ಹೊಸ ರಿಯಾಲಿಟಿ ಶೋ ಮೂಲಕ ನಿರೂಪಕಿ ಅನುಪಮಾ ಗೌಡ ಕಮ್ ಬ್ಯಾಕ್
ಹೌದು, ನಟಿ ಅನುಪಮಾ ಗೌಡ ಅವರು ಇತ್ತೀಚೆಗೆ ನಟನೆಗಿಂತಲೂ ನಿರೂಪಣೆಯಲ್ಲಿಯೇ ಹೆಚ್ಚು ಹೆಸರು ಮಾಡುತ್ತಿದ್ದಾರೆ. "ಚಿ.ಸೌ.ಸಾವಿತ್ರಿ ಹಾಗೂ "ಅಕ್ಕ" ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮಾ ಗೌಡ ಹಳ್ಳಿ ದುನಿಯಾ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟರು. ಅದರಲ್ಲೂ ಬಿಗ್ ಬಾಸ್ ಸೀಸನ್ ಐದರಲ್ಲಿ ಕಾಣಿಸಿಕೊಂಡು ಹೆಚ್ಚಿನ ಜನಮನ್ನಣೆಗೆ ಪಾತ್ರವಾದರು.
ಅಸಲಿಗೆ ನಟಿ ಅನುಪಮಾ ಗೌಡ ಬಾಲ ನಟಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. 2003ರಲ್ಲಿ "ಲಂಕೇಶ್ ಪತ್ರಿಕೆ" ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಇವರು ನಂತರ "ಹಳ್ಳಿ ದುನಿಯಾ" ಎಂಬ ರಿಯಾಲಿಟಿ ಶೋ ಮೂಲಕ ಮತ್ತೆ ತೆರೆ ಮೇಲೆ ಬಂದರು. ಮುಂದೆ "ಚಿ.ಸೌ. ಸಾವಿತ್ರಿ₹ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಈಕೆಗೆ ಜನಪ್ರಿಯತೆ ನೀಡಿದ್ದು " ಅಕ್ಕ" ಧಾರಾವಾಹಿ. "ಅಕ್ಕ" ಎಂಬ ಧಾರಾವಾಹಿಯಲ್ಲಿ ಭೂಮಿಕಾ, ದೇವಿಕಾ ಎಂಬ ಅವಳಿ ಪಾತ್ರಗಳನ್ನು ನಿಭಾಯಿಸುವುದರ ಮೂಲಕ ಜನ ಗಮನ ಸೆಳೆದರು.

ನಟ ಕಾರ್ತಿಕ್ ಜಯರಾಮ್ ಅವರೊಂದಿಗೆ 'ಆ ಕರಾಳ ರಾತ್ರಿ' ಸಿನಿಮಾ ಮಾಡಿ ಹೆಚ್ಚಿನ ಮನ್ನಣೆ ಪಡೆದರು.ಮೊದಲ ಬಾರಿಗೆ ನಟನೆಯನ್ನು ಹೊರತುಪಡಿಸಿ ನಿರೂಪಕಿಯಾಗಿ ಅನುಪಮ ಗೌಡ ಕಾಣಿಸಿಕೊಂಡಿದ್ದು 'ಮಜಾಭಾರತ' ರಿಯಾಲಿಟಿ ಶೋ ಮೂಲಕ. ಅದಾದ ಮೇಲೆ ಹಿಂತಿರುಗದೆ ನಿರೂಪಣೆಯಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ ಈ ನಟಿ.
ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಕಾರ್ಯಕ್ರಮವನ್ನು ನಿರೂಪಿಸಿ ಸೈ ಎನಿಸಿಕೊಂಡ ನಟಿ ಅನುಪಮಾ ಗೌಡ, 'ಕನ್ನಡ ಕೋಗಿಲೆ' ರಿಯಾಲಿಟಿ ಶೋ ಅನ್ನು ಕೂಡ ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ರಾಜರಾಣಿ", "ನನ್ನಮ್ಮ ಸೂಪರ್ ಸ್ಟಾರ್" ಸೇರಿದಂತೆ ಹಲವು ರಿಯಾಲಿಟಿ ಶೋ ಗಳನ್ನು ನಿರೂಪಿಸಿರುವ ಅನುಪಮಾ ಗೌಡ ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸುವರ್ಣ ಸೂಪರ್ ಸ್ಟಾರ್" ಹಾಗೂ "ಸುವರ್ಣ ಜಾಕ್ ಪಾಟ್" ಎಂಬ ರಿಯಾಲಿಟಿ ಶೋಗಳಲ್ಲೂ ನಿರೂಪಕಿಯಾಗಿ ಕಾಣಿಸಿಕೊಂಡರು.
ಹೀಗೆ ನಟನೆಯಿಂದ ಸೀದಾ ನಿರೂಪಣೆಯತೆ ಹೆಚ್ಚಿನ ಒಲವು ತೋರಿಸುತ್ತಿರುವ ನಟಿ ನಿರೂಪಕಿ ಅನುಪಮಾ ಗೌಡ ಅವರು ನಾನಾ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸ್ವಂತ ಮನೆಯೊಂದನ್ನು ಖರೀದಿಸಿರುವ ನಟಿ ಅನುಪಮಾ ಗೌಡ ಮನೆಯ ಗೃಹಪ್ರವೇಶವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ವಿಶೇಷವೆಂದರೆ ತಮ್ಮ ಗೆಳತಿ ನೇಹಾ ಗೌಡ ಅವರು ತುಂಬು ಗರ್ಭಿಣಿ ಆಗಿದ್ದರಿಂದ ಅವರ ಇರುವಿಕೆ ಬಹಳ ಮುಖ್ಯ ಎಂಬ ಕಾರಣಕ್ಕೆ ಮನೆ ಗೃಹಪ್ರವೇಶವನ್ನು ಬೇಗವೇ ಮಾಡಿದರು ಅನುಪಮ ಗೌಡ.
ಅಷ್ಟೇ ಅಲ್ಲದೆ ತಮ್ಮದೇ ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿರುವ ನಟಿ ಅನುಪಮಾ ಗೌಡ ದೈನಂದಿನ ಚಟುವಟಿಕೆಗಳಿಂದ ಹಿಡಿದು ಶಾಪಿಂಗ್ ಕಾಸ್ಮೆಟಿಕ್ಸ್ ಹೀಗೆ ನಾನಾ ವಿಚಾರಗಳ ಬಗ್ಗೆ ದಿನ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂನಲ್ಲೂ ಬಹಳಷ್ಟು ಆಕ್ಟಿವ್ ಇದ್ದಾರೆ ಈ ನಟಿ.
ಪ್ರಸ್ತುತ ವಿಶೇಷವೆಂದರೆ "ಸುವರ್ಣ ಜಾಕ್ ಪಾಟ್" ರಿಯಾಲಿಟಿ ಶೋ ನಂತರ ನಟಿ ನಿರೂಪಕಿ ಅನುಪಮ ಗೌಡ ಅವರು "ಬಾಯ್ಸ್ ವರ್ಸಸ್ ಗರ್ಲ್ಸ್" ಎಂಬ ಹೊಸ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಫೆಬ್ರವರಿ ಒಂದರಿಂದ ಆರಂಭವಾಗಲಿರುವ ಈ ಹೊಸ ರಿಯಾಲಿಟಿ ಶೋ ಈಗಾಗಲೇ ಬಹಳಷ್ಟು ಕೌತುಕವನ್ನು ಮೂಡಿಸಿದ್ದು ಇದರ ಪ್ರೋಮೋ ಬಹಳಷ್ಟು ವೈರಲ್ ಆಗಿದೆ. ಪ್ರೊಮೋ ವಿಡಿಯೋದಲ್ಲಿ ನಟಿ ನಿರೂಪಕಿ ಅನುಪಮಾ ಗೌಡ ಅವರ ನಿರೂಪಣೆಯನ್ನು ನೋಡಬಹುದಾಗಿದೆ.
"ಬಾಯ್ಸ್ ವರ್ಸಸ್ ಗರ್ಲ್ಸ್" ಇದು ಜಿಗರ್ ಇರುವ ಹುಡುಗ ಹುಡುಗಿಯರ ಜಿದ್ದಾಜಿದ್ದಿ ಎಂಬ ಶೀರ್ಷಿಕೆ ಅಳಿಯ ಈ ರಿಯಾಲಿಟಿ ಶೋನ ನಡೆಸಿಕೊಡುತ್ತಿರುವವರು ಅನುಪಮಾ ಗೌಡ ಎಂಬುದು ಖಾತ್ರಿಯಾಗಿದೆ. ಮತ್ತೆ ನಿರೂಪಕಿಯಾಗಿ ಹೊಸ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ನಿರೂಪಕಿ ಅನುಪಮಾ ಗೌಡ ತಮ್ಮ ಫ್ಯಾನ್ಸ್ ಗೆ ಸಂತಸ ತಂದಿದ್ದಾರೆ.


Click it and Unblock the Notifications











