ಬಿಗ್‌ಬಾಸ್‌.. ಸಿನಿಮಾ.. ನಿರೂಪಣೆ ಜೊತೆಗೆ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ ನಿರೂಪಕಿ ಅನುಪಮಾ

By ಅನಿತಾ ಬನಾರಿ

ವನ್ಯಜೀವಿಗಳ ಬಗೆಗಿನ ಆಸಕ್ತಿ ಇತ್ತೀಚಿಗೆ ಬಹಳ ಹೆಚ್ಚಾಗುತ್ತಿರುವುದು ನಾವು ಗಮನಿಸಬಹುದು. ಹಲವಾರು ಸೆಲೆಬ್ರಿಟಿಗಳು ಹಾಗೂ ಫೋಟೋಗ್ರಾಫರ್‌ಗಳು ವನ್ಯಜೀವಿಗಳ ಫೋಟೋಗ್ರಫಿ ಮಾಡುವುದು, ವನ್ಯಜೀವಿಗಳ ಬಗ್ಗೆ ಸಂಶೋಧನೆ ಹಾಗೂ ಮಾಹಿತಿ ಕಲೆ ಹಾಕುವುದು, ಮಾಹಿತಿಯನ್ನು ಶೇರ್ ಮಾಡುವುದು ಇತ್ಯಾದಿಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡಿಂಗ್ ಆಗಿದೆ. ಇದರ ಬೆನ್ನೆಲ್ಲೇ ನಟಿ, ನಿರೂಪಕಿ ಅನುಪಮಾ ಗೌಡ ಇದೀಗ ವೈಲ್ಡ್ ಲೈಫ್ ಗೀಳು ಹಿಡಿದುಕೊಂಡು ವನ್ಯಜೀವಿಗಳ ಹಿಂದೆ ಹೋಗುತ್ತಿದ್ದಾರೆ.

ಹೌದು, ನಟಿ ನಿರೂಪಕಿ ಅನುಪಮಾ ಗೌಡ ಗೆಳತಿ ನಟಿ ಇಶಿತಾ ವರ್ಷ ಇತ್ತೀಚೆಗೆ ತಮ್ಮ ವೈಲ್ಡ್ ಲೈಫ್ ಫೋಟೋಗ್ರಾಫಿ ಮೂಲಕ ಬಹಳಷ್ಟು ಸದ್ದು ಮಾಡುತ್ತಿದ್ದಾರೆ. ಇದೀಗ ನಟಿ ಅನುಪಮಾ ಕೂಡ ಗೆಳತಿ ಇಶಿತಾ ಅವರಂತೆ ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅನುಪಮಾ ಗೌಡ ಅವರು ವೈಲ್ಡ್ ಲೈಫ್ ಫೋಟೋಗ್ರಾಫರ್ ಶಶಾಂಕ್ ಅವರನ್ನು ಭೇಟಿಯಾಗಿದ್ದು, ಹಲವಾರು ದೇಶ ವಿದೇಶಗಳಿಗೆ ಸುತ್ತಾಡುವ ಮೂಲಕ ವನ್ಯಜೀವಿಗಳನ್ನು ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯುತ್ತಿದ್ದಾರೆ.

Anchor Anupama Gowda is now a wildlife photographer

ಇನ್ನು ಈಗಾಗಲೇ ಆಫ್ರಿಕಾದ ಕಾಡುಗಳಿಗೆ ಹೋಗಿದ್ದಾರೆ ಅನುಪಮಾ ಗೌಡ. ಹೌದು, ಗೆಳತಿಯರಾದ ಇಶಿತ ಹಾಗೂ ನೇಹಾ ಗೌಡ ಅವರೊಂದಿಗೆ ಅಲ್ಲಿಗೆ ತೆರಳಿದ್ದ ಈಕೆ ಫೋಟೋಗ್ರಫಿ ಸ್ಕಿಲ್ ಗಳನ್ನು ಬಹಳಷ್ಟು ಕಲಿತಿದ್ದಾರೆ. ಜೊತೆಗೆ ತಮ್ಮ ಫೋಟೋಗ್ರಫಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಅದರ ಬಗ್ಗೆ ಸಂತೋಷವನ್ನು ಕೂಡಾ ವ್ಯಕ್ತಪಡಿಸಿರುವ ನಟಿ ಅನುಪಮ ಗೌಡ.

"ವನ್ಯಜೀವಿಗಳ ಹಿಂದೆ ಫೋಟೋಗ್ರಫಿಗೆ ಕ್ಯಾಮೆರಾ ಹಿಡಿದು ಹೋಗುತ್ತಿರುವುದು ನನ್ನ ಬ್ಯುಸಿ ಲೈಫ್‌ನಿಂದ ಬಹಳ ದೊಡ್ಡ ರಿಲೀಫ್ ಕೊಟ್ಟಿದೆ. ಇದರಿಂದ ದೇಶ ವಿದೇಶಗಳನ್ನು ಸುತ್ತುವ ಗೀಳು ಹತ್ತಿದೆ. ಹಲವಾರು ದೇಶಗಳನ್ನು ಸುತ್ತಿ ಕಾಡುಗಳನ್ನು ಅಲೆದು ಫೋಟೋಗ್ರಫಿ ಮಾಡುವ ಹಂಬಲ ನನಗಿದೆ" ಎಂದು ಹೇಳಿಕೊಂಡಿದ್ದಾರೆ ಅನುಪಮಾ ಗೌಡ.

ಒಟ್ಟಿನಲ್ಲಿ ಹೇಳುವುದಾದರೆ ಕ್ರಿಯಾಶೀಲತೆಯನ್ನೇ ಜೀವನವಾಗಿಸಿಕೊಂಡಿರುವ ನಟಿ ನಿರೂಪಕಿ ಅನುಪಮಾ ಗೌಡ ಅವರು ಇದೀಗ ಹೊಸದೊಂದು ಅಡ್ವೆಂಚರಸ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಹಲವಾರು ಜನರಿಗೆ ಪ್ರೇರಣೆಯಾಗಿದೆ. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸುವರ್ಣ ಜಾಕ್ ಪಾಟ್" ಶೋವಿನ ನಿರೂಪಕಿಯಾಗಿಯೂ ಈಕೆ ಕಾಣಿಸಿಕೊಂಡಿದ್ದಾರೆ.

Anchor Anupama Gowda is now a wildlife photographer

'ಅಕ್ಕ' ಧಾರಾವಾಹಿಯಲ್ಲಿ ಕೊನೆಯ ಬಾರಿ ನಟಿಸಿದ ಈಕೆ ತದ ನಂತರ ನಿರೂಪಕಿಯಾಗಿ ಮೋಡಿ ಮಾಡಿದ್ದೇ ಹೆಚ್ಚು. 'ಮಜಾಭಾರತ', 'ಕನ್ನಡ ಕೋಗಿಲೆ', 'ರಾಜ ರಾಣಿ', 'ನನ್ನಮ್ಮ ಸೂಪರ್ ಸ್ಟಾರ್' ಶೋಗಳ ಸಾರಥ್ಯ ವಹಿಸಿಕೊಂಡಿರುವ ಈಕೆ ಇದೀಗ 'ಸುವರ್ಣ ಜಾಕ್ ಪಾಟ್'ನ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಇನ್ನು 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ನಟಿಸಿದ ಈಕೆ ನಂತರ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಟನೆಯಿಂದ ದೂರವಿರುವ ಈಕೆ ಮತ್ತೆ ಬಣ್ಣ ಹಚ್ಚುತ್ತಾರಾ? ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಾರಾ ಎಂಬುದು ಸದ್ಯಕ್ಕೆ ಕುತೂಹಲ.

More from Filmibeat

English summary
Anupama Gowda said that my busy life got a little break due to photography:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X