ಅಪ್ಪಿ, ಜೈ ದೇವ್ ಮದುವೆ ಫಿಕ್ಸ್; ಮಲ್ಲಿ ವಿಚಾರ ಶಕುಂತಲಾಗೆ ತಿಳಿದರೆ ಜೈ ದೇವ್ ಗತಿ ಏನು?

By ಪೂರ್ವ

ಅಪೇಕ್ಷಾ, ಜೈ ದೇವ್ ಮದುವೆ ನಿಗದಿ ಆಗುವ ಸಂದರ್ಭ ಬಂದೇ ಬಿಟ್ಟಿದೆ. ಆದರೆ, ಇದನ್ನು ತಡೆಯಲು ಮಾತ್ರ ಯಾರು ಬರುವುದು ಇಲ್ಲ. ಯಾಕೆಂದರೆ ಜೈ ದೇವ್ ಕಂಡರೆ ಅಪೇಕ್ಷಾಗೆ ಚೂರು ಇಷ್ಟವಿಲ್ಲ. ಈ ಮದುವೆ ಆದರೆ ಫ್ಯಾಮಿಲಿ ಚೆನ್ನಾಗಿ ಇರುತ್ತದೆ. ಅವರಿಗೆಲ್ಲ ಬಹಳ ಖುಷಿ ಎಂದೆಲ್ಲ ಅಪೇಕ್ಷಾ ಏನೂ ಮಾತನಾಡದೆ ಸುಮ್ಮನೆ ಇರುತ್ತಾಳೆ. ಮನದಲ್ಲಿ ಬೆಟ್ಟದಷ್ಟು ನೋವು ಇದ್ದರೂ, ಅದೆಲ್ಲವನ್ನೂ ತನ್ನ ಒಡಲಲ್ಲಿ ಮುಚ್ಚಿಕೊಂಡಿರುತ್ತಾಳೆ.

ಆದರೆ, ಪಾರ್ಥನಿಗೆ ಮಾತ್ರ ಆಗಾಗ ಕರೆ ಮಾಡುತ್ತಾ ಇರುತ್ತಾಳೆ. ಜೈ ದೇವ್ ಮಾತ್ರ ಎಲ್ಲಾ ಗೊತ್ತಿದ್ದೂ ಏನು ಗೊತ್ತಿಲ್ಲದ ಹಾಗೆ ನಟನೆ ಮಾಡುತ್ತಾ ಇದ್ದಾನೆ. ಇದನ್ನು ನೋಡಿದ ಆತನ ಮಾವ ಮಾತ್ರ ಮನದಲ್ಲಿಯೇ ಲೆಕ್ಕಾಚಾರ ಹಾಕುತ್ತಾ ಇರುತ್ತಾನೆ.

Amruthadhare serial February 13th Update

ಗೌತಮ್‌ಗೆ ತನ್ನ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದೆ ಎಂದು ಬಹಳ ಖುಷಿ ಆಗಿದೆ. ಅದಕ್ಕಾಗಿ ಆತ ಎಲ್ಲಾ ಕಾರ್ಯಕ್ರಮ ತರಾತುರಿಯಲ್ಲಿ ನಡೆಯಲಿ ಎಂದು ಹೇಳುತ್ತಿರುತ್ತಾನೆ. ಹಾಗೆಯೇ ಇವತ್ತು ಹೂ ಮೂಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥ ಆಗಿ ಬಿಟ್ಟರೆ ಮಾತ್ರ ಎಲ್ಲರಿಗೂ ಬಹಳ ಖುಷಿ ಆಗುತ್ತದೆ ಎಂದು ತಿಳಿದು ಅಪೇಕ್ಷಾಗೆ ಹೂ ಮೂಡಿಸುವ ಶಾಸ್ತ್ರ ಮಾಡುವುದೇಕೆ ಇವತ್ತೇ ನಿಶ್ಚಿತಾರ್ಥ ಮಾಡಿ ಬಿಡೋಣ ಎಂದು ಗೌತಮ್ ಹೇಳುತ್ತಾ ಇರುತ್ತಾನೆ. ಇದನ್ನು ಕೇಳಿದ ಎಲ್ಲರಿಗೂ ಖುಷಿಯಾಗಿ ಸಹಮತದಿಂದ ಒಪ್ಪಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿ ಬಿಡುತ್ತಾರೆ. ಹಾಗೆಯೇ ಅರ್ಚಕರು ಹೇಳಿದ ಪ್ರಕಾರ ಇನ್ನೂ ಒಂದೇ ವಾರದಲ್ಲಿ ಅಪೇಕ್ಷಾ ಜೈದೇವ್ ಮದುವೆ ನಡೆಯಲಿದೆ.

ಆದರೆ, ಭೂಮಿಕಾ ತಾಯಿಗೆ ಕೊಂಚ ಆಘಾತ ಆಗುತ್ತದೆ. ಆ ಬಳಿಗೆ ಬಂದ ಗೌತಮ್ ಹೇಳುತ್ತಾನೆ. "ಅತ್ತೆ ನೀವು ಯಾವುದೇ ತೊಂದರೆ ತೆಗೆದುಕೊಳ್ಳಬೇಡಿ. ನನಗೆ ತಿಳಿದಿದೆ ಮದುವೆ ಮಾಡಲು ಬಹಳ ಕಷ್ಟ ಆಗುತ್ತದೆ ಎಂದು. ದಯವಿಟ್ಟು ಈ ಮದುವೆ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ ಅತ್ತೆ" ಎಂದು ಹೇಳಿದಾಗ ಭೂಮಿಕಾ ತಾಯಿ ಹಿಂದೆ ಮುಂದೆ ನೋಡುತ್ತಾರೆ.

ಭೂಮಿಕಾ ಖುಷಿಗೆ ಸಂತಸ ಪಟ್ಟ ಗೌತಮ್

ಭೂಮಿಕಾ ಮುಖ ನೋಡಿದ ಕೂಡಲೇ ಆಕೆಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ಗೌತಮ್ ನೋಡಿ ಕೂಡ ಭೂಮಿಕಾ ಖುಷಿ ವ್ಯಕ್ತಪಡಿಸುತ್ತಾರೆ. ನನ್ನ ಕುಟುಂಬವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ. ಇದರಿಂದ ಗೌತಮ್‌ಗೆ ಮತ್ತಷ್ಟು ಹುರುಪು ಬಂದಿದೆ. ಇತ್ತ ಮಲ್ಲಿ ಮಾತ್ರ ಜೈ ದೇವ್ ಪ್ರೀತಿಯ ಬಲೆಗೆ ಬಿದ್ದು ಗರ್ಭಿಣಿ ಆಗಿದ್ದು, ಜೈ ದೇವ್ ನಿಶ್ಚಿತಾರ್ಥ ತಿಳಿದು ಮಲ್ಲಿ ಕುಗ್ಗಿ ಹೋಗುತ್ತಾಳೆ.

ಜೈ ದೇವ್ ನಿಶ್ಚಿತಾರ್ಥ ನೋಡಿ ಕಣ್ಣೀರಿಟ್ಟ ಮಲ್ಲಿ

ಮಲ್ಲಿ ಮಾತ್ರ ಜೈ ದೇವ್ ಜೊತೆ ಮಾತನಾಡಬೇಕು ಎಂದುಕೊಂಡು ಪಾರ್ಕ್ ಬಳಿಗೆ ಬರುತ್ತಾಳೆ. ಆ ವೇಳೆ ಭೂಮಿಕಾ ಆಕೆಯ ತಾಯಿ ಬಳಿ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಆಗ ಮಲ್ಲಿ ಪಾರ್ಕ್‌ನತ್ತ ಬರುತ್ತಿರುವುದನ್ನು ನೋಡಿ ಭೂಮಿಕಾ, ಆಕೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಾಳೆ. ಆದರೆ, ಮಲ್ಲಿ ಆದಾಗಲೇ ಜೈ ದೇವ್ ಬಳಿ ಮಾತನಾಡುತ್ತಿರುತ್ತಾಳೆ.

ಮಲ್ಲಿ ನೋವಿಗೆ ಕಾರಣ ತಿಳಿಯುತ್ತಾ?

"ನೀವು ನನ್ನ ಜೊತೆ ಪ್ರೀತಿ ನಾಟಕವಾಡಿ, ಇದೀಗ ನಿಮ್ಮ ಮಗು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ" ಎಂದು ಹೇಳಿದಾಗ ಜೈ ದೇವ್ ಮಾತ್ರ ಅದೆಲ್ಲವನ್ನೂ ತಿರಸ್ಕಾರ ಮಾಡುತ್ತಾನೆ. ಆದರೆ ಮಲ್ಲಿ ಮಾತ್ರ ಅಳುತ್ತಾ ನಿಂತು ಇರುತ್ತಾಳೆ. ಆಗ ಅಲ್ಲಿಗೆ ಬಂದ ಭೂಮಿಕಾ... ಮಲ್ಲಿ ಯಾರ ಬಳಿ ಮಾತನಾಡುತ್ತಾ ಇದ್ದೀಯಾ ಎಂದು ಕೇಳುತ್ತಾಳೆ. ಆದರೆ ಮಲ್ಲಿ ಮಾತ್ರ ಯಾರು ಏನು ಎಂದು ಹೇಳದೆ ಸುಮ್ಮನೆ ಇರುತ್ತಾಳೆ . ಬಳಿಕ ಜೈ ದೇವ್ ಬಗ್ಗೆ ಏನು ಹೇಳದೆ ಅಲ್ಲಿಂದ ಹೋಗುತ್ತಾಳೆ. ಇನ್ನು ಶಕುಂತಲಾ ದೇವಿ ಮಾತ್ರ "ಜೈ ದೇವ್ ಏನಾದರು ನೀನು ಮಾಡಿದ ಹಗರಣಗಳು ಇದ್ದರೆ ಹೇಳಿ ಬಿಡು.. ಅದೆಲ್ಲವನ್ನೂ ನಾನು ಸರಿ ಮಾಡುತ್ತೇನೆ. ಮದುವೆ ನಡೆಯುತ್ತಾ ಇರಬೇಕಾದರೆ ಏನಾದರು ಆದರೆ ಕಷ್ಟ" ಎಂದು ಹೇಳಿದಾಗ ಜೈ ದೇವ್ ಮಾತ್ರ ಏನು ನಡೆದಿಲ್ಲ ಎಂದು ಹೇಳುತ್ತಾನೆ.

More from Filmibeat

English summary
Amruthadhare serial February 13th Update on Jayadev marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X