ನಟಿ ದಿವ್ಯಾ ಮೇಲೆ ಹಲ್ಲೆ: ಸ್ಪಷ್ಟನೆ ನೀಡಿದ ಪತಿ ಅಮ್ಜದ್ ಖಾನ್
ಕನ್ನಡದ 'ಆಕಾಶ ದೀಪ' ಇನ್ನಿತರೆ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯಾ ಶ್ರೀಧರ್ ನಿನ್ನೆ (ಅಕ್ಟೋಬರ್ 06) ಚೆನ್ನೈನಲ್ಲಿ ಆಸ್ಪತ್ರೆ ದಾಖಲಾಗಿದ್ದು, ತಮ್ಮ ಪತಿ ಅಮ್ಜದ್ ಖಾನ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ಆದರೆ ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ನಟ ಅಮ್ಜದ್ ಖಾನ್, ''ನಾನು, ದಿವ್ಯಾ ಮೇಲೆ ಹಲ್ಲೆ ಮಾಡಿಲ್ಲ, ಬೇಕಿದ್ದರೆ ನಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ. ಆಕೆ ತಮ್ಮ ಕೆಲವು ಕೆಟ್ಟ ಗೆಳೆಯರೊಟ್ಟಿಗೆ ಸೇರಿಕೊಂಡು ಹೀಗೆ ಮಾಡುತ್ತಿದ್ದಾಳೆ. ಸುಮ್ಮನೆ ನನ್ನ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾಳೆ'' ಎಂದಿದ್ದಾರೆ.
'ಆಕೆಗೆ ತಾನು ತಾಯಿಯಾಗುತ್ತಿರುವುದು ಇಷ್ಟವಿಲ್ಲ, ಅಬಾರ್ಶನ್ ಮಾಡಿಸಿಕೊಳ್ಳಲು ಇಲ್ಲ-ಸಲ್ಲದ ನಾಟಕವಾಡುತ್ತಿದ್ದಾಳೆ. ನಾನು ಸಹ ದಿವ್ಯಾ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದೇನೆ'' ಎಂದಿದ್ದಾರೆ.

ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಖಾನ್ 2015 'ಕೆಳದಿ ಕಣ್ಮನಿ' ತಮಿಳು ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಆ ಬಳಿಕ ಇಬ್ಬರೂ ಪ್ರೀತಿ ಮೊದಲ ಲಾಕ್‌ಡೌನ್ ಮುಗಿದ ಬಳಿಕ ವಿವಾಹವಾಗಿ ಚೆನ್ನೈನಲ್ಲಿ ನೆಲೆಸಿದ್ದರು.
ಇದೀಗ ದಿವ್ಯಾ, ಗರ್ಭಿಣಿ ಆಗಿದ್ದು, ಪತಿ ಅಮ್ಜದ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ, ನನ್ನ ಹೊಟ್ಟೆಗೆ ಒದ್ದಿದ್ದಾನೆ ಎಂದು ನಟಿಯು ದೂರು ನೀಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಸಹ. ''ನೀನು ಕನ್ನಡದ ನಟಿ, ಇದು ಚೆನ್ನೈ, ಇಲ್ಲಿ ನನಗೆ ಬೇಕಾದ ಹೆಚ್ಚು ಮಂದಿ ಜನರಿದ್ದಾರೆ, ನಿನಗೆ ಗತಿ ಕಾಣಿಸುತ್ತೇನೆ ಎಂದು ಆವಾಜ್ ಸಹ ಹಾಕಿದ್ದಾರಂತೆ ಅಮ್ಜದ್, ಹೀಗೆಂದು ದಿವ್ಯಾ ಪರ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಸೆಲ್ಫಿ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಮಾತನಾಡಿರುವ ದಿವ್ಯಾ, ಪತಿಯ ವಿರುದ್ಧ ಹಿಂಸಾಚಾರದ ಆರೋಪ ಮಾಡಿದ್ದಾರೆ.


Click it and Unblock the Notifications











