Amruthadhare ; ಜೈದೇವ್‌ಗೆ ಚಳ್ಳೆಹಣ್ಣು ತಿನ್ನಿಸಿದ ಹೆಬ್ಬೆಟ್ ಅಜ್ಜಿ-ಮುಳುವಾಗುತ್ತಾ ಮಿಂಚು ಮಾಡಿದ ಎಡವಟ್ಟು?
''ಅಮೃತಧಾರೆ'' ಧಾರಾವಾಹಿಯಲ್ಲಿ ಒಡೆದ ಮನಸುಗಳನ್ನ ಅಜ್ಜಿ ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಅನಾರೋಗ್ಯದ ಡ್ರಾಮಾ ಮಾಡಿ ತನ್ನ ಬಳಿ ಭಾಗ್ಯಮ್ಮ ಸಹಾಯದಿಂದ ಕರೆಸಿಕೊಂಡಿದ್ದಾಳೆ. ಅಜ್ಜಿಯ ಆಸೆ ಈಡೇರಿಸಲು ಗೌತಮ್ ಮತ್ತು ಭೂಮಿಕಾ ತಮ್ಮ ಮಕ್ಕಳಾದ ಆಕಾಶ್ ಮತ್ತು ಮಿಂಚು ಜೊತೆ ಬಂದಿದ್ದು ಅಜ್ಜಿ ನೆನಪಿಗಿರಲಿ ಎಂದು ಫೋಟೋಗ್ರಾಫರ್‌ನ ಕರೆಸಿಕೊಂಡು ಗ್ರೂಪ್ ಫೋಟೊ ತೆಗೆಸಿಕೊಂಡಿದ್ದಾಳೆ. ತೊಳೆದುಕೊಂಡು ತಂದು ಕೊಡುವಂತೆ ಹೇಳಿದ್ದಾಳೆ.
ಇಷ್ಟೇ ಅಲ್ಲ ತಲೆ ಉಪಯೋಗಿಸಿ ನಾಲ್ಕು ಜನರನ್ನು ಒಂದೇ ಕೋಣೆಯಲ್ಲಿ ಮಲಗುವಂತೆ ಮಾಡಿದ್ದಾಳೆ. ಅಜ್ಜಿಯ ಮಾತಿಗೆ ಇಲ್ಲ ಎನ್ನಲಾರದೇ ಗೌತಮ್ ಮತ್ತು ಭೂಮಿಕಾ ಒಂದೇ ರೂಮ್‌ನಲ್ಲಿದ್ದು, ಅಜ್ಜಿ ಖುಷಿಗೋಸ್ಕರ ಗೌತಮ್ ಕೂಡ ಒಂದು ಪ್ಲ್ಯಾನ್ ಮಾಡಿದ್ದಾನೆ. ಅಜ್ಜಿಯನ್ನು ನಮ್ಮ ಜೊತೆ ವಠಾರಕ್ಕೆ ಕರೆದುಕೊಂಡು ಹೋಗೋಣ, ಈ ನಾಟಕವನ್ನು ನಾವು ಅಲ್ಲಿಯೂ ಮುಂದುವರೆಸೋಣ ಎಂದು ಭೂಮಿಕಾ ಬಳಿ ಗೌತಮ್ ಕೇಳುತ್ತಾನೆ. ಬಲವಂತ ಮಾಡ್ತಿಲ್ಲ, ಕೊನೆಗಾಲದಲ್ಲಿ ಅಜ್ಜಿ ನೆಮ್ಮದಿಯಾಗಿರಬಹುದಲ್ಲ ಎಂದು ಕೇಳುತ್ತಿದ್ದೇನೆ ಅಷ್ಟೇ ಎನ್ನುತ್ತಾನೆ.

ಗೌತಮ್ ಮಾತುಗಳನ್ನು ಕೇಳಿ ಕೋಪ ಮಾಡಿಕೊಳ್ಳುವ ಬದಲು ಈ ಬಾರಿ ಭೂಮಿಕಾ ಕೂಡ ಒಳಗೊಳಗೆ ಖುಷಿಯಾಗಿದ್ದು, ನೀವು ಹೇಳುತ್ತಿರುವುದು ಸಮಂಜಸವಾಗಿದೆ. ಅಜ್ಜಿಗೋಸ್ಕರ ಮಾಡೋಣ ಎಂದು ಹೇಳುತ್ತಾಳೆ. ನಾವೆಲ್ಲರೂ ಜೊತೆಯಲ್ಲಿದ್ದರೆ ಅಜ್ಜಿ ಬೇಗ ಹುಷಾರಾಗಬಹುದು ಹಾಗೇ ಮಾಡೋಣ ಎನ್ನುತ್ತಾಳೆ.
ಭೂಮಿಕಾ ಮಾತು ಕೇಳಿ ನಿರಾಳವಾಗು ಗೌತಮ್ ಅಜ್ಜಿಯನ್ನು ಮನೆಗೆ ಕರೆಯುತ್ತಾನೆ. ಆದರೆ ಅಜ್ಜಿ ಬರಲು ಒಪ್ಪುವುದಿಲ್ಲ.ಬದಲಿಗೆ ನೀವೆ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಬಂದು ನನ್ನ ನೋಡಿಕೊಂಡು ಹೋಗಿ ಎಂದು ಹೇಳುತ್ತಾಳೆ. ಆಕಾಶ್ ಮತ್ತು ಮಿಂಚು ಹಠ ಮಾಡಿದರೂ ಅಜ್ಜಿ ಒಪ್ಪಲ್ಲ. ಬದಲಿಗೆ ಹೊರೆಯಾಗುವುದು ನನಗೆ ಇಷ್ಟ ಇಲ್ಲ ಎನ್ನುತ್ತಾಳೆ. ಈ ವಿಷಯದಲ್ಲಿ ಒತ್ತಾಯ ಮಾಡಬೇಡಿ ಎಂದು ಗೌತಮ್-ಭೂಮಿಕಾ ಮತ್ತು ತನ್ನ ಮೊಮ್ಮಕ್ಕಳಿಗೆ ಆಶೀರ್ವಾದ ಮಾಡಿ ಕಳುಹಿಸುತ್ತಾಳೆ.
ಅಜ್ಜಿಯ ಆಶೀರ್ವಾದ ಪಡೆದು ಎಲ್ಲರು ಹೊರ ಬಂದಿದ್ದಾರೆ. ಆದರೆ ಮಿಂಚು ಯಡವಟ್ಟು ಮಾಡಿದ್ದು ಹೊರಗಡೆ ಬರುವಾಗ ಭೂಮಿಕಾ, ಮಲ್ಲಿ ಜೊತೆ ಆಕಾಶ್ ತೆಗೆಸಿಕೊಂಡಿದ್ದ ಫೋಟೊವನ್ನು ಕೆಳಗೆ ಬಿಳಿಸಿದ್ದಾಳೆ. ಇನ್ನೊಂದು ಕಡೆ ಅಜ್ಜಿ ಆಸ್ತಿ ಮೇಲೆ ಕಣ್ಣಾಕಿದ್ದ ಜೈದೇವ್ ಅಜ್ಜಿ ಬಳಿ ಮೋಸದಿಂದ ಬಾಂಡ್ ಪೇಪರ್‌ಗೆ ಹೆಬ್ಬೆಟ್ಟು ಹಾಕಿಸಿಕೊಂಡಿದ್ದ. ಆದರೆ ಜೈದೇವ್ ನ ಹಲವರು ಕಿಲಾಡಿ ಎಂದುಕೊಂಡರು ಕೂಡ ತಲೆಯಲ್ಲಿ ನಯಾಪೈಸೆ ಬುದ್ದಿ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಪ್ಪಾಗಿ ಬಲಗೈ ಹೆಬ್ಬೆಟ್ಟಿನ ಗುರುತನ್ನು ಜೈದೇವ್ ಹಾಕಿಸಿಕೊಂಡಿದ್ದಾನೆ. ಕೊನೆಗೆ ತಪ್ಪಿನ ಅರಿವಾಗಿ ಮತ್ತೆ ಹೆಬ್ಬೆಟ್ಟು ಹಾಕಿಸಿಕೊಳ್ಳಬೇಕು ಎಂದು ಅಜ್ಜಿ ಹತ್ತಿರ ಬಂದಿದ್ದಾನೆ.
ಆದರೆ ಅಜ್ಜಿ ಜಗತ್ ಕಿಲಾಡಿ. ಹೆಬ್ಬೆಟ್ಟು ಹಾಕಿಸಿಕೊಳ್ಳಲು ಬಂದ ಜೈದೇವ್‌ಗೆ ಅಜ್ಜಿ ಶಾಕ್ ನೀಡಿದ್ದು ನನ್ನ ಎಲ್ಲ ಆಸ್ತಿಯನ್ನು ಗೌತಮ್‌ಗೆ ಬರೆದಾಗಿದೆ, ನೀನು ಏನೂ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದಿದ್ದಾಳೆ. ಎಂಥ ದಡ್ಡ ಇದೀಯೋ ನೀನು ಯಾವ ಬೆರಳು ಒತ್ತಿಸಿಕೊಳ್ಳಬೇಕು ಎನ್ನುವುದು ಕೂಡ ನಿನಗೆ ಗೊತ್ತಿಲ್ಲವಲ್ಲ ಎಂದು ನಗಾಡುತ್ತಾಳೆ. ನಿನ್ನ ಕೈಗೆ ಚಿಪ್ಪೇ ಗತಿ, ನಿನ್ನ ನೋಡಿದರೆ ಪಾಪ ಅನ್ಸುತ್ತೆ ಎಂದು ಹೇಳುತ್ತಾಳೆ. ನೀನು ಏಲು ಕೇರಿ ನೀರು ಕುಡಿದಿರಬಹುದು ನಾನು ನೂರು ಕೆರೆ ಕಟ್ಟಿಸಿದವಳು ಎಂದು ಗುಡುಗುತ್ತಾಳೆ. ನನ್ನ ಆಸ್ತಿ ಏನೇ ಇದ್ದರೂ ನನ್ನ ಮೊಮ್ಮಗ ಗೌತಮ್‌ಗೆ ಸಿಗಬೇಕು, ಅವನೇ ನಿಜವಾದ ವಾರಸ್ದಾರ ಎಂದು ಹೇಳುತ್ತಾಳೆ.

ಸದ್ಯ ಜೈದೇವ್ ಇಂಗು ತಿಂದ ಮಂಗನಂತಾಗಿದ್ದಾನೆ. ಆದರೆ ಇದೇ ಸಮಯದಲ್ಲಿ ಗೌತಮ್ ಮತ್ತು ಭೂಮಿಕಾ ಸಮಸ್ಯೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಯಾಕೆಂದರೆ ಜೈದೇವ್ ಸುಮ್ಮನೆ ಕೂರುವನಲ್ಲ. ಇನ್ನು ಮಿಂಚು ಫೋಟೊವನ್ನು ಅಲ್ಲಿಯೇ ಬೀಳಿಸಿದ್ದು ಆ ಫೋಟೊ ಜೈದೇವ್ ಕೈಗೆ ಸಿಕ್ಕರೆ ಭೂಮಿಕಾ ಮಗನೇ ಆಕಾಶ್ ಎನ್ನುವ ವಿಚಾರ ಜೈದೇವ್‌ಗೆ ಗೊತ್ತಾಗುತ್ತೆ. ಆಗ ಗೌತಮ್‌ನ ತನ್ನ ಬಳಿ ಕರೆಸಿಕೊಳ್ಳಲು, ಅಜ್ಜಿಯ ಆಸ್ತಿ ಹೊಡೆಯಲು ಆಕಾಶ್‌ನ ಜೈದೇವ್ ಕಿಡ್ನ್ಯಾಪ್ ಮಾಡಿದರು ಮಾಡಬಹುದು. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











