Amruthadhaare ; ಮಲ್ಲಿ ಮೇಲೆ ಮುಗಿ ಬಿದ್ದ ಜೈದೇವ್ ಪುಡಿ ರೌಡಿಗಳು- ಘರ್ಜಿಸಿದ ಗೌತಮ್ ದಿವಾನ್

''ಅಮೃತಧಾರೆ'' ಧಾರಾವಾಹಿಯಲ್ಲಿ ಜೈದೇವ್ ಬಳಿ ಎಲ್ಲವೂ ಇದೆ. ಆದರೂ ನೆಮ್ಮದಿ ಇಲ್ಲ. ಮಲ್ಲಿಯನ್ನೂ ಬಿಡದೇ ಕಾಡುತ್ತಿರುವ ಜೈದೇವ್ ಸದ್ಯ ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಹಿಂಸೆ ಕೊಡಲು ಶುರು ಮಾಡಿದ್ದಾನೆ. ಪರೀಕ್ಷೆಯ ಹಿಂದಿನ ದಿನ ಕರೆಂಟ್ ಕಾಟ ಮಾಡಿದ್ದಾನೆ. ಆಗ ಕಾರಿನಲ್ಲಿ ಕುಂತು ಓದಿಕೊಳ್ಳುವಂತೆ ಭೂಮಿಕಾ ಹೇಳಿದ್ದು ಅಲ್ಲಿಯೂ ಬಂದು ಜೈದೇವ್ ಕಾಡಿದ್ದಾನೆ. ತನ್ನ ಹುಡುಗರಿಗೆ ಕಾರಿನ ಮೇಲೆ ಕಲ್ಲು ತೂರುವಂತೆ ಹೇಳಿದ್ದಾನೆ.

ಇದರಿಂದ ಕೆರಳಿದ ಮಲ್ಲಿ ಕಾರಿಂದ ಹೇಳಿ ಅವಾಜ್ ಹಾಕಿದ್ದು ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಹೇಳಿದ್ದಾಳೆ. ಮರು ದಿನ ಮಲ್ಲಿಗೆ ಎಕ್ಸಾಮ್‌ ಸೆಂಟರ್‌ ವರೆಗೆ ಡ್ರಾಪ್‌ ಮಾಡಲು ಭೂಮಿಕಾ ಸುನಿಯನ್ನು ಕಳಿಸಿದ್ದಾಳೆ. ಆದರೆ ಸುನಿ ಬೇರೆ ಯಾರು ಅಲ್ಲ ಜೈದೇವ್ ಶಿಷ್ಯ.

amruthadhare-update-march-13-malli-surrounded-by-goons-gautam-diwan-s-mass-entry-to-the-rescue

ದಾರಿಯಲ್ಲಿ ಜೈದೇವ್ ಹುಡುಗರು ಹಲ್ಲೆ ಮಾಡಿದ್ದು ಮಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ರೌಡಿಗಳ ಕಣ್ತಪ್ಪಿಸಿ ಅವಿತುಕೊಂಡು ಗೌತಮ್ ಗೆ ಫೋನ್ ಮಾಡಿ ನಡೆದ ವಿಚಾರ ಹೇಳಿದ್ದಾಳೆ. ಮಲ್ಲಿಗೆ ಸಮಾಧಾನ ಮಾಡಿ ಗೌತಮ್ ಧೈರ್ಯ ಹೇಳಿದ್ದು ಲೋಕೆಷನ್ ಕಳಿಸುವಂತೆ ಹೇಳಿದ್ದಾನೆ.

ಅದ್ರಂತೆ ಮಲ್ಲಿ ಲೋಕೆಷನ್ ಕಳಿಸಿದ್ದು ಮಲ್ಲಿ ರೌಡಿಗಳ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದಾಳೆ. ಜೈದೇವ್ ತನ್ನ ಶಿಷ್ಯಂದಿರಿಗೆ ಮಲ್ಲಿಯ ಕೈ ಸುಡುವಂತೆ ಹೇಳಿದ್ದು ಇದೇ ಸಮಯದಲ್ಲಿ ಗೌತಮ್ ಎಂಟ್ರಿ ಕೊಟ್ಟಿದ್ದಾನೆ.

ಜೈದೇವ್ ವಿರುದ್ಧ ಸಿಡಿದೇಳುತ್ತಾನಾ ಗೌತಮ್ ..?

ಮಲ್ಲಿಯ ಮೇಲೆ ನಡೆದ ಈ ಹಲ್ಲೆಯ ಹಿಂದೆ ಜೈದೇವ್ ಕೈ ಇದೆ ಎನ್ನುವ ವಿಚಾರ ಗೌತಮ್‌ಗೆ ಇನ್ನೂ ಗೊತ್ತಾಗಿಲ್ಲ. ಒಂದು ವೇಳೆ ಗೊತ್ತಾದರೆ ಜೈದೇವ್‌ನ ಗೌತಮ್ ಇನ್ನೊಮ್ಮೆ ಸುಮ್ಮನೆ ಬಿಡ್ತಾನಾ..? ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಮಲ್ಲಿ ಈ ಎಲ್ಲ ಅಡೆ ತಡೆಗಳನ್ನು ದಾಟಿ ಪರೀಕ್ಷೆ ಬರೆಯುತ್ತಾಳಾ..? ಮನದಲ್ಲಿ ಇಷ್ಟೊಂದು ಗೊಂದಲ ಮತ್ತು ಆತಂಕ ಇದ್ದರೂ ಕೂಡ ಎಕ್ಸಾಂ ಪಾಸ್ ಮಾಡ್ತಾಳಾ ..? ಎನ್ನುವ ಕುತೂಹಲ ಕೂಡ ಇದೆ. ಇನ್ನಾದರೂ ಜೈದೇವ್‌ ವಿರುದ್ಧ ಗೌತಮ್ ಸಿಡಿದೇಳುತ್ತಾನಾ..? ಅಥವಾ ಎಂದಿನಂತೆ ಕರುಣೆ ತೋರಿಸಿ ಬಿಡ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರೇಕ್ಷಕರ ಅಭಿಪ್ರಾಯ

ಸದ್ಯ ಈ ಸಂಚಿಕೆಗೆ ಪ್ರೇಕ್ಷಕರು ತಮ್ಮ ತಮ್ಮ ಮನದ ಮಾತುಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಗೌತಮ್ ಅವ್ರು ಕಾವಲು ಆಗಿರ್ಬೆಕಾದ್ರೆ ನಮ್ ಮಲ್ಲಿಗೆ ಏನು ಆಗಲ್ಲ ಎಕ್ಸಾಂ ಬರ್ದೇ ಬರಿತಾಳೆ ಎಂದು ಒಬ್ಬರು ಹೇಳಿದರೆ,ಈ ವಾರದ ಜೀ ಚಪ್ಪಾಳೆ ನಮ್ಮ ಗುಂಡುಗೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

amruthadhare-update-march-13-malli-surrounded-by-goons-gautam-diwan-s-mass-entry-to-the-rescue

ಏನ್ರಿ ಭೂಮಿಕಾ ಮೇಡಂ ಮನೆಯಲ್ಲಿ ಎಷ್ಟು ಸ್ಟ್ರಿಕ್ಟ್ ಆಗಿ ಅಭ್ಯಾಸ ಮಾಡಿಸಿದ್ರಿ ಎಕ್ಸಾಮ್ ಕಳಿಸೋವಾಗ ಆ ಕಾಳಜಿ ಯಾಕೆ ಇರಲಿಲ್ಲ, ಗೌತಮ್ ಸರ್ ಇದಾರೆ ಅಂತ ಎಲ್ಲ ಚೆನ್ನಾಗಿ ನಡೀತಿದೆ ಎಂದು ಮತ್ತೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದರೆ, ನಮ್ ಗೌತಮ್ ಸರ್ ಇರುವರೆಗೂ ಮಲ್ಲಿಗೆ ಏನು ಆಗುವುದಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಲ್ಲಿನ ಕಾಪಾಡೋದಕ್ಕೆ ಗೌತಮ್ ಬಂದೇ ಬರ್ತಾರೆ ಹಾಗಾಗಿ ನಮ್ಮೆಲ್ಲರ ವಾರದ ಚಪ್ಪಾಳೆ ಗೌತಮ್ ಅವರಿಗೆ ಎಂದು ಕೂಡ ಹೇಳಿದ್ದಾರೆ.

ಮುಂದೇನು ..?

ಸದ್ಯ ಶಕುಂತಲಾ ಕೂಡ ಗೌತಮ್ ಮುಂದೇನು ಮಾಡ್ತಾನೆ ಎನ್ನುವ ಆತಂಕದಲ್ಲಿದ್ದಾಳೆ. ಜೈದೇವ್ ಪ್ರತೀಕಾರ ಮುಂದುವರೆದಿದೆ. ಮಲ್ಲಿ ಪರೀಕ್ಷೆಯನ್ನು ನೀಡಿ ಮುಂದೆ ಪಾಸಾಗುತ್ತಾಳಾ..? ಹಾಗೊಂದು ವೇಳೆ ಪಾಸಾದರೆ ಮುಂದೇನು..? ಜೈದೇವ್ ಕಥೆ ಏನು..? ಮಲ್ಲಿ ಮತ್ತು ಸುನಿ ಮದುವೆಯಾಗುತ್ತಾ..? ಜೈದೇವ್‌ಗೆ ಸುನಿ ಉಲ್ಟಾ ಹೊಡೆಯುತ್ತಾನಾ..? ಹೊಸ ಉದ್ಯಮಕ್ಕಿಳಿದ ಗೌತಮ್ ಯಶಸ್ವಿಯಾಗ್ತಾನಾ..? ಈ ಪ್ರಯಾಣದಲ್ಲಿ ಎದುರಾಗುವ ಅಡೆತಡೆಗಳೇನು..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Witness the ultimate "Mass Entry" of Gautam Diwan! When Malli is cornered by dangerous goons, the Diwan charm turns into pure fury. See how Gautam handles the difficult situation and protects Malli in this must-watch Amruthadhare update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X