Amrutadhaare: ಅಮ್ಮನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ ಗೌತಮ್; ಮಗನ ಮಾತು ಕೇಳುತ್ತಾಳ ಶಕುಂತಲಾ ?

By ಪೂರ್ವ

ಭೂಮಿಕಾ ಅದೆಷ್ಟೇ ಬಾರಿ ನಾನು ತಪ್ಪು ಮಾಡಿಲ್ಲ ಎಂದು ಎಲ್ಲರ ಬಳಿ ಹೇಳಿದರು. ಅದನ್ನು ಕೇಳುವ ಸ್ಥಿತಿಯಲ್ಲಿ ಶಕುಂತಲಾ ದೇವಿ ಇರುವುದು ಇಲ್ಲ. ಜೈ ದೇವ್ ಮೇಲೆ ಭೂಮಿಕಾ ಕಂಪ್ಲೇಂಟ್ ಕೊಡುವುದಿಲ್ಲ. ಈ ವಿಚಾರ ಗೌತಮ್‌ಗೆ ಕೂಡ ತಿಳಿದಿದೆ. ಆದರೆ ಗೌತಮ್ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ.

ಜೈಲ್‌ನಿಂದ ಜೈ ದೇವ್‌ನ ಬಿಡಿಸಿಕೊಂಡು ಗೌತಮ್ನೇರವಾಗಿ ಮನೆಗೆ ಬರುತ್ತಾನೆ. ಅವರ ಜೊತೆ ಭೂಮಿಕಾ ಹಾಗೂ ಮಲ್ಲಿ ಇರುತ್ತಾರೆ. ಜೈದೇವ್ ಮನೆಗೆ ಬಂದವನೇ ದಪ್ಪ ಮುಖ ಮಾಡಿ ತನ್ನ ರೂಮ್‌ನತ್ತ ಹೋಗುತ್ತಾನೆ. ಇದನ್ನು ನೋಡಿದ ಶಕುಂತಲಾ ದೇವಿ, ಭೂಮಿಕಾಳನ್ನೂ ಕೊಂಚ ಜೋರಾಗಿಯೇ ಪ್ರಶ್ನೆ ಮಾಡುತ್ತಾಳೆ.

Amruthadhare kannada serial written update on 3th March episode

ಭೂಮಿಕಾ ಗಂಡ ಹೆಂಡತಿ ಮಧ್ಯೆ ಏನೇ ನಡೆದರೂ ಇದನ್ನು ಅವರವರೇ ಸರಿಪಡಿಸುತ್ತಾರೆ. ಆದರೆ ನೀನು ಮಧ್ಯ ಪ್ರವೇಶ ಮಾಡುವುದು ಸರಿ ಅಲ್ಲ. ಇದಕ್ಕಾಗಿ ನೀನು ಪೊಲೀಸ್ ಕಂಪ್ಲೇಂಟ್ ಕೊಡುವಷ್ಟರ ಮಟ್ಟಿಗೆ ಮುಂದುವರೆಯಬಾರದಾಗಿತ್ತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭೂಮಿಕಾ ನಾನು ಯಾರ ಮೇಲೆ ಕೂಡ ಕಂಪ್ಲೇಂಟ್ ಮಾಡಿಲ್ಲ. ಅದರ ಅಗತ್ಯ ನನಗಿಲ್ಲ ಎಂದೆಲ್ಲ ಪ್ರತ್ಯುತ್ತರ ಕೊಡುತ್ತಾಳೆ. ಇಬ್ಬರ ವಾದ, ಪ್ರತಿವಾದ ನೋಡಿ ಗೌತಮ್‌ಗೆ ಬಹಳ ಸಿಟ್ಟು ಬರುತ್ತದೆ.

ಗೌತಮ್ ಮಾತು ಕೇಳಿ ಶಕುಂತಲಾಗೆ ಖುಷಿ

ಹೆಂಡತಿ ಭೂಮಿಕಾ ಮೇಲೆ ತನ್ನ ಸಿಟ್ಟು ತೋಡಿಕೊಂಡು ಬಿಡುತ್ತಾನೆ. ಭೂಮಿಕಾ ಅಮ್ಮನ ವಿರುದ್ದ ಧ್ವನಿ ಎತ್ತಿ ಮಾತನಾಡಬೇಡಿ. ಅಮ್ಮನ ವಿರುದ್ದ ಯಾರೇ ಮಾತನಾಡಿದರು ನಾನು ಸುಮ್ಮನೆ ಇರುವುದು ಇಲ್ಲ. ಮೊದಲು ಈ ಮನೆಯಲ್ಲಿ ನಿಮ್ಮ ಸ್ಥಾನ ಏನು ಎಂಬುದನ್ನು ನೋಡಿಕೊಂಡು ಮಾತನಾಡಿ ಎಂದು ಖಡಕ್ ಆಗಿ ಹೇಳುತ್ತಾನೆ. ಭೂಮಿಕಾಗೆ ಗೌತಮ್ ಮಾತು ಕೇಳಿ ಬಹಳ ಬೇಸರ ಆಗುತ್ತದೆ. ಆದರೆ ಏನು ಮಾತನಾಡದೆ ಸುಮ್ಮನಾಗುತ್ತಾಳೆ. ಇದನ್ನೆಲ್ಲ ನೋಡಿದ ಶಕುಂತಲಾ ದೇವಿಗೆ ಬಹಳ ಖುಷಿ ಆಗುತ್ತದೆ. ಆದರೆ ಆನಂದ್‌ಗೆ ಕೂಡ ಭೂಮಿಕಾ ಮೇಲೆ ಗೌತಮ್ ಗದರಿದ್ದು ಸರಿ ಎನಿಸಲಿಲ್ಲ.

ಭೂಮಿಕಾಳನ್ನು ಸಮಾಧಾನ ಮಾಡಿದ ಮಲ್ಲಿ

ಮಲ್ಲಿ ಭೂಮಿಕಾ ಬಳಿ ಬಂದು ಸಮಾಧಾನ ಮಾಡುತ್ತಾಳೆ. ನನ್ನಿಂದ ನೀವು ಎಷ್ಟೆಲ್ಲ ಕಷ್ಟ ಪಡಬೇಕಾಯಿತು. ಇಲ್ಲ ಸಲ್ಲದ ಆಪಾದನೆ ನಿಮ್ಮ ಮೇಲೆ ಆಯಿತು ದಯವಿಟ್ಟು ನನ್ನ ಕ್ಷಮಿಸಿ ಎಂದು ಹೇಳಿದಾಗ ಭೂಮಿಕಾ ಮಲ್ಲಿಯನ್ನು ಸಮಾಧಾನ ಪಡಿಸುತ್ತಾಳೆ. ಇನ್ನೂ ಗೌತಮ್‌ಗೆ ತಾನು ಭೂಮಿಕಾ ಜೊತೆ ಅಷ್ಟು ಜೋರಾಗಿ ಮಾತನಾಡಿದ್ದು ಆಕೆಗೆ ಬಹಳ ನೋವು ತರುತ್ತದೆ. ಆಕೆ ಅದರ ಬಗ್ಗೆ ಚಿಂತೆ ಮಾಡುತ್ತ ಇರುತ್ತಾಳೆ. ಆಗ ಗೌತಮ್ ಬಂದು ಭೂಮಿಕಾಗೆ ಸಮಾಧಾನ ಮಾಡುತ್ತಾನೆ.

ಭೂಮಿಕಾ ಬಳಿ ಕ್ಷಮೆಯಾಚಿಸಿದ ಗೌತಮ್

ಅಮ್ಮನ ವಿರುದ್ದ ಯಾರೇ ಮಾತನಾಡಿದರೂ ನಾನು ಹೀಗೆಯೇ ನಡೆದುಕೊಳ್ಳುವುದು. ದಯವಿಟ್ಟು ಅಮ್ಮನಿಗೆ ಎದುರಾಗಿ ನೀವು ಮಾತನಾಡಬೇಡಿ ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಭೂಮಿಕಾ ನಾನು ಈ ಮನೆ ಮರ್ಯಾದೆ ಉಳಿಸಲು ಯತ್ನಿಸುತ್ತಿದ್ದೇನೆ . ಜೈದೇವ್ ಅವರು ಮಾಡಿರುವ ಕೆಲಸ ಎಲ್ಲರಿಗೂ ತಿಳಿದರೆ ದಿವಾನ್ ಕುಟುಂಬದ ಮರ್ಯಾದೆ ಹೋಗುತ್ತದೆ. ಇದನ್ನು ನಿಮ್ಮ ಅಮ್ಮನಿಗೆ ನೀವೇ ತಿಳಿಸಿ ಹೇಳಿ ಎಂದು ಹೇಳುತ್ತಾಳೆ. ಕೊನೆಗೆ ಗೌತಮ್ ತನ್ನ ತಾಯಿ ಬಳಿ ಮಾತನಾಡಲು ನಿರ್ಧಾರ ಮಾಡುತ್ತಾನೆ.

Amruthadhare kannada serial written update on 3th March episode

ಮಗನ ಮಾತಿಗೆ ಬೆಲೆ ಕೊಡುತ್ತಾಳ ಶಕುಂತಲಾ ದೇವಿ

ಶಕುಂತಲಾ ದೇವಿ ಕುಳಿತುಕೊಂಡು ಏನೋ ಗಂಭೀರವಾಗಿ ಯೋಚನೆ ಮಾಡುತ್ತಾ ಇರುತ್ತಾಳೆ. ಆ ವೇಳೆ ಗೌತಮ್ ಹತ್ತಿರ ಬಂದು ಮಾತನಾಡುತ್ತಾನೆ. ಅಮ್ಮ ನಿಮ್ಮ ಬಳಿ ಸ್ವಲ್ಪ ಮಾತನಾಡಬಹುದಾ ನಾನು? ಎಂದು ಕೇಳಿದಾಗ ಶಕುಂತಲಾ ದೇವಿ ಏನು ಹೇಳು ಗೌತಮ್ ಎಂದು ಕೇಳುತ್ತಾಳೆ. ಬಳಿಕ ಗೌತಮ್, ಜೈ ದೇವ್ ಹೀಗೆ ಆತನ ಹೆಂಡತಿಯ ಮೇಲೆ ಈ ರೀತಿ ದೌರ್ಜನ್ಯ ಮಾಡಿದರೆ ಸರಿ ಇರುವುದು ಇಲ್ಲ. ಈ ವಿಚಾರ ಎಲ್ಲಾದರೂ ಹೊರಗಡೆ ಗೊತ್ತಾದರೆ ಏನು ಕಥೆ .. ನೀವು ಅವನಿಗೆ ಕೊಂಚ ತಿಳಿ ಹೇಳಿದರೆ ಒಳ್ಳೆಯದಿತ್ತು ಎಂದಾಗ ಶಕುಂತಲಾ ದೇವಿ ಮಾತ್ರ ಕೊಂಚ ಕೋಪದಲ್ಲಿ ನಡೆದುಕೊಳ್ಳುತ್ತಾಳೆ. ನಿನ್ನ ಹೆಂಡತಿ ಮಾಡಿದ್ದು ಬಹಳ ದೊಡ್ಡ ತಪ್ಪು ಅದರ ಮುಂದೆ ಜೈ ದೇವ್ ತಪ್ಪೇನು ಕಾಣಿಸುತ್ತ ಇಲ್ಲ ಎಂದು ಗೌತಮ್‌ಗೆ ಎದುರು ಮಾತನಾಡುತ್ತಾಳೆ ಶಕುಂತಲಾ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Amrutadhare Amruthadhare kannada serial latest episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X