Amruthadhare: ಚಾಲೆಂಜ್ ಮಾಡಿದ ಭೂಮಿಕಾ: ಮಹಿಮಾ ಕಪಾಳಕ್ಕೆ ಬಾರಿಸಿದ ಜೀವ

By ಪ್ರಿಯಾ ದೊರೆ

ಅಪ್ಪನ ಮೇಲಿನ ಪ್ರೀತಿಗಾಗಿ ಭೂಮಿಕಾ, ಗೌತಮ್ ದಿವಾನ್‌ನನ್ನು ಹುಡುಕಿಕೊಂಡು ಪೊಲೀಸ್ ಠಾಣೆಯಿಂದ ನೇರವಾಗಿ ಬಂದಿದ್ದಾಳೆ. ಆದರೆ ಗೌತಮ್ ಇನ್ನೂ ಭೂಮಿಕಾಳನ್ನು ಭೇಟಿ ಆಗಿಲ್ಲ. ಬಿಸಿಲಿನಲ್ಲೇ ಭೂಮಿಕಾ ಬೆಳಗ್ಗಿನಿಂದ ಕಾಯುತ್ತಿದ್ದಾಳೆ. ಅಮ್ಮ ಮಾಡಿದ ತಪ್ಪಿಗೆ ಈಗ ಅಪ್ಪನಿಗೆ ಕಷ್ಟವಾಗಬಾರದು ಅನ್ನೋದು ಭೂಮಿಕಾಳ ಆಲೋಚನೆಯಾಗಿದೆ. ಭೂಮಿಕಾ ಹಾಗೂ ಗೌತಮ್ ದಿವಾನ್ ಇಬ್ಬರದ್ದೂ ಒಂದೇ ತೆರನಾದ ಮನೋಭಾವವಿದೆ.

ಇಬ್ಬರು ಮನೆಯವರಿಗಾಗಿ ಏನನ್ನು ಬೇಕಿದ್ದರೂ ಮಾಡಲು ತಯಾರಾಗಿದ್ದಾರೆ. ಆದರೆ, ಗೌತಮ್ ಮನೆಯಲ್ಲಿ ಗೆಟ್ ಟು ಗೆದರ್ ಕಾರ್ಯಕ್ರಮ ನಡೆಯುತ್ತಿದೆ. ಶಕುಂತಲಾ ತನ್ನ ಮಗಳ ಮದುವೆಗೆ ಬರದವರಿಗಾಗಿ ಸ್ಪೆಷಲ್ ಪಾರ್ಟಿ ಅರೇಂಜ್ ಮಾಡಿದ್ದಾಳೆ. ಎಲ್ಲರೂ ಇದೇ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ಶಕುಂತಲಾ ಅವರ ಮನೆಗೆ ಗೆಸ್ಟ್ ಆಗಿ ಚಂದ್ರಿಕಾ ಹಾಗೂ ಅವರ ಮಗಳು ಅಂಜು ಬಂದಿದ್ದಾಳೆ. ಇವರಿಗೆ ದೊಡ್ಡ ದೊಡ್ಡವರ ಮನೆಯ ಗಂಡು ಮಕ್ಕಳನ್ನು ಟ್ರ್ಯಾಪ್ ಮಾಡುವುದೇ ಕೆಲಸ.

Amruthadhare Serial 05th June episode written update

ಅಕಸ್ಮಾತ್ ಆಗಿ ಅವರಿಗೂ ಪಾರ್ಟಿ ಇನ್ವಿಟೇಷನ್ ತಲುಪಿದ್ದು, ಈಗ ಅವರು ಬಂದಿರುವುದಕ್ಕೆ ಶಕುಂತಲಾಗೆ ಟೆನ್ಷನ್ ಆಗಿದೆ. ಎಲ್ಲಿ ಗೌತಮ್‌ನನ್ನು ಟ್ರ್ಯಾಪ್ ಮಾಡುತ್ತಾರೋ ಎಂದು ಗಾಬರಿಯಾಗಿದ್ದಾಳೆ. ಈ ವಿಚಾರವನ್ನು ಅಪರ್ಣಾ ಬಳಿಯೂ ಹೇಳಿಕೊಂಡಿದ್ದು, ಗೌತಮ್‌ನಿಂದ ಆಕೆಯನ್ನು ದೂರ ಕಳಿಸುತ್ತೇನೆ ಎಂದು ಹೇಳುತ್ತಾಳೆ.

ಸಿಕ್ಕಿ ಬಿದ್ದ ಆನಂದ್

ಇತ್ತ ಅಂಜು, ಗೌತಮ್ ಬಳಿ ಮಾತನಾಡುತ್ತಿದ್ದು, ಗೌತಮ್‌ಗೆ ಆಕೆಯಿಂದ ತಪ್ಪಿಸಿಕೊಳ್ಳಲು ದಾರಿಯೇ ಸಿಗುತ್ತಿಲ್ಲ. ಗೌತಮ್ ಮೈಮೇಲೆ ಬೀಳುವಂತೆ ಅಂಜು ಮಾತನಾಡುತ್ತಿದ್ದಾಳೆ. ಗೌತಮ್ ನನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂಬಂತೆ ವರ್ತಿಸುತ್ತಿದ್ದಾಳೆ. ಹೇಗೋ ಮಾಡಿ ಗೌತಮ್ ತಪ್ಪಿಸಿಕೊಂಡಾಗ ಆನಂದ್ ಬೈಯುತ್ತಾನೆ. ಅವಳನ್ನು ಮದುವೆಯಾಗು ಎಂದಾಗ ಗೌತಮ್ ಚಾಲೆಂಜ್ ಮಾಡುತ್ತಾನೆ.

ನಿನ್ನ ಬಳಿ ಹಣ ಇದೆ ಎಂದು ಪರಿಚಯ ಮಾಡಿಕೋ ಅವಳೇ ನಿನ್ನ ಹಿಂದೆ ಬೀಳುತ್ತಾಳೆ. ನೀನು ಅವಳ ಟ್ರ್ಯಾಪ್‌ಗೆ ಬೀಳೋದು ಗ್ಯಾರೆಂಟಿ ಎನ್ನುತ್ತಾನೆ. ಸುಮ್ಮನಿರುವುದು ಬಿಟ್ಟು ಆನಂದ್ ಅವಳ ಬಳಿ ಹೋಗಿ ತನ್ನ ಬಗ್ಗೆ ಏನೇನೋ ಹೇಳಿದಾಗ ಹಣವಿದೆ ಎಂದು ತಿಳಿದ ಅಂಜು ನಿಮ್ಮನ್ನು ನಾನು ಮದುವೆಯಾಗುತ್ತೀನಿ ಎನ್ನುತ್ತಾಳೆ. ಇದೇ ಸಮಯಕ್ಕೆ ಅಪರ್ಣಾ ಬರುತ್ತಾಳೆ. ಈಗ ಅಪರ್ಣಾ ಆನಂದ್ ಕ್ಲಾಸ್ ತೆಗೆದುಕೊಳ್ಳುವುದು ಬಾಕಿ ಉಳಿದಿದೆ.

Amruthadhare Serial 05th June episode written update

ಜೀವನನ್ನು ನೋಡಲು ಮಹಿಮಾ ಪ್ಲಾನ್

ಇತ್ತ ಚಂದ್ರಿಕಾ, ಶಕುಂತಲಾ ಮಗಳು ಮಹಿಮಾ ಬಗ್ಗೆ ಮಾತನಾಡುತ್ತಾಳೆ. ವಾರಕ್ಕೊಬ್ಬನ ಜೊತೆಗೆ ತಿರುಗುತ್ತಾಳೆ ಮಹಿಮಾ. ಅವಳನ್ನು ಯಾರೂ ಮದುವೆಯಾಗಲ್ಲ ಎಂದು ಪಕ್ಕದಲ್ಲಿರುವವರ ಬಳಿ ಹೇಳುತ್ತಿರುತ್ತಾಳೆ. ಈ ಮಾತನ್ನು ಕೇಳಿದ ಗೌತಮ್‌ಗೆ ಕೋಪ ಬಂದು ಕೂಗಾಡುತ್ತಾನೆ. ನನ್ನ ತಂಗಿ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ಬಹಳ ದೊಡ್ಡ ಮನೆಯ ಹುಡುಗನನ್ನು ಹುಡುಕಿ ನನ್ನ ತಂಗಿಯ ಮದುವೆ ಮಾಡುತ್ತೇನೆ ಎನ್ನುತ್ತಾನೆ.

ಆದರೆ, ಮಹಿಮಾ ಭೂಮಿಕಾಳ ತಮ್ಮ ಜೀವನನ್ನು ಪ್ರೀತಿಸುತ್ತಿರುತ್ತಾಳೆ. ಅವನನ್ನು ಭೇಟಿಯಾಗಲು ದಾರಿ ಸಿಗದೇ ಮಹಿಮಾ ಅಪೇಕ್ಷಾಳನ್ನು ಆಡಿಷನ್‌ಗೆ ಎಂದು ಕರೆಸಿ ಜೀವ ಅಲ್ಲಿಗೆ ಬರುವಂತೆ ಮಾಡುತ್ತಾಳೆ. ನನ್ನ ನಿನ್ನ ನಡುವೆ ಫ್ಯಾಮಿಲಿಯನ್ನು ತರಬೇಡ ಎಂದು ಜೀವ ಕೋಪ ಮಾಡಿಕೊಂಡು ಮಹಿಮಾಗೆ ಕಪಾಳಕ್ಕೆ ಹೊಡೆಯುತ್ತಾನೆ. ಅಲ್ಲಿಗೆ ಮಹಿಮಾ ಜೀವನನ್ನು ಪ್ರೀತಿಸುತ್ತಿದ್ದು, ಮುಂದೇನಾಗುತ್ತೋ ಗೊತ್ತಿಲ್ಲ..

ಚಾಲೆಂಜ್ ಮಾಡಿದ ಭೂಮಿಕಾ

ಗೌತಮ್‌ಗಾಗಿ ಕಾಯುತ್ತಿರುವ ಭೂಮಿಕಾಳನ್ನು ಆನಂದ್ ಭೇಟಿ ಮಾಡಿ ನೀವು ಎಷ್ಟು ಕಾದರೂ ವ್ಯರ್ಥ ಅವನು ನಿಮ್ಮನ್ನು ನೋಡುವುದಿಲ್ಲ ಹೊರಟು ಬಿಡಿ ಎಂದು ಹೇಳುತ್ತಾನೆ. ಆದರೆ, ಭೂಮಿಕಾ ಇಲ್ಲ ನಾನು ಕ್ಷಮೆ ಕೇಳುವುದಕ್ಕೆ ಬಂದಿದ್ದೇನೆ ಎಂದು ಎಷ್ಟು ಕೇಳಿದರೂ, ಆನಂದ್ ಆಗುವುದಿಲ್ಲ, ಗೌತಮ್ ತನ್ನ ಫ್ಯಾಮಿಲಿಗಾಗಿ ಏನು ಬೇಕಿದ್ದರೂ ಮಾಡುತ್ತಾನೆ ಎಂದು ಹೇಳುತ್ತಾನೆ. ಅದಕ್ಕೆ ಭೂಮಿಕಾ ನಾನು ಕೂಡ ನನ್ನ ಅಪ್ಪನಿಗೋಸ್ಕರ ಎಲ್ಲಿಯವರೆಗೂ ಬೇಕಿದ್ದರೂ ಹೋಗುತ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ.

ಭೂಮಿಕಾ ಮಾತುಗಳನ್ನು ಕೇಳಿದ ಆನಂದ್‌ಗೆ ಗೌತಮ್ ಹಾಗೂ ಈ ಹುಡುಗಿ ಇಬ್ಬರದ್ದು ಒಂದೇ ಆಲೋಚನೆ ಅಲ್ವಾ ಎಂದು ಯೋಚಿಸುತ್ತಾನೆ. ಭೂಮಿಕಾ ಹಾಗೂ ಗೌತಮ್‌ಗೆ ಆನಂದ್ ಸೇತುವೆಯಾಗುತ್ತಾನಾ? ಕಾದು ನೋಡಬೇಕಿದೆ.

More from Filmibeat

English summary
Amruthadhare Serial 05th June episode written update. here is details about Bhoomika challenge with Anand for her family on accident case. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X