'ಮುಕ್ತ' ಧಾರಾವಾಹಿಯಲ್ಲಿ ಬಾಲನಟಿ.. ಈಗ ಕಿರುತೆರೆಯ ಉದಯೋನ್ಮುಖ ನಟಿ: ಯಾರಿವರು?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ ಆರಂಭವಾಗಿದೆ. ನಿರಂಜನ್ ಹಾಗೂ ನಿರುಷಾ ನಾಯಕ, ನಾಯಕಿಯಾಗಿ ನಟಿಸುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯು ಇದೀಗ ಪ್ರಸಾರ ಶುರುವಾಗಿದೆ. ಅಂದ ಹಾಗೇ ಈ ಧಾರಾವಾಹಿ ನಾಯಕ ಅಜಿತನ ಅತ್ತೆ ದೇವಯಾನಿಯ ಮಗಳು ಅಂಜನಾ ಪಾತ್ರದಲ್ಲಿ ಅನನ್ಯಾ ಮೋಹನ್ ನಟಿಸಲಿದ್ದಾರೆ.

ಫಾರಿನ್‌ನಲ್ಲಿರುವ ಅಂಜನಾಗೆ ನಾಯಕ ಅಜಿತ್ ಎಂದರೆ ತುಂಬಾ ಇಷ್ಟ. ಮದುವೆ ಆದರೆ ಅದು ಅಜಿತನನ್ನೇ ಎಂಬುದು ಆಕೆಯ ಕನಸು. ಆದರೆ, ಪರಿಸ್ಥಿತಿಗೆ ಕಟ್ಟು ಬಿದ್ದು ನಾಯಕ ಅಜಿತ್ ಮತ್ತು ನಾಯಕಿ ಭೂಮಿ ಮದುವೆಯಾಗುತ್ತಾರೆ. ಅದು ಒಂದು ವರ್ಷದ ಕಾಂಟ್ರಾಕ್ಟ್ ಮದುವೆ ಆಗಿರುತ್ತದೆ. ಅಂದ ಹಾಗೇ ಒಂದು ವರ್ಷದಲ್ಲಿ ಕಾಂಟ್ರಾಕ್ಟ್ ಮದುವೆ ಮುರಿದು ಬೀಳುತ್ತಾ? ಅಲ್ಲಾ ಮುಂದುವರಿಯುತ್ತಾ? ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

Ananya Mohan is appearing on tv as a foreign return girl in Ninna Jothe Nanna Kathe Serial

ಅಂದ ಹಾಗೇ ಅನನ್ಯಾ ಮೋಹನ್ ಅವರು ಕಿರುತೆರೆಗೆ ಹೊಸಬರೇನಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಹೇಶ ಮತ್ತು ಶಾರ್ವರಿ ದಂಪತಿಗಳ ಪುತ್ರಿ ವಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಮನ ಸೆಳೆಯುತ್ತಿರುವ ಅನನ್ಯಾ ಮೋಹನ್ ಬಾಲ ಕಲಾವಿದೆಯಾಗಿ ನಟನೆಯ ನಂಟು ಬೆಳೆಸಿಕೊಂಡವರು.

ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಮುಕ್ತ'ದಲ್ಲಿ ಬಾಲನಟಿಯಾಗಿ ನಟಿಸಿದ್ದರು ಅನನ್ಯಾ ಮೋಹನ್. ತದ ನಂತರ ಓದಿನ ಸಲುವಾಗಿ ನಟನೆಯಿಂದ ತುಂಬಾ ದೂರವೇ ಉಳಿದಿದ್ದ ಈಕೆ ಮತ್ತೆ ಬಣ್ಣ ಹಚ್ಚಿದ್ದು 'ಕನ್ನಡತಿ' ಧಾರಾವಾಹಿಯಲ್ಲಿ. ಅದರಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿದ್ದ ಈಕೆಯ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.

ಅಂದ ಹಾಗೇ ಅನನ್ಯಾ ಮೋಹನ್ ಇಂದು ನಟಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರೆ ಅದು ಅಮ್ಮನಿಂದ ಬಂದ ಬಳುವಳಿ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಅನನ್ಯಾ ಅವರ ತಾಯಿ ವತ್ಸಲಾ ಮೋಹನ್ ಕೂಡಾ ಜನಪ್ರಿಯ ನಟಿ. ರಂಗಭೂಮಿ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ ವತ್ಸಲಾ ಮೋಹನ್. 'ಕಸ್ತೂರಿ ಮಹಲ್', 'ಕಟ್ಟಿಂಗ್ ಶಾಪ್', 'ಮಮ್ಮಿ ಸೇವ್ ಮಿ','ಡೈರೆಕ್ಟರ್ ಸ್ಪೆಷಲ್', 'ಸಿದ್ಲಿಂಗು' ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಇವರು ಬೆಂಗಳೂರಿನ ಸುರಾನಾ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಕೂಡ ಹೌದು.

ಎರಡು ವರ್ಷದ ಹಿಂದೆ ತೀರಿಕೊಂಡ ಅನನ್ಯಾ ಅವರ ತಂದೆ ಮೋಹನ್ ಅವರು ಕೂಡಾ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡ ಹೆಸರು. ನಟನಾಗಿ ಅಲ್ಲ, ಬದಲಿಗೆ ನಿರ್ದೇಶಕರಾಗಿ! ಇವರು ನಿರ್ದೇಶಿಸಿದಂತಹ 'ಬೊಂಬೆಯಾಟ' ಸಿನಿಮಾ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಅಲ್ಲದೇ ಮಾಸ್ಕೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕೂಡ ಕಂಡಿತ್ತು. ಒಟ್ಟಿನಲ್ಲಿ ಕಲಾವಿದರ ಮುದ್ದು ಮಗಳಾಗಿರುವ ಅನನ್ಯಾ ಮೋಹನ್ ಅವರ ಬಣ್ಣದ ಪಯಣ ಹೇಗಿರುತ್ತೆ ಅನ್ನೋದು ಈ ಧಾರಾವಾಹಿ ನಿರ್ಧರಿಸಬಹುದು.

More from Filmibeat

English summary
Ananya Mohan is appearing on tv as a foreign return girl in Ninna Jothe Nanna Kathe Serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X