Amruthadhare: ಅಮ್ಮ ಮಾಡಿದ ತಪ್ಪಿಗೆ ಪೊಲೀಸ್ ಸ್ಟೇಷನ್‌ಗೆ ಬಂದ ಭೂಮಿಕಾ
ಮನೆಯಲ್ಲಿ ಭೂಮಿಕಾ ತಮ್ಮ ಬರುತ್ತಿದ್ದಾನೆ ಎಂದು ತರಹೇವಾರಿ ಅಡುಗೆಯನ್ನು ಮಾಡುತ್ತಿರುತ್ತಾಳೆ. ಪೂರಿ, ಸಾಗು, ಬಜ್ಜು, ಆಲೂ ಚಿಪ್ಸ್ ಅನ್ನು ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಮಂದಾಕಿನಿ ಇಷ್ಟೆಲ್ಲಾ ಎಣ್ಣೆ ಪದಾರ್ಥಗಳನ್ನು ಯಾರಿಗಾಗಿ ಮಾಡುತ್ತಿದ್ದೀಯಾ..? ಇದೆಲ್ಲಾ ಮಾಡಬೇಡ ಎನ್ನುತ್ತಾಳೆ. ಆಗ ಸದಾಶಿವ ಮಗ ಬರುತ್ತಿರುವ ವಿಚಾರವನ್ನು ತಿಳಿಸುತ್ತಾನೆ. ಸದಾಶಿವ ಹೇಳಿದ್ದನ್ನು ಕೇಳಿದ ಮಂದಾಕಿನಿಗೆ ಬಹಳ ಖುಷಿಯಾಗುತ್ತದೆ.
ಮಗ ಬರುತ್ತಿದ್ದಾನೆ. ಇದೆಲ್ಲಾ ಅವನ ಇಷ್ಟದ ತಿಂಡಿಗಳು ಎಂದು ಸಂತಸವನ್ನು ತೋರಿಸಿಕೊಳ್ಳುತ್ತಾಳೆ. ಇದೇ ಸಂದರ್ಭಕ್ಕೆ ಅಪೇಕ್ಷಾ ಬಂದು ಅಣ್ಣ ಬರುವುದು ತಡವಾಗುತ್ತದೆಯಂತೆ. ಅವರ ಸ್ನೇಹಿತರ ಜೊತೆಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾನೆ ಎಂದು ಹೇಳುತ್ತಾಳೆ. ಇದೇ ವೇಳೆಗೆ ಅಪೇಕ್ಷಾಳಿಗೆ ಮಹಿಮಾ ಸ್ಟುಡಿಯೋಸ್‌ನಿಂದ ಕಾಲ್ ಬರುತ್ತದೆ. ಆಡಿಷನ್‌ಗೆ ಬರುವುದಕ್ಕೆ ಹೇಳುತ್ತಾರೆ. ಇದರಿಂದ ಅಮ್ಮ ಮಗಳು ಖುಷಿಯಲ್ಲಿ ತೇಲಾಡುತ್ತಿರುತ್ತಾರೆ.

ಮನೆಗೆ ಪೋಲೀಸರು ಬಂದು ಆಕ್ಸಿಡೆಂಟ್ ಬಗ್ಗೆ ವಿಚಾರಿಸುತ್ತಾರೆ. ಆಗ ಮಂದಾಕಿನಿ ಕಾಂಪನ್ಸೇಷನ್ ಬೇಕು ಎಂದು ಕೇಳುತಾರೆ. ಪೊಲೀಸರು ಈಗಲೇ ಸ್ಟೇಷನ್‌ಗೆ ಬರಬೇಕು ಎಂದು ಹೇಳುತ್ತಾರೆ. ಆಗ ಮಂದಾಕಿನಿ ಅಪೇಕ್ಷಾ ಜೊತೆಗೆ ನಾನು ಹೋಗಬೇಕು ಎಂದು ಹೇಳಿ ಪತಿ ಸದಾಶಿವ ಹಾಗೂ ಮಗಳು ಭುಮಿಕಾಳನ್ನು ಸ್ಟೇಷನ್‌ಗೆ ಕಳಿಸುತ್ತಾಳೆ.
ಪೊಲೀಸ್ ಸ್ಟೇಷನ್‌ನಲ್ಲಿ ಭೂಮಿಕಾ
ಪೊಲೀಸ್ ಸ್ಟೇಷನ್‌ನಲ್ಲಿ ಬೇಕಂತಲೇ ಭೂಮಿಕಾಳನ್ನು ಕಾಯಿಸುತ್ತಾರೆ. ನೀರು ಕುಡಿಯಲು ಸಹ ಬಿಡದೇ ಕಾಡುತ್ತಾರೆ. ಭೂಮಿಕಾ ಕಾನೂನು ಬಗ್ಗೆ ಮಾತನಾಡುತ್ತಾಳೆ. ನನಗೂ ಕಾನೂನು ಗೊತ್ತಿದೆ. ನೀರು ಕುಡಿಯಲು ಕೂಡ ಬಿಡದೇ ಇರುವುದು ಅಕ್ಷಮ್ಯ ಅಪರಾಧ ಎನ್ನುತ್ತಾಳೆ. ಇದೇ ವೇಳೆಗೆ ಎಸ್ ಐ ಬರುತ್ತಾರೆ. ಭೂಮಿಕಾ ಅವರ ಬಳಿ ಸಣ್ಣ ಆಕ್ಸಿಡೆಂಟ್ ಎಂದು ಹೇಳಿದರೂ ಕೇಳದೇ ಕಾರ್ ಡಾಕ್ಯೂಮೆಂಟ್ಸ್ ಅನ್ನು ಕೇಳುತ್ತಾರೆ. ತಂದಿಲ್ಲ ಎಂದಿದ್ದಕ್ಕೆ ಡಾಕ್ಯೂಮೆಂಟ್ಸ್ ಅನ್ನು ತೆಗೆದುಕೊಂಡು ಮತ್ತೆ ನಾಳೆ ಬರಲು ಹೇಳುತ್ತಾರೆ.

ಭೂಮಿಕಾ ಚಿಕ್ಕ ವಿಷಯಕ್ಕೆ ಯಾಕೆ ಹೀಗೆ ಎಂದು ಕೇಳುತ್ತಾಳೆ. ಆಗ ಎಸ್ ಐ ಆಗಲೇ ನಮ್ಮ ಕಾನ್ ಸ್ಟೇಬಲ್ ಬಳಿ ಕಾನೂನು ಮಾತನಾಡುತ್ತಿದ್ದೀರಲ್ಲ ಮೊದಲು ದಾಖಲೆಗಳನ್ನು ತನ್ನಿ ಎಂದು ಹೇಳಿ ಕಳಿಸುತ್ತಾನೆ.
ಕಾರನ್ನು ಫಾಲೋ ಮಾಡಿದ ಭೂಮಿಕಾ
ಭೂಮಿಕಾ ಆಚೆ ಬಂದಾಗ ಕಾನ್‌ಸ್ಟೇಬಲ್ ಮತ್ತು ಬೆಂಜ್ ಕಾರಿನ ಡ್ರೈವರ್ ಮಾತನಾಡುತ್ತಿದ್ದದ್ದನ್ನು ನೋಡುತ್ತಾಳೆ. ಇದು ದೊಡ್ಡವರ ಸಹವಾಸ ಬೇಕಂತಲೇ ಈ ಕೇಸ್‌ನಲ್ಲಿ ಸಿಕ್ಕಿ ಹಾಕಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡ ಭೂಮಿಕಾ, ತನಗೆ ಬೇರೆ ಕೆಲಸ ಇದೆ ಎಂದು ಹೇಳಿ ಅಪ್ಪನನ್ನು ಮನೆಗೆ ಕಳಿಸುತ್ತಾಳೆ. ಭೂಮಿಕಾ ಆ ಕಾರನ್ನು ಫಾಲೋ ಮಾಡಿಕೊಂಡು ಬರುತ್ತಾಳೆ. ಕಾರು ಗೌತಮ್ ಮನೆಗೆ ಬರುತ್ತದೆ. ಭೂಮಿಕಾ ಕಾಂಪೌಂಡ್ ಒಳಗೆ ಬಂದು ಬಿಡುತ್ತಾಳೆ.

ಗೌತಮ್‌ನ ಹುಡುಕಿ ಬಂದ ಭೂಮಿಕಾ
ವಾಚ್‌ಮನ್ ಭೂಮಿಕಾಳನ್ನು ತಡೆದು ವಿಚಾರಿಸುತ್ತಾನೆ. ಅಪಾಯಿಂಟ್‌ಮೆಂಟ್ ಇದೆಯಾ ಎಂದು ಕೇಳುತ್ತಾಳೆ. ಆಗ ಭೂಮಿಕಾ ನಿಮ್ಮ ಸರ್ ಅನ್ನು ಭೇಟಿ ಮಾಡಬೇಕು. ಅಪಾಯಿಂಟ್‌ಮೆಂಟ್ ಇಲ್ಲ, ಅರ್ಜೆಂಟ್ ಇದೆ ಎಂದು ಹೇಳುತ್ತಾಳೆ. ವಾಚ್‌ಮನ್ ಗೌತಮ್ ಬಳಿ ಹೋಗಿ ಒಂದು ಹುಡುಗಿ ನಿಮ್ಮನ್ನು ಕೇಳಿಕೊಂಡು ಬಂದಿದ್ದಾಳೆ ಎಂದಾಗ ಶಾಕ್ ಆಗುತ್ತಾನೆ. ಕಾರಣ ಕೇಳಿಕೊಂಡು ಬಾ ಎಂದು ಕಳಿಸುತ್ತಾನೆ. ಭೂಮಿಕಾ ಎಷ್ಟು ಹೊತ್ತು ಕಾದರೂ ಬರುವುದಿಲ್ಲ.


Click it and Unblock the Notifications











