Sara Annaiah: 'ಅಮೃತಧಾರೆ' ನಟಿ ಸಾರಾ ಅಣ್ಣಯ್ಯ ಬೋಲ್ಡ್ ಫೋಟೊಶೂಟ್.. ವೀಕ್ಷಕರು ಏನಂದ್ರು?
ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಇಂದು ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯದಲ್ಲಿ ಸಖತ್ ಆ್ಯಕ್ಟೀವ್ ಹೌದು. ಇನ್‌ಸ್ಟಾಗ್ರಾಂನಲ್ಲಿ ಆಗಾಗ ತನ್ನ ಫೋಟೋಗಳನ್ನು ಶೇರ್ ಮಾಡುವ ಸಾರಾ ಅಣ್ಣಯ್ಯ ಟ್ರೆಡಿಶನಲ್ ಆಗಿ ಕಾಣಿಸಿಕೊಳ್ಳುವುದಕ್ಕಿಂತ ಬೋಲ್ಡ್ ಅವತಾರದ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದಿದ್ದೇ ಹೆಚ್ಚು.
ಇದೀಗ ಸಾರಾ ಅಣ್ಣಯ್ಯ ಕೇವಲ ಟಾಪ್‌ನಲ್ಲಿ ಪೋಟೋ ಕ್ಲಿಕ್ಕಿಸಿಗೊಂಡಿದ್ದು ಆ ಹೊಸ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಮಾತ್ರವಲ್ಲ "ತಲೆ ಬಾಚ್ಕೋಳ್ಳಿ ಪೌಡರ್ ಹಾಕೋಳ್ಳಿ" ಎಂದು ಬರೆದುಕೊಂಡಿದ್ದಾರೆ. ಈ ಹಾಟ್ ಫೋಟೋಗೆ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದ್ದು ಒಬ್ಬರಂತೂ "ಮೊದಲು ಚೆಡ್ಡಿ ಹಾಕೊಳಮ್ಮ" ಎಂದು ಕಮೆಂಟ್ ಮಾಡಿದ್ದು ಅದೀಗ ವೈರಲ್ ಆಗುತ್ತಿದೆ.

ಮಹಿಮಾ ಆಗಿ ಬ್ಯುಸಿ
ಹಾಟ್ ಆ್ಯಂಡ್ ಬೋಲ್ಡ್ ಫೋಟೋಗಳ ಮೂಲಕ ನೆಟ್ಟಿಗರ ಮನ ಕದ್ದ, ಕದಿಯುತ್ತಿರುವ ಸಾರಾ ಅಣ್ಣಯ್ಯ ನಟನೆಯ ಮೂಲಕ ಮನ ಸೆಳೆಯುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ತಂಗಿ ಮಹಿಮಾ ಆಗಿ ನಟಿಸುತ್ತಿರುವ ಸಾರಾ ಹಠಮಾರಿ ಹುಡುಗಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
'ನಮ್ಮ ಲಚ್ಚಿ ಧಾರಾವಾಹಿ ಬಿಟ್ಟ ಸಾರಾ
'ಅಮೃತಧಾರೆ' ಧಾರಾವಾಹಿಯ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್‌ನ ಪ್ರೇಯಸಿ ಆಲಿಯಾಸ್ ಪತ್ನಿ ದೀಪಿಕಾ ಆಗಿ ನಟಿಸುವ ಮೂಲಕ ವೀಕ್ಷಕರ ಮನ ಸೆಳೆದಿದ್ದ ಸಾರಾ ಅಣ್ಣಯ್ಯ ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು.

'ಕನ್ನಡತಿ'ಯ ವರೂಧಿನಿ ಆಗಿ ಫೇಮಸ್ಸು!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ವರೂಧಿನಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾರಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. 'ನಮ್ಮೂರ ಹೈಕ್ಳು' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸಾರಾ ತಮಿಳು ವೆಬ್ ಸಿರೀಸ್ 'ಪಬ್ ಗೋವಾ'ದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ತಮಿಳು ಧಾರಾವಾಹಿ 'ಮಲರ್'ನಲ್ಲಿ ನಟಿಸಿರುವ ಈಕೆ ಸದ್ಯ ಮಹಿಮಾ ಆಗಿ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.


Click it and Unblock the Notifications











