Chaya Singh: 'ಅಮೃತಧಾರೆ'ಯಂತಲ್ಲ ಛಾಯಾ ಸಿಂಗ್ ರಿಯಲ್ ಲೈಫ್.. ನಿಜ ಜೀವನದ ಪ್ರೇಮ ಕಥೆಯೇ ಸುಂದರ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿ ಇತ್ತೀಚೆಗಂತೂ ಬಹಳಷ್ಟು ಜನಪ್ರಿಯತೆ ಪಡೆಯುತ್ತಿದೆ. ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟಿಸುತ್ತಿರುವ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಹೀಗಾಗಿ ಕಿರುತೆರೆ ವೀಕ್ಷಕರು ಬಿಡುಗಡೆ ಧಾರಾವಾಹಿಯನ್ನು ನೋಡುತ್ತಿದ್ದಾರೆ. ಅಲ್ಲದೆ, ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಬೆಳೆಸಿಕೊಳ್ಳುತ್ತಿದೆ.
ಈ ಧಾರಾವಾಹಿಯ ವಿಶೇಷತೆ ಎಂದರೆ, ನಾಯಕಿಯಾಗಿ ನಟಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಭೂಮಿಕಾ ಪಾತ್ರ ಮೂಲಕ ಮಹಿಳೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 35 ವರ್ಷವಾದರೂ ಮದುವೆಯಾಗದ ಹುಡುಗಿಯ ಪಾತ್ರ ಇವರದ್ದು. ಹಾಗೆಯೇ ನಾಯಕನಾಗಿ ರಾಜೇಶ್ ನಟರಂಗ ನಟಿಸುತ್ತಿದ್ದು ಹಲವು ವರ್ಷಗಳ ಬಳಿಕ ಮತ್ತೆ ಧಾರಾವಾಹಿ ಮರಳಿದ್ದಾರೆ..

'ಅಮೃತಧಾರೆ'ಯಲ್ಲಿ ನಟಿ ಛಾಯಾ ಸಿಂಗ್ ಬದುಕನ್ನು ನೋಡಿ ವೀಕ್ಷಕರು ಮರುಕ ಪಡುತ್ತಿದ್ದಾರೆ. ಭೂಮಿಕಾಳ ಸಮಸ್ಯೆಯನ್ನು ತಮ್ಮದೆಂದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಛಾಯಾ ಸಿಂಗ್ ರಿಯಲ್ ಲೈಫ್‌ನಲ್ಲಿ ಹೇಗೆ? ಅವರ ಪತಿ ಯಾರು? ಏನ್ಮಾಡ್ತಾರೆ? ಮದುವೆ ಹೇಗಾಯ್ತು? ಅಂತೆಲ್ಲಾ ತಿಳಿದುಕೊಳ್ಳುವ ಬಯಕೆ. ಆ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಬಣ್ಣದ ಜೀವನಕ್ಕೂ, ರಿಯಲ್ ಲೈಫ್‌ಗೂ ತುಂಬಾನೇ ವ್ಯತ್ತಾಸವಿರುತ್ತೆ. ಅದು ಹೊಸದೇನಲ್ಲ. ಇದು ವೀಕ್ಷಕರಿಗೂ ಕೂಡ ಗೊತ್ತಿದೆ. ಛಾಯಾಸಿಂಗ್ ರಿಯಲ್ ಲೈಫ್ ಅದ್ಭುತವಾಗಿದೆ. ಕೃಷ್ಣ ಎಂಬುವರನ್ನು ವಿವಾಹವಾಗಿ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಬೆಳೆದಿರೋ ಛಾಯಾ ಸಿಂಗ್ ಸಿನಿಮಾ ಕಡೆ ಮುಖ ಮಾಡಿದ್ದರು. ಕನ್ನಡ ಸಿನಿಮಾದಲ್ಲಷ್ಟೇ ಅಲ್ಲ ತಮಿಳು ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದರು. ಅಲ್ಲಿ ಪತಿ ಕೃಷ್ಣ ಅವರ ಭೇಟಿ ಆಗಿತ್ತು. ಅಂದ್ಹಾಗೆ ಕೃಷ್ಣ ಕೂಡ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು ಮದುವೆಯಾದರು.
ಒಬ್ಬರನ್ನೊಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ಬಳಿಕ ಕೃಷ್ಣ ಜೊತೆ 2012ರಲ್ಲಿ ಸಪ್ತಪದಿ ತುಳಿದಿದ್ದಾರೆ. ಇಂದಿಗೂ ಪರಸ್ಪರ ವೃತ್ತಿ ಜೀವನದಲ್ಲಿ ಸಾಥ್ ಕೊಡುತ್ತಾ ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. 2019ರಲ್ಲಿ 'ರನ್' ಎಂಬ ತಮಿಳು ಧಾರಾವಾಹಿಯಲ್ಲಿ ಕೃಷ್ಣ ಹಾಗೂ ಛಾಯಾ ಸಿಂಗ್ ಒಟ್ಟಿಗೆ ನಟಿಸಿರೋದು ವಿಶೇಷ.
ಛಾಯಾ ಸಿಂಗ್ ಸದ್ಯ 'ಅಮೃತಧಾರೆ' ಧಾರಾವಾಹಿ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ. ಇದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ರಾಜೇಶ್ ನಟರಂಗ, ಚೈತ್ರ ಶೆಣೈ, ವನಿತಾ ವಾಸು ಅವರೊಂದಿಗೆ ಛಾಯಾ ಸಿಂಗ್ ಈ ಮೊದಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕಿರುತೆರೆ ವೀಕ್ಷಕರಿಗೆ ಧಾರಾವಾಹಿ ನೋಡುವುದಕ್ಕೆ ಹಿತವೆನಿಸುತ್ತಿದೆ.


Click it and Unblock the Notifications











