»   » 'ಗಜಕೇಸರಿ' ಚಿತ್ರದ ಬಗ್ಗೆ ನಟಿ ಅಮೂಲ್ಯ ಕೇಳಿದ ಕೆಟ್ಟ ಕಾಮೆಂಟ್ ಏನು.?

'ಗಜಕೇಸರಿ' ಚಿತ್ರದ ಬಗ್ಗೆ ನಟಿ ಅಮೂಲ್ಯ ಕೇಳಿದ ಕೆಟ್ಟ ಕಾಮೆಂಟ್ ಏನು.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಉಂಟು ಮಾಡಿದ ಸಿನಿಮಾಗಳ ಪೈಕಿ 'ಗಜಕೇಸರಿ' ಕೂಡ ಒಂದು. ಕೃಷ್ಣ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಟ ಯಶ್ ರವರಿಗೆ ಅಮೂಲ್ಯ ಜೋಡಿ ಆಗಿ ಅಭಿನಯಿಸಿದ್ದರು.

ಯಶ್-ಅಮೂಲ್ಯ ಕೆಮಿಸ್ಟ್ರಿ ಹಲವರಿಗೆ ಇಷ್ಟವಾಗಿದ್ರೆ, ಕೆಲವರು ಮಾತ್ರ 'ಅಷ್ಟಕಷ್ಟೆ' ಎಂದಿದ್ದರು. 'ಗಜಕೇಸರಿ' ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರೂ, ನಟಿ ಅಮೂಲ್ಯ ಮಾತ್ರ ಕೆಲ ಕೆಟ್ಟ ಕಾಮೆಂಟ್ ಗಳನ್ನ ಕೇಳಿದ್ದಾರಂತೆ.

Amulya had received bad critics on 'Gajakesari'

''ನಟ ಯಶ್ ಗೆ ನಟಿ ಅಮೂಲ್ಯ ಸೂಟ್ ಆಗಲ್ಲ'' ಎಂಬ ಕಾಮೆಂಟ್ ಗಳನ್ನ ಅಮೂಲ್ಯ ಕೇಳಿದ್ದರಂತೆ. ಹಾಗಂತ ಸ್ವತಃ ನಟಿ ಅಮೂಲ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

''ನನಗೆ ಯಶ್ ಅಂದ್ರೆ ತುಂಬಾ ಇಷ್ಟ. ಆದ್ರೆ ನಮ್ಮ ಜೋಡಿ ಕೆಲವರಿಗೆ ಇಷ್ಟ ಆಗಲಿಲ್ಲ. ಸೂಟ್ ಆಗಲ್ಲ ಎಂಬ ಕಾಮೆಂಟ್ಸ್ ಬಂದಿತ್ತು'' ಎಂದಿದ್ದಾರೆ ಅಮೂಲ್ಯ.

English summary
Kannada Actress Amulya revealed that she had recieved bad critics on 'Gajakesari' in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada