Amulya gowda: ಹೂ ಮಾರುವ ಹುಡುಗಿ.. ಬೇಜವಾಬ್ದಾರಿ ಗಂಡ; ಅಮೂಲ್ಯ ಹೊಸ ಕಥೆ

By ಪ್ರಿಯಾ ದೊರೆ

'ಕಮಲಿ'ಯಾಗಿ ಕನ್ನಡ ವೀಕ್ಷಕರ ಮನಗೆದ್ದ ನಟಿ ಈಗ ಪರಭಾಷೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ಒಂದಾದ ಮೇಲೆ ಒಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅಮೂಲ್ಯ ಓಂಕಾರ ಗೌಡ, ಹಳ್ಳಿ ಹುಡುಗಿಯಾಗಿಯೂ, ಮಾರ್ಡನ್ ಲುಕ್‌ನಲ್ಲೂ ಮುದ್ದಾಗಿ ಕಾಣುತ್ತಾರೆ.

ನಟಿ ಅಮೂಲ್ಯ 'ಕಮಲಿ' ಧಾರಾವಾಹಿ ಬಳಿಕ, ಕನ್ನಡದ ಬಿಗ್ ಬಾಸ್ ಸೀಸನ್- 9 ರಲ್ಲಿ ಭಾಗವಹಿಸಿದರು. ಇದೀಗ ತೆಲುಗು ಕಿರುತೆರೆ ಅಂಗಳದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ.

ತೆರೆಮೇಲೆ ಹಳ್ಳಿ ಹುಡುಗಿಯಂತೆ ಕಂಡರೂ ತೆರೆ ಹಿಂದೆ ಮಾಡ್ರನ್ ಲುಕ್‌ನಲ್ಲಿ ಅಮೂಲ್ಯ ತುಂಬಾನೇ ಹಾಟ್ ಆಗಿ ಕಾಣುತ್ತಾರೆ. ಇವರ ಕೆಲ ಹಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Amulya-gowda-Gundeninda-Gudigantalu

ಕಮಲಿ ಕಿರುತೆರೆ ಜರ್ನಿ

ಮೂಲತಃ ಮೈಸೂರಿನವರಾಗಿರುವ ಅಮೂಲ್ಯ ಕಂಪ್ಯೂಟರ್ ಸೈನ್ಸ್‌ ಡಿಪ್ಲೋಮಾ ಓದಿದ್ದಾರೆ. ಸದ್ಯ ನಟನೆಯನ್ನೇ ವೃತ್ತಿ ಜೀವನವನ್ನಾಗಿ ಆರಿಸಿಕೊಂಡಿದ್ದಾರೆ. ಅಮೂಲ್ಯ ಗೌಡ 2014ರಲ್ಲಿ 'ಸ್ವಾತಿಮುತ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಇದಾದ ಬಳಿಕ 'ಅರಮನೆ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. 2016ರಲ್ಲಿ ಜಯಶ್ರೀ ರಾಜ್ ನಿರ್ದೇಶನದ ಈ ಧಾರಾವಾಹಿ ಉದಯ ಟಿವಿಯಲ್ಲಿ ಮೂಡಿ ಬಂದಿತ್ತು. ಇನ್ನು 'ಪುನರ್ ವಿವಾಹ' ಎಂಬ ಧಾರಾವಾಹಿಯಲ್ಲೂ ಅಮೂಲ್ಯ ನಟಿಸಿದ್ದರು.

ತೆಲುಗು ಅಂಗಳದಲ್ಲಿ ಅಮೂಲ್ಯ

'ಕಮಲಿ' ಧಾರಾವಾಹಿ 2018ರ ಮೇ ತಿಂಗಳಿನಲ್ಲಿ ಪ್ರಾರಂಭವಾಗಿತ್ತು. ಇದರಲ್ಲಿ ಅಮೂಲ್ಯ ಓಂಕಾರ ಗೌಡ ಲೀಡ್ ರೋಲ್‌ನಲ್ಲಿ ನಟಿಸಿ, ಕರ್ನಾಟಕದ ಮನೆ ಮಾತಾಗಿದ್ದಾರೆ. ಈ ಧಾರಾವಾಹಿ ಕಳೆದ ವರ್ಷವೇ ಮುಕ್ತಾಯಗೊಂಡಿದ್ದು, ನಂತರ ತೆಲುಗು ಅಂಗಳಕ್ಕೆ ಹಾರಿದರು. 7-8 ವರ್ಷದಿಂದ ಕಿರುತೆರೆಯಲ್ಲೇ ಇರುವ ಅಮೂಲ್ಯ ಎಂದಿಗೂ ಚಿತ್ರರಂಗದತ್ತ ಮುಖ ಮಾಡಿದವರಲ್ಲ.

ಆಟೊ ಡ್ರೈವರ್‌ ಪಾತ್ರಕ್ಕೂ ಸೈ

ಈ ಹಿಂದೆಯೂ ಅಮೂಲ್ಯ ಅವರಿಗೆ ಇತರೆ ಸೀರಿಯಲ್ ಗಳಲ್ಲಿ ನಟಿಸುವ ಆಫರ್ ಬಂದಾಗಲೂ ಸೂಕ್ತ ಪಾತ್ರಕ್ಕಾಗಿ ಕಾದಿದ್ದರು. ತೆಲುಗಿನ 'ಕಾರ್ತಿಕ ದೀಪಂ' ಎಂಬ ಧಾರಾವಾಹಿಯಲ್ಲಿ ಅಮೂಲ್ಯ ನಟಿಸಿದ್ದರು. ಇದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡು, ಆಟೋ ಚಾಲಕಿ ಪಾತ್ರದಲ್ಲಿ ಮಿಂಚಿದ್ದರು.

Amulya-gowda-Gundeninda-Gudigantalu

ಬಿಗ್ ಬಾಸ್‌ ಶೋನಲ್ಲೂ ಅಮ್ಮು ಹವಾ

ಇನ್ನು ಬಿಗ್ ಬಾಸ್ ಕನ್ನಡ ಸೀಸನ್-9ರಲ್ಲಿಯೂ ಅಮೂಲ್ಯ ಭಾಗವಹಿಸಿದ್ದರು. ರಾಕೇಶ್ ಅಡಿಗ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ದೊಡ್ಮನೆಯಿಂದ ಹೊರಬಂದ ಮೇಲೂ ರಾಕೇಶ್ ಅವರನ್ನು ಆಗಾಗ ಭೇಟಿಯಾಗುತ್ತಿರುತ್ತಾರೆ. ಇನ್ನು 'ಕಾರ್ತಿಕ್ ದೀಪಂ' ಬಳಿಕ ಇದೀಗ ಅಮೂಲ್ಯ ಅವರು ತೆಲುಗಿನ ಮತ್ತೊಂದು ಧಾರಾವಾಹಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ ಈ ಹೊಸ ಧಾರಾವಾಹಿ ಮೂಡಿ ಬರಲಿದೆ.

ಹೊಸ ಧಾರಾವಾಹಿಯಲ್ಲಿ ಅಮೂಲ್ಯ

ಈಗಾಗಲೇ ಧಾರಾವಾಹಿಯ ಪ್ರೊಮೋ ರಿಲೀಸ್ ಆಗಿದ್ದು, ಈ ಬಗ್ಗೆ ಸ್ವತಃ ನಟಿ ಅಮೂಲ್ಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ 'ಗುಂಡೆನಿಂಡ ಗುಡಿಗಂಟಲು' ಎಂಬ ಧಾರಾವಾಹಿ ಅಕ್ಟೋಬರ್ 2 ರಿಂದ ಪ್ರಸಾರವಾಗಲಿದೆ. ಇದರ ಪ್ರೊಮೋ ನೋಡಿದ ಅಮೂಲ್ಯ ಸ್ನೇಹಿತರು ಶುಭ ಹಾರೈಸಿದ್ದಾರೆ. ಅಮೂಲ್ಯ ತೆಲುಗು ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಧಾರಾವಾಹಿ ತಮಿಳಿನ 'ಸಿರಗಡಿಕ್ಕ ಆಸೈ' ಎಂಬ ಧಾರಾವಾಹಿಯ ರಿಮೇಕ್ ಆಗಿದೆ. ಅಮೂಲ್ಯ ದೇವಸ್ಥಾನದಲ್ಲಿ ಹೂ ಕಟ್ಟಿ ಮಾರುವ ಹುಡುಗಿ ಪಾತ್ರದಲ್ಲಿ ನಟಿಸಿದ್ದು, ನಾಯಕ ಕ್ಯಾಬ್ ಡ್ರೈವರ್. ಬೇಜವಾಬ್ದಾರಿ ಕುಡುಕ ಗಂಡನನ್ನು ಆಕೆ ಹೇಗೆ ಸರಿಪಡಿಸುತ್ತಾಳೆ ಅನ್ನುವುದೇ ಈ ಧಾರಾವಾಹಿ ಕಥಾಹಂದರ.

More from Filmibeat

English summary
zee kannada kamali serial actress amulya gowda in telugu serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X