Amruthadhare: ತಮ್ಮ ತಮ್ಮ ಕುಟುಂಬಕ್ಕಾಗಿ ಮಿಡಿಯುವ ನಾಯಕ-ನಾಯಕಿಯ ಕಥೆ

By ಪ್ರಿಯಾ ದೊರೆ

ಬಹುನಿರೀಕ್ಷಿತ 'ಅಮೃತಧಾರೆ' ಧಾರಾವಾಹಿಯ ಮೊದಲ ಸಂಚಿಕೆ ಪ್ರಸಾರವಾಗಿದೆ. ಹೊಸ ಕಥೆ ಶುರುವಾಗಿದೆ. ಮೊದಲ ಸೀನ್‌ನಲ್ಲೇ ಮಿಸ್ ಬೆಂಗಳೂರು ಬ್ಯೂಟಿ ಕಾಂಟೆಸ್ಟ್. ಆ ಬ್ಯೂಟಿ ಕಾಂಟೆಸ್ಟ್ ಕ್ಯೂನಲ್ಲಿ ಭೂಮಿಕಾ ಸದಾಶಿವ ನಿಂತಿದ್ದು, ಅಪೇಕ್ಷಾ ಸದಾಶಿವ ಅಂದರೆ ಅವಳ ಸಹೋದರಿಯ ಬದಲು ಕ್ಯೂನಲ್ಲಿ ನಿಲ್ಲುವಂತಾಗಿದೆ. ನಂತರ ಅವರ ತಾಯಿ ಹಾಗೂ ಅಪೇಕ್ಷಾ ಆಟೋದಲ್ಲಿ ಅಲ್ಲಿಗೆ ಬರುತ್ತಾರೆ.

ಅಪೇಕ್ಷಾ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಭಾಗವಹಿಸುತ್ತಿದ್ದಾಳೆ. ಭೂಮಿಕಾ ಸಹೋದರಿಗೆ ಸಂಪೂರ್ಣವಾಗಿ ಸಪೋರ್ಟ್ ಮಾಡುತ್ತಾಳೆ. ಆದರೆ, ಅವಳ ಭಾವನೆಗಳಿಗೆ ಮನೆಯಲ್ಲಿ ಯಾರೂ ಸ್ಪಂದಿಸುವುದಿಲ್ಲ. ಅಪೇಕ್ಷಾ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಭಾಗವಹಿಸಲು ಬ್ರೇಸ್ ಲೈಟ್ ಅನ್ನು ಮರೆತು ಬಂದಿರುತ್ತಾಳೆ. ಅದು ಬೇಕೇ ಬೇಕು ಎಂದು ಕೇಳಿದಾಗ ಭೂಮಿಕಾ ತನ್ನ ಕೆಲಸಕ್ಕೆ ಸಮಯವಾಗಿದ್ದರೂ ಊರೆಲ್ಲಾ ಹುಡುಕಿ ತಂದುಕೊಡುತ್ತಾಳೆ. ಆದರೆ, ಭೂಮಿಕಾ ತಾಯಿ ಹಾಗೂ ಅಪೇಕ್ಷಾ ಅವಳಿಗೆ ಒಂದು ಥ್ಯಾಂಕ್ಸ್ ಕೂಡ ಹೇಳುವುದಿಲ್ಲ.

Amruthadhare Serial 29th May episode written update

ಬಳಿಕ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ಭೂಮಿಕಾ ಪ್ರೀತಿ ಎಂದರೆ ಏನು ಎಂದು ಹೇಳುತ್ತಾಳೆ. ಆದರೆ, ಕ್ಲಾಸ್‌ನಲ್ಲಿ ಹುಡುಗಿಯರೆಲ್ಲಾ ಗೌತಮ್ ದಿವಾನ್ ಅವರ ಫೋಟೋ ಇರುವ ಮ್ಯಾಗಜೈನ್ ಹಿಡಿದುಕೊಂಡು ನೋಡುತ್ತಿರುತ್ತಾರೆ. ಆಗ ಭೂಮಿಕಾ ಏನದು ಎಂದು ವಿಚಾರಿಸಿದಾಗ ಗೌತಮ್ ದಿವಾನ್ ಬಗ್ಗೆ ಹೇಳುತ್ತಾರೆ. ಅವನಿಗೆ 45 ವರ್ಷವಾದರೂ ಮದುವೆ ಆಗಿಲ್ಲ. ನೋಡುವುದಕ್ಕೆ ಓಕೆ, ಒಳ್ಳೆಯ ಹಣ ಇರುವವನು, ಅವನನ್ನು ಮದುವೆಯಾದರೆ, ಚೆನ್ನಾಗೇ ಇರುತ್ತೇವೆ. ಒಳ್ಳೆಯ ಲೈಫ್ ಸಿಗುತ್ತೆ. ವಯಸ್ಸಾಗಿದ್ದರೆ ಏನು, ಹಣ ಇದೆ ಅಲ್ಲಾ. ಇಲ್ಲಿ ಪ್ರೀತಿಗೆ ಜಾಗವೇ ಇಲ್ಲ ಎನ್ನುತ್ತಾರೆ.

ಹಣ ಇದ್ದರೆ ಎಲ್ಲಾ ಸಿಗುತ್ತದೆ

ಆಗ ಭೂಮಿಕಾ ಇಲ್ಲ ಅದೆಲ್ಲವೂ ಸ್ವಲ್ಪ ದಿನಕ್ಕೆ ಬೋರ್ ಆಗುತ್ತೆ. ಆದರೆ, ಪ್ರೀತಿ ಇದ್ದರೆ ಜೀವನ ಪೂರ್ತಿ ಖುಷಿಯಾಗಿರಬಹುದು ಎಂದು ಹೇಳುತ್ತಾಳೆ. ಭೂಮಿಕಾ ಮಾತಿಗೆ ನಗುವ ವಿದ್ಯಾರ್ಥಿಗಳು, ನೀವು ಅಂತಹ ಪ್ರೀತಿಗೆ ವೇಯ್ಟ್ ಮಾಡುತ್ತಾ 35 ಆದರೂ ಮದುವೆ ಆಗಿಲ್ವಾ? ಎಂದು ಪ್ರಶ್ನಿಸುತ್ತಾರೆ. ಇದರಿಂದ ಭೂಮಿಕಾಳಿಗೆ ಬೇಸರವಾಗುತ್ತದೆ.

Amruthadhare Serial 29th May episode written update

ಕುಟುಂಬಕ್ಕಾಗಿ ಮಿಡಿಯುವ ಗೌತಮ್

ಇತ್ತ ಗೌತಮ್ ಲಂಡನ್‌ನಲ್ಲಿ ಭಾರತ್ ಫಾರ್ಮ್ ಎಂಬ ಕಂಪನಿಯನ್ನು ಖರೀದಿಸಲು ಮುಂದಾಗಿರುತ್ತಾನೆ. ಕೊನೆಯ ಮೀಟಿಂಗ್‌ನಲ್ಲಿ ಪ್ರಸೆಂಟೇಷನ್ ಸರಿ ಇಲ್ಲ. ಕಂಪನಿ ಲಾಸ್‌ನಲ್ಲಿ ಇದೆ. ನೀವು ಸುಳ್ಳು ಹೇಳುತ್ತಿದ್ದೀರಾ ಎಂದು ಹೇಳಿ ಡೀಲ್ ಕ್ಯಾನ್ಸಲ್ ಮಾಡುತ್ತಾನೆ. ತಂಗಿಯ ಮದುವೆಗೆ ಮುಹೂರ್ತಕ್ಕೆ ಸರಿಯಾಗಿ ಬೆಂಗಳೂರು ತಲುಪಬೇಕು ಎನ್ನುವ ಗೌತಮ್‌ಗೆ ಬ್ಯಾಡ್ ವೆದರ್‌ನಿಂದಾಗಿ ಫ್ಲೈಟ್‌ಗಳೆಲ್ಲವೂ ಕ್ಯಾನ್ಸಲ್ ಆಗಿರುತ್ತದೆ.

ಗೌತಮ್ ತಕ್ಷಣವೇ ಭಾರತ್ ಫಾರ್ಮಾ ಕಂಪನಿಯ ಡೀಲ್ ಅನ್ನು ಒಪ್ಪಿಕೊಂಡು ಅವರ ಜೆಟ್ ಅನ್ನು ಕೂಡ ತನ್ನ ವಶಕ್ಕೆ ಪಡೆಯುತ್ತಾನೆ. ಜೆಟ್‌ನಲ್ಲಿ ಬೆಂಗಳೂರಿಗೆ ಬರುತ್ತಾನೆ. ಯಾಕೆ ಹೀಗೆ ಮಾಡಿದೆ ಎಂದು ಗೌತಮ್ ಗೆಳೆಯ ಆನಂದ್ ಕೇಳಿದ್ದಕ್ಕೆ, ಫ್ಯಾಮಿಲಿಗಿಂತ ಬೇರೇನೂ ಮುಖ್ಯವಲ್ಲ ಎಂದು ಹೇಳುತ್ತಾನೆ. ಇನ್ನು ಗೌತಮ್ ತಾಯಿ ಫೋನ್ ಮಾಡಿ ನಿನ್ನ ತಂಗಿಗೆ ಹೈದರಾಬಾದ್ ಪರ್ಲ್‌ನ ನೆಕ್ಲೆಸ್ ಬೇಕು ಎಂದು ಕೇಳಿದಾಗ ಗೌತಮ್ ಎಲ್ಲಾ ಜ್ಯುವೆಲರಿ ಶಾಪ್ ಅನ್ನೂ ಸಂಪರ್ಕಿಸಿ, ತನ್ನ ಸಹೋದರಿ ಬಯಸಿದ ನೆಕ್ಲೇಸ್ ಅನ್ನು ತರುತ್ತಾನೆ.

Amruthadhare Serial 29th May episode written update

ಮನೆಯವರಿಗೆ ಹಣ ಬೇಕು.. ಗೌತಮ್ ಬೇಡ..

ಇಲ್ಲೂ ಕೂಡ ಮನೆಯವರು ಗೌತಮ್‌ನಿಂದ ಆಗುವ ಕೆಲಸ, ಅವನ ಹಣವನ್ನಷ್ಟೇ ಬಯಸುತ್ತಾರೆಯೇ ಹೊರತು ಅವನ ಬಗ್ಗೆ ಯೋಚಿಸುವುದೇ ಇಲ್ಲ. ಗೌತಮ್ ತನ್ನ ತಂಗಿಯನ್ನು ತಾನೇ ಧಾರೆ ಎರೆದುಕೊಡಬೇಕು ಎಂದು ಬಯಸುತ್ತಾನೆ. ಆದರೆ ಅದನ್ನು ಅವರ ತಾಯಿ ಮತ್ತೊಬ್ಬರಿಂದ ಮಾಡಿಸುತ್ತಾಳೆ. ಇದರಿಂದ ಗೌತಮ್ ಗೆ ಬೇಸರವಾದರೂ ತೋರಿಸಿಕೊಳ್ಳುವುದಿಲ್ಲ. ಸ್ನೇಹಿತ ಆನಂದ್, ಗೌತಮ್‌ಗೆ ಮದುವೆ ಆಗುವಂತೆ ಹೇಳುತ್ತಾನೆ. ಆದರೆ ಗೌತಮ್, ನನ್ನ ಈ ವಯಸ್ಸಲ್ಲಿ ಯಾರೂ ಮದುವೆಯಾಗಲ್ಲ ಎಂದು ತನ್ನ ಇಫಿರಿಯಾರಿಟಿ ಬಗ್ಗೆ ಹೇಳಿಕೊಳ್ಳುತ್ತಾನೆ.

ಭೂಮಿಕಾ ಅಂದ್ರೆ ತಾತ್ಸಾರ

ಇತ್ತ ಭೂಮಿಕಾಗೆ ಅವರ ತಂದೆ ಸದಾಶಿವ ಕಾಲ್ ಮಾಡಿ ಅಪೇಕ್ಷಾ ಮಿಸ್ ಬೆಂಗಳೂರು ಕಾಂಟೆಸ್ಟ್‌ನಲ್ಲಿ ಸೆಲೆಕ್ಟ್ ಆಗಿದ್ದಾಳೆ ಎಂದಾಗ ಭೂಮಿಕಾ ಕಾಂಟೆಸ್ಟ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗುತ್ತಾಳೆ. ಆದರೆ ಅಲ್ಲಿ ಅವರು ಇರುವುದಿಲ್ಲ. ಮನೆಗೆ ಬಂದರೆ, ಅಲ್ಲಿ ಅಪೇಕ್ಷಾ ಹಾಗೂ ಅವರ ತಾಯಿ ಅದಾಗಲೇ ಖುಷಿಯನ್ನು ಸಂಭ್ರಮಿಸುತ್ತಿರುತ್ತಾರೆ. ಭೂಮಿಕಾ ಬೊಕ್ಕೆ ಹಾಗೂ ಗಿಫ್ಟ್ ಕೊಟ್ಟು ವಿಶ್ ಮಾಡಿದರೂ ಅಪೇಕ್ಷಾ ಕೇರ್ ಮಾಡುವುದಿಲ್ಲ. ಬದಲಿಗೆ ತನ್ನ ಸ್ನೇಹಿತರಿಗೆ ಜ್ಯೂಸ್ ಮತ್ತು ಕಾಫಿ ತಂದುಕೊಡು ಎನ್ನುತ್ತಾಳೆ. ಇದರಿಂದ ಭೂಮಿಕಾಳಿಗೆ ಬೇಸರವಾಗುತ್ತದೆ.

More from Filmibeat

English summary
Amruthadhare Serial 29th May episode written update. here is details about new serial Amruthadhare first episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X