'ಹಿಟ್ಲರ್ ಕಲ್ಯಾಣ' ಧಾರಾವಾಹಿ ನೋಡಿ ಬೇಸತ್ತ ವೀಕ್ಷಕರಿಗೆ ಗುಡ್ ನ್ಯೂಸ್ ?
ಜೀ ವಾಹಿನಿಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಇದೀಗ ಜನರಿಗೆ ಬೋರಿಂಗ್ ಎನಿಸುತ್ತಿದೆ. ಕಥೆಯಲ್ಲಿ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದ ಅಂತರಾ ವಾಪಸ್ ಬಂದಿರೋದು ಶಾಕ್ ತಂದಿದೆ. ಹಾಗಾದರೆ ಅಂತರಾ ಎಲ್ಲಿದ್ದಳು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ ಕೂಡ. ಎಜೆ ಎರಡನೇ ಮದುವೆ ಆಗಿರುವಾಗ ಅಂತರಾ ಕಥೆಯಲ್ಲಿ ಬರುವ ಯೋಚನೆ ಯಾಕೆ ಬಂತು ಗೊತ್ತಾಗಲಿಲ್ಲ.
ಇತ್ತೀಚಿನ ದಿನಗಳಲ್ಲಿ ಲೀಲಾ ದೊಡ್ಡ ತ್ಯಾಗಮಯಿಯ ಹಾಗೆ ತನ್ನ ಗಂಡನನ್ನು ಮೊದಲನೇ ಹೆಂಡತಿಗೆ ಬಿಟ್ಟು ಕೊಟ್ಟು ತಾನು ದೊಡ್ಡ ತ್ಯಾಗಿ ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಈ ಧಾರಾವಾಹಿ ನೋಡಲು ಜನರು ಅಷ್ಟಾಗಿ ಇಷ್ಟ ಪಡುತ್ತಿಲ್ಲ. ಆರಂಭದಲ್ಲಿ ಜನರ ಮನಸನ್ನು ಹಿಡಿದು ಇಟ್ಟುಕೊಳ್ಳುವ ಪ್ರಯತ್ನ ಮಾಡಿತ್ತು ಹಿಟ್ಲರ್ ಕಲ್ಯಾಣ. ಆದರೆ ಬರು ಬರುತ್ತಾ ಬಹಳ ಬೋರ್ ಎನಿಸುತ್ತಿದೆ.

ಇನ್ನು ಲೀಲಾ ಮಾತ್ರ ಅಂತರಾ ಬಳಿ ತಾನು ಏಜೆ ಹೆಂಡತಿ ಎಂದು ಹೇಳಲು ಹಿಂದೇಟು ಹಾಕುತ್ತಾ ಇದ್ದಾಳೆ. ಕಾರಣ ಇಷ್ಟೇ ಎಲ್ಲಿ ತನ್ನಿಂದ ಆಗಿ ಅಂತರಾ ಹಾಗೂ ಏಜೆ ದೂರ ಆಗಿ ಬಿಡುತ್ತಾರೋ ಎನ್ನುವ ಭಯ. ಏಜೆಗೆ ಲೀಲಾ ಪ್ರೀತಿ ಕಾಣುತ್ತಲೇ ಇಲ್ವಾ? ಇದುವರೆಗೂ ಲೀಲಾ ಮೇಲೆ ಏಜೆಗೆ ಲವ್ ಆಗಿಲ್ವಾ ಎಂದೆಲ್ಲ ಜನರು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಉತ್ತರಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು ಎನ್ನುವುದು ವೀಕ್ಷಕರ ಪ್ರಶ್ನೆ.

ಅಭಿಮಾನಿಗಳಲ್ಲಿ ಮೂಡಿದ ಅನುಮಾನ
ಇನ್ನು ಇದೀಗ ಮೇ 29ರಿಂದ ಸೋಮವಾರದಿಂದ ಸಂಜೆ 7ಕ್ಕೆ 'ಅಮೃತಧಾರೆ' ಸೀರಿಯಲ್ ಪ್ರಸಾರವಾಗಲಿದೆ. ಅದಕ್ಕೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಮುಕ್ತಾಯವಾಗುತ್ತಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ. ಯಾಕೆಂದರೆ ಅದೇ ಸಮಯದ'ಹಿಟ್ಲರ್ ಕಲ್ಯಾಣ' ಧಾರಾವಾಹಿ ಪ್ರಸಾರ ಆಗುತ್ತಿದೆ. ಆ ಕಾರಣಕ್ಕೆ ಇದೀಗ ಎಲ್ಲರಲ್ಲೂ ಕೊಂಚ ಅನುಮಾನ ಮೂಡಿದೆ.
ಕುತೂಹಲ ಕೆರಳಿಸಿದ ಅಮೃತಧಾರೆ
ಇದೀಗ ಮೇ 29ರಂದು ಪ್ರಸಾರ ಆಗಲಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಯಾಗಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ನಟರಾಗಿ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೊಮೋವೊಂದನ್ನು ಹರಿ ಬಿಟ್ಟಿದ್ದಾರೆ. ಪ್ರೋಮೋ ನೋಡಿದವ ವೀಕ್ಷಕರಲ್ಲಿ ಧಾರಾವಾಹಿ ನೋಡಬೇಕು ಎನ್ನುವ ಕಾತುರ ಹೆಚ್ಚಾಗಿದೆ.
ಪ್ರೋಮೋ ನೋಡಿದ ಜನ ಫಿದಾ
ಪ್ರೋಮೊದಲ್ಲಿ ನಾಯಕ ಹಾಗೂ ನಾಯಕಿ ನಟಿ ಇಬ್ಬರು ಕಿತ್ತಾಡುತ್ತ ಇರುತ್ತಾರೆ. ಇಬ್ಬರ ನಡುವೆ ಅದು ಹೇಗೆ ಪ್ರೀತಿ ಚಿಗುರೊಡೆಯುತ್ತೆ ಎಂಬುವುದನ್ನು ಜನರು ನೋಡಲು ಕಾತುರರಾಗಿದ್ದಾರೆ. ಇನ್ನು 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಕಥೆ ಮುಗಿಯುತ್ತೋ ಅಥವಾ ಸಮಯ ಬದಲಿಸಿ ಧಾರಾವಾಹಿ ಪ್ರಸಾರ ಮಾಡುತ್ತಾರಾ ಎಂದು ಕಾದುನೋಡಬೇಕಿದೆ. 'ಅಮೃತ ಧಾರೆ' ಧಾರಾವಾಹಿ ಪ್ರೋಮೋ ಮೂಲಕ ಸಖತ್ ಸದ್ದು ಮಾಡುತ್ತಿದೆ.
ಕಥೆಯಲ್ಲಿ ಇಬ್ಬರು ಕೂಡ ಒಂಟಿಯಾಗಿ ಜೀವನ ಸಾಗಿಸುತ್ತಾ ಇರುತ್ತಾರೆ. ನಾಯಕ ನಟ ಹಾಗೆಯೇ ನಾಯಕಿ ನಟ ಇಬ್ಬರು ವೀಕ್ಷಕರನ್ನು ಮನೋರಂಜನೆ ನೀಡಲು ಬರುತ್ತಿದ್ದಾರೆ. ಹಾಗೆಯೇ ಇವರಿಬ್ಬರ ನೋವಿನ ಕಥೆಯನ್ನು ಈ ಧಾರವಾಹಿ ಮೂಲಕ ತೋರಿಸಲಾಗುತ್ತದೆ.


Click it and Unblock the Notifications











