Anupamagowda: ಯಾರು ತಿಳಿಯರು ಅನುಪಮಾ ತೊಡೆ ಬಲದ ಪರಾಕ್ರಮ; ವರ್ಕೌಟ್ ವೇಳೆ ಫುಲ್ ಕಾಮಿಡಿ!
ಅನುಪಮಾ ಗೌಡ ಇತ್ತೀಚೆಗೆ ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ಸೀರಿಯಲ್ ನಟನೆ, ಆಂಕರಿಂಗ್‌ನಲ್ಲಿ ಬ್ಯುಸಿ ಇದ್ದ ನಟಿ ಈಗ ಹೆವಿ ವರ್ಕೌಟ್ ಕಡೆಗೆ ಗಮನ ಕೊಟ್ಟಿದ್ದಾರೆ. ತಾವೆಷ್ಟು ಹಾರ್ಡ್ ವರ್ಕ್ ಮಾಡ್ತೀವಿ ಎಂಬುದನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಸ್ನೇಹಿತೆಯರೆಲ್ಲ ಸೇರಿ ಒಟ್ಟಿಗೆ, ಒಂದೇ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಕಲರ್ಸ್ ಕನ್ನಡದ ಶೋನಲ್ಲಿ ಆಂಕರಿಂಗ್ ಮಾಡುವ ಮೂಲಕ ಅನುಪಮಾ ಗೌಡ ಆಕ್ಟೀವ್ ಆಗಿದ್ರು. 'ರಾಜಾ-ರಾಣಿ' ರಿಲೋಡೆಡ್‌ನಲ್ಲಿ ಒಳ್ಳೆ ಆಂಕರಿಂಗ್ ಮಾಡಿ, ಬಂದಿದ್ದ ಜೋಡಿಗಳನ್ನು ನಕ್ಕು ನಗಿಸಿದ್ದರು. ಆದರೆ ಶೋ ಮುಗಿದ ಮೇಲೆ ಫಿಟ್ನೆಸ್ ಕಡೆಗೆ ಹೆಚ್ಚು ಹರಿಸಿದ್ದಾರೆ. ಅನುಪಮಾ ವರ್ಕೌಟ್‌ಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

ಫಿಟ್ ಅಂಡ್ ಫೈನ್ ಅನುಪಮಾ
ಅನುಪಮಾ ಈ ಮೊದಲು ಕೂಡ ವರ್ಕೌಟ್ ಮಾಡ್ತಾ ಇದ್ದರು ಅನ್ನಿಸುತ್ತೆ. ಆದರೆ ಎಲ್ಲಿಯೂ ಆ ವಿಡಿಯೋಗಳನ್ನ ಹೆಚ್ಚು ಅಗಿ ಹಾಕಿಕೊಳ್ಳುತ್ತಾ ಇರಲಿಲ್ಲ. ಆದರೆ 'ರಾಜಾ-ರಾಣಿ' ಶೋ ಬಳಿಕ ಜಿಮ್‌ಗೆ ಹೋಗುವುದಕ್ಕೆ ಶುರು ಮಾಡಿದ್ದಾರೆ. ಅಂದಿನಿಂದಲೂ ತಾವೂ ಮಾಡುವ ಪ್ರತಿಯೊಂದನ್ನು ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಇರುತ್ತಾರೆ. ಬರೀ ವರ್ಕೌಟ್ ವಿಡಿಯೋ ಅಂತೆಲ್ಲಾ ಸಿಕ್ಕಾಪಟ್ಟೆ ಫೋಟೋಶೂಟ್ ಕೂಡ ಮಾಡಿಸುತ್ತಾ ಇರುತ್ತಾರೆ.
ಅನುಪಮಾ ಜೊತೆ ಫ್ರೆಂಡ್ ವರ್ಕೌಟ್
ಇನ್ನು ಅನುಪಮಾ ಹೆಚ್ಚು ಸ್ನೇಹಿತರನ್ನು ಸಂಪಾದಿಸುತ್ತಾರೆ. ಅನುಪಮಾ ಇರುವ ರೀತಿಗೆ ಬಹಳ ಬೇಗ ಗೆಳತನ ಬೆಳೆಸಿಕೊಳ್ಳುವವರು ಇದ್ದಾರೆ. ಆದರೆ ಅನುಪಮಾ ಚೂಸ್ ಮಾಡುವ ಸ್ನೇಹಿತರು ಜೊತೆ ಜೊತೆಯಾಗಿಯೇ ಇರುತ್ತಾರೆ. ಇದೀಗ ಜಿಮ್‌ನಲ್ಲಿ ಆ ಸ್ನೇಹ ಎದ್ದು ಕಾಣಿಸುತ್ತಿದೆ. ಅನುಪಮಾ ಗೌಡ, ಪವಿ ಪಡುಕೋಣೆ, ಕೃಷಿ ತಾಪಂಡ ಒಟ್ಟಿಗೆ ಒಂದೇ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ಆಗಾಗ ಜಿಮ್‌ನಲ್ಲಿರುವ ಪ್ರಾಪರ್ಟಿ ಬಳಸಿ ಫನ್ ಮಾಡುತ್ತಾರೆ.
ಅಣ್ಣಾವ್ರ ಹಾಡಿಗೆ ಬೇರೆ ಪದ ಮಿಕ್ಸ್
ಇದೇ ರೀತಿ ಫನ್ ಮಾಡುವಾಗ ಇವತ್ತು ಭಾರ ಎತ್ತುವ ಟಾರ್ಗೆಟ್ ಇತ್ತು. ಆಗ ಅಣ್ಣಾವ್ರ ಫೇಮಸ್ ಹಾಡೊಂದನ್ನ ಹಾಡಿದ್ದಾರೆ. ಯಾರು ತಿಳಿಯರು ನನ್ನ ಭುಜ ಬಲದ ಪರಾಕ್ರಮ ಎಂಬ ಸಾಲುಗಳನ್ನ ಅನುಪಮಾ ಗೌಡ ಬದಲಾಯಿಸಿದ್ದಾರೆ. ಯಾರೂ ತಿಳಿಯರು ನನ್ನ ತೊಡೆ ಬಲದ ಪರಾಕ್ರಮವಾ? ಎಂದು ಹಾಡಿದ್ದಾರೆ. ಈ ಸಾಲುಗಳಂತು ಸಿಕ್ಕಾಪಟ್ಟೆ ಕಾಮಿಡಿ ಹುಟ್ಟು ಹಾಕಿದೆ. ಸ್ನೇಹಿತರೆ ಸೇರಿಕೊಂಡು ನಕ್ಕು ನಕ್ಕು ಸಸುಸ್ತಾಗಿದ್ದಾರೆ. ಇನ್ನು ಜಿಮ್‌ನಲ್ಲಿ ಕ್ರಿಯೇಟಿವ್ ಆಗಿ ಯಾವ ಥರ ವಿಡಿಯೋ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತೊಡೆ ಬಲದ ಪರಾಕ್ರಮ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಜಾಲಿ ಜಾಲಿಯಾಗಿರುವ ಅನುಪಮಾ
ಅನುಪಮಾ ತಮ್ಮ ವರ್ಕೌಟ್ ವಿಡಿಯೋ ಹಾಕಿದ್ದು, ಆ ವಿಡಿಯೋಗೆ ಕಮೆಂಟ್ ಮಾತ್ರ ಬೆಂಕಿ ಗುರು. ಸುಮಾರು ಜನ ಹಾರ್ಟ್ ಹಾಕಿದ್ರೆ, ಇನ್ನೊಂದಷ್ಟು ಜನ ಬೆಂಕಿ ಸಿಂಬಲ್ ಹಾಕಿದ್ದಾರೆ. ಅನುಪಮಾ ಗೌಡ ಫುಲ್ ಜಾಲಿ ಜಾಲಿ ಹುಡುಗಿ. ಎಲ್ಲರೊಟ್ಟಿಗೆ ಇರುವಾಗಲೂ ನಕ್ಕು ನಲಿಸುತ್ತಾರೆ. ಅದನ್ನ ಸುಮಾರು ಸಲ ವಿಡಿಯೋದಲ್ಲೂ ನೋಡಿದ್ದೀವಿ, ಎಂದು ಅವರ ಸ್ನೇಹಿತರು ಹೇಳುತ್ತಾರೆ. ಯಾರಿಗೂ ನೋವು ಮಾಡದ, ಜೊತೆಗಿರುವವರನ್ನು ಖುಷಿಯಾಗಿಟ್ಟುಕೊಳ್ಳುವ ನಟಿ ಅನುಪಮಾ ಗೌಡ.


Click it and Unblock the Notifications











