Amruthadhare: "ಭೂಮಿಕಾ ಬ್ಯೂಟಿಫುಲ್ ಆಗಿದ್ದಾಳೆ".. ಅಂತ ಹೇಳೋಕೆ ಪರದಾಡಿದ ಗೌತಮ್!
ಮಹಿಮಾ ಆಗಾಗ ಮಾಡುವ ಕೆಲ ಅನವಶ್ಯಕ ಹಠ ಮಾಡಿದ್ದರಿಂದ ಜೀವನ್ ಬೇಸತ್ತಿರುತ್ತಾನೆ. ಜೀವನ್‌ಗೆ ಮಹಿಮಾ ಮೇಲೆ ಎಷ್ಟೇ ಪ್ರೀತಿ ಇದ್ದರೂ, ಅವಳ ಹಠ ಅವನಿಗೆ ಬೇಸರವನ್ನು ತಂದಿರುತ್ತದೆ.
ಕೆಲವೊಮ್ಮೆ ಜೀವನ್‌ಗೆ ಕೋಪ ಬಂದರೂ ಕೂಡ ತಡೆದುಕೊಳ್ಳುತ್ತಾನೆ. ಮಹಿಮಾ ಬೇಕಂತಲೇ ಜೀವನ್ ಅನ್ನು ಸುಳ್ಳು ಹೇಳಿ ಪಾರ್ಟಿಗೆ ಕರೆಸಿಕೊಂಡಿರುತ್ತಾಳೆ. ಮಹಿಮಾಗೆ ಏನೋ ಆಗಿದೆ ಎಂದು ಭಯದಿಂದ ಬಂದಿರುತ್ತಾನೆ.
ಆದರೆ, ಮಹಿಮಾ ತನ್ನ ಸ್ವಾರ್ಥಕ್ಕೆ ಕರೆಸಿಕೊಂಡಿದ್ದರಿಂದ ಕೋಪ ಬರುತ್ತದೆ. ಕೋಪದಲ್ಲಿ ಮಹಿಮಾ ಕೆನ್ನೆಗೆ ಹೊಡೆದಿರುತ್ತಾನೆ. ಇದರಿಂದ ಮಹಿಮಾಳಿಗೆ ಸಿಟ್ಟು ಬಂದು ಜೀವನ್‌ನನ್ನು ಮದುವೆಯಾಗಬಾರದು ಎಂದು ತೀರ್ಮಾನ ಮಾಡುತ್ತಾಳೆ.

ಬೇರೆ ಕೆಲಸ ನೋಡಿರುವ ಆನಂದ್
ಆನಂದ್‌ಗೆ ಯುಎಸ್ ಬೇಸ್ಡ್ ಕಂಪನಿಯಿಂದ ಕೆಲಸದ ಆಫರ್ ಬಂದಿರುತ್ತದೆ. ಸಿಇಒ ಆಗುವ ಆಫರ್ ಜೊತೆಗೆ ಒಳ್ಳೆಯ ಸಂಬಳವೂ ಇರುತ್ತದೆ. ಆನಂದ್ ಫೋನ್‌ನಲ್ಲಿ ಈ ಬಗ್ಗೆ ಮಾತನಾಡಿದಾಗ ಅಪರ್ಣಾಳಿಗೆ ಖುಷಿಯಾಗುತ್ತದೆ. ಆ ಕೆಲಸವನ್ನು ಒಪ್ಪಿಕೊಂಡರೆ, ನಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎಂದು ಅಪರ್ಣಾ ಹೇಳುತ್ತಾಳೆ. ಆದರೆ, ಆನಂದ್‌ಗೆ ಗೌತಮ್‌ನನ್ನು ಬಿಟ್ಟು ಹೋಗುವುದು ಇಷ್ಟವಿರುವುದಿಲ್ಲ. ಹಾಗಾಗಿ ಏನು ಮಾಡುವುದು ಎಂದು ಯೋಚಿಸುತ್ತಾನೆ. ಅಪರ್ಣಾ ಕೂಡ ಇದನ್ನೇ ಯೋಚಿಸುತ್ತಾಳೆ. ಬಳಿಕ ಆನಂದ್ ಗೌತಮ್ ಜೊತೆಗೆ ಡ್ರಿಂಕ್ಸ್ ಮಾಡಬೇಕು ಎಂದು ಕೂಲ್ ಡ್ರಿಂಕ್ಸ್ ಬಾಟಲ್‌ನಲ್ಲಿ ಮದ್ಯವನ್ನು ಹಾಕಿಕೊಂಡು ಕುಡಿಯುತ್ತಿರುತ್ತಾನೆ. ಅಷ್ಟರಲ್ಲಿ ಅಪರ್ಣಾ ಬಂದು ಅದನ್ನು ಕುಡಿದು ಬಿಡುತ್ತಾಳೆ. ಇದರಿಂದ ಗೌತಮ್ ಮತ್ತು ಆನಂದ್ ಪೇಚಿಗೆ ಸಿಲುಕುತ್ತಾರೆ.
ಮಗಳಿಗಾಗಿ ಉಡುಗೊರೆ ಕೊಟ್ಟ ಸದಾಶಿವ
ಎಲ್ಲರೂ ಮಲಗಿದ ಮೇಲೆ ಸದಾಶಿವ ಭೂಮಿಕಾಳಿಗಾಗಿ ಉಡುಗೊರೆಯನ್ನು ಕೊಡುತ್ತಾನೆ. ಅವಳಿಗೆ ಹಾಗೂ ಗೌತಮ್‌ಗೆಂದು ವಾಚ್ ತಂದಿರುತ್ತಾರೆ. ಅವನು ನಿವೃತ್ತಿ ಪಡೆದಾಗ ಸಿಕ್ಕ ಗಡಿಯಾರ ಮತ್ತು ಮಗಳಿಗಾಗಿ ಮಾಡಿಸಿದ ಬಳೆ, ನೆಕ್ಲೇಸ್ ಅನ್ನು ಕೊಡುತ್ತಾನೆ. ಅಪ್ಪನ ಪ್ರೀತಿ ಹಾಗೂ ಕಷ್ಟಪಟ್ಟು ಮಾಡಿಸಿದ ಒಡವೆಯನ್ನು ನೋಡಿ ಭೂಮಿಕಾಳಿಗೆ ಅಳು ಬರುತ್ತದೆ. ಅಪ್ಪನ ಶಾಲು ಅನ್ನು ತೆಗೆದುಕೊಂಡು ಇದೊಂದೆ ಸಾಕು ನನಗೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಜೀವನ್ ಬೇಡ ಎಂದ ಮಹಿಮಾ
ಹೀಗಾಗಿ ಜೀವನ್ ಎಂಗೇಜ್‌ಮೆಂಟ್‌ನಲ್ಲಿ ತೊಡಿಸಿದ್ದ ಉಂಗುರವನ್ನು ಬಿಸಾಡುತ್ತಾಳೆ. ಅಣ್ಣ ಗೌತಮ್ ಬಳಿ ಬಂದು ನನಗೆ ಜೀವನ್ ಜೊತೆಗೆ ಮದುವೆ ಬೇಡ ಎಂದು ಹೇಳುತ್ತಾಳೆ. ಜೀವನ್ ತನಗೆ ಹೊಡೆದ ಎಂಬುದನ್ನಷ್ಟೇ ಹೇಳುತ್ತಾಳೆ. ಆದರೆ, ಯಾಕೆ ಹೊಡೆದ, ತನ್ನ ತಪ್ಪೇನು ಎಂಬುದನ್ನು ಹೇಳುವುದಿಲ್ಲ. ತಂಗಿಯನ್ನು ಮುದ್ದಿನಿಂದ ಸಾಕಿರುವ ಗೌತಮ್‌ಗೆ ಕೋಪ ಬರುತ್ತದೆ. ಹಾಗಾಗಿ ಈ ಬಗ್ಗೆ ಮಾತನಾಡಲು ಸರಿ ರಾತ್ರಿಯಲ್ಲೇ ಜೀವನ್ ಮನೆಗೆ ಮಹಿಮಾಳನ್ನು ಕರೆದುಕೊಂಡು ಹೋಗುತ್ತಾನೆ. ಶಕುಂತಲಾ ಹಾಗೂ ಆನಂದ್ ಎಷ್ಟು ಹೇಳಿದರೂ ಗೌತಮ್ ಕೇಳುವುದಿಲ್ಲ.
ಜೀವನ್ ಮನೆಗೆ ಬಂದ ಗೌತಮ್
ನಿಶ್ಚಿತಾರ್ಥ ಆಗಿದೆ ಎಂದ ಮಾತ್ರಕ್ಕೆ ನನ್ನ ತಂಗಿಯ ಜೊತೆಗೆ ಹೀಗೆಲ್ಲಾ ನಡೆದುಕೊಂಡಿರುವುದು ತಪ್ಪು ಎಂಬುದು ಗೌತಮ್ ಭಾವನೆ. ಅಷ್ಟೇ ಅಲ್ಲದೇ, ತನ್ನ ತಂಗಿಯ ತಪ್ಪಿಲ್ಲ ಎಂದು ವಾದಿಸುತ್ತಾನೆ. ಸೀದಾ ಜೀವನ್ ಮನೆಗೆ ಬಂದು ಬೆಲ್ ಮಾಡಿದಾಗ ಸದಾಶಿವ ಬಾಗಿಲು ತೆರೆಯುತ್ತಾನೆ. ಬೀಗರನ್ನು ನೋಡಿ ಗಾಬರಿಯೂ ಆಗುತ್ತಾನೆ. ಆದರೆ, ಗೌತಮ್ ನಾನು ಜೀವನ್ ಬಳಿ ಮಾತನಾಡಬೇಕು ಎಂದು ಕೋಪದಲ್ಲಿ ಹೇಳುತ್ತಾನೆ. ತಕ್ಷಣವೇ ಜೀವನ್ ಬರುತ್ತಾನೆ. ಆಗ ಗೌತಮ್‌ಗೆ ತನ್ನ ತಂಗಿಯ ತಪ್ಪಿನ ಅರಿವಾಗುತ್ತದೆಯಾ..? ಜೀವನ್ ನಡೆದದ್ದನ್ನು ಹೇಳಿದರೆ ಏನಾಗುತ್ತೆ..? ಇಲ್ಲ ಈ ಮದುವೆ ಇಲ್ಲಿಗೆ ಮುರಿದು ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











