Amruthadhaare ; ಲಕ್ಷ್ಮೀಕಾಂತನ ಕೈಯಲ್ಲಿ ಸಿಕ್ಕಿ ಬೀಳ್ತಾನಾ ಜೈದೇವ್ ? ಮಲ್ಲಿ ಮದುವೆ ಸಂಭ್ರಮಕ್ಕೆ ಬೀಳುತ್ತಾ ಫುಲ್ ಸ್ಟಾಪ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಪ್ಲಾನ್ ಮತ್ತೊಮ್ಮೆ ಫ್ಲಾಪ್ ಆಗಿದೆ. ಮಲ್ಲಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಬಾರದು ಎಂಬ ದಿಸೆಯಲ್ಲಿ ಜೈದೇವ್ ಹೆಣೆದ ತಂತ್ರವನ್ನೂ ಗೌತಮ್ ಭೇದಿಸಿದ್ದಾನೆ. ರೌಡಿಗಳ ಕಪಿ ಮುಷ್ಟಿಯಿಂದ ಮಲ್ಲಿಯನ್ನು ಕಾಪಾಡಿ ಎಕ್ಸಾಮ್ ಹಾಲ್ ಗೆ ಕರೆದೊಯ್ದಿದ್ದಾನೆ.
ಮಲ್ಲಿ ಎಕ್ಸಾಮ್ ಬರೆದು ಬಂದು ಗೌತಮ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ನಾನು ಯಾರಿಗೂ ಕೇಡನ್ನು ಬಯಸಿಲ್ಲ ಆದ್ರೂ ನನಗೆ ಹೀಗೆ ಆಗ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾಳೆ. ಗೌತಮ್ ಸಮಾಧಾನ ಮಾಡಿದ್ದಾನೆ. ಈ ವಿಚಾರ ಭೂಮಿಕಾಗೆ ಗೊತ್ತಾಗುವುದು ಬೇಡ ಎಂದು ಹೇಳಿದ್ದಾನೆ. ಎಂದಿನಂತೆ ಮಲ್ಲಿ ತಲೆಯಾಡಿಸಿದ್ದು ಇದೆಲ್ಲದರ ಹಿಂದೆ ಇರುವ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ.

ಹೀಗಾಗಿ ಫೋನ್ ಮಾಡಿರುವ ಗೌತಮ್, ಜೈದೇವ್ ಮೈಚಳಿ ಬಿಡಿಸಿದ್ದಾನೆ. ಮತ್ತೊಂದು ಕಡೆ ಗೊಂದಲದ ಗೂಡಿನಲ್ಲಿರುವ ಸುನಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ ಆದರೆ ಜೈದೇವ್ ಮತ್ತು ಮಲ್ಲಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹೀಗಿರುವಾಗ ಗೌತಮ್ ಮತ್ತು ಭೂಮಿಕಾ ಇಂದಿನ ಟ್ರೆಂಡ್ ಗೆ ತಕ್ಕಂತೆ ಪ್ರೀ ವೆಡ್ಡಿಂಗ್ ಫೋಟೊಶೂಟ್ ಗೆ ಸುನಿ ಮತ್ತು ಮಲ್ಲಿಯನ್ನು ಕಳಿಸಿದ್ದಾರೆ. ಆನಂದ್-ಅಪರ್ಣಾ ಕಣ್ಗಾವಲಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಕಾಕತಾಳೀಯ ಎಂಬಂತೆ ಜೈದೇವ್ ಕೂಡ ಅದೇ ಸ್ಥಳಕ್ಕೆ ಬಂದಿದ್ದಾನೆ.
ತನ್ನ ಶಿಷ್ಯನನ್ನೂ ಅಲ್ಲಿ ನೋಡಿ ಅಚ್ಚರಿಗೊಂಡ ಜೈದೇವ್ ಮಾತನಾಡಲು ಹೋಗಿದ್ದು ಇಬ್ಬರ ಭೇಟಿಯನ್ನು ಕಂಡು ಆನಂದ್ ಕೆರಳಿದ್ದಾನೆ. ಬಂದು ಅವಾಜ್ ಹಾಕಿದ್ದಾನೆ. ಇಷ್ಟೇ ಅಲ್ಲದೇ ಗೌತಮ್ ಗೆ ಫೋನ್ ಮಾಡಿ ಜೈದೇವ್ ಬಂದಿರುವ ವಿಚಾರ ಕೂಡ ತಿಳಿಸಿದ್ದಾನೆ.
ಅಲ್ಲಿಂದ ಬಂದು ಸದ್ಯ ಜೈದೇವ್ ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಜೈದೇವ್ ನೇರ ಉತ್ತರ ಕೊಡದೇ ಅಡ್ಡ ಗೋಡೆಯ ಮೇಲೆ ದೀಪ ಇಡುವ ಪ್ರಯತ್ನ ಮಾಡುತ್ತಾನೆ. ತುಂಬಾನೇ ದೊಡ್ಡ ಪ್ಲಾನ್ ಮಾಡಿದ್ದೇನೆ ಆದರೆ ನಾನು ಆ ಪ್ಲಾನ್ ನಾನು ಏನಂತ ಹೇಳಲ್ಲ ಎನ್ನುತ್ತಾನೆ. ಈ ಬಾರಿ ನನ್ನ ಪ್ಲಾನ್ ನ ಯಾರು ಊಹೆ ಮಾಡೋಕೆ ಸಾಧ್ಯ ಇಲ್ಲ, ಒಂದು ವೇಳೆ ಈ ಪ್ಲಾನ್ ಸಕ್ಸಸ್ ಆದರೆ ಎಷ್ಟು ಜನರ ಜೀವನ ಹಾಳಾಗುತ್ತೇನೋ ಎಂದು ಮಾರ್ಮಿಕವಾಗಿ ನುಡಿಯುತ್ತಾನೆ.

ಜೈದೇವ್ ಆಡಿದ ಈ ಮಾರ್ಮಿಕ ಮಾತುಗಳಿಂದ ತಲೆ ಕೆಡಿಸಿಕೊಳ್ಳುವ ಲಕ್ಷ್ಮೀಕಾಂತ್, ಗೌತಮ್‌ನ ವ್ಯವಹಾರಕ್ಕೆ ಇವನಿಂದ ಏನಾದರೂ ತೊಂದರೆಯಾಗಬಹುದಾ ಎಂದು ಮನದಲ್ಲಿಯೇ ಲೆಕ್ಕಾಚಾರ ಹಾಕುತ್ತಾನೆ. ಮತ್ತೊಂದು ಕಡೆ ಸುನಿ ಬಳಿ ಮಲ್ಲಿ ನನ್ನನ್ನು ಮೋಸ ಮಾಡಬೇಡ ಎಂದೆಲ್ಲಾ ಕೇಳಿಕೊಂಡಿದ್ದು ಮಲ್ಲಿಯ ಮಾತು ಕೇಳಿ ಸುನಿಗೆ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ.
ಪ್ರೇಕ್ಷಕರ ಅಭಿಪ್ರಾಯ
ಸದ್ಯ ಇಂದಿನ ಸಂಚಿಕೆ ( ಮಾರ್ಚ್ 19 ) ನೋಡಿದ ಹಲವರು ಮತ್ತೆ ಮೊಗ್ಗಾಗಿ ಅರಳಿದ ಅವಳ ಪ್ರೀತಿ ಅರಳುವ ಮುನ್ನವೇ ಸ್ವಾರ್ಥದ ಕತ್ತರಿಗೆ ಸಿಗದಿದ್ದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷ್ಮೀಕಾಂತ್‌ನಿಗೆ ಜೈದೇವ್ ರಣ ತಂತ್ರ ಗೊತ್ತಾಗುತ್ತೆ ಎಂದು ಭವಿಷ್ಯ ಕೂಡ ಹೇಳುತ್ತಿದ್ದಾರೆ. ಹಾಗೊಂದು ವೇಳೆ ಸುನಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಕಳಿಸಿರುವ ಹುಡುಗ ಎಂದು ಗೌತಮ್ ಮತ್ತು ಭೂಮಿಕಾಗೆ ಗೊತ್ತಾದರೆ ಮುಂದೇನಾಗಬಹುದು ಎನ್ನುವ ಆತಂಕ ಕೂಡ ಸದ್ಯ ಹಲವರನ್ನು ಕಾಡುತ್ತಿದ್ದು ಮುಂದೆ '' ಅಮೃತಧಾರೆ''ಯಲ್ಲಿ ಯಾವ ತಿರುವು ಬರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











