿಗೆ ಏನು ಮಾಡಬೇಕು ತಿಳಿಯದಾಗುತ್ತದೆ. ಇನ್ನೂ ಶಕುಂತಲಾ ದೇವಿ ಗೆಳತಿಯರು ಎಲ್ಲರ ಮುಂದೆ ಕೇಳುತ್ತಾರೆ. ಏನು ಮಂದಾಕಿನಿ ಅವರೇ ನೀವು ಹೇಳಿದ ಶಾಪ್‌ಗೆ ಕರೆ ಮಾಡಿ ಕೇಳಿದೆ. ಅಂತಹ ಚಿನ್ನದ ಡಿಸೈನ್ ಅಲ್ಲಿ ಇಲ್ಲವೇ ಇಲ್ವಂತೆ ಎಂದಾಗ ಆಕೆಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಆಗ ಅಲ್ಲಿಗೆ ಬಂದ ಗೌತಮ್ ಕೊಂಚ ಜೋರಾಗಿಯೇ ಮಾತನಾಡುತ್ತಾನೆ.

Amruthadhare kannada serial written update on 27th April episode

ಶಕುಂತಲಾ ದೇವಿ ಗೆಳತಿಯರಿಗೆ ವಾರ್ನಿಂಗ್

ಆ ರೀತಿ ಗೌತಮ್ ತನ್ನ ಗೆಳತಿಯರೊಂದಿಗೆ ಆ ಸಮಯದಲ್ಲಿ ವರ್ತಿಸುತ್ತಾನೆ ಎನ್ನುವುದು ಶಕುಂತಲಾಗೆ ತಿಳಿದಿರುವುದಿಲ್ಲ. ತಾಯಿ ಮಾಡಿದ ತಪ್ಪಿಗೆ ಭೂಮಿಕಾ ಬೆಲೆ ತೆರಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

More from Filmibeat

English summary
Amruthadhare kannada serial latest episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X