Amruthadhare: ಕೊನೆಗೂ ಭೇಟಿಯಾದ ಗೌತಮ್ ಹಾಗೂ ಭೂಮಿಕಾ
ಮತ್ತೆ ಪೊಲೀಸ್ ಸ್ಟೇಷನ್‌ಗೆ ಭೂಮಿಕಾ ಹಾಗೂ ಸದಾಶಿವ ಬಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೆ ಕಾದು ಏನೂ ಕೆಲಸವಾಗದೇ ವಾಪಸ್ ಬಂದಿದ್ದಾರೆ. ಇದರಿಂದ ಭೂಮಿಕಾಳಿಗೆ ಬಹಳ ಹಿಂಸೆಯಾಗುತ್ತಿದೆ. ಪದೇ ಪದೇ ಹೀಗಾಗುತ್ತಿದೆಯಲ್ಲಾ ಅನ್ನೋ ಅಸಮಾಧಾನ ಹೆಚ್ಚಾಗುತ್ತಿದೆ. ಆದರೆ ಭೂಮಿಕಾಳಿಗೆ ತಂದೆ ಸದಾಶಿವ ಸಮಾಧಾನ ಮಾಡುತ್ತಾನೆ. ಬದುಕಿನ ಬಗ್ಗೆ ಸದಾಶಿವ ಮಗಳು ಭೂಮಿಕಾಳಿಗೆ ಅರ್ಥ ಮಾಡಿಸುತ್ತಾನೆ.
ಇನ್ನು ಅಪಾರ್ಟ್‌ಮೆಂಟ್‌ನಲ್ಲಿ ಮತ್ತೆ ಲಿಫ್ಟ್ ಕೆಟ್ಟು ಹೋಗಿದೆ. ಲಿಫ್ಟ್ ವರ್ಕ್ ಆಗದ ಕಾರಣ ಅಪಾರ್ಟ್‌ಮೆಂಟ್‌ನಲ್ಲಿರುವ ವಯಸ್ಸಾದವರಿಗೆ ಇದರಿಂದ ಬಹಳ ಸಮಸ್ಯೆ ಆಗುತ್ತಿರುತ್ತದೆ. ಪೊಲೀಸ್ ಸ್ಟೇಷನ್‌ಗೆ ಅಲೆಯುತ್ತಿರುವುದಕ್ಕೆ, ಲಿಫ್ಟ್ ಕೆಟ್ಟು ನಿಂತಿರುವುದಕ್ಕೆ ಎಲ್ಲದಕ್ಕೂ ಕಾರ್ ಆಕ್ಸಿಡೆಂಟ್ ಮಾಡಿದವನೇ ಕಾರಣ. ಅವನೊಬ್ಬ ನನಗೆ ಎಲ್ಲಿ ಗಂಟು ಬಿದ್ದನೋ ಎಂದು ಬೈಯುತ್ತಿರುತ್ತಾಳೆ. ಆಗ ಅಜ್ಜಿಯೊಬ್ಬರು ಭೂಮಿಕಾ ನಿನಗೆ ಕೋಪ ಬರಿಸಿದ ಆ ವ್ಯಕ್ತಿ ಯಾರು ಎಂದು ಕೇಳುತ್ತಾರೆ. ಆಗಲೂ ಕೂಡ ಭೂಮಿಕಾ ಕೋಪ ಮಾಡಿಕೊಳ್ಳುತ್ತಾಳೆ.

ಇತ್ತ ಗೌತಮ್ ಜೀವನನ್‌ನನ್ನು ತನ್ನ ಆಫೀಸಿಗೆ ಕರೆಸಲು ಹೇಳುತ್ತಿರುತ್ತಾನೆ. ಅಷ್ಟರಲ್ಲಿ ಆನಂದ್ ಬಂದು ಇದು ತಪ್ಪು ಗೆಳೆಯ. ಜೀವನ್ ನಿನ್ನ ಕ್ಲೈಂಟ್ ಅಲ್ಲ. ನಿನ್ನ ತಂಗಿ ಮಹಿಮಾಳನ್ನು ಮದುವೆಯಾಗುವ ಹುಡುಗ. ಅವರ ಮನೆಗೆ ಹೋಗಿ ಮದುವೆಯ ಮಾತುಕತೆಯನ್ನು ಆಡಿಕೊಂಡು ಬಾ. ಅದೂ ಕೂಡ ಇವತ್ತೇ ಈ ಕೆಲಸ ಆಗಬೇಕು ಎಂದು ಹೇಳಿ ಬಲವಂತವಾಗಿ ಕಳಿಸಿಕೊಡುತ್ತಾನೆ.
ಭೇಟಿಯಾದ ಜೋಡಿ
ಅಪಾರ್ಟ್‌ಮೆಂಟ್‌ಗೆ ಬರುವ ಗೌತಮ್, ಭೂಮಿಕಾಳನ್ನು ಮಾತನಾಡಿಸುತ್ತಾನೆ. ಲಿಫ್ಟ್‌ನಲ್ಲಿ ಹೋಗಲು ಮುಂದಾಗುತ್ತಾನೆ. ಆಗ ಲಿಫ್ಟ್ ಕೆಟ್ಟೋಗಿರುವುದು ತಿಳಿದು ಕೋಪ ಮಾಡಿಕೊಳ್ಳುತ್ತಾನೆ. ಮೆಟ್ಟಿಲು ಅತ್ತಿ ಹೋಗಬೇಕಾ ಎಂದು ಭೂಮಿಕಾಳನ್ನು ಕೇಳುತ್ತಾನೆ. ಆಗ ಭೂಮಿಕಾ ಇಲ್ಲ ಹಾರಿಕೊಂಡು ಹೋಗಬಹುದು ಎಂದು ಕಾಮಿಡಿ ಮಾಡುತ್ತಾಳೆ. ಗೌತಮ್ ಮೆಟ್ಟಿಲು ಹತ್ತುವಾಗ ಭೂಮಿಕಾ, ಅಜ್ಜಿ ಬಳಿ ಕೆಲವರಿಗೆ ಸಹಾಯ ಮಾಡುವ ಬುದ್ಧಿಯೂ ಇರುವುದಿಲ್ಲ ಎಂದು ಹೇಳುತ್ತಾನೆ.
ಮತ್ತೆ ಗೌತಮ್‌ಗೆ ಕೋಪ ಬರುತ್ತದೆ. ಬೇರೆ ದಾರಿ ಇಲ್ಲದೇ, ಒಂದು ಬ್ಯಾಗ್ ಅನ್ನು ಹಿಡಿದುಕೊಳ್ಳುತ್ತಾನೆ. ಗೌತಮ್ ಮೆಟ್ಟಿಲು ಹತ್ತಲು ಕಷ್ಟಪಡುತ್ತಿರುತ್ತಾನೆ. ಆಗ ಪ್ರತಿಯೊಂದಕ್ಕೂ ಭೂಮಿಕಾ, ಅಜ್ಜಿಗೆ ಕಥೆ ಹೇಳುವಂತೆ ಗೌತಮ್‌ನನ್ನು ರೇಗಿಸುತ್ತಿರುತ್ತಾಳೆ.

ಭೂಮಿಕಾ, ಗೌತಮ್ ಜಗಳ
ಕೊನೆಗೆ ಗೌತಮ್‌ಗೆ ಭೂಮಿಕಾ ನೀರನ್ನು ತಂದು ಕೊಡುತ್ತಾಳೆ. ಆಗಲೂ ಗೌತಮ್ ನೀರು ಒಳ್ಳೆಯದಾ ಕೆಟ್ಟದಾ ಎಂದು ಚೆಕ್ ಮಾಡುತ್ತಾನೆ. ಇದಕ್ಕೂ ಭೂಮಿಕಾ ಕಾಮಿಡಿಯಾಗಿ ಉತ್ತರ ಕೊಡುತ್ತಾಳೆ. ಇದೇ ವೇಳೆಗೆ ಗೌತಮ್‌ಗೆ ಬಿಪಿ ಮಾತ್ರೆಯನ್ನು ತೆಗೆದುಕೊಂಡು ಅವನ ಡ್ರೈವರ್ ಬರುತ್ತಾನೆ. ಡ್ರೈವರ್ ಅನ್ನು ನೋಡಿದಾಗ ಭೂಮಿಕಾಗೆ ಆತನಿಂದಲೇ ಪೊಲೀಸ್ ಠಾಣೆಗೆ ಓಡಾಡುವಂತಾಗಿರುವುದು ಎಂಬುದು ಬಳಿಕ ಗೌತಮ್ ಮನೆಯ ನಂಬರ್ ಅನ್ನು ಕೇಳಿದಾಗ, ಭೂಮಿಕಾ ತನ್ನ ಮನೆಯನ್ನು ತೋರಿಸುತ್ತಾಳೆ.
ಆಗ ಗೌತಮ್‌ಗೆ ಜೀವನ್ ಅಕ್ಕ ಭೂಮಿಕಾ ಎನ್ನುವುದು ಗೊತ್ತಾಗುತ್ತದೆ. ಆಗ ಭೂಮಿಕಾ ಅಷ್ಟು ಚಿಕ್ಕ ವಿಚಾರಕ್ಕೆ ಇಲ್ಲಿಯವರೆಗೂ ಬಂದಿದ್ದೀರಾ ಎಂದು ಜಗಳ ಮಾಡುತ್ತಾಳೆ. ಈಗಲೂ ಗೌತಮ್, ಮಹಿಮಾ ಬಗ್ಗೆ ಮಾತನಾಡುತ್ತಾನೆ. ಭೂಮಿಕಾ ಕಾರಿನ ಬಗ್ಗೆ ಮಾತನಾಡುತ್ತಾನೆ. ಆದರೆ, ಇಬ್ಬರೂ ಸ್ಪಷ್ಟವಾಗಿ ಮಾತನಾಡುವುದಿಲ್ಲ.
ಜೀವನ್‌ಗೆ ಶಾಕ್ ಕೊಟ್ಟ ಮಹಿಮಾ
ಫೋನ್‌ನಲ್ಲಿ ಗೌತಮ್ ಇನ್ಯಾವತ್ತು ಮಹಿಮಾ ಮದುವೆ ವಿಚಾರವಾಗಿ ಈ ಮನೆಗೆ ಬರಲ್ಲ ಎಂದು ಗೌತಮ್, ಆನಂದ್ ಬಳಿ ಹೇಳುತ್ತಾನೆ. ಆಗ ಡ್ರೈವರ್, ಸರ್ ನಾನು ನಿಮಗೆ ಒಂದು ವಿಷಯವನ್ನು ಹೇಳಬೇಕು ಎಂದಾಗ ಗೌತಮ್ ಕೇಳುವುದಿಲ್ಲ. ಇತ್ತ ಮಹಿಮಾ, ಜೀವನ್‌ಗೆ ಕಾಲ್ ಮಾಡುತ್ತಾಳೆ. ತನ್ನ ಹಾಗೂ ಜೀವನ್ ಮದುವೆ ವಿಚಾರವಾಗಿ ಗೌತಮ್ ಅವರ ಮನೆಗೆ ಬಂದ ಬಗ್ಗೆ ಹೇಳುತ್ತಾಳೆ. ಇದರಿಂದ ಜೀವನ್‌ಗೆ ಶಾಕ್ ಆಗುತ್ತದೆ.


Click it and Unblock the Notifications











