KGF, ಕಾಂತಾರ ಅಷ್ಟೇ ಮುಗೀತು, ತೆಲುಗು ಇಂಡಸ್ಟ್ರಿ ಹೊಗಳಿ ಕನ್ನಡ ಇಂಡಸ್ಟ್ರಿ ಕಿಂಡಲ್ ಮಾಡಿದ ನಟಿ!

By ಎಸ್. ಸುಮಂತ್

ಕನ್ನಡ ಇಂಡಸ್ಟ್ರಿಯಲ್ಲಿ ಯಾವುದೇ ರೀತಿಯ ಆಸಕ್ತಿಕರ ವಿಚಾರವೂ ಇಲ್ಲ.. ಪ್ರತಿಭೆಗಳನ್ನು ಪ್ರೋತ್ಸಾಹಿಸುವವರು ಇಲ್ಲ. ಅದಕ್ಕೆ ಕನ್ನಡ ಇಂಡಸ್ಟ್ರಿ ಇಷ್ಟೇ ಇಷ್ಟು ಇರೋದು.. ಅದೇ ತೆಲುಗು ಇಂಡಸ್ಟ್ರಿ ನೋಡಿ ವಿಶಾಲ ಹೃದಯದವರು ವಿಶಾಲವಾಗಿ ಬೆಳೆಸಿದ್ದಾರೆ. ಈ ಥರ ಹೇಳಿರೋದು ಕನ್ನಡದವರೇ ಆದ ತೆಲುಗು ಇಂಡಸ್ಟ್ರಿಯಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದು ಬೆಳೆದ ನಟಿ ಸೌಮ್ಯ ರಾವ್.

ಈ ಸೌಮ್ಯ ರಾವ್ ಯಾರೆಂಬುದು ನಿಮಗೆಲ್ಲ ನೆನಪಾಗಿರಬಹುದು. ಇತ್ತೀಚೆಗಷ್ಟೇ ಕನ್ನಡ ಕಿರುತೆರೆಯಲ್ಲಿ ತನಗಾದ ಕಾಸ್ಟಿಂಗ್ ಕೌಚ್ ಬಗ್ಗೆ ರಾಜೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದರು. ಆಗ ಇವರನ್ನ ಎಲ್ಲರೂ ಹುಡುಕಿದ್ದರು. ಯಾವ ಸೀರಿಯಲ್‌ನಲ್ಲಿ ಮಾಡಿದ್ರು, ಯಾವ ನಿರ್ದೇಶಕರಿಂದ ತೊಂದರೆ ಆಯ್ತು ಅಂತ. ಅದೇ ಸೌಮ್ಯರಾವ್ ಇದೀಗ ಕನ್ನಡ ಇಂಡಸ್ಟ್ರಿ ಹಾಗೂ ತೆಲುಗು ಇಂಡಸ್ಟ್ರಿಗೆ ಕಂಫೇರ್ ಮಾಡಿ ಮಾತನಾಡಿದ್ದಾರೆ.

Anchor actress Sowmya Rao shocking comments on kannada entertainment industry

ಕನ್ನಡ ಇಂಡಸ್ಟ್ರಿ ಬಗ್ಗೆ ವ್ಯಂಗ್ಯ

ನಟಿ ಸೌಮ್ಯರಾವ್ ತೆಲುಗು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆಗ ಅಲ್ಲಿನ ನಿರೂಪಕ ಕೇಳಿದ ಪ್ರಶ್ನೆಗೆ ನಟಿ ಸೌಮ್ಯರಾವ್ ಉತ್ತರ ನೀಡಿದ್ದಾರೆ. ಅದೇಗೆ ಅಂದ್ರೆ ಕನ್ನಡವನ್ನ ಅಲ್ಲಗಳೆದು, ತೆಲುಗು ಇಂಡಸ್ಟ್ರಿಯನ್ನ ಮನಸಾರೆ ಹೊಗಳಿರೋದು. ಇಲ್ಲಿ ಯಾವುದೇ ರೀತಿಯ ವಾವ್ ಫ್ಯಾಕ್ಟ್ ಅವರಿಗೆ ಕಾಣಿಸಿಲ್ಲವಂತೆ. ಈ ರೀತಿಯ ಮಾತುಗಳು ನಮ್ಮ ಕನ್ನಡ ಇಂಡಸ್ಟ್ರಿಗೆ ನಿಜಕ್ಕೂ ಈಗ ಸೂಕ್ತ ಅಲ್ಲ ಅನ್ನಿಸುತ್ತೆ. ಯಾಕಂದ್ರೆ ಈಗ ಬಾಲಿವುಡ್ ಸ್ಟಾರ್‌ಗಳೇ ನಮ್ಮ ಯಶ್ ಜೊತೆ ಅಭಿನಯಿಸ್ತಾ ಇದ್ದಾರೆ.. ಶಿಲ್ಪಾ ಶೆಟ್ಟಿ, ನಯನತಾರ ಕನ್ನಡಕ್ಕೆ ಮತ್ತೆ ಬಂದ್ರೆ, ಯಶ್ ಜೊತೆಗೆ ರಣಬೀರ್ ಕಪೂರ್, ಸಾಯಿ ಪಲ್ಲವಿ ನಟಿಸ್ತಾ ಇದ್ದಾರೆ. ಅಷ್ಟೇ ಯಾಕೆ ರಿಷಬ್‌ ಶೆಟ್ಟಿಯವರನ್ನ ಹುಡುಕಿಕೊಂಡು ಪ್ರಶಾಂತ್ ವರ್ಮಾ ಅವರೇ ಬಂದಿಲ್ವಾ? ಇದಕ್ಕಿಂತ ಹೆಮ್ಮೆ ಬೇಕಾ..?

'ಕಾಂತಾರ'-'ಕೆಜಿಎಫ್' ಅಷ್ಟೇ?

"ಕನ್ನಡದ ಬಗ್ಗೆ ಅಲ್ಲ, ಕನ್ನಡ ಇಂಡಸ್ಟ್ರಿ ಬಗ್ಗೆ ಅಭಿಮಾನ ಏನು ಇಲ್ಲ ನಂಗೆ. ಅಲ್ಲಿ ಒಳ್ಳೆ ಪ್ರತಿಭೆಗಳನ್ನು ಬೆಳೆಸುವುದಿಲ್ಲ. ಅದಕ್ಕೆ ಅದು ಬಹಳ ಚಿಕ್ಕ ಇಂಡಸ್ಟ್ರಿ ಆಗಿದೆ. ಮುಂದೆ ಇನ್ನು ಚಿಕ್ಕದಾಗುತ್ತದೆ. ಯಾಕೆ ತೆಲುಗು ಇಂಡಸ್ಟ್ರಿಯನ್ನ ಎಲ್ಲರೂ ಇಷ್ಟಪಡ್ತಾರೆ. ಅಂದ್ರೆ ವಿಶಾಲ ಹೃದಯದವರು ಇಲ್ಲಿದ್ದಾರೆ. ಈಗ ನೋಡಿ 'ಪುಷ್ಪ-2' ಎಂಥ ಕ್ರೇಜ್ ಹುಟ್ಟು ಹಾಕಿತ್ತು. ಇದೇ ಥರ ಇನ್ನು ದೊಡ್ಡಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತೆ. ಆದರೆ ಕನ್ನಡ ಇಂಡಸ್ಟ್ರಿ ಪ್ರಸ್ತುತ ಚಿಕ್ಕದೇ ಇದೆ. ಬಿಕಾಸ್ ಅಲ್ಲಿ ರಿಯಲ್ ಟ್ಯಾಲೆಂಟೆಡ್ ಇಲ್ಲ. 'ಕೆಜಿಎಫ್', 'ಕಾಂತಾರ' ಬಂತು. ಆಮೇಲೆ ಬಂದಂತ ಸಿನಿಮಾಗಳು ಅಷ್ಟಕ್ಕೆ ಅಷ್ಟೆ. ನಂಗು ಕೂಡ ಕೆಟ್ಟ ಅನುಭವ ಆಗಿದೆ. ಕಾಸ್ಟಿಂಗ್ ಕೌಚ್ ಅದು ಇದು ಕರ್ಮ ಇದೆ ಅಲ್ಲಿ' ಎಂದು ಸೌಮ್ಯಾ ಹೇಳಿದ್ದಾರೆ.

ಸೌಮ್ಯ ಮಾತಿಗೆ ಕೆಲವರ ಬೆಂಬಲ

ಅಂದಹಾಗೆ ಸೌಮ್ಯ ರಾವ್ ಹೇಳಿಕೆ ವೈರಲ್ ಆಗುತ್ತಿದೆ. ಕೆಲವರು ಆಕೆಯ ಮಾತ್ರ ಪರವಹಿಸಿದ್ದಾರೆ. ವಿಚಾರ ಕಹಿ ಎನಿಸಿದರೂ ಸತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಕಮೆಂಟ್ ಮಾಡೋರಿಗೆ, ರಿವ್ಯೂ ಕೊಡೋರಿಗೆ, ಆಡಿಯನ್ಸ್‌ಗೆ ನಮ್ಮ ಕನ್ನಡ ಇಂಡಸ್ಟ್ರಿ ಬೇರೆ ಲೆವೆಲ್ ಅನ್ನಿಸೋದು. ಕನ್ನಡ ಇಂಡಸ್ಟ್ರಿ ಆಲ್ ರೆಡಿ 90% ಬಿದ್ದೋಗಿದೆ. ಇನ್ನು 10% ಅಷ್ಟೇ ಇರೋದು. ಅದು ಹೇಗೆ ಅಂದ್ರೆ ಫ್ರೆಂಡ್‌ಶಿಪ್‌ನಲ್ಲಿ ಬೇಕಾದವರಿಗಾಗಿ ನಡೆಯುತ್ತಿದೆ' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಸೌಮ್ಯಾ ರಾವ್ ಯಾರು?

ಅಂದಹಾಗೆ ಸೌಮ್ಯಾ ಕರ್ನಾಟಕ ಮೂಲದವರು. ಮೊದಲು ಕನ್ನಡ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಬಳಿಕ ಧಾರಾವಾಹಿಗಳಲ್ಲಿ ಅವಕಾಶ ಹುಡುಕಿದ್ದರು. 'ಮಹಾಪರ್ವ' ಧಾರಾವಾಹಿಯ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಬಳಿಕ ದೊಡ್ಡದಾಗಿ ಅವಕಾಶಗಳು ಸಿಗಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಅವಕಾಶಗಳ ತಲಾಶೆ ನಡೆಸಿದ್ದರು. ಆದರೆ ಆಗ ಕಹಿ ಅನುಭವ ಆಗಿತ್ತು ಎಂದು ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. ತೆಲುಗಿನ 'ಜಬರ್ದಸ್ತ್' ಶೋ ನಿರೂಪಕಿಯಾಗಿ ಆಕೆಗೆ ಜನಪ್ರಿಯತೆ ಗಳಿಸಿದರು.

More from Filmibeat

English summary
Kannada industry won't encourage real talents, says Sowmya Rao;
Read more about: anchor actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X