ಕೀರ್ತನ್, ಹನುಮಂತಣ್ಣನಿಗೆ ಅನುಶ್ರೀ ಅಭಿನಂದನೆ
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಸೀಸನ್ 15ಕ್ಕೆ ತೆರೆ ಬಿದ್ದಿದೆ. ಈ ಬಾರಿ ಕೀರ್ತನ್ ಹೊಳ್ಳ ವಿನ್ನರ್ ಆದ್ರೆ, ಹನುಮಂತಣ್ಣ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದ ವಿಜೇತರಾಗಿರುವ ಕೀರ್ತನ್ ಹಾಗೂ ಹನುಮಂತಣ್ಣನಿಗೆ ನಿರೂಪಕಿ ಅನುಶ್ರೀ ಶುಭಾಶಯ ತಿಳಿಸಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
Congratulations..ನಮ್ಮ ಕುಡ್ಲದ ಬಾಲೆಗು @keerthan.holla sooooo happy for u... n o fcourse ನನ್ನ ತಮ್ಮಯ್ಯ @hanumantha_lamani_official ಇಡೀ ಕರ್ನಾಟಕ ಇವ್ನ TECHNEEKA ಗೆ ಮನಸೋತಿದ್ದಾರೆ . ಇವರಿಬ್ಬರಿಗೆ ಚಪ್ಪಾಳೆ'' ಎಂದು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾರ್ಯಕ್ರಮದ ಅಂತಿಮ ಹಂತಕ್ಕೆ ಹೃತ್ವಿಕ್, ಸಾಧ್ವಿನಿ, ಕೀರ್ತನ್ ಹೊಳ್ಳ, ಹನುಮಂತಣ್ಣ, ವಿಜೇತ್ ಹಾಗೂ ನಿಹಾಲ್ ಬಂದಿದ್ದರು. ಫೈನಲ್ ವೇದಿಕೆ ಮೇಲೆ ಈ ಆರು ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಿತು. ಇದರಲ್ಲಿ ಕೀರ್ತನ್ ಹೊಳ್ಳ ವಿಜೇತರಾಗಿದ್ದಾರೆ.
ಕಾರ್ಯಕ್ರಮ ವಿನ್ನರ್ ಆದ ಕೀರ್ತನ್ ಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ 35 ಲಕ್ಷ ಮೌಲ್ಯದ 3 ಬಿ ಹೆಚ್ ಕೆ ಅಪಾರ್ಟ್ ಮೆಂಟ್ ಸಿಕ್ಕಿದೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯ ವಿನ್ನರ್ ಟ್ರೋಫಿ ಅವರ ಪಾಲಾಗಿದೆ.


Click it and Unblock the Notifications











