ನಿರೂಪಕನ ಪ್ರೀತಿಯ ಬಲೆಯಲ್ಲಿ ಖ್ಯಾತ ಗಾಯಕಿ: ಪ್ರೇಮಿಗಳ ದಿನದಂದು ಮದುವೆ?
Recommended Video
'ಇಂಡಿಯನ್ ಐಡಲ್ 11'ನೇ ಆವೃತ್ತಿ ನಡೆಯುತ್ತಿದೆ. ಈಗಾಗಲೆ ಈ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಖ್ಯಾತ ಕಾರ್ಯಕ್ರಮದ ನಿರೂಪಕ ಆದಿತ್ಯ ನಾರಾಯಣ್ ಮತ್ತು ತೀರ್ಪುಗಾರ್ತಿ ನೇಹಾ ಕಕ್ಕರ್ ನಡುವಿನ ಪ್ರೀತಿ-ಪ್ರೇಮದ ವಿಚಾರ ಆಗಾಗ ಸುದ್ದಿಯಾಗುತ್ತಿತ್ತು.
ಆದ್ರೀಗ ಇಬ್ಬರು ಮದುವೆ ಆಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಈ ಜೋಡಿ ಈ ತಿಂಗಳು ಫೆಬ್ರವರಿ 14 ಪ್ರೇಮಿಗಳ ದಿನದಂದು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಶೋ ಪ್ರಾರಂಭವಾದಾಗಿನಿಂದಲೂ ಆದಿತ್ಯ ನಾಯರಾಯಣ್ ನೇಹಾ ಜೊತೆ ಫ್ಲರ್ಟ್ ಮಾಡುತ್ತಿದ್ದರು.
ಇದೆ ಶೋನಲ್ಲಿ ಮದುವೆ ಆಗುವಂತೆ ಪ್ರಪೋಸ್ ಕೂಡ ಮಾಡಿದ್ದರು. ಇನ್ನು ಇತ್ತೀಚಿಗೆ ಆದಿತ್ಯ ನಾರಾಯಣ್ ಪೋಷಕರಾದ ಉದಿತ್ ನಾರಾಯಣ ಮತ್ತು ದೀಪಾ ನಾರಾಯಣ್ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಜೊತೆಗೆ ನೇಹಾ ಕಕ್ಕರ್ ಪೋಷಕರು ಕೂಡ ಹಾಜರಾಗಿದ್ದರು. ಈ ಸಮಯದಲ್ಲಿ ಆದಿತ್ಯ ನಾರಾಯಣ್ ಪೋಷಕರು ನೇಹಾಗೆ, ಮನೆಯ ಸೊಸೆ ಆಗುತ್ತಿಯಾ ಎಂದು ಕೇಳಿ ಕಾಲೆಳೆದಿದ್ದರು.

ಇಬ್ಬರು ವೇದಿಕೆ ಮೇಲೆ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದನ್ನು ನೋಡಿ ಪಕ್ಕ ಇವರಿಬ್ಬರು ಮದುವೆ ಆಗುತ್ತಾರೆ ಅಂತಾನೆ ಹೇಳಲಾಗುತ್ತಿದೆ. ಇದರ ಬೆನ್ನಲೆ ಈಗ ಖಾಸಗಿ ವಾಹಿನಿ ಕೂಡ ಫೆಬ್ರವರಿ 14ಕ್ಕೆ ಇಬ್ಬರ ಮದುವೆ. ಎಂದು ಟ್ವೀಟ್ ಮಾಡಿ ಬಹಿರಂಗ ಪಡಿಸಿದೆ. ಹಾಗಾಗಿ ಇಬ್ಬರು ಮದುವೆ ಆಗುತ್ತಿದ್ದಾರಾ ಎನ್ನುವುದು ಅನೇಕರ ಕುತೂಹಲ. ಆದರೆ ಈ ಬಗ್ಗೆ ಆದಿತ್ಯ ಆಗಲಿ ಅಥವಾ ನೇಹಾ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿಗೆ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ನಟ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಕೂಡ ಇಬ್ಬರ ಮದುವೆಗೆ ಶುಭಹಾರೈಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆದಿತ್ಯ, ನೇಹಾ ಫೋಟೋಗೆ ನನ್ನ ಹೃದಯದ ಭಾಗ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ. ಇಬ್ಬರ ಮದುವೆ ವಿಚಾರ ಕಾರ್ಯಕ್ರಮದ ಗಿಮಿಕ್ ಅಥವಾ ನಿಜಕ್ಕು ಹಸೆಮಣೆ ಏರಲಿದ್ದಾರಾ ಎನ್ನುವುದು ಕಾದು ನೋಡಬೇಕು.


Click it and Unblock the Notifications