Amruthadhare: ಮಂದಾಕಿನಿ ಕುಟುಂಬವನ್ನು ಗೌತಮ್ ಶಪಿಸಲು ಕಾರಣವೇನು..?
ತನ್ನದೇ ಭಾವನೆಗಳಿರುವ ಜನರು ಇದ್ದಾರೆ ಎಂಬುದನ್ನು ತಿಳಿದ ಮೇಲೆ ಭೂಮಿಕಾಳಿಗೆ ಖುಷಿಯಾಗಿದೆ. ಹೋಟೆಲ್‌ನಲ್ಲಿ ಗೌತಮ್, ಭೂಮಿಕಾ ಬಳಿ ಶೇರ್ ಮಾಡಿಕೊಂಡಿದ್ದರಿಂದ ಭೂಮಿಕಾ ರಿಲ್ಯಾಕ್ಸ್ ಆಗಿದ್ದಾಳೆ.
ಭೂಮಿಕಾ ವಾಕಿಂಗ್ ಮಾಡುತ್ತಾ ಸದಾಶಿವನ ಬಳಿ ಖುಷಿಯಿಂದಲೇ ಮಾತನಾಡುತ್ತಾಳೆ. ಹೋಟೆಲ್‌ನಲ್ಲಿ ಗೌತಮ್ ಸಿಕ್ಕಿದ್ದು, ಮುಖ ನೋಡದೇ ಮಾತನಾಡಿದ್ದನ್ನು ಹಂಚಿಕೊಳ್ಳುತ್ತಾಳೆ.

ಸದಾಶಿವ ಮಗಳ ಜೊತೆಗೆ ಮಾತನಾಡಿ ಕೊನೆಗೆ ನಿನ್ನ ಮದುವೆ ಮಾಡುವುದೇ ನನ್ನ ಕೊನೆಯ ಆಸೆ ಎಂದು ಹೇಳುತ್ತಾನೆ. ಭೂಮಿಕಾ ಇದಕ್ಕೆ ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ. ನೀವು ತೋರಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ.
ತಂದೆಯ ಕಾರ್ಯ ಮಾಡಲು ಮುಂದಾದ ಗೌತಮ್
ಇತ್ತ ಗೌತಮ್ ಅವರ ತಾಯಿ ಬಳಿ ಹೋಗಿ ನಾಳೆ ಅಪ್ಪನ ಕಾರ್ಯ ನಿಮಗೆಲ್ಲಾ ನೆನಪಿದೆಯಾ ಎಂದು ಕೇಳುತ್ತಾನೆ. ಶಕುಂತಲಾ ಸತ್ಯವನ್ನು ಒಪ್ಪಿಕೊಳ್ಳಲಾಗದೇ, ಕಾರ್ಯಕ್ಕೆ ಶಾಸ್ತ್ರಿಗಳ ಜೊತೆಗೆ ಮಾತನಾಡಿ, ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳುತ್ತಾಳೆ. ಇದರಿಂದ ಖುಷಿ ಪಡುವ ಗೌತಮ್ "ಅಪ್ಪ ನಮ್ಮನ್ನು ಬಿಟ್ಟು ಹೋಗಿ 22 ವರ್ಷವಾಯ್ತು. ಅದೇ ದಿನ ನೀವೆಲ್ಲಾ ಈ ಮನೆಗೆ ಬಂದಿದ್ದು" ಎಂದು ಖುಷಿಯಿಂದ ಹೇಳಿ ಹೋಗುತ್ತಾನೆ. ಆದರೆ, ಶಕುಂತಲಾ ಜಯದೇವನಿಗೆ ಫೋನ್ ಮಾಡಿ ನಾಳಿನ ಕಾರ್ಯಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಹೇಳುತ್ತಾಳೆ. ಶಕುಂತಲಾ ಗೌತಮ್ ಎದುರಿಗೆ ಬಹಳ ನಾಟಕ ಮಾಡುತ್ತಾಳೆ.

ಭೂಮಿಕಾಳನ್ನು ಅನುಮಾನಿಸಿದ ಶೃತಿ
ಇನ್ನು ಮನೆಯಿಂದ ಕೋಚಿಂಗ್ ಕ್ಲಾಸ್‌ಗೆ ಭೂಮಿಕಾ ಹೊರಟಿರುತ್ತಾಳೆ. ಲಫ್ಟ್‌ನಲ್ಲಿ ಹೋಗುವಾಗ ಭೂಮಿಕಾ ಹಳೆಯ ಪ್ರೇಮಿಯೂ ಬರುತ್ತಾನೆ. ಇದರಿಂದ ಭೂಮಿಕಾಳಿಗೆ ಗಾಬರಿಯಾಗುತ್ತದೆ. ಮಧ್ಯದಲ್ಲಿ ಕರೆಂಟ್ ಹೋಗಿ ಲಿಫ್ಟ್ ನಿಂತು ಬಿಡುತ್ತದೆ. ಆಗ ಭೂಮಿಕಾ ತುಂಬಾ ಗಾಬರಿಯಾಗುತ್ತಾಳೆ. ಕೆಳಗಡೆ ಶೃತಿ ತನ್ನ ಪತಿಗಾಗಿ ಕಾಯುತ್ತಿರುತ್ತಾಳೆ. ಭೂಮಿಕಾ ಮತ್ತು ಅವಳ ಪತಿ ಒಟ್ಟಿಗೆ ಬಂದಿದ್ದನ್ನು ನೋಡಿ ಅನುಮಾನಿಸುತ್ತಾಳೆ. ನಂತರ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಭೂಮಿ, ನಾವು ಹೊಸ ಅಪಾರ್ಟ್‌ಮೆಂಟ್‌ಗೆ ಹೋಗುತ್ತಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಮಂದಾಕಿನಿ ಈಗಾಗಲೇ ನನ್ನ ಮಗಳಿಗೆ ನೋವು ಮಾಡಿದ್ದಲ್ಲದೇ, ಈಗ ಹೊಸ ಅಪಾರ್ಟ್‌ಮೆಂಟ್ ಅಂತ ಜಂಬ ಮಾಡಬೇಡ ಎಂದು ಬೈದು ಕಳಿಸುತ್ತಾಳೆ.
ಆಕ್ಸಿಡೆಂಟ್ ಆಗಿದ್ದಕ್ಕೆ ಜಗಳ
ಭೂಮಿಕಾ ಹಾಗೂ ಮಂದಾಕಿನಿ ಕಾರಿನಲ್ಲಿ ಹೋಗುತ್ತಿರುತ್ತಾರೆ. ಇತ್ತ ತಂದೆಯ ಕಾರ್ಯ ಮಾಡಲು ತಡವಾದ ಕಾರಣ ಗೌತಮ್ ಕೂಡ ಫಾಸ್ಟ್ ಆಗಿ ಹೋಗುತ್ತಿರುತ್ತಾರೆ. ಆಗ ಮಂದಾಕಿನಿ ಹಾಗೂ ಗೌತಮ್ ಕಾರು ಟಚ್ ಆಗುತ್ತದೆ. ಇದರಿಂದ ಮಂದಾಕಿನಿ ರಸ್ತೆಯಲ್ಲಿ ದೊಡ್ಡ ರಂಪ ಮಾಡುತ್ತಾಳೆ. ಬೇಗ ಹೋಗಬೇಕು ಬಿಡಿ ಎಂದರೂ ಕೇಳುವುದಿಲ್ಲ. ಎರಡು ಲಕ್ಷ ರೂಪಾಯಿ ಪರಿಹಾರ ಅನ್ನು ಕೇಳುತ್ತಾಳೆ. ಆದರೆ, ಇತ್ತ ಗೌತಮ್ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಶಕುಂತಲಾ ಕಾರ್ಯವನ್ನು ಜಯದೇವನ ಕೈಯಲ್ಲಿ ಮಾಡಿಸುತ್ತಾಳೆ.
ಭೂಮಿಕಾ ಕುಟುಂಬದ ಮೇಲೆ ಗೌತಮ್ ಸಿಡಿಮಿಡಿ
ಈ ವಿಚಾರ ತಿಳಿದ ಗೌತಮ್‌ಗೆ ನೋವಾಗುತ್ತದೆ. ಕಳೆದ 22 ವರ್ಷಗಳಿಂದ ತನ್ನ ತಂದೆಯ ಕಾರ್ಯವನ್ನು ಮಾಡಿಕೊಂಡು ಬಂದದ್ದನ್ನು ಮಂದಾಕಿನಿ ತಪ್ಪಿಸಿ ಬಿಟ್ಟಳು ಎಂದು ಕೋಪ ಬರುತ್ತದೆ. ಹಾಗಾಗಿ ಹಣವನ್ನೂ ಕೊಡುವುದಿಲ್ಲ ಎಂದು ಹೇಳಿ, ಇವತ್ತು ನಿಮ್ಮಿಂದ ನನಗಾದ ಅನ್ಯಾಯಕ್ಕೆ ನಿಮ್ಮ ಕುಟುಂಬ ನೆಮ್ಮದಿ ಇಲ್ಲದಂತೆ ಮಾಡುತ್ತೇನೆ ಎಂದು ಹೇಳಿ ಬರುತ್ತಾನೆ. ಹಾಗಾದರೆ, ಎರಡೂ ಕುಟುಂಬಗಳು ಜಗಳದಲ್ಲೇ ಭೇಟಿಯಾಗಿದ್ದು, ಮುಂದೆ ಏನಾಗುತ್ತದೋ ಎಂಬ ಕುತೂಹಲ ಮೂಡಿದೆ.


Click it and Unblock the Notifications











