Amruthadhare: ಜೀವ- ಭೂಮಿಕಾ ಗುಟ್ಟು ರಟ್ಟಾಯ್ತು; ಗೌತಮ್ ಮಾತಿಗೆ ಇಬ್ಬರೂ ಶಾಕ್

By Poorva

ಜೀವಾ, ಭೂಮಿಕಾ ಸತ್ಯಗಳು ಒಂದೊಂದಾಗಿ ಹೊರ ಬರುತ್ತಿದೆ. ಡೆಲಿವರಿ ಬಾಯ್ ಆಗಿ ಜೀವ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದ. ಆತನಿಗೆ ಭೂಮಿಕಾ ಬೆಂಬಲವಾಗಿ ನಿಂತಿದ್ದಳು. ಭೂಮಿಕಾ ತನ್ನ ಎಲ್ಲಾ ಒಡವೆಯನ್ನು ಅಡವಿಟ್ಟು 5 ಲಕ್ಷ ತಂದು ಜೀವ ಕೈಗೆ ಕೊಡುತ್ತಾಳೆ.

ಜೀವಾ ಮೊದಲು ಆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಆದರೆ ಭೂಮಿಕಾ ಮಾತಿಗೆ ಜೀವಾ ಆ ಹಣವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡುತ್ತಾನೆ. ಭೂಮಿಕಾ ಒಡವೆಯನ್ನು ಅಡಮಾನ ಇಟ್ಟಿಟ್ಟು ಗೌತಮ್‌ಗೆ ತಿಳಿದಿರುವುದಿಲ್ಲ.

Amruthadhare kannada serial written update on 8th may Episode

ಗೌತಮನಿಗೆ ಹೇಳದೇ ಭೂಮಿಕಾ ಚಿನ್ನವನ್ನು ಅಡ ಇಟ್ಟು ಹಣವನ್ನುಕೊಡುತ್ತಾಳೆ. ಆದರೆ ಈ ವಿಚಾರ ಶಕುಂತಲಾ ದೇವಿಗೆ ತಿಳಿದು ಹೋಗಿದೆ. ಆಕೆ ಹೇಗಾದರೂ ಮಾಡಿ ಈ ವಿಚಾರವನ್ನು ಗೌತಮ್‌ಗೆ ಹೇಳಲೇಬೇಕು ಎಂದು ನಿರ್ಧಾರ ಮಾಡುತ್ತಾಳೆ.

ಭೂಮಿಕಾ ಯಾವತ್ತೂ ಕೆಲಸಕ್ಕೆ ಹೋಗಲು ಶುರು ಮಾಡಿದಳೋ ಅಂದಿನಿಂದ ಆಕೆ ಮೇಲೆ ಶಕುಂತಲಾ ಒಂದು ಕಣ್ಣು ಇಟ್ಟಿರುತ್ತಾಳೆ. ಇದೀಗ ಶಕುಂತಲಾ ದೇವಿ, ಗೌತಮ್‌ಗೆ ಎಲ್ಲಾ ವಿಚಾರವನ್ನು ಹೇಳಿಬಿಡುತ್ತಾಳೆ. ಭೂಮಿಕಾ ಎಲ್ಲಾ ವಿಚಾರ ನನ್ನ ಬಳಿ ಹೇಳುತ್ತಾಳೆ, ಆದರೆ ಈ ವಿಚಾರವನ್ನು ಯಾಕೆ ನನ್ನ ಜೊತೆ ಪ್ರಸ್ತಾಪ ಮಾಡಿಲ್ಲ ಎಂದು ಗೌತಮ್ ಯೋಚಿಸುತ್ತಾನೆ.

ತನ್ನ ಯೋಚನೆ ಯಾರ ಜೊತೆಯೂ ಹೇಳದೇ ಸುಮ್ಮನಿರುತ್ತಾನೆ. ಭೂಮಿಕಾ ಕಾಲೇಜಿನಲ್ಲಿ ಬಂದು ಗೌತಮ್ ಕಾಯುತ್ತಿರುತ್ತಾನೆ. ಆದರೆ ಭೂಮಿಕಾಗೆ ಸ್ವಲ್ಪವು ಟೈಮ್ ಇರುವುದಿಲ್ಲ. ಆದ ಕಾರಣ ಗೌತಮ್, ಭೂಮಿಕಾಳನ್ನು ಹೇಗಾದರೂ ಮಾಡಿ ಮೀಟ್ ಮಾಡಿ ಹೋಗಬೇಕು ಎಂದು ಆಲೋಚನೆ ಮಾಡಿ ಅಲ್ಲಿಯೇ ಮೀಟಿಂಗ್ ಅರೇಂಜ್ ಮಾಡಿದ್ದಾನೆ.

Amruthadhare kannada serial written update on 8th may Episode

ಕಾಲೇಜ್‌ ಬಳಿ ಮೀಟಿಂಗ್ ಅರೇಂಜ್

ಗೌತಮ್ ಊಟ ಆರ್ಡರ್ ಮಾಡುತ್ತಾನೆ ಅಷ್ಟೊತ್ತಿಗೆ ಊಟ ಬರುತ್ತದೆ. ಆದರೆ ಅದನ್ನ ತೆಗೆದುಕೊಂಡು ಬರುವುದು ಮಾತ್ರ ಜೀವ ಆಗಿರುತ್ತಾನೆ. ಜೀವನಿಗೆ ತನ್ನ ಭಾವನನ್ನು ನೋಡಿ ಬಹಳ ಭಯವಾಗುತ್ತದೆ. ಅದರ ಮುಖವನ್ನು ಮುಚ್ಚಿ ಅಲ್ಲಿಂದ ಊಟ ತೆಗೆದುಕೊಂಡು ಗೌತಮನ ಬಳಿಗೆ ಹೋಗುತ್ತಾನೆ. ಗೌತಮ್‌ ಆ ಕೂಡಲೇ ಫುಡ್ ಡೆಲಿವರಿ ಬಾಮ್‌ನ ಜೀವ ಎಂದು ಕಂಡು ಹಿಡಿಯುತ್ತಾನೆ. ಆ ಬಳಿಕ ಜೀವ.. ಜೀವ ಎಂದು ಕರೆಯುತ್ತಾನೆ.

ಬಾಮೈದನ ಬಗ್ಗೆ ಹೇಳಿದ ಗೌತಮ್

ತನ್ನ ಹೆಂಡತಿಯ ತಮ್ಮನ ಬಗ್ಗೆ ಹೇಳುತ್ತಾನೆ. ಗೌತಮ್ ಮಾತು ಕೇಳಿದ ಜೀವಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಆತ ನಮ್ಮ ಜೊತೆ ಸೇರಿ ಊಟ ಮಾಡು ಎಂದು ಜೀವಾನನ್ನು ಪೀಡಿಸುತ್ತಿರುತ್ತಾನೆ. ಆದರೆ ಆ ಸಮಯಕ್ಕೆ ಸರಿಯಾಗಿ ಭೂಮಿಕಾ ಕೂಡ ಬರುತ್ತಾರೆ. ಭೂಮಿಕಾಗೆ ಫುಡ್ ಡೆಲಿವರಿ ಬಾಯ್ ಅನ್ನು ನೋಡಿ ಜೀವ ಎಂದು ತಿಳಿದು ಹೋಗುತ್ತದೆ.

ಊಟಕ್ಕೆ ಕರೆದ ಗೌತಮ್

ಗೌತಮ್ ಅವರೇ ಅವರಿಗೆ ತುಂಬಾ ಕೆಲಸ ಇದೆ ಎಂದು ಅನ್ನಿಸುತ್ತದೆ. ಯಾಕೆ ಅವರಿಗೆ ತೊಂದರೆ ಮಾಡುವುದು ಎಂದು ಹೇಳಿ ಅಲ್ಲಿಂದ ಕಳುಹಿಸುತ್ತಾಳೆ. ಹಾಗೆಯೇ ಗೌತಮ್ ನನ್ನು ಊಟಕ್ಕೆ ಕಳುಹಿಸಿ ಜೀವಾನನ್ನು ಮೀಟ್ ಆಗಲು ಹೋಗುತ್ತಾಳೆ. ಇನ್ನೂ ಜೀವಾ- ಭೂಮಿಕಾ ಮಾತನಾಡುವಲ್ಲಿಗೆ ಗೌತಮ್ ಬರುತ್ತಾನೆ. ಗೌತಮ್‌ನನ್ನು ನೋಡಿದ ಇಬ್ಬರಿಗೂ ಶಾಕ್ ಆಗುತ್ತದೆ.

More from Filmibeat

English summary
Amruthadhare kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X