Amruthadhare: ಆತ್ಮಹತ್ಯೆಗೆ ಯತ್ನಿಸಿದ ಮಹಿಮಾ: ಜೀವನ್ ಮೇಲೆ ಗೌತಮ್ ಕೆಂಡಾಮಂಡಲ
ನೀನು ಒಂದು ಸಲ ಅವಳನ್ನು ಮೀಟ್ ಮಾಡಬೇಕಿತ್ತು ಕಣೋ. ಅವಳು ತುಂಬಾ ಒಳ್ಳೆಯವಳು ಎಂದು ಆನಂದ್ ಹೇಳುತ್ತಾನೆ. ಇದಕ್ಕೆ ಗೌತಮ್ ಕೋಪದಲ್ಲೇ ವ್ಯಂಗ್ಯವಾಗಿ ಮಾತನಾಡುತ್ತಾನೆ. ಹಾಗಾದರೆ, ಒಂದು ಕೆಲಸ ಮಾಡು ಆಕೆಗೆ ಯಾವುದಾದರೂ ಸಭಾಭವನದಲ್ಲಿ ಅವಾರ್ಡ್ ಕೊಡಿಸು, ಇಲ್ಲವೇ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಕೊಡಿಸು ಎನ್ನುತ್ತಾನೆ. ಗೌತಮ್ ವ್ಯಂಗ್ಯವಾದ ಮಾತುಗಳನ್ನು ಕೇಳಿ ಆನಂದ್‌ಗೆ ಬೇಸರವಾಗುತ್ತದೆ.
ಆ ಹುಡುಗಿ ಬಹಳ ಸಿಂಪಲ್, ಬುದ್ಧಿವಂತೆ ಅನಿಸುತ್ತೆ ಎಂದು ಆನಂದ್ ಹೇಳಿದ್ದಕ್ಕೆ ಗೌತಮ್, ಖಂಡಿತವಾಗಿಯೂ ಬುದ್ಧಿವಂತೆ. ಅದಕ್ಕೆ ಅವಳು ಏನೂ ಆಗದಿದ್ದರೂ ಪರಿಹಾರ ಕೇಳಿದ್ದು, ಅವಳನ್ನು ಯಾವತ್ತೂ ಕ್ಷಮಿಸಲ್ಲ ಎಂದು ಹೇಳುತ್ತಾನೆ. ಮನೆಯಲ್ಲಿ ಮಹಿಮಾ ಯಾರ ಜೊತೆಗೋ ಫೋನ್ ನಲ್ಲಿ ಜಗಳ ಮಾಡುತ್ತಿರುತ್ತಾಳೆ. ಜೀವನ್ ಫೋನ್ ಕಟ್ ಮಾಡಿದ ಕೂಡಲೇ ರೂಮ್‌ಗೆ ಹೋಗುವ ಮಹಿಮಾ ಫೋನ್ ಬಿಸಾಡಿ ಕೈ ಕಟ್ ಮಾಡಿಕೊಂಡಿರುತ್ತಾಳೆ.

ಗೌತಮ್ ಬಂದು ಮಹಿಮಾಳನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ನನ್ನ ತಂಗಿಯನ್ನು ಈ ಸ್ಥಿತಿಗೆ ತಂದವನ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಾನೆ. ಈ ಹುಡುಗ ಬೇಕಂತಲೇ ಟ್ರ್ಯಾಪ್ ಮಾಡಿ ಹಣ ಪಡೆಯುವುದೇ ಇಂತಹವರ ಕೆಲಸ ಎಂದು ತಪ್ಪಾಗಿ ಭಾವಿಸುತ್ತಾನೆ. ಕುಟುಂಬದ ಮೇಲೆ ಕಾಳಜಿ ವಹಿಸುವ ಭರದಲ್ಲಿ ಗೌತಮ್ ಎಲ್ಲಾ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾನೆ.
ಭೂಮಿಕಾಗೆ ವಾರ್ನ್ ಮಾಡಿದ ಗೌತಮ್
ಜೀವನ್ ಎಂಬ ಹುಡುಗನ ಬಗ್ಗೆ ವಿಚಾರಿಸಲು ಮುಂದಾದ ಗೌತಮ್ ಲ್ಯಾಂಡ್ ಲೈನ್ ನಂಬರ್ ಸಿಕ್ಕಿದ್ದು, ಫೋನ್ ಮಾಡುತ್ತಾನೆ. ಆಗ ಭೂಮಿಕಾ ಫೋನ್ ರಿಸೀವ್ ಮಾಡುತ್ತಾಳೆ. ಒಂದೇ ಸಮನೇ ಗೌತಮ್ ಬೈಯ್ಯಲು ಶುರು ಮಾಡುತ್ತಾನೆ. ಆದರೆ, ಸಿಗ್ನಲ್ ಪ್ರಾಬ್ಲಮ್‌ನಿಂದ ಭೂಮಿಕಾಳಿಗೆ ಅಷ್ಟಾಗಿ ಏನೂ ಕೇಳಿಸುವುದಿಲ್ಲ. ನಿಮ್ಮ ತಮ್ಮನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ ಮಾತುಗಳೂ ಭೂಮಿಕಾಳಿಗೆ ಕೇಳಿಸುತ್ತದೆ. ಆಗ ಭೂಮಿಕಾ ವಾಪಸ್ ಗೌತಮ್‌ಗೆ ಬೈಯುತ್ತಾಳೆ.

ಇದು ಆರಂಭ ಎಂದ ಗೌತಮ್
ನಿಮ್ಮನ್ನು ನೀವು ಏನೆಂದು ತಿಳಿದುಕೊಂಡಿದ್ದೀರಾ. ಯಾರು ಅಂತ ಹೇಳದೇ ಬೈಯುತ್ತಿದ್ದೀರಾ ಎನ್ನುತ್ತಾಳೆ. ಗೌತಮ್ ಇದು ಕೇವಲ ಆರಂಭ ಎಂದು ಹೇಳಿ ಕಟ್ ಮಾಡುತ್ತಾನೆ. ಶಕುಂತಕಲಾ ಜೀವ ಯಾರು ಎಂದು ವಿಚಾರಿಸಿ ಮಹಿಮಾಗೆ ಕೊಟ್ಟು ಮದುವೆಯನ್ನು ಮಾಡೋಣ ಎಂದು ಹೇಳುತ್ತಾಳೆ. ಆದರೆ, ಗೌತಮ್ ಸಾಧ್ಯವಿಲ್ಲ. ಅವಳು ಚಿಕ್ಕವಳು ಅವಳಿಗೆ ಏನೂ ಅರ್ಥವಾಗುವುದಿಲ್ಲ ಎಂದು ಹೇಳುತ್ತಾನೆ.
ಗೌತಮ್‌ಗೆ ಬೈದ ಶಕುಂತಲಾ
ಶಕುಂತಲಾ ಇಲ್ಲ ಮಹಿಮಾ ತುಂಬಾ ಹಠ ಮಾಡುತ್ತಾಳೆ. ಚಿಕ್ಕವಳಿದ್ದಾಗಿನಿಂದಲೂ ಅವಳು ಬಯಸಿದ್ದನ್ನು ಸಿಗುವಂತೆ ಮಾಡಿದ್ದು, ಇದಕ್ಕೆಲ್ಲಾ ನೀನೇ ಕಾರಣ ಎನ್ನುತ್ತಾಳೆ. ಈಗ ಇದು ಅಷ್ಟೇ. ಅವಳು ಜೀವ ಎಂಬಾತನನ್ನು ಇಷ್ಟಪಟ್ಟಿದ್ದಾಳೆ. ಅವನ ಜೊತೆಗೆ ಮದುವೆ ಮಾಡು ಗೌತಮ್ ಎಂದು ಶಕುಂತಲಾ ಹೇಳುತ್ತಾಳೆ. ಮಹಿಮಾಳನ್ನು ನಾವು ಸುಧಾರಿಸಲು ಸಾಧ್ಯವೇ ಇಲ್ಲ. ಅವಳೇ ಇಷ್ಟಪಟ್ಟಿರುವುದರಿಂದ ಆ ಹುಡುಗನ ಜೊತೆಗೆ ಮದುವೆ ಮಾಡಿಸಿದರೆ, ನಮಗೆ ತಲೆನೋವು ಕಡಿಮೆ ಆಗುತ್ತದೆ ಎಂದು ಹೇಳುತ್ತಾಳೆ.
ಮತ್ತೆ ಗೌತಮ್‌ಗೆ ಕರೆ ಮಾಡಿದ ಭೂಮಿಕಾ
ಭೂಮಿಕಾ ಆಕ್ಸಿಡೆಂಟ್ ವಿಚಾರವಾಗಿ ತನ್ನ ಮನದ ಮಾತುಗಳನ್ನು ಅಪೇಕ್ಷಾ ಬಳಿ ಹೇಳಿಕೊಳ್ಳುತ್ತಾಳೆ. ಅವರು ಶ್ರೀಮಂತರು ನನ್ನನ್ನು ಭೇಟಿ ಕೂಡ ಮಾಡಲಿಲ್ಲ ಎಂದು ಹೇಳಿದಾಗ, ಅಪೇಕ್ಷಾ ನಂಬರ್ ಕಲೆಕ್ಟ್ ಮಾಡಿ ಕೊಡುತ್ತಾಳೆ. ಜೊತೆಗೆ ನೀನು ಅವರಿಗೆ ಫೋನ್ ಮಾಡಿ ಬೈದು ಬಿಡು ಆಗ ಅವರು ನಿನಗೆ ತೊಂದರೆ ಕೊಟ್ಟಿದ್ದಕ್ಕೆ, ನಿನಗಾಗಿರುವ ಫಸ್ಟ್ರೇಷನ್ ಕಡಿಮೆ ಆಗುತ್ತದೆ ಎಂದು ಹೇಳುತ್ತಾಳೆ.
ಭೂಮಿಕಾ ಕಾಲ್ ಮಾಡಿದಾಗ ಅದು ಗೌತಮ್‌ಗೆ ಹೋಗುತ್ತದೆ. ಇದೊಂದು ಚಿಕ್ಕ ಆಕ್ಸಿಡೆಂಟ್‌ಗೆ ದೊಡ್ಡ ಸೀನ್ ಕ್ರಿಯೇಟ್ ಮಾಡುತ್ತಿದ್ದೀರಾ ಎಂದು ಹೇಳುತ್ತಾಳೆ. ಗೌತಮ್ ಜೀವನ್ ಹಾಗೂ ಮಹಿಮಾ ವಿಚಾರವಾಗಿ ಮಾತನಾಡುತ್ತಿದ್ದರೆ, ಭೂಮಿಕಾ ಕಾರ್ ಆಕ್ಸಿಡೆಂಟ್ ಬಗ್ಗೆ ಮಾತನಾಡುತ್ತಿರುತ್ತಾಳೆ.


Click it and Unblock the Notifications











