Amruthadhare: ಅಕ್ಕನಿಂದ ಸತ್ಯ ಮುಚ್ಚಿಡುತ್ತಿರುವ ಜೀವನ್: ಭೂಮಿಕಾಳಿಗೆ ಸಮಾಧಾನ ಮಾಡಿದ ಸದಾಶಿವ

By ಪ್ರಿಯಾ ದೊರೆ

ಗೌತಮ್ ದಿವಾನ್ ನಂಬರ್ ಪಡೆದು ಭೂಮಿಕಾ ಸದಾಶಿವ್‌ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಆಕೆಗೆ ಬೈಯ್ಯಲು ಬರದೇ ಇದ್ದರೂ ಅಪೇಕ್ಷಾ ಹೇಳಿಕೊಟ್ಟಿದ್ದನ್ನು ಹೇಳುತ್ತಾಳೆ. ಗೌತಮ್ ಈಗ ಜೀವನ್ ಮನೆಯವರು ಫೋನ್ ಮಾಡಿದ್ದಾರೆ ಎಂದುಕೊಂಡಿದ್ದು, ಜೀವನ್ ವಿಚಾರ ತಿಳಿಯದ ಭೂಮಿಕಾ ಕಾರಿನ ಬಗ್ಗೆ ಮಾತನಾಡಿದ್ದಾಳೆ. ಬೈದು ಫೋನ್ ಕಟ್ ಆಗುತ್ತಿದ್ದಂತೆ ಭೂಮಿಕಾ ಉಸಿರು ಬಿಟ್ಟಿದ್ದಾಳೆ.

ಅಪೇಕ್ಷಾ ಬಳಿ ಬಹಳ ರಿಲ್ಯಾಕ್ಸ್ ಅನಿಸುತ್ತಿದೆ ಅಪ್ಪಿ, ಭಯ ಇದ್ದರೂ, ಬೈದ ಮೇಲೆ ಏನೋ ಕೂಲ್ ಎನಿಸುತ್ತಿದೆ ಎಂದು ಹೇಳುತ್ತಾಳೆ. ಅಪೇಕ್ಷಾ ಅದಕ್ಕೆ ಮನಸ್ಸಿನಲ್ಲಿರುವುದನ್ನು ಹೇಳಿ ಬಿಡಬೇಕು ಎಂದು ಹೇಳುತ್ತಾಳೆ. ಮಾತು ಮುಂದುವರೆಸುವ ಅಪೇಕ್ಷಾ ನಮಗೆ ಯಾರಾದರೂ ನೋವು ಮಾಡಿದರೆ, ಕೋಪ ಬರಿಸಿದರೆ, ವಾಪಸ್ ಬೈದು ಬಿಡಬೇಕು ಆಗ ನಮಗೆ ಬಹಳ ಸಮಾಧಾನವಾಗುತ್ತದೆ. ನನಗೂ ಮಹಿಮಾ ವಿಚಾರದಲ್ಲಿ ಹೀಗೆ ಆಯ್ತು ಎನ್ನುತ್ತಾಳೆ.

Amruthadhare Serial 07th June episode written update

ಜೀವನ್ ಬಂದು ನನ್ನ ಬದಲು ಅವನೇ ಜಗಳ ಮಾಡಿದ ಎಂದು ಹೇಳುತ್ತಾಳೆ. ಆಗ ತಕ್ಷಣವೇ ಭೂಮಿಕಾ ಏನಾಯ್ತು..? ಜೀವನ್ ಯಾಕೆ ಅಲ್ಲಿಗೆ ಬಂದಿದ್ದ ಎಂದು ಪ್ರಶ್ನಿಸುತ್ತಾಳೆ. ಆಗ ಅಪೇಕ್ಷಾ ಈ ವಿಚಾರವನ್ನು ಭೂಮಿಕಾಳಿಗೆ ಹೇಳಬಾರದು ಎಂದು ಅಮ್ಮ ಹೇಳಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾಳೆ. ತಕ್ಷಣವೇ ಮಾತು ಬದಲಾಯಿಸುತ್ತಾಳೆ. ಭೂಮಿಕಾಳಿಗೆ ಅಪೇಕ್ಷಾ ನಡೆದುಕೊಂಡ ರೀತಿ ಅರ್ಥವಾದರೂ ಸುಮ್ಮನಾಗುತ್ತಾಳೆ.

ಮಹಿಮಾ ವಿಚಾರ ಮುಚ್ಚಿಟ್ಟ ಜೀವನ್

ಬಳಿಕ ಭೂಮಿಕಾ, ಜೀವನ್ ರೂಮಿಗೆ ಹೋಗುತ್ತಾಳೆ. ಜೀವನ್ ಬಟ್ಟೆಯನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿರುವುದನ್ನು ನೋಡಿ ಸರಿ ಮಾಡಲು ಶುರು ಮಾಡುತ್ತಾಳೆ. ಜೀವನ್ ನನ್ನು ಯಾರ ಜೊತೆಗೆ ಜಗಳ ಮಾಡಿದ್ದು, ಏನಾಯ್ತು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಜೀವನ್ ಮಾತು ಮರೆಸಲು ಪ್ರಯತ್ನಿಸುತ್ತಾನೆ. ಭೂಮಿಕಾ, ಮಾತು ಬದಲಾಯಿಸಬೇಡ ಏನಾಯ್ತು ಎಂದು ಹೇಳು ಎಂದು ಕೇಳುತ್ತಾಳೆ. ಆಗ ಜೀವನ್ ನೀನು ಯಾರ ಜೊತೆಗೆ ಜಗಳ ಮಾಡುತ್ತಾ ಇದ್ದೆ. ಅಷ್ಟು ಜೋರಾಗಿ ಯಾರಿಗೆ ಫೋನ್‌ನಲ್ಲಿ ಬೈದಿದ್ದು ಎಂದು ಕೇಳುತ್ತಾನೆ. ಆಗ ಭೂಮಿಕಾ, ಜೀವನ್ ಜಗಳದ ವಿಷಯವನ್ನು ಮರೆಯುತ್ತಾಳೆ.

Amruthadhare Serial 07th June episode written update

ಇತ್ತ ಭೂಮಿಕಾಳಿಗೆ ಎರಡನೇ ಸಂಬಂಧವನ್ನು ಮಂದಾಕಿನಿ ನೋಡುತ್ತಾಳೆ. ಇದರಿಂದ ಭೂಮಿಕಾ ಬೇಸರ ಮಾಡಿಕೊಳ್ಳುತ್ತಾಳೆ. ಆಗ ಸದಾಶಿವ ಮಗಳನ್ನು ಸಮಾಧಾನ ಮಾಡಲು ಅವಳ ಹಳೆಯ ಡೈರಿಯನ್ನು ತಂದು ಕೊಡುತ್ತಾನೆ. ಇದರಿಂದ ಭೂಮಿಕಾಳಿಗೆ ಸಮಾಧಾನವಾಗುತ್ತದೆ.

ಜೀವನ್ ಜೊತೆ ಮಾತನಾಡು ಎಂದ ಶಕುಂತಲಾ

ಇತ್ತ ಶಕುಂತಲಾ, ಗೌತಮ್‌ಗೆ ಜೀವನ್ ಮನೆಯವರ ಬಳಿ ಮಾತನಾಡಲು ಹೇಳುತ್ತಾಳೆ. ಆದಷ್ಟು ಬೇಗ ಮಹಿಮಾ ಇಷ್ಟ ಪಟ್ಟಿರುವ ಹುಡುಗನ ಜೊತೆಗೆ ಮದುವೆ ಮಾಡು ಎನ್ನುತ್ತಾಳೆ. ಗೌತಮ್ ಅವರು ಚೀಪ್ ಜನ, ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಮಹಿಮಾಳನ್ನು ನಿಜವಾಗಿಯೂ ಪ್ರೀತಿಸುತ್ತಿಲ್ಲ ಅವನು ಎಂದು ಹೇಳುತ್ತಾಳೆ.

Amruthadhare Serial 07th June episode written update

ಈ ಮಾತಿಗೆ ಶಕುಂತಲಾ, ಪರವಾಗಿಲ್ಲ. ಅವನು ಎಷ್ಟು ಹಣ ಕೇಳುತ್ತಾನೋ ಕೊಟ್ಟು ಮಹಿಮಾಳ ಮದುವೆಯನ್ನು ಮಾಡು ಎನ್ನುತ್ತಾಳೆ. ನಿಮ್ಮ ಅಪ್ಪನಿಗೆ ಮಾತು ಕೊಟ್ಟಿದ್ದನ್ನು ಮರೆಯಬೇಡ. ನಿನ್ನ ತಂಗಿಯ ಆಸೆಯನ್ನು ಪೂರೈಸು ಎಂದು ಹೇಳುತ್ತಾಳೆ. ಈ ಮಾತಿನಿಂದ ಗೌತಮ್‌ಗೆ ಬಹಳ ಬೇಸರವಾಗುತ್ತದೆ.

ಮಹಿಮಾಗೆ ಪ್ರಾಮಿಸ್ ಮಾಡಿದ ಗೌತಮ್

ಆನಂದ್ ಬಳಿ ಈ ವಿಚಾರವನ್ನು ಮಾತನಾಡಿದಾಗ, ಅಮ್ಮ ಹೇಳಿದ ಹಾಗೆ ಮಾಡು. ನೀನು ಯಾವತ್ತೂ ಅಮ್ಮನ ಮಾತನ್ನು ತಪ್ಪಿಲ್ಲ ಎಂದು ಹೇಳುತ್ತಾನೆ. ಮಹಿಮಾಳನ್ನು ಮಾತನಾಡಿಸಲು ಗೌತಮ್ ಹೋದಾಗ ಅವಳು, ಜೀವನ್ ಮನೆಗೆ ಹೋಗುತ್ತಿದ್ದೀಯಾ. ನನ್ನ ಮತ್ತು ಜೀವನ್ ಮದುವೆ ಬಗ್ಗೆ ಮಾತನಾಡುತ್ತೀಯಾ ಎಂದು ಕೇಳುತ್ತಾಳೆ.

ಗೌತಮ್ ಜೀವನ್ ಸರಿಯಿಲ್ಲ ಎಂದಾಗ ಮಹಿಮಾ ಕೋಪ ಮಾಡಿಕೊಳ್ಳುತ್ತಾಳೆ. ಜೀವನ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವನೇ ಬೇಕು ಎಂದು ಹಠ ಮಾಡುತ್ತಾಳೆ. ನನ್ನನ್ನು ಜೀವನ್ ಜೊತೆಗೆ ಮದುವೆ ಮಾಡಿಸುವುದಾಗಿ ಪ್ರಾಮಿಸ್ ಮಾಡು ಎನ್ನುತ್ತಾಳೆ. ಬೇರೆ ದಾರಿ ಇಲ್ಲದೇ, ಗೌತಮ್ ಮಹಿಮಾಳಿಗೆ ಪ್ರಾಮಿಸ್ ಮಾಡುತ್ತಾನೆ.

More from Filmibeat

English summary
Amruthadhare Serial 07th June episode written update. know more. her is details about Gautham promises mahima to marry her for jeevan. But gautham is worried about mahima future. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X