ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಜ್ರದ ನೆಕ್ಲೆಸ್ ಧರಿಸಿದ ಅನುಪಮಾ ಗೌಡ!
ಚಿನ್ನ, ಬೆಳ್ಳಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ವಜ್ರದ ಒಡವೆಗಳೆಂದರೆ ಹೆಣ್ಣು ಮಕ್ಕಳಿಗೆ ಇನ್ನು ಪ್ರೀತಿ ಜಾಸ್ತಿ. ಎಷ್ಟೇ ಕಾಸ್ಟ್ಲೀಯಾಗಿದ್ದರು ಇಷ್ಟಪಟ್ಟ ಒಡವೆಗಳನ್ನೊಮ್ಮೆ ಹಾಕಿಕೊಳ್ಳುವ ಬಯಕೆ ಇದ್ದೆ ಇರುತ್ತದೆ. ಇದೀಗ ಅನುಪಮಾ ಗೌಡ ತಮ್ಮ ಡೈಮಂಡ್ ಲುಕ್ ಅನ್ನು ತೋರಿಸಿದ್ದಾರೆ. ಡೈಮಂಡ್‌ನಲ್ಲಿಯೇ ಸಿಂಗಾರಗೊಂಡಾಗ ಹೆಣ್ಣು ಮಕ್ಕಳ ಲುಕ್ ಯಾವ ರೀತಿ ಬರಲಿದೆ ಎಂಬುದನ್ನು ರಿವಿಲ್ ಮಾಡಿದ್ದಾರೆ.
ನಟಿಮಣಿಯರು ಫೋಟೋಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಕೆಲವೊಂದು ಬ್ರ್ಯಾಂಡ್‌ಗಳೇ ನಟಿಯರಿಗೆ ವಿಶೇಷವಾಗಿ ಫೋಟೋಶೂಟ್ ಮಾಡಿಸುತ್ತಾರೆ. ಅದರಲ್ಲೂ ಜ್ಯುವೆಲ್ಲರಿ ಫೋಟೋಶೂಟ್ ಕಾಮನ್ ಆಗಿರುತ್ತೆ. ಇದೀಗ ಅನುಪಮಾ ಗೌಡ ಹಂಚಿಕೊಂಡಿರುವ ವಿಡಿಯೋವೊಂದು ಹೆಣ್ಣುಮಕ್ಕಳ ಕಣ್ಣು ಕುಕ್ಕಿದೆ. ಇಂಥದ್ದೊಂದು ಲುಕ್‌ನಲ್ಲಿ ನಾವೂ ಕಾಣಿಸಬೇಕಲ್ಲ ಎಂಬ ಆಸೆಯನ್ನ ಹುಟ್ಟು ಹಾಕಿದೆ. ಆದರೆ ಅನುಪಮಾ ಗೌಡ ಧರಿಸಿರುವ ಒಡವೆಗಳು ಕಂಪ್ಲೀಟ್ ಡೈಮಂಡ್ ಒಡವೆಗಳೇ ಆಗಿವೆ.

ಡೈಮಂಡ್ ನೆಕ್ಲೆಸ್
ಓರ್ರಾ ಜ್ಯುವೆಲ್ಲರಿ ಅನುಪಮಾ ಗೌಡ ಅವರಿಗೆ ಈ ಒಂದು ಲುಕ್ ಅನ್ನ ನೀಡಿದೆ. ಅದರಲ್ಲೂ ಡೈಮಂಡ್‌ನಲ್ಲೂ ನಾನಾ ರೀತಿಯ ಕಲೆಕ್ಷನ್ಸ್ ಇರಲಿದೆ. ಅದರಲ್ಲಿ ಹರಾಮ್ ನೆಕ್ಲೆಸ್ ಸೆಟ್ ಅನ್ನ ಅನುಪಮಾ ಗೌಡ ಹಾಕಿಕೊಂಡಿದ್ದಾರೆ. ಬರೀ ನೆಕ್ಲೆಸ್ ಮಾತ್ರವಲ್ಲ ಬಳೆ ರಿಂಗ್, ಕಿವಿಯೋಲೆ ಎಲ್ಲವನ್ನು ಧರಿಸಿ ಪೋಸ್ ನೀಡಿದ್ದಾರೆ. ಅದರಲ್ಲಿ ನೆಕ್ಲೆಸ್ ಒಂದರ ಬೆಲೆಯೇ ಸುಮಾರು 50 ಲಕ್ಷ ಇದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಅದರ ಬೆಲೆ ಕಾಣಿಸುತ್ತದೆ. ಇನ್ನು ಕಿವಿಯೋಲೆ, ಉಂಗುರ, ಬಳೆ ಎಲ್ಲವನ್ನು ಲೆಕ್ಕ ಹಾಕಿದರೆ ಕೋಟ್ಯಾಂತರ ರೂಪಾಯಿಯೇ ಆಗಲಿದೆ. ಈ ಯುಗಾದಿ ಹಬ್ಬಕ್ಕೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಡೈಮಂಡ್ ಧರಿಸಿ ಅನುಪಮಾ ಗೌಡ ಪೋಸ್ ನೀಡಿದ್ದಾರೆ.
3 ಲುಕ್‌ನಲ್ಲಿ ಫೋಟೊಶೂಟ್
ಇನ್ನು ಈ ವಿಡಿಯೋ ಶೂಟ್‌ನಲ್ಲಿ ಮೂರು ಬಗೆಯ ಲುಕ್ ಅನ್ನು ವಿವರಿಸಿದ್ದಾರೆ. ಅದರಲ್ಲಿ ಮೊದಲನೆಯದು Traditional elegance, Timeless Charm, Classic Heritage ಈ ಮೂರು ಬಗೆಯ ಲುಲ್‌ನಲ್ಲಿ ಅನುಪಮಾ ಗೌಡ ಅವರನ್ನ ಸಾಕಷ್ಟು ಮಂದಿ ಇಷ್ಟಪಟ್ಟಿದ್ದು ಮಾತ್ರ ಎರಡನೆಯ ಲುಕ್‌ನಲ್ಲಿ ಅಂದರೆ, ಟೈಮ್ ಲೆಸ್ ಚಾರ್ಮ್‌ನಲ್ಲಿ. ಎರಡು ರೀತಿಯ ಕಾಸ್ಟ್ಯೂಮ್ ಹಾಕಿರುವ ಅನುಪಮಾ ಗೌಡ ತುಂಬ ಮುದ್ದಾಗಿ ಕಾಣಿಸಿದ್ದಾರೆ.
ಜಾಹಿರಾತುಗಳಲ್ಲಿ ಮಿಂಚಿಂಗ್
ಅನುಪಮಾ ಗೌಡ ನಿರೂಪಕಿಯಾಗಿ, ನಟಿಯಾಗಿ ಎಲ್ಲರ ಮನಸ್ಸನ್ನು ಗೆದ್ದವರು. ಸೀರಿಯಲ್, ಸಿನಿಮಾಗಳಲ್ಲಿ ನಟನೆ ಮಾಡಿದ್ದರು ಕೂಡ ಅವರ ಕೈಹಿಡಿದಿದ್ದು ನಿರೂಪಣೆಯೇ. ಸದ್ಯ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನ ನಿರೂಪಕಿಯಾಗಿದ್ದಾರೆ. ಬಹಳಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೇ ತಮ್ಮ ವೈಯಕ್ತಿಕ ಬದುಕಿನ ಕಡೆಗೂ ಹೆಚ್ಚು ಫೋಕಸ್ ಮಾಡಿದ್ದಾರೆ. ಅಂದರೆ ವರ್ಕೌಟ್, ಬ್ಯೂಟಿ, ಸ್ಟೈಲಿಶ್ ಲುಕ್ ಹೀಗೆ ಎಲ್ಲವನ್ನು ಹಲವರಿಗೆ ಸ್ಫೂರ್ತಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.
ವರ್ಕೌಟ್ ವಿಚಾರದಲ್ಲಿ ರಾಜಿಯಾಗಲ್ಲ
ವರ್ಕೌಟ್ ವಿಚಾರದಲ್ಲಂತೂ ಸಿಕ್ಕಾಪಟ್ಟೆ ಹಾರ್ಡ್ ವರ್ಕೌಟ್ ಮಾಡುತ್ತಾರೆ. ಅವರೇ ಹಂಚಿಕೊಳ್ಳುವ ಹಲವು ವಿಡಿಯೋದಲ್ಲಿ ಆ ಶ್ರಮ ಎದ್ದು ಕಾಣಿಸುತ್ತದೆ. ಇನ್ನು ಸ್ಟೈಲ್ ವಿಚಾರಕ್ಕೆ ಬರೋದಾದ್ರೆ ಹಳೆಯ ಶರ್ಟ್ ಇದ್ದರು ಅದನ್ನ ಫ್ಯಾಷನೇಟ್ ಆಗಿ ತೋರಿಸುವ ಪರಿ ಹೇಗೆ ಎಂಬುದನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಸದ್ಯ ಹಬ್ಬದ ಪ್ರಯುಕ್ತ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಜ್ರದ ಆಭರಣದಲ್ಲಿ ಮಿಂಚಿದ್ದಾರೆ. ಹೆಂಗಳೆಯರ ಮನಸ್ಸನ್ನು ಕದಲಿಸಿದ್ದು, ಅವರಿಗೂ ಡೈಮಂಡ್ ಆಸೆಯನ್ನ ಹುಟ್ಟಿಸಿದ್ದಾರೆ.


Click it and Unblock the Notifications











