Amruthadhare :ಮತ್ತೆ ಮೈಕೊಡವಿ ಎದ್ದು ನಿಂತ ಗೌತಮ್ ; ನಡುಗಿದ ಜೈದೇವ್-ಇನ್ಮುಂದೆ ಮಾರಿ ಹಬ್ಬ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಗೌತಮ್ ದಿವಾನ್ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಬಿಸಿನೆಸ್ ಲೋಕದ ದಿಗ್ಗಜನಾಗಿದ್ದ ಗೌತಮ್ ಈಗ ಮತ್ತೆ ಫೀಲ್ಡಿಗ ಇಳಿಯಲು ಸಿದ್ಧರಾಗಿದ್ದಾರೆ.

ಗೌತಮ್ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್. ಶೇರ್ ಮಾರ್ಕೆಟ್ ಅಂದರೆ ನಷ್ಟ ಎನ್ನುವವರ ಮುಂದೆ ಸಾಧಿಸಿ ತೋರಿಸಲು ಅವರು ಮುಂದಾಗಿದ್ದಾರೆ. ಈ ಪಯಣದಲ್ಲಿ ಅವರಿಗೆ ಪತ್ನಿ ಭೂಮಿಕಾ ಭರ್ಜರಿ ಸಾಥ್ ನೀಡುತ್ತಿದ್ದಾರೆ.

Amruthadhare Mega Episode Gautam Diwan is back New business New challenges

ಅಮೃತಧಾರೆಯ ಈ ಮಹಾಸಂಚಿಕೆ ವೀಕ್ಷಕರಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಗೌತಮ್ ದಿವಾನ್ ಈಸ್ ಬ್ಯಾಕ್ ಎನ್ನುವ ಡೈಲಾಗ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಸಿನೆಸ್ ಮ್ಯಾನ್ ಆಗಿ ಗೌತಮ್ ಅವರ ಎರಡನೇ ಇನ್ನಿಂಗ್ಸ್ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ಬಿಸಿನೆಸ್ ಮ್ಯಾನ್ ಆಗಿ ಗೌತಮ್ ದಿವಾನ್ ರೀ-ಎಂಟ್ರಿ

ಗೌತಮ್ ದಿವಾನ್ ಅಪ್ಪಟ ಉದ್ಯಮಿ. ಅವರು ಸೋಲನ್ನು ಒಪ್ಪುವವರಲ್ಲ. ಪ್ರೋಮೋದಲ್ಲಿ ಕಂಡಂತೆ, ಗೌತಮ್ ಈಗ ಸ್ಟಾಕ್ ಬ್ರೋಕಿಂಗ್ ಆಪ್ ಮೂಲಕ ಹೊಸ ಬಿಸಿನೆಸ್ ಆರಂಭಿಸಲು ನಿರ್ಧರಿಸಿದ್ದಾರೆ. "ಇಡೀ ವ್ಯವಸ್ಥೆಯೇ ಇದರ ಮೇಲೆ ನಿಂತಿದೆ" ಎಂದು ಹೇಳುವ ಮೂಲಕ ತಮ್ಮ ಪ್ಲಾನ್ ವಿವರಿಸಿದ್ದಾರೆ.

ಗೌತಮ್ ನಿರ್ಧಾರಕ್ಕೆ ಭೂಮಿಕಾ ಆತಂಕ

ಶೇರ್ ಮಾರ್ಕೆಟ್ ಅಂದ ಕೂಡಲೇ ಭೂಮಿಕಾ ಸ್ವಲ್ಪ ಹೆದರಿದ್ದಾರೆ. ಇದು ತುಂಬಾನೇ ರಿಸ್ಕ್ ಅಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಗೌತಮ್ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ. ಭೂಮಿಕಾ ಅವರ ಬೆಂಬಲವೇ ಗೌತಮ್ ಅವರ ಅತಿ ದೊಡ್ಡ ಶಕ್ತಿ ಎಂಬುದು ಇಲ್ಲಿ ಸಾಬೀತಾಗಿದೆ.

Amruthadhare Mega Episode Gautam Diwan is back New business New challenges

ಹೊಸ ಆಫೀಸ್, ಹೊಸ ಕನಸು...

ಗೌತಮ್ ಕೇವಲ ಪ್ಲಾನ್ ಮಾಡಿಲ್ಲ, ಈಗಾಗಲೇ ಆಫೀಸ್ ಜಾಗವನ್ನೂ ಹುಡುಕಿದ್ದಾರೆ. ಪ್ರೋಮೋದಲ್ಲಿ ಅದ್ಧೂರಿ ಆಫೀಸ್ ಓಪನಿಂಗ್ ಸಂಭ್ರಮ ಕೂಡ ಕಾಣಿಸುತ್ತಿದೆ. ಬಣ್ಣ ಬಣ್ಣದ ಬಲೂನ್ ಹಾಗೂ ಸಂಭ್ರಮದ ನಡುವೆ 'ಗೌತಮ್ ದಿವಾನ್ ಈಸ್ ಬ್ಯಾಕ್' ಎಂಬ ಪೋಸ್ಟರ್ ಮಿಂಚುತ್ತಿದೆ.

ಗೌತಮ್ ಎದುರಾಳಿಗಳ ಆಟ ಶುರು?

ಈ ಮಹಾಸಂಚಿಕೆಯ ಕೊನೆಯಲ್ಲಿ ಒಂದು ಸಸ್ಪೆನ್ಸ್ ಇದೆ. ಕಾರಿನಲ್ಲಿ ಕುಳಿತು ಸೂಟ್ ಧರಿಸಿದ ವ್ಯಕ್ತಿಯೊಬ್ಬರು ಫೋನ್ ನಲ್ಲಿ ಗಂಭೀರವಾಗಿ ಮಾತನಾಡುತ್ತಿದ್ದಾರೆ. ಗೌತಮ್ ಅವರ ಈ ಹೊಸ ಉದ್ಯಮದ ಹಿಂದೆ ಯಾರೋ ವ್ಯಕ್ತಿಗಳ ಕೈವಾಡ ಇರುವಂತೆ ಕಾಣುತ್ತಿದೆ. ಇದು ಗೌತಮ್ ಜೀವನದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಮುಂಬರುವ ದಿನಗಳಲ್ಲಿ ಗೌತಮ್ ದಿವಾನ್ ಅವರ ಹೊಸ ಉದ್ಯಮಕ್ಕೆ ಯಾವ ರೀತಿ ಅಡೆತಡೆಗಳು ಬರುತ್ತವೆ ಎಂಬುದು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X