Amruthadhaare: ಗೌತಮ್ ದಿವಾನ್ ಮನೆಗೆ ಪೊಲೀಸ್; ತಪ್ಪು ಮಾಡದ ಭೂಮಿಕಾಗೆ ಪತಿಯ ಬೆಂಬಲ?
ಮಲ್ಲಿ ಎಂದರೆ ಭೂಮಿಕಾಗೆ ಕೊಂಚ ಪ್ರೀತಿ ಹೆಚ್ಚು. ಅದೇ ಕಾರಣದಿಂದ ಮಲ್ಲಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಆಕೆಯ ತಾತನಿಗೆ ಕೂಡ ಭರವಸೆ ನೀಡಿರುತ್ತಾಳೆ. ಅದೇ ಪ್ರಕಾರವಾಗಿ ಮಲ್ಲಿಯನ್ನು ಬಹಳ ಚೆನ್ನಾಗಿ ನೋಡಿಕೊಂಡು ಇರುತ್ತಾಳೆ. ಮಲ್ಲಿಗೆ ಹಾಲು ತೆಗೆದುಕೊಂಡು ಹೋಗೋಣ ಎಂದು ಭೂಮಿಕಾಗೆ ಅನ್ನಿಸದೆ ಇರದು . ಆದ ಕಾರಣ ಮಲ್ಲಿಗೆ ರೂಮ್ ಗೆ ಹೋಗಿ ಹಾಲು ಕೊಡುತ್ತಾಳೆ.
ಮಲ್ಲಿ ಕೆನ್ನೆಗೆ ಜೈ ದೇವ್ ಹೊಡೆದಿರುತ್ತಾನೆ. ಇದನ್ನು ನೋಡಿದ ಭೂಮಿಕಾ ಮಲ್ಲಿ ಜೊತೆ ಮಾತನಾಡುತ್ತಾಳೆ. ಇದೇನು ಮಲ್ಲಿ, ಯಾಕೆ ಹೀಗೆ ಆಯಿತು ಯಾರಾದರೂ ಹೊಡೆದರ? ಎಂದು ಮಲ್ಲಿ ಕೆನ್ನೆ ಮುಟ್ಟಿ ಕೇಳುತ್ತಾಳೆ. ಇದನ್ನು ಕೇಳಿ ಮಲ್ಲಿಗೆ ಏನು ಹೇಳಬೇಕು ಎಂದು ತಿಳಿಯದಂತಾಗುತ್ತದೆ. ಆಕೆ ಮೌನವಾಗಿಯೇ ಇರುತ್ತಾಳೆ. ಕೊನೆಗೆ ಮಲ್ಲಿ ಬಳಿ ಭೂಮಿಕಾ ಕೇಳುತ್ತಾಳೆ. ಜೈ ದೇವ್ ಏನಾದರು ಹೊಡೆದ್ರಾ ಮಲ್ಲಿ ಎಂದು ಕೇಳಿದಾಗ, ಮಲ್ಲಿ ಎನು ಉತ್ತರ ಕೊಡದೇ ನಿಂತುಕೊಂಡು ಇರುತ್ತಾಳೆ.

ಭೂಮಿಕಾಗೆ ಆಕೆಯ ಮುಖ ನೋಡಿಯೇ ಎಲ್ಲಾ ಅರ್ಥವಾಗುತ್ತದೆ. ಭೂಮಿಕಾಗೆ ಬಹಳ ಕೋಪ ಬರುತ್ತದೆ. ಇಷ್ಟೆಲ್ಲಾ ತಪ್ಪು ಮಾಡಿರುವುದು ಸಾಲದ್ದಕ್ಕೆ ಈಗ ಹುಡುಗಿಯ ಮೇಲೆ ಕೈ ಮಾಡಲು ಎಷ್ಟು ಧೈರ್ಯ ಜೈದೇವ್‌ಗೆ? ಇದನ್ನು ಪ್ರಶ್ನೆ ಮಾಡಬೇಕು ಎಂದು ಮಲ್ಲಿ ಕೈ ಹಿಡಿದುಕೊಂಡು ಜೈ ದೇವ್ , ಜೈ ದೇವ್ ಎಂದು ಬಹಳ ಜೋರಾಗಿ ಕೂಗಾಡುತ್ತಾ ಇರುತ್ತಾಳೆ.
ಭೂಮಿಕಾ ಕೂಗಾಡುತ್ತ ಇರುವುದನ್ನು ನೋಡಿದ ಶಕುಂತಲಾ ದೇವಿ ಕೊಂಚ ಗಾಬರಿಗೊಂಡು ಓಡೋಡಿ ಬರುತ್ತಾಳೆ. ಇನ್ನೂ ಜೈ ದೇವ್ ಮಹಡಿ ಮೇಲಿಂದ ಇಳಿದುಕೊಂಡು ಬರುತ್ತಾನೆ. ಏನು ಅತ್ತಿಗೆ ಎಂದು ಕೊಂಚ ಗತ್ತಿನಲ್ಲಿ ಕೇಳಿದಾಗ ಭೂಮಿಕಾ ಮಾತ್ರ ಕೊಂಚ ಜೋರಾಗಿಯೇ ಹೇಳುತ್ತಾಳೆ. ಮಲ್ಲಿ ಮೇಲೆ ಕೈ ಮಾಡಲು ನಿಮಗೆ ಎಷ್ಟು ಧೈರ್ಯ ? ಒಂದು ಹುಡುಗಿ ಮೇಲೆ ಕೈ ಮಾಡಲು ನಾಚಿಕೆ ಆಗಲ್ವಾ ಎಂದು ಕೇಳಿದಾಗ ಜೈ ದೇವ್‌ಗೆ ಕೋಪ ಬರುತ್ತದೆ.

ಜೈದೇವ್ ಮೇಲೆ ಕೂಗಾಡಿದ ಭೂಮಿಕಾ
ನಿಮ್ಮನ್ನು ಅತ್ತಿಗೆ ಅನ್ನುವ ಕಾರಣಕ್ಕೆ ನಾನು ಸುಮ್ಮನೆ ಬಿಟ್ಟಿದ್ದೇನೆ. ಇಲ್ಲವಾದರೆ ನಾನು ಏನು ಮಾಡಿ ಬಿಡುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಜೋರಾಗಿ ಹೇಳುತ್ತಾನೆ. ಇದನ್ನು ಕೇಳಿದ ಭೂಮಿಕಾ ನಾನು ಕೂಡ ಹಾಗೆಯೇ ಬಾಮೈದ ಅನ್ನುವ ಕಾರಣಕ್ಕೆ ಸುಮ್ಮನೆ ಇದ್ದೇನೆ, ಇಲ್ಲವಾದರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಒಳಗೆ ಹಾಕಿಸುತ್ತಿದ್ದೆ ಎನ್ನುತ್ತಾಳೆ. ಇದನ್ನೆಲ್ಲ ಕೇಳಿದ ಜೈ ದೇವ್‌ಗೆ ಕೋಪ ಹೆಚ್ಚಾಗುತ್ತದೆ.
ಅತ್ತಿಗೆಯನ್ನು ಎದುರು ಹಾಕಿಕೊಂಡ ಜೈ ದೇವ್
ಕೋಪದಲ್ಲಿ ಏನು ಮಾಡಬೇಕು ಎಂದು ತಿಳಿಯದೇ ಅಲ್ಲಿಂದ ಹೋಗುತ್ತಾನೆ. ಹಾಗೆಯೇ ಜೈ ದೇವ್‌ನನ್ನು ನೋಡಿದ ಮಲ್ಲಿಗೆ ಮಾತ್ರ ಸಿಕ್ಕಾಪಟ್ಟೆ ಭಯ ಆಗುತ್ತದೆ. ಮನೆಯಲ್ಲಿ ಎಲ್ಲರೂ ಇರುವ ವೇಳೆ ಪೊಲೀಸರು ಬರುತ್ತಾರೆ. ಜೈ ದೇವ್ ಅವರು ಒಂದು ಹೆಣ್ಣಿನ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಕಂಪ್ಲೇಂಟ್ ಬಂದಿದೆ. ಅವರನ್ನು ಅರೆಸ್ಟ್ ಮಾಡಲು ಬಂದಿದ್ದೇವೆ ಎಂದು ಹೇಳಿದಾಗ ಶಕುಂತಲಾ ದೇವಿ ಥಟ್ಟನೆ ಕೇಳುತ್ತಾರೆ. ಯಾರು ಹಾಗೆ ಕಂಪ್ಲೇಂಟ್ ಮಾಡಿ ಇರುವುದು ಎಂದು ಕೇಳಿದಾಗ ಪೊಲೀಸರು ಭೂಮಿಕಾ ಎನ್ನುವ ಉತ್ತರವನ್ನು ಕೊಡುತ್ತಾರೆ. ಆದರೆ ಭೂಮಿಕಾಗೆ ಶಾಕ್ ಆಗುತ್ತದೆ.
ಕಂಪ್ಲೇಂಟ್ ಕೊಟ್ಟವರು ಯಾರು?
ಭೂಮಿಕಾ ಕಂಪ್ಲೇಂಟ್ ಕೊಟ್ಟಿರಲಿಲ್ಲ. ಭೂಮಿಕಾ ಕಂಪ್ಲೇಂಟ್ ಕೊಟ್ಟಿದ್ದಾಳೆ ಎಂದು ತಿಳಿದು ಗೌತಮ್ ಶಾಕ್ ಆಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಭೂಮಿಕಾ ಮೇಲೆ ಗೌತಮ್‌ಗೆ ಪ್ರೀತಿ ಶುರುವಾಗಿದೆ. ಈ ಸಂದರ್ಭದಲ್ಲಿ ಈ ರೀತಿ ಆಗುತ್ತಿರುವುದು ಯಾರಿಂದ? ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.


Click it and Unblock the Notifications











