ಗೌತಮ್‌ಗೆ ಪ್ರಪೋಸ್ ಮಾಡಲು ಹೊರಟ ಭೂಮಿಕಾ; ಅಮ್ಮ ಕೊಟ್ಟ ಸಲಹೆ ಏನು?
ಭೂಮಿಕಾಗೆ ಗೌತಮ್ ಮೇಲೆ ಒಲವಾಗಿದೆ. ಆದರೆ, ಕೊಂಚ ಪ್ರಮಾಣದಲ್ಲಿ ಗೌತಮ್‌ಗೆ ಕೂಡ ಭೂಮಿಕಾ ಮೇಲೆ ಪ್ರೀತಿ ಹುಟ್ಟಿದೆ. ಅದನ್ನು ಹೇಳಿಕೊಳ್ಳಲು ಮುಜುಗರ. ಗೌತಮ್ ಇತ್ತೀಚಿಗೆ ಭೂಮಿಕಾನನ್ನು ನೋಡಿ ದೊಡ್ಡ ಕವಿ ಆಗಿದ್ದಾನೆ. ಮಲ್ಲಿಗೆ ಮುಡಿದುಕೊಂಡಿದ್ದ ಭೂಮಿಕಾಗೆ ತಾವರೆಯಂತೆ ಹೊಳೆಯುವ ಮೋಗದವರಿಗೆ ಮಲ್ಲಿಗೆ ಹೂ ಚೆಂದ ಎಂದು ಹೇಳಿದ್ದಾರೆ. ನನ್ನ ಗಂಡ ಯಾವತ್ತೂ ಈ ರೀತಿ ಕವಿಯ ಹಾಗೆ ಉತ್ತರಿಸುವುದನ್ನು ಯಾವಾಗಿನಿಂದ ಶುರು ಮಾಡಿದರು ಅಂತ ಭೂಮಿಕಾಗೆ ಆಶ್ಚರ್ಯ ತರಿಸಿದೆ.
ಭೂಮಿಕಾ ಮನದಲ್ಲಿ ಗೌತಮ್ ಈ ರೀತಿಯಲ್ಲಿ ಮಾತನಾಡುತ್ತಾರಾ? ಇಷ್ಟು ರೋಮ್ಯಾಂಟಿಕ್ ಆಗಿ ಇದ್ದರಾ? ಎಂದೆಲ್ಲ ಯೋಚನೆ ಮಾಡುತ್ತಿರುತ್ತಾರೆ. ಇನ್ನು ಭೂಮಿಕಾ ತವರು ಮನೆಗೆ ಬರುತ್ತಾಳೆ. ಆಕೆಯ ಮುಖ ಕಳೆ ಗಟ್ಟಿರುವುದನ್ನು ಕಂಡು ಬಹಳ ಖುಷಿಪಡುತ್ತಾರೆ. ಭೂಮಿಕಾ ಎಲ್ಲಿ ತನಕ ಬಂತು ನಿನ್ನ ಹಾಗೂ ನಿನ್ನ ಗಂಡನ ಲವ್ ಸ್ಟೋರಿ ಎಂದಾಗ ಭೂಮಿಕಾಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ನಾಚಿಕೊಳ್ಳುತ್ತಾಳೆ.

ಭೂಮಿಕಾಗೆ ತಾಯಿ ಬೆಂಬಲವಾಗಿ ನಿಂತಿದ್ದಾರೆ. "ನೀನು ಅಳಿಯಂದಿರನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದೀಯ ಎನ್ನುವ ವಿಚಾರ ನನಗೆ ತಿಳಿದು ಬಹಳ ಖುಷಿ ಆಯಿತು" ಎಂದು ಹೇಳಿದಾಗ, ಭೂಮಿಕಾ ತನ್ನ ಮನದಲ್ಲಿರುವ ವಿಚಾರವನ್ನು ಅಮ್ಮನ ಬಳಿ ಹೇಳುತ್ತಾಳೆ. "ನನಗೆ ಗೌತಮ್ ಮೇಲೆ ಇರುವ ಪ್ರೀತಿ ನಿಜ.. ಹಾಗೆಯೇ ಅವರಿಗೆ ಈ ವಿಚಾರವನ್ನು ಹೇಗೆ ಹೇಳಬೇಕು ಎಂದು ತಿಳಿಯದೇ ಸುಮ್ಮನಾದದ್ದು ಇದೆ" ಎಂದು ತನ್ನ ತಾಯಿಯ ಬಳಿ ಮನದ ವೇದನೆಯನ್ನು ಹೇಳುತ್ತಾಳೆ.
ಅಮ್ಮನ ಬಳಿ ಮನದ ಮಾತು ಹೇಳಿಕೊಂಡ ಭೂಮಿಕಾ
ಇನ್ನು ಮುದ್ದು ಮುದ್ದಾಗಿ ಮಾತನಾಡುತ್ತಾ ಇರುವ ಭೂಮಿಕಾಗೆ ಆಕೆಯ ಅಮ್ಮ ರೆಡ್ ರೋಸ್ ಕೊಟ್ಟು ಅಳಿಯಂದಿರಿಗೆ ಪ್ರಪೋಸ್ ಮಾಡು. ಅವರು ಖಂಡಿತವಾಗಿಯೂ ನಿನ್ನ ಪ್ರೀತಿಗೆ ಒಪ್ಪಿಗೆ ನೀಡುತ್ತಾರೆ ಎಂದು ಮನಸ್ಸಿಗೆ ಹುಮಸ್ಸನ್ನು, ಹಾಗೆಯೇ ಧೈರ್ಯವನ್ನು ನೀಡಿ ಕಳುಹಿಸುತ್ತಾರೆ. ಭೂಮಿಕಾ ಆ ರೆಡ್ ರೋಸ್ ಕೈಯಲ್ಲಿ ಹಿಡಿದು ಮನೆಗೆ ಬರುತ್ತಾಳೆ. ಧೈರ್ಯದಿಂದ ಗೌತಮ್‌ಗೆ ಈ ವಿಚಾರವನ್ನು ಹೇಳಲೇಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ.

ಅರ್ಪಿತಾ ಮೇಲೆ ಜೈ ದೇವ್ ಕಣ್ಣು
ಇನ್ನು ಜೈದೇವ್‌ಗೆ ಅರ್ಪಿತಾ ಮೇಲೆ ಒಂದು ಕಣ್ಣು ಇದ್ದೆ ಇತ್ತು. ಹೇಗಾದರೂ ಮಾಡಿ ಅರ್ಪಿತಾಳನ್ನು ನನ್ನವಳನ್ನಾಗಿ ಮಾಡಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ. ಅದಕ್ಕಾಗಿ ಹಲವು ಪ್ಲಾನ್‌ಗಳನ್ನ ಮಾಡಿದ್ದ. ಅದೆಲ್ಲವೂ ಉಲ್ಟಾ ಕೂಡ ಆಗಿತ್ತು. ಆದರೆ, ಅರ್ಪಿತಾ ಹಾಗೂ ಪಾರ್ಥ ಲವ್ ಮಾಡುತ್ತಾ ಇರುವ ವಿಚಾರವನ್ನು ಯಾರ ಬಳಿಯೂ ಕೂಡ ಹೇಳಿಲ್ಲ. ಪಾರ್ಥ, ಅರ್ಪಿತಾಳನ್ನು ಪಿಕಪ್ ಡ್ರಾಪ್ ಮಾಡುತ್ತಿದ್ದ. ಹಾಗೆಯೇ ಇದು ಜೈ ದೇವ್ ಅವರ ಕಣ್ಣಿಗೆ ಕೂಡ ಬಿದ್ದಿದೆ. ಪಾರ್ಥ ಹಾಗೂ ಅರ್ಪಿತಾ ಪ್ರೀತಿ ವಿಚಾರ ಜೈದೇವ್‌ಗೆ ಹೇಗೋ ತಿಳಿದು ಹೋಗಿದೆ.
ಕಿಡಿ ಕಾರುತ್ತಿರುವ ಜೈದೇವ್
ಜೈ ದೇವ್ ಈಗ ಕೋಪದಲ್ಲಿದ್ದಾನೆ. "ನಾನು ಪ್ರೀತಿ ಮಾಡಬೇಕು ಎಂದುಕೊಂಡಿದ್ದ ಹುಡುಗಿಯನ್ನು ಪಾರ್ಥ ಪಾಟಾಯಿಸಿ ಬಿಟ್ಟಿದ್ದಾನೆ" ಎಂದು ಜೈ ದೇವ್ ಮನಸ್ಸಿನೊಳಗೆ ಕುದಿಯುತ್ತಿದ್ದಾನೆ. ಇನ್ನು ಜೈ ದೇವ್ ಇದನ್ನು ಮಾತ್ರ ಮನೆಯವರಿಗೆ ತಿಳಿಸದೆ ಇರಲಾರ ಎಂದು ಎನಿಸುತ್ತಿದೆ. ತಾನು ಮದುವೆ ಆಗಬೇಕು ಎಂದಿದ್ದ ಹುಡುಗಿಯನ್ನು ಪಾರ್ಥ ಜೊತೆ ನೋಡಿ ಕೋಪಗೊಂಡಿದ್ದಾನೆ ಜೈ ದೇವ್. ಹಾಗೆಯೇ ಜೈ ದೇವ್ ಆಗಾಗ ಆ ಕೆಲಸದವರ ಮನೆಗೆ ಹೋಗುತ್ತಿರುವುದು ಅದ್ಹೇಗೊ ಭೂಮಿಕಾಗೆ ತಿಳಿದಿದೆ .
ಕುತಂತ್ರಿ ಜೈ ದೇವ್ ಮಾಡ್ತಿರೋದೇನು?
ಆದರೆ, ಆಕೆಗೆ ಈ ವಿಚಾರ ತಿಳಿದಿದ್ದರು ಕೂಡ ತಿಳಿಯದೇ ಇರುವ ಹಾಗೆ ನಡೆದುಕೊಳ್ಳುತ್ತಾಳೆ. ಜೈದೇವ್ ವಾಚ್ ಕೆಲಸದವರ ಮನೆಯಲ್ಲಿ ಇರಬೇಕಾದರೆ, ಇದು ಹೇಗೆ ಇಲ್ಲಿಗೆ ಬಂತು ಎಂದು ಯೋಚನೆ ಮಾಡುತ್ತಾ ಮನೆಯವರೆಗೆ ಬರುತ್ತಾಳೆ. ಹಾಗೆಯೇ ಇದನ್ನು ಅತ್ತೆಯ ತಮ್ಮನ ಬಳಿ ಹೇಳಿದಾಗ, ಅವರಿಗೂ ಕೂಡ ಬಹಳ ಶಾಕ್ ಆಗುತ್ತದೆ.


Click it and Unblock the Notifications











