ಅಪ್ಪು ಫ್ಯಾನ್ಸ್ ಸಂತೋಷ, ಕಣ್ಣೀರು: ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಶುಭ ಕೋರಿದ ಆ್ಯಂಕರ್ ಅನುಶ್ರೀ

By ಅನಿತಾ ಬನಾರಿ

'ಅಪ್ಪು' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಇದು. ಇದೀಗ ಅಪ್ಪು ಸುದ್ದಿ ಯಾಕೆ ಎಂದರೆ ಇಂದು ಅಪ್ಪು ಸಿನಿಮಾ ರಿ ರಿಲೀಸ್ ಆಗಿದೆ. ಅದು ಬರೋಬ್ಬರಿ 25 ವರ್ಷಗಳ ಬಳಿಕ. ಹೌದು, 23 ವರ್ಷಗಳ ಹಿಂದೆ ತೆರೆ ಕಂಡಿದ್ದ ಅಪ್ಪು ಸಿನಿಮಾ ಇಂದು ಮತ್ತೊಮ್ಮೆ ರಿಲೀಸ್ ಆಗಿದೆ. ಮಹಾನಗರಿ ಬೆಂಗಳೂರಿನಲ್ಲಿ ಅಂತೂ ಅಪ್ಪು ಅಭಿಮಾನಿಗಳು ಸಂತಸದಿಂದ, ಸಡಗರದಿಂದ ಅಪ್ಪು ಸಿನಿಮಾವನ್ನು ನೋಡಿದ್ದಾರೆ.

ಪವರ್ ಸ್ಟಾರ್‌ನ ಕಟ್ಟಾ ಅಭಿಮಾನಿಗಳ ಪೈಕಿ ಆ್ಯಂಕರ್ ಅನುಶ್ರೀ ಕೂಡಾ ಒಬ್ಬರು. ಸ್ವತಃ ಅನುಶ್ರೀ ಅವರೇ ತಾನು ಎಷ್ಟರ ಮಟ್ಟಿಗೆ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ, ಯಾಕೆ ಅವರ ಅಭಿಮಾನಿ ಎಂಬುದನ್ನೆಲ್ಲಾ ಸುಮಾರು ಸಾರಿ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ತಮ್ಮ ನೆಚ್ಚಿನ ನಾಯಕನ ಮೊದಲ ಸಿನಿಮಾಅಪ್ಪುವನ್ನು ನೋಡಿ ಕಣ್ತುಂಬಿಸಿಕೊಂಡಿದ್ದಾರೆ. ಬೆಂಗಳೂರಿನ ಥಿಯೇಟರ್‌ನಲ್ಲಿ ಅಪ್ಪು ಸಿನಿಮಾವನ್ನು ನೋಡಿದ ನಿರೂಪಕಿ ಅನುಶ್ರೀ ತಮ್ಮ ನೆಚ್ಚಿನ ನಟನನ್ನು ಬಿಗ್ ಸ್ಕ್ರೀನ್‌ನಲ್ಲಿ ಕಂಡು ಭಾವುಕರಾಗಿದ್ದಾರೆ.

Anchor Anushree congratulates Ashwini Puneeth Rajkumar after watching the Appu movie

ಇದೇ ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ. ಅವರ 50 ನೇ ಹುಟ್ಟುಹಬ್ಬದ ಸಲುವಾಗಿ ಇಂದು (ಮಾರ್ಚ್ 14) ಅಪ್ಪು ಸಿನಿಮಾ ರಿ ರಿಲೀಸ್ ಆಗಿದೆ. ಸಿನಿಮಾ ನೋಡಿರುವ ಅನುಶ್ರೀ ಅವರು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇಂದು (ಮಾರ್ಚ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶುಭದಿನದಂದು ಅನುಶ್ರೀ ಅವರು ಅಶ್ವಿನಿಗೆ ಶುಭಾಶಯಗಳನ್ನು ಕೂಡಾ ತಿಳಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಫೋಟೋದ ಜೊತೆಗೆ ಅಪ್ಪು ಸಿನಿಮಾ ಟೈಟಲ್ ಕಾರ್ಡ್ ವಿಡಿಯೋವನ್ನು ಅನುಶ್ರೀ ಹಂಚಿಕೊಂಡಿದ್ದಾರೆ. "ಅಪ್ಪು ಅಪ್ಪುಗೆಯ ಪ್ರೀತಿ ಅಶ್ವಿನಿ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು. ಇಂದು ಅಪ್ಪು ಅವರು ಮತ್ತೆ ಬಂದಿದ್ದಾರೆ. ಅವರನ್ನು ಮನಸಾರೆ ಅಪ್ಪಿದ ಕ್ಷಣ. ನಮ್ಮ ರಕ್ಷಿತಾ ಮೇಡಂ ಮುಗ್ದ ನಗು ಸೆರೆ ಹಿಡಿದ ಕ್ಷಣ. ಗುರುಕಿರಣ್ ಮ್ಯೂಸಿಕ್ ಆಲಿಸಿದ ಕ್ಷಣ. ಎಲ್ಲಕ್ಕಿಂತ ಅಪ್ಪು ಅಭಿಮಾನಿಗಳ ಸಂತೋಷ, ಕಣ್ಣೀರು, ಅಭಿಮಾನದ ಹೊಳೆಯಲ್ಲಿ ಮಿಂದ ಕ್ಷಣ, ಮೈ ರೋಮಾಂಚನ" ಎಂದು ಅನುಶ್ರೀ ತಮ್ಮ ಪೋಸ್ಟ್ ಕೆಳಗೆ ಬರೆದುಕೊಂಡಿದ್ದಾರೆ.

ಅಪ್ಪು ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿರುವ ಆ್ಯಂಕರ್ ಅನುಶ್ರೀ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ಜೊತೆಗೆ ಇದು ಕೇವಲ ಸಿನಿಮಾ ರಿಲೀಸ್ ಅಲ್ಲ, ಅಪ್ಪು ಸರ್ ಅಭಿಮಾನಿಗಳಿಗೆ ಇದೊಂದು ಹಬ್ಬ ಎಂದು ಆಕೆ ಹೇಳಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡುವುದಕ್ಕೆ, ವಿಸಿಲ್ ಹೊಡೆಯುವುದಕ್ಕೆ ಇನ್ನೂ ಒಂದು ವರ್ಷ ಕಾಯಬೇಕು. ಒಂದು ವರ್ಷ ಕಾದರೂ ಪರವಾಗಿಲ್ಲ. ಅಪ್ಪು ಸರ್ ಸಿನಿಮಾವನ್ನು ಲಾಂಚಿಂಗ್ ಟೈಂನಲ್ಲಿ ಹೇಗೆ ಸಂಭ್ರಮಿಸಿದ್ವೋ ಅದೇ ರೀತಿ ಸಂಭ್ರಮಿಸುತ್ತೇವೆ ಎಂದಿದ್ದಾರೆ ಅನುಶ್ರೀ. ಮಾತ್ರವಲ್ಲ ಇಂದು ಅಶ್ವಿನಿ ಮೇಡಂ ಹುಟ್ಟುಹಬ್ಬ ಹೌದು. ಎಲ್ಲ ಅಪ್ಪು ಅಭಿಮಾನಿಗಳ ಪರವಾಗಿ ಅಶ್ವಿನಿ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅನುಶ್ರೀ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ 153 ಸ್ಕ್ರೀನ್‌ಗಳಲ್ಲಿ ಅಪ್ಪು ಸಿನಿಮಾ ತೆರೆಗೆ ಬಂದಿದೆ. ಹಿಂದಿನ ವರ್ಷ 'ಜಾಕಿ' ಸಿನಿಮಾವನ್ನು ರಿ ರಿಲೀಸ್ ಮಾಡಲಾಗಿತ್ತು. ಈ ಬಾರಿ ಅಪ್ಪು ಸಿನಿಮಾ ತೆರೆಗೆ ಬಂದಿದೆ. ಏಪ್ರಿಲ್ 22, 2002ರಲ್ಲಿ ತೆರೆ ಕಂಡ ಅಪ್ಪು ಸಿನಿಮಾ 200 ದಿನಗಳ ಕಾಲ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X