ಮಹಾ ಸಂಚಿಕೆ: ಕುತೂಹಲಕಾರಿ ತಿರುವು ಪಡೆದ 'ಅಮೃತವರ್ಷಿಣಿ'

By Suneetha

ಸ್ಟಾರ್ ಸುವರ್ಣ ವಾಹಿನಿಯು ಗಣೇಶೋತ್ಸವ ಪ್ರಯುಕ್ತ 'ಅಮೃತವರ್ಷಿಣಿ' ಧಾರಾವಾಹಿಯ ವಿಶೇಷ ಸಂಚಿಕೆಗಳನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಆದ್ದರಿಂದ ಸೆಪ್ಟೆಂಬರ್ 5 ರಿಂದ 10ರವರೆಗೆ, ರಾತ್ರಿ 9:30ರಿಂದ-10:30ವರೆಗೆ, ಎಲ್ಲರ ಮನಮೆಚ್ಚಿದ 'ಅಮೃತವರ್ಷಿಣಿ' ಮಹಾಸಂಚಿಕೆ ಎಂಬ ಹೆಸರಲ್ಲಿ ಈ ಸರಣಿ ಪ್ರಸಾರವಾಗಲಿದೆ.

ಈ ಮಹಾಸಂಚಿಕೆ ಸಂದರ್ಭದಲ್ಲಿ 'ಅಮೃತವರ್ಷಿಣಿ' ಧಾರಾವಾಹಿಯ ಕಥಾಹಂದರ ಕುತೂಹಲಕಾರಿ ತಿರುವು ಪಡೆಯಲಿದೆ.[ಕರ್ನಾಟಕದ ಜನತೆಗೆ ಎಚ್ಚರಿಕೆ ಕೊಡಲು ಬಂದ ಡೈನಾಮಿಕ್ ಹೀರೋ]

'Amruthavarshini' 'Maha Sanchike' during Ganesha Chaturthi festival week

ಈಗಾಗಲೇ ನಾಯಕ ವಿಜಯ್ ತನ್ನ ಪ್ರೀತಿಯ ಮಡದಿ ಅಮೃತಾಳನ್ನು ಬಿಟ್ಟು ಹೋಗಿದ್ದು, ಈ ಕಾರಣಕ್ಕೆ ವಿಜಯ್ ತಾಯಿ ಶಕುಂತಲಾದೇವಿ ಕೂಡಾ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾರೆ.

ಅತ್ತೆಯ ಈ ನಿಲುವಿನಿಂದ ಮನ ನೊಂದಿರುವ ಅಮೃತಾ ಗಣೇಶ ಹಬ್ಬದ ಸಂದರ್ಭದಲ್ಲಿ ದೊಡ್ಡ ಪೂಜೆಯನ್ನು ಮಾಡಿ ಅಲ್ಲಿಗೆ ವಿಜಯ್ ಎರಡನೇ ಪತ್ನಿ ಅದಿತಿಯನ್ನು ಕರೆದು ಆಕೆಯ ಮನವೊಲಿಸುವುದರ ಜೊತೆಗೆ, ಪೂಜೆಯ ಸಂದರ್ಭದಲ್ಲಿ ವಿಜಯ್ ಕೂಡ ಮನೆಗೆ ಬರುತ್ತಾನೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುತ್ತಾಳೆ.[ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ']

'Amruthavarshini' 'Maha Sanchike' during Ganesha Chaturthi festival week

ಅಮೃತಾಳ ನಂಬಿಕೆಯಂತೆ ಗಣಪತಿ ಹಬ್ಬಕ್ಕೆ ವಿಜಯ್ ಬರ್ತಾನಾ?,
ವಿಜಯ್ ನನ್ನು ಪಡೆಯಲು ಕಾನೂನಿನ ನೆರವು ಪಡೆದಿರುವ ಅದಿತಿ, ಅಮೃತಾಳ ಒಳ್ಳೆಯತನವನ್ನು ಅರ್ಥಮಾಡಿಕೊಳ್ತಾಳಾ?, ಅಥವಾ ಅಮೃತಾ ಬದುಕು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುತ್ತಾ?, ಈ ಎಲ್ಲಾ ಕುತೂಹಲಗಳಿಗೆ ಮಹಾಸಂಚಿಕೆಯಲ್ಲಿ ಉತ್ತರ ಸಿಗಲಿದೆ.
'Amruthavarshini' 'Maha Sanchike' during Ganesha Chaturthi festival week

ಅಮೃತಾಳ ಮನೆಯಲ್ಲಿ ನಡೆಯವ ಗಣೇಶೋತ್ಸವ ಸಂಚಿಕೆಯಲ್ಲಿ 'ಕೃಷ್ಣ ರುಕ್ಮಿಣಿ' ಖ್ಯಾತಿಯ ಸುನಿಲ್ ನಾಗಪ್ಪ, 'ಅರಗಿಣಿ' ಖ್ಯಾತಿಯ ಮೇಘನಾ (ಖುಷಿ) ಸೇರಿದಂತೆ ಅನೇಕ ಕಿರುತೆರೆ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

'ಅಮೃತವರ್ಷಿಣಿ ಮಹಾ ಸಂಚಿಕೆ' ಇದೇ ಸೆಪ್ಟೆಂಬರ್ 5ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬರಲಿದೆ.

More from Filmibeat

English summary
During the Ganesha Chaturthi festival week, Amruthavarshini ‘Maha Sanchike’ will be telecast on Star Suvarna from September 5th 2016 (Monday) to Septemebr 10th 2016 (Saturday) for a duration of one-hour (9:30 PM – 10:30 PM). During this special week, the story of Amruthavarshini is going to take a very interesting twist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X