Sara Annaiah: ಸಾರಾ ಅಣ್ಣಯ್ಯರನ್ನ ಹಾಟ್ ಡ್ರೆಸ್‌ನಲ್ಲಿ ನೋಡಿದ ನೆಟ್ಟಿಗರು ಬೇಸರ ಮಾಡಿಕೊಂಡಿದ್ಯಾಕೆ?
ಸೋಷಿಯಲ್ ಮೀಡಿಯಾದಲ್ಲಿ ಸಾರಾ ಅಣ್ಣಯ್ಯ ಫುಲ್ ಆಕ್ಟೀವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಹಾಟ್ ಫೋಟೋಗಳನ್ನು ಹಾಕಿ ಕಿಚ್ಚು ಹಚ್ಚುತ್ತಾ ಇರುತ್ತಾರೆ. ಇದೀಗ ಹೊಸದಾಗಿ ಹಾಟ್ ಆಗಿ ಕಾಣುವಂತ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ನೆಟ್ಟಿಗರಿಗೆ ಸ್ವಲ್ಪವೂ ಇಷ್ಟವಾಗಿಲ್ಲ.
ಸಾರಾ ಅಣ್ಣಯ್ಯ 'ನಮ್ಮ ಲಚ್ಚಿ' ಧಾರಾವಾಹಿ ಬಳಿಕ ಜೀ ಕನ್ನಡದ 'ಅಮೃತಾಧಾರೆ' ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೌತಮ್ ದಿವಾನ್ ಎಂಬ ದೊಡ್ಡ ಬಿಸಿನೆಸ್ ಮ್ಯಾನ್‌ನ ತಂಗಿಯ ಪಾತ್ರದಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದು, ಅದೆಷ್ಟೋ ಮನಸ್ಸುಗಳನ್ನು ಗೆದ್ದಿದ್ದಾರೆ.

ಸಾರಾಗಿಂತ ಮಹಿಮಾ ಇಷ್ಟ
ಸಾರಾ ಅಣ್ಣಯ್ಯ ಈಗಾಗಲೇ ಸಾಕಷ್ಟು ಮನಸ್ಸುಗಳನ್ನು ಗೆದ್ದಿದ್ದಾರೆ. ಅದರಲ್ಲೂ ಅಮೃತಾಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಗೌತಮ್ ದಿವಾನ್ ಅವರ ಮುದ್ದಿನ ತಂಗಿಯಾಗಿ ನೋಡುಗರಿಗೂ ಇಷ್ಟವಾಗುತ್ತಿದ್ದಾರೆ. ಫ್ಯಾಷನ್ ಫೀಲ್ಟ್‌ನಲ್ಲಿಯೇ ಧಾರಾವಾಹಿಯಲ್ಲೂ ಗುರುತಿಸಿಕೊಂಡಿದ್ದು, ಹೆಣ್ಮಕ್ಕಳಿಗೆ ಡ್ರೆಸ್ಸಿಂಗ್ ವಿಚಾರದಲ್ಲಿ ಸ್ಪೂರ್ತಿಯಂತೆ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ದಿವಾನ್ ಮನೆಗೆ ಮುದ್ದಿನ ಮಗಳಾಗಿದ್ದಾಳೆ. ಅಣ್ಣನಿಗಂತೂ ಸದಾ ತಂಗಿಯ ಖುಷಿಯೇ ಮುಖ್ಯವಾಗಿದೆ.
ಬದಲಾಯ್ತು ಮಹಿಮಾ ಪರಿಸ್ಥಿತಿ
ಮಹಿಮಾ ಮೊದಲಿನಿಂದಲೂ ಶ್ರೀಮಂತಿಕೆಯಿಂದ ಬೆಳೆದವಳು. ಆದರೆ, ಪ್ರೀತಿ ಮಾಡಿದ್ದು ಮಾತ್ರ ಮಿಡಲ್ ಕ್ಲಾಸ್ ಲೈಫ್ ಲೀಡ್ ಮಾಡುತ್ತಿರುವುದು ಜೀವನ್‌ನನ್ನು. ಮೊದಲಿಗೆ ಜೀವನ್‌ನನ್ನು ಮದುವೆಯಾಗುವುದಕ್ಕೂ ಹಿಂದು ಮುಂದು ನೋಡಿದ್ದಳು. ಆದರೆ, ಗರ್ಭಿಣಿಯಾಗಿದ್ದ ಕಾರಣಕ್ಕೆ ಈ ಮದುವೆಗೆ ಒಪ್ಪಿದ್ದಳು. ಮದುವೆಯಾದ ಮೇಲೆ ಹಳೆಯ ಅಪಾರ್ಟ್ಮೆಂಟ್‌ನಲ್ಲಿಯೇ ವಾಸಿಸುವ ಪರಿಸ್ಥಿತಿ ಬಂದಿದೆ. ಶ್ರೀಮಂತಿಕೆಯ ಜೀವನದಲ್ಲಿಯೇ ಬೆಳೆದಿದ್ದರು. ಈಗ ಮಿಡಲ್ ಕ್ಲಾಸ್ ಜೀವನದಲ್ಲೂ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾಳೆ. ಶಾಸ್ತ್ರ-ಸಂಪ್ರದಾಯ ಅಂತ ಬಂದಾಗ ಇಷ್ಟವೋ-ಕಷ್ಟವೋ ಅತ್ತೆ ಮನೆಯವರ ಮಾತು ಕೇಳುತ್ತಾಳೆ. ಇದೇ ಗುಣ ನೋಡುಗರಿಗೆ ಮಹಿಮಾಳನ್ನು ಇಷ್ಟ ಪಡುವಂತೆ ಮಾಡಿದೆ.

ಹೋಸ ಫೋಟೋ ಶೇರ್ ಮಾಡಿದ ಸಾರಾ
ಸಾರಾ ಅಣ್ಣಯ್ಯ ವೈಯಕ್ತಿಕವಾಗಿ ಹೆಚ್ಚಿನ ಫೋಟೋಶೂಟ್ ಮಾಡಿಸುತ್ತಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅದು ಅರ್ಥವಾಗಿ ಬಿಡುತ್ತದೆ. ಅದರಲ್ಲೂ ಹಾಟ್ ಆಗಿ ಕಾಣಿಸುವಂತ, ಹುಡುಗರಿಗೆ ಹುಚ್ಚೆಳಿಸುವಂತ ಫೋಟೋಗಳನ್ನೇ ಹೆಚ್ಚು ಹಂಚಿಕೊಳ್ಳುವುದು. ಇತ್ತೀಚೆಗಷ್ಟೇ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಕೆಂಪು ಬಣ್ಣದಲ್ಲಿ, ಕನ್ನಡಿ ಮುಂದೆ ನಿಂತು ತೆಗೆದಿರುವ ಫೋಟೋದಲ್ಲಿ ಎದೆ ಕಾಣುವ ರೀತಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೆಚ್ಚಿಸಿವೆ.
ಮಹಿಮಾ ಹೇಗಿರಬೇಕಂತೆ ಗೊತ್ತಾ..?
ಸಾರಾ ಅಣ್ಣಯ್ಯ ಈ ರೀತಿಯಾದಂತ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಆಗಾಗ ಸೀರೆಗಳಲ್ಲೂ, ಮುದ್ದಾಗಿ ಕಾಣುವಂತ ಫೋಟೋಗಳನ್ನೇ ಹಂಚಿಕೊಳ್ಳುತ್ತಾರೆ. ಆದರೆ ಈ ರೀತಿಯ ಹಾಟ್ ಫೋಟೋಗಳನ್ನು ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಹಲವು ರೀತಿಯ ಕಮೆಂಟ್‌ಗಳನ್ನು ಹಾಕಿದ್ದಾರೆ. 'ಮಹಿಮಾ ಅಂತ ತುಂಬಾ ಇಷ್ಟ ಪಡ್ತೀನಿ. ಆದರೆ, ಈ ರೀತಿಯ ಬಟ್ಟೆಯನ್ನು ಹಾಕಿದರೆ ಫ್ಯಾನ್ಸ್ ಅಂತ ಹೇಳಿಕೊಳ್ಳುವುದಕ್ಕೆ ಬೇಜಾರು ಆಗುತ್ತೆ. ಮೈ ತುಂಬಾ ಬಟ್ಟೆ ಹಾಕೋಕೆ ಏನು ರೋಗ' ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ. ಇದರ ಜೊತೆಗೆ ತುಂಬಾ ಜನ ಪಾಸಿಟಿವ್ ಕಮೆಂಟ್ಸ್ ಕೂಡ ಹಾಕಿದ್ದಾರೆ.


Click it and Unblock the Notifications











