Amruthadhare: ಗೌತಮ್ ಭರವಸೆಯ ಮಾತುಗಳಿಗೆ ಭೂಮಿಕಾ ದಿಲ್ ಖುಷ್.. ಈ ಜೋಡಿ ಒಂದಾಗೋದ್ಯಾವಾಗ?

By ಪ್ರಿಯಾ ದೊರೆ

ಗೌತಮ್‌ಗೆ ಹುಡುಗಿಯನ್ನು ತೋರಿಸಲುವ ಸಲುವಾಗಿ ಆನಂದ್ ಹಾಗೂ ಅಪರ್ಣ ಡಿನ್ನರ್ ಪ್ಲಾನ್ ಮಾಡಿರುತ್ತಾರೆ. ಗೌತಮ್ ಇಬ್ಬರಿಗೂ ಬೈಯುತ್ತಾನೆ. ರಶ್ಮಿಕಾಳನ್ನು ಪಿಕ್ ಮಾಡಿಕೊಂಡು ನಾಲ್ವರೂ ಹೋಟೆಲ್‌ಗೆ ಹೋಗುತ್ತಾರೆ.

ಆದರೆ, ಆನಂದ್ ರಶ್ಮಿಕಾಳನ್ನು ನೋಡಿದ ಎಂಬ ಕಾರಣಕ್ಕೆ, ಪೊಸೆಸ್ಸಿವ್‌ನೆಸ್‌ನಿಂದ ಜಗಳ ಮಾಡಿಕೊಂಡು ಹೋಗುತ್ತಾಳೆ. ಆನಂದ್, ಅಪರ್ಣಾಳನ್ನು ಸಮಾಧಾನ ಮಾಡಲು ಮುಂದಕ್ಕೆ ಹೋಗುತ್ತಾನೆ.

Amrithadhare serial written update 31st May Episode

ಕೊನೆಗೆ ಗೌತಮ್ ಹಾಗೂ ರಶ್ಮಿಕಾ ಕೂಡ ಹೋಟೆಲ್‌ಗೆ ಹೋಗುತ್ತಾರೆ. ರಶ್ಮಿಕಾ ತುಂಬಾನೇ ಬೋಲ್ಡ್ ಆಗಿ ಗೌತಮ್ ಜೊತೆ ಮಾತನಾಡುತ್ತಾಳೆ. ಗೌತಮ್ ಹೇಳಿದ್ದಕ್ಕೆಲ್ಲಾ ಸೇಮ್ ಟು ಸೇಮ್ ಹೇಳುತ್ತಾಳೆ. 'ಅಮೃತಧಾರೆ' ಮುಂದೆ ಇಂಟ್ರೆಸ್ಟಿಂಗ್ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ.

ಹುಡುಗಿ ಕಾಟ ತಾಳಲಾರದೆ ಸುಳ್ಳು ಹೇಳಿದ ಗೌತಮ್

ರಶ್ಮಿಕಾ ಒಂದು ಚೂರು ಸೈಲೆಂಟ್ ಆಗಿ ಇರುವುದಿಲ್ಲ. ಹಬ್ಬಿ ಎಂದು ಗೌತಮ್‌ನನ್ನು ಮಾತನಾಡಿಸಲು ಮುಂದಾಗುತ್ತಾಳೆ. ಇದರಿಂದ ಗೌತಮ್‌ಗೆ ಕೋಪದ ಜೊತೆಗೆ ಆತಂಕವೂ ಆಗುತ್ತದೆ. ಹಾಗಾಗಿ ಆತ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾನೆ. ಯಾಕೆ ಎಂದು ಆಕೆ ಕೇಳಿದಾಗ ಆತಂಕ, ಭಯಕ್ಕೆ ಎಂದು ಹೇಳುತ್ತಾನೆ. ಇನ್ನು ಈಕೆ ತನ್ನ ಹಣವನ್ನು ನೋಡಿ ಮದುವೆಯಾಗಲು ಮುಂದಾಗಿದ್ದಾಳೆ ಎಂಬುದನ್ನು ತಿಳಿಯುವ ಗೌತಮ್ ತನ್ನ ಬಿಸಿನೆಸ್ ಲಾಸ್‌ನಲ್ಲಿದೆ. ಇನ್ನೇನು ಬೀದಿಗೆ ಬರುತ್ತೇನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಆ ಹುಡುಗಿ ಹೊರಟು ಹೋಗುತ್ತಾಳೆ. ಇತ್ತ ಆನಂದ್, ಅಪರ್ಣಾಳನ್ನು ಎಷ್ಟೇ ಸಮಾಧಾನ ಮಾಡಿದರೂ ಕೂಡ ವಾಶ್ ರೂಮ್‌ನಿಂದ ಹೊರಗೆ ಬರುವುದಿಲ್ಲ.

Amrithadhare serial written update 31st May Episode

ಹುಡುಗನಿಂದ ಮುಜುಗರಕ್ಕೆ ಒಳಗಾದ ಭೂಮಿಕಾ

ಇತ್ತ ಭೂಮಿಕಾಳನ್ನು ನೋಡಲು ಬರುವ ಹುಡುಗ ಮಾತನಾಡಿಸುತ್ತಾನೆ. ಭೂಮಿಕಾ ಮುಜುಗರದಿಂದ ಮೌನವಾಗಿ ಆತ ಕೇಳಿದ ಪ್ರಶ್ನೆಗಳಿಗೆ ಮಾತ್ರವೇ ಉತ್ತರವನ್ನು ಕೊಡುತ್ತಾಳೆ. ಆದರೆ, ಆತನಿಗೆ ಭೂಮಿಕಾ ಇಷ್ಟವಾಗುವುದಿಲ್ಲ. ಹಾಗಾಗಿ, ನೇರವಾಗಿ ನೀವು ಒಂದು ಜನರೇಷನ್ ಹಿಂದೆ ಇದ್ದೀರಾ. ಹದಿನೈದು ವರ್ಷಗಳ ಹಿಂದೆ ನಿಮ್ಮಂತವರನ್ನು ಬಯಸಿ ಮದುವೆಯಾಗುತ್ತಿದ್ದೆ ಅನಿಸುತ್ತೆ. ಆದರೆ, ಈಗಲ್ಲ. ಈಗ ನನಗೆ ಸೋಶಿಯಲ್ ಆಗಿರುವವರು ಬೇಕು. ಜೀವನವನ್ನು ಎಂಜಾಯ್ ಮಾಡಬೇಕು. ಸದಾ ಪ್ರಯಾಣಿಸಲು ಬಯಸುವವರು ಬೇಕು ಎಂದು ಹೇಳುತ್ತಾನೆ. ಇದರಿಂದ ಮುಜುಗರಕ್ಕೆ ಒಳಗಾದ ಭೂಮಿಕಾ ಸೀದಾ ವಾಶ್ ರೂಮ್‌ಗೆ ಹೋಗಿ ಕಣ್ಣೀರು ಹಾಕುತ್ತಾಳೆ.

ಭೂಮಿಕಾ ಬಳಿ ಸೀಕ್ರೆಟ್ ಹೇಳಿದ ಗೌತಮ್

ವಾಶ್ ರೂಮ್‌ನಲ್ಲಿ ಭೂಮಿಕಾ ಅಳುತ್ತಿರುತ್ತಾಳೆ. ಇನ್ನು ಗೌತಮ್, ಅಪರ್ಣಾಳನ್ನು ಡಾರ್ಲಿಂಗ್ ಎಂದು ಕರೆಯುತ್ತಾನೆ. ಆದರೆ, ಅಲ್ಲಿ ಅಪರ್ಣಾ ಇರುವುದಿಲ್ಲ. ಅಪರ್ಣಾಳನ್ನು ಸಮಾಧಾನ ಮಾಡಿ ಕರೆದುಕೊಂಡು ಬರುತ್ತೇನೆ ಎಂದು ಗೌತಮ್ ವಾಶ್ ರೂಮ್ ಬಳಿ ಬರುತ್ತಾನೆ. ಡಾರ್ಲಿಂಗ್ ಎಂದು ಎರಡು ಮೂರು ಸಲ ಕರೆಯುತ್ತಾನೆ. ಆಗ ಭೂಮಿಕಾ ಗಮನ ಗೌತಮ್ ಧ್ವನಿಯತ್ತ ತಿರುಗುತ್ತದೆ. ಗೌತಮ್ ತನ್ನ ಮದುವೆಯ ಬಗೆಗಿನ ಮನದಾಳದ ಮಾತುಗಳನ್ನು ಆಡುತ್ತಾನೆ.

ಗೌತಮ್‌ಗಾಗಿ ಹುಡುಕಾಡುತ್ತಿರುವ ಭೂಮಿಕಾ

ತನಗೂ ಮದುವೆಯಾಗುವ ಆಸೆ ಇದೆ. ಆದರೆ, ಹುಡುಗಿ ತನ್ನನ್ನು ಅರ್ಥ ಮಾಡಿಕೊಳ್ಳುವಂತಿರಬೇಕು. ಈಗ ತನಗೆ ವಯಸ್ಸಾದ ಕಾರಣ ಯಾರೂ ತನ್ನನ್ನು ಒಪ್ಪುವುದಿಲ್ಲ. ಹಾಗಾಗಿ ಮದುವೆಯಾಗುವ ಆಸೆ ಇದ್ದರೂ ತೋರಿಸಿಕೊಳ್ಳುವುದಿಲ್ಲ ಎನ್ನುತ್ತಾನೆ. ಜೊತೆಗೆ ಆನಂದ್ ಜೊತೆ ಪದೇ ಪದೆ ಕಿತ್ತಾಡಬೇಡ ಎಂದು ಬುದ್ಧಿಯನ್ನು ಹೇಳಿ ಹೊರಡುತ್ತಾನೆ. ಗೌತಮ್ ತನ್ನ ಮದುವೆ ಬಗ್ಗೆ ಹೇಳಿಕೊಂಡ ಮಾತುಗಳು ಭೂಮಿಕಾಳಿಗೆ ಇಷ್ಟವಾಗುತ್ತದೆ. ಆಚೆ ಬಂದು ಹುಡುಕುತ್ತಾಳೆ. ಆದರೆ, ಆತ ಯಾರು ಎಂಬುದು ತಿಳಿಯುವುದಿಲ್ಲ. ಒಂದೇ ಭಾವದ ಜೋಡಿಗಳು ಹೇಗೆ ಒಂದಾಗುತ್ತಾರೆ ಎಂಬುದೇ ಈಗ ಕುತೂಹಲ.

More from Filmibeat

English summary
Zee Kannada Serial Amrithadhare written update 31st May Episode. Goutham and Bhoomika mentality is same. They both may meeting soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X