Amruthadhare: ಕೊನೆಗೂ ಜಗಳ ಬಿಟ್ಟು ಭೇಟಿಯಾದ ಗೌತಮ್ ಹಾಗೂ ಭೂಮಿಕಾ

By ಪ್ರಿಯಾ ದೊರೆ

ಮನೆಯವರಿಗಾಗಿಯೇ ಮಿಡಿಯುವ ಜೀವಗಳೆರಡು ಈಗ ಒಡಹುಟ್ಟಿದವರ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಗೌತಮ್ ಹಾಗೂ ಭೂಮಿಕಾ ಇಬ್ಬರು ಕೂಡ ಹೊಸ ಸಂಬಂಧವನ್ನು ಬೆಳೆಸಬೇಕಿದೆ.

ಆದರೆ, ಇಬ್ಬರೂ ಸಣ್ಣ ವಿಚಾರಕ್ಕಾಗಿ ಪದೇ ಪದೇ ಜಗಳ ಮಾಡುತ್ತಿದ್ದಾರೆ. ಇದರಿಂದ ಈಗ ಜೀವನ್ ಹಾಗೂ ಮಹಿಮಾ ಪ್ರೀತಿಗೆ ಇವರಿಬ್ಬರ ಜಗಳವೇ ಅಡ್ಡವಾಗಿದೆ.

ಜೀವನ್ ಹಾಗೂ ಮಹಿಮಾ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದನ್ನು ತಿಳಿದ ಮೇಲೆ ಈಗ ಗೌತಮ್ ಮತ್ತು ಭೂಮಿಕಾ ಈ ಜಗಳವನ್ನು ಇಲ್ಲಿಗೆ ಕೊನೆ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ.

Amruthadhare serial June 12th episode written update

ಹೀಗಾಗಿ ಭೂಮಿಕಾ ಮತ್ತೆ ಗೌತಮ್ ಗೆ ಫೋನ್ ಮಾಡಿದ್ದಾಳೆ. ಗೌತಮ್ ಕೂಡ ಸಮಾಧಾನವಾಗಿಯೇ ಮಾತನಾಡಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ, ನೀವೇ ಫೋನ್ ಮಾಡಿದ್ದು, ಒಳ್ಳೆಯದಾಯ್ತು ಎನ್ನುತ್ತಾನೆ. ಕ್ಷಮೆ ಕೇಳಬೇಕು ಕೇಳಿಬಿಡಿ. ನೀವು ಮಾಡಿದ್ದು ತಪ್ಪು ಎಂದು ಹೇಳುತ್ತಿರುತ್ತಾನೆ. ಇದನ್ನೆಲ್ಲಾ ಕೇಳಿದ ಭೂಮಿಕಾಳಿಗೆ ಕೋಪ ಬರುತ್ತದೆ. ಹಾಗಾಗಿ ಭೂಮಿಕಾ ಮತ್ತೆ ಜಗಳ ಮಾಡುತ್ತಾಳೆ. ಕೊಬ್ಬು ನಿಮಗೆ, ಅಹಂಕಾರ, ಆಟಿಟ್ಯೂಡ್ ತುಂಬಾನೇ ಇದೆ ಎಂದು ಹೇಳುತ್ತಾಳೆ. ಮತ್ತೆ ಗೌತಮ್ ಮತ್ತು ಭೂಮಿಕಾ ಮೊದಲಿನಂತೆಯೇ ಜಗಳ ಮಾಡುತ್ತಾರೆ. ಈ ಜಗಳ ನಿಲ್ಲದಷ್ಟು ಜೋರಾಗಿ ಆಡಿ ಕೊನೆಗೆ ಕೋಪದಲ್ಲೇ ಫೋನ್ ಇಡುತ್ತಾರೆ.

ಆದರೆ, ಸ್ವಲ್ಪ ಹೊತ್ತಿಗೆ ಇಬ್ಬರಿಗೂ ಜೀವನ್ ಹಾಗೂ ಮಹಿಮಾ ನೆನಪಾಗುತ್ತದೆ. ನಮ್ಮಿಬ್ಬರ ಜಗಳದಿಂದ ಅವರಿಬ್ಬರಿಗೆ ತೊಂದರೆ ಆಗಬಾರದು. ಕೂಲ್ ಆಗಿ ಮಾತನಾಡಿ, ಮೊದಲು ಜೀವನ್ ಹಾಗೂ ಮಹಿಮಾರ ಮದುವೆ ಮಾಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆಗ ತಮ್ಮನ್ನು ತಾವು ಸಮಾಧಾನ ಮಾಡಿಕೊಂಡು, ಗೌತಮ್ ಫೋನ್ ಮಾಡುತ್ತಾನೆ. ಇಬ್ಬರು ತಮ್ಮ ಉದ್ದೇಶದ ಬಗ್ಗೆ ಚರ್ಚೆ ಮಾಡುತ್ತಾರೆ. ನನಗೆ ನನ್ನ ತಂಗಿ ಮಹಿಮಾ ಅಂದರೆ ಪ್ರಾಣ ಎಂದು ಗೌತಮ್ ಹೇಳಿದರೆ, ಭೂಮಿಕಾ ನನ್ನ ತಮ್ಮ ನನ್ನ ಜೀವ ಎನ್ನುತ್ತಾಳೆ. ಇನ್ನು ಮೀಟ್ ಮಾಡುವ ವಿಚಾರಕ್ಕೆ ಗೌತಮ್ ಫೈವ್ ಸ್ಟಾರ್ ಹೋಟೆಲ್ ಎಂದರೆ, ಭೂಮಿಕಾ ವಿದ್ಯಾರ್ಥಿ ಭವನ ಎನ್ನುತ್ತಾಲೆ. ಇದಕ್ಕೂ ಇಬ್ಬರೂ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಆದರೆ, ತಕ್ಷಣವೇ ಸಮಾಧಾನ ಮಾಡಿಕೊಂಡ ಭೂಮಿಕಾ ಗೌತಮ್ ಮಾತಿಗೆ ಹೂ ಎನ್ನುತ್ತಾಳೆ.

ಇವರಿಬ್ಬರು ಮಾತನಾಡುವುದನ್ನು ಮಂದಾಕಿನಿ ಕದ್ದು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಸಾಧ್ಯವಾಗುವುದಿಲ್ಲ. ಇನ್ನು ಮಂದಾಕಿನಿ ಹಾಗೂ ಅಪೇಕ್ಷಾ ಇಬ್ಬರೂ ಭೂಮಿಕಾಳನ್ನು ಸ್ಟೈಲಿಷ್ ಆಗಿ ರೆಡಿ ಮಾಡುತ್ತಾರೆ. ಭೂಮಿಕಾಳಿಗೆ ಇದೆಲ್ಲವೂ ಇಷ್ಟವಾಗುವುದಿಲ್ಲ. ಮಂದಾಕಿನಿ ಈ ಮದುವೆ ಮಾತುಕತೆಯಾಡುವಾಗ ಹುಷಾರಾಗಿ ಆಡು. ಮತ್ತೆ ಜಗಳ ಮಾಡಿಕೊಳ್ಳಬೇಡ ಎಂದು ಹೇಳಿ ಕಳಿಸುತ್ತಾಳೆ.

ಗೌತಮ್ ರೆಡಿಯಾಗಿ ಹೊರಟಾಗ ಆನಂದ್ ಬಿಡುವುದಿಲ್ಲ. ಇದು ನಿನ್ನ ಬಿಸಿನೆಸ್ ಡೀಲ್ ಅಲ್ಲ. ಮಹಿಮಾಳ ಮದುವೆ ವಿಚಾರವನ್ನು ಮಾತನಾಡಲು ಹೋಗುತ್ತಿದ್ದೀಯಾ. ಸಂಬಂಧ ಬೆಳೆಸಬೇಕು ಎಂದು ಬುದ್ಧಿ ಹೇಳುತ್ತಾನೆ. ಅಲ್ಲದೇ, ಒಂದು ಬಾರಿ ರಿಹರ್ಸಲ್ ಕೂಡ ಮಾಡಿಸುತ್ತಾನೆ. ಆದರೆ, ಗೌತಮ್ ಗೆ ಇದು ಇಷ್ಟವಾಗುವುದಿಲ್ಲ. ನೀನು ಹಾಗೂ ಆ ಹುಡುಗಿ ಭೇಟಿಯಾದಗಲೆಲ್ಲಾ ಜಗಳ ಮಾಡುತ್ತೀರಾ. ಹಾಗಘಾಇ ನೀನು ಸ್ವಲ್ಪ ಕೂಲ್ ಆಗಿ ಮಾತನಾಡು ಎಂದು ಹೇಳುತ್ತಾನೆ. ಇನ್ನು ಭೂಮಿಕಾ ಹೋಟೆಲ್ ಗೆ ಸ್ವಲ್ಪ ತಡವಾಗಿ ಬರುತ್ತಾಳೆ. ಟ್ರಾಫಿಕ್ ನಿಂದ ಲೇಟ್ ಆಯ್ತು ಎಂದು ಹೇಳುತ್ತಾಳೆ. ಇನ್ನು ಗೌತಮ್ ಭೂಮಿಕಾಳ ಬಿಂದಿ ಸೊಟ್ಟ ಆಗಿದೆ ಎಂದು ಇಬ್ಬರೂ ಚರ್ಚೆ ಮಾಡುತ್ತಿರುತ್ತಾರೆ.

More from Filmibeat

English summary
GAUTHAM AND BHOOMIKA SPEAKS COOLY, AND THEY MEET IN HOTEL
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X