twitter
    For Quick Alerts
    ALLOW NOTIFICATIONS  
    For Daily Alerts

    'ಜೀ ಕನ್ನಡ' ವಾಹಿನಿಯ 'ಮಹರ್ಷಿವಾಣಿ'ಗೆ 2 ವರ್ಷಗಳ ಸಂಭ್ರಮ

    By Harshitha
    |

    ಬೆಳಗ್ಗೆ 8 ಗಂಟೆಯಿಂದ 9.30 ವರೆಗೆ ವಾರದ ಏಳು ದಿನಗಳು ಪ್ರಸಾರವಾಗುವ 'ಮಹರ್ಷಿವಾಣಿ' ಕಾರ್ಯಕ್ರಮಕ್ಕೆ ಈಗ ಎರಡು ವರ್ಷ ತುಂಬಿದ ಸಂಭ್ರಮ. ಡಾ.ಆನಂದ ಗುರೂಜಿ ನಡೆಸಿಕೊಡುತ್ತಿರುವ ಈ ಜನಪ್ರಿಯ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ ಟಿ.ಆರ್.ಪಿಯನ್ನು ಹೆಚ್ಚಿಸಿದೆ.

    ಈಗಾಗಲೇ ಜೀ ಕನ್ನಡ ವಾಹಿನಿ ಕರ್ನಾಟಕದಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ಬೆಳಗಿನ ಜಾವದ ಸ್ಲಾಟ್ ನಲ್ಲಿ 'ಮಹರ್ಷಿವಾಣಿ' ಮೊದಲ ಸ್ಥಾನದಲ್ಲಿದೆ. ಪ್ರತಿದಿನ 23 ಲಕ್ಷ ಪ್ರೇಕ್ಷಕರನ್ನು ತಲುಪುತ್ತಿದೆ. [ಜೀ ಕನ್ನಡದಲ್ಲಿ ಹೊಸ ಭವಿಷ್ಯವಾಣಿ 'ಮಹರ್ಷಿವಾಣಿ']

    ananda-guruji-s-maharshivani-completes-2-years-in-zee-kannada

    ಈ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಮಹರ್ಷಿ ಡಾ.ಆನಂದ ಗುರೂಜಿ, ''ಜೀ ವಾಹಿನಿಯಲ್ಲಿ ನಮ್ಮ ಕಾರ್ಯಕ್ರಮ ಯಶಸ್ವಿಯಾಗಿ 2 ವರ್ಷಗಳನ್ನು ಪೂರೈಸಿದೆ. ಪ್ರತಿಯೊಂದು ಮನೆಯಲ್ಲೂ ಸಂಸ್ಕಾರವಂತರು ಇರಬೇಕು. ಪ್ರತಿಯೊಬ್ಬ ಮನುಷ್ಯನಲ್ಲೂ ಧಾರ್ಮಿಕ ಭಾವನೆಯನ್ನು ಬೆಳೆಸಬೇಕು''

    ''ಭಾರತೀಯ ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂಬುದೇ ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ. ನೊಂದ ಜೀವಗಳಿಗೆ ಸಾಂತ್ವನ ಹೇಳುವುದು, ಕಷ್ಟದಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ವೀಕ್ಷಕರಿಗೆ ಇಷ್ಟವಾಗಿದೆ''

    ''ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ನಾನು ಹೇಳುವುದಿಲ್ಲ. ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಿದ್ದೇನೆ. ಸಾಲ ಬರಗಾಲದಿಂದ ನೊಂದು ಬೆಂದ ರೈತರು ಮನೆ ಬಾಗಿಲಿಗೆ ಹೋಗಿ ಸಮಾಧಾನ ಹೇಳುವ ಮಾನಸಿಕ ಧೈರ್ಯ ತುಂಬುವ ಕಾರ್ಯಗಳನ್ನು ಕೂಡ ಜೀ ಕನ್ನಡ ವಾಹಿನಿಯ ಸಹಕಾರದಿಂದ ಮಾಡಿಕೊಂಡು ಬಂದಿದ್ದೇವೆ''

    ''ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗಿ ಅವರ ಅವಲಂಬಿತರಿಗೆ ಆತ್ಮ ಸ್ಥೈರ್ಯ ತುಂಬಿ ಕೈಲಾದಷ್ಟು ಸಹಾಯ ಕೂಡ ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೊಂದಷ್ಟು ಜನಪರ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದೇವೆ'' ಎನ್ನುತ್ತಾರೆ.

    English summary
    'Maharshivani', a devotional program featuring Shri Maharshi Ananda Guruji has completed 2 successful years in Zee Kannada Channel
    Tuesday, June 14, 2016, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X