ಬೆಂಗಳೂರಿನಲ್ಲಿ ನಿರೂಪಕಿ ಅನುಶ್ರೀ ಹೊಸ ಮನೆಗೆ ಭೂಮಿ ಪೂಜೆ!

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಒನ್ ಅಂಡ್ ಓನ್ಲಿ ಬ್ಯೂಟಿಫುಲ್ ಫೀಮೇಲ್ ಸ್ಟಾರ್ ಆಂಕರ್ ಅನುಶ್ರೀ. ಜೀ ಕನ್ನಡದಲ್ಲಿ ಮೂಡಿ ಬರುವ ಹಲವು ಕಾರ್ಯಕ್ರಮಗಳಿಗೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅಲ್ಲದೇ, ಸ್ಯಾಂಡಲ್‌ವುಡ್‌ನ ಹಲವು ಕಾರ್ಯಕ್ರಮಗಳನ್ನು ಅನುಶ್ರೀ ನಡೆಸಿಕೊಡುವುದು ಉಂಟು.

ಕಿರುತೆರೆಯಲ್ಲಿ ನಿರೂಪಕರಾಗಿ, ಹಿರಿತೆರೆಯಲ್ಲಿ ನಟಿಯಾಗಿ ಸಕ್ರಿಯರಾಗಿರುವ ಆಂಕರ್ ಅನುಶ್ರೀ ಪದವಿ ಮುಗಿಸುತ್ತಿದ್ದಂತೆಯೇ ಕೆಲಸಕ್ಕೆ ಸೇರಿಕೊಂಡರು. ಮೊದಲು ಅನುಶ್ರೀ ದೂರದರ್ಶನದಲ್ಲಿ ಕೆಲಸ ಆರಂಭಿಸಿದರು. ಇಂದು ಕರುನಾಡಿನ ಫೇಮಸ್ ಆಂಕರ್ ಆಗಿದ್ದಾರೆ. ಇದು ಕನ್ನಡಿಗರ ಹೆಮ್ಮೆಯ ವಿಚಾರವೂ ಹೌದು.

ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ಅನುಶ್ರೀ, ಇಂದು ಯಶಸ್ಸನ್ನು ಕಂಡು ಖುಷಿಯಾಗಿದ್ದಾರೆ. ಹಲವು ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ಅನುಶ್ರೀ ಇದೀಗ ತಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದು ಎಲ್ಲಿ? ಏನು ಎಂಬ ಬಗ್ಗೆ ನೋಡೋಣ ಬನ್ನಿ..

ಅನುಶ್ರೀ ಬೆಂಗಳೂರಿನಲ್ಲಿ ಹೊಸ ಮನೆ!

ಅನುಶ್ರೀ ಬೆಂಗಳೂರಿನಲ್ಲಿ ಹೊಸ ಮನೆ!

ಇದೀಗ ಅನುಶ್ರೀ ಹೊಸ ಮನೆ ಕಟ್ಟಿಸಲು ಮುಂದಾಗಿದ್ದಾರೆ. ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನ ಸುಬ್ರಹ್ಮಣ್ಯಪುರಂನಲ್ಲಿ ಅನುಶ್ರೀ ಜಾಗ ಖರೀದಿ ಮಾಡಿದ್ದಾರೆ. ಹೊಸ ಮನೆ ಕಟ್ಟಲು ಇಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಅನುಶ್ರೀ ಅವರ ಸೈಟ್‌ನಲ್ಲಿ ಭೂಮಿ ಪೂಜೆಯನ್ನು ಮಾಡಲಾಗಿದೆ. ಈ ವೇಳೆ ಅನುಶ್ರೀ ತಾಯಿ ಮತ್ತು ಸಹೋದರ ಕೂಡ ಜೊತೆಗಿದ್ದಾರೆ. ಇನ್ನು ಇವರನ್ನು ಬಿಟ್ಟು ಅನುಶ್ರೀಗೆ ಆಪ್ತರಾಗಿರುವ ವಸ್ತ್ರ ವಿನ್ಯಾಸಕಿ ಅಂಜಲಿ ಕುಟುಂಬ ಕೂಡ ಭಾಗಿಯಾಗಿದೆ.

ಮಂಗಳೂರು ಬೆಡಗಿ ಬೆಂಗಳೂರಲ್ಲಿ!

ಮಂಗಳೂರು ಬೆಡಗಿ ಬೆಂಗಳೂರಲ್ಲಿ!

ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಅನುಶ್ರೀ ಓದಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಪದವಿ ಓದಿ ಮುಗಿಯುತ್ತಿದ್ದಂತೆ ದೂರದರ್ಶನಕ್ಕೆ ಎಂಟ್ರಿ ಕೊಟ್ಟರು. ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿದರು. ಈ ಟಿವಿ ಕನ್ನಡ ವಾಹಿನಿಯ 'ಡಿಮಾಂಡೆಪ್ಪೋ ಡಿಮಾಂಡು' ಸೇರಿದಂತೆ ಕಸ್ತೂರಿ ವಾಹಿನಿ, ಜೀ ಕನ್ನಡ ವಾಹಿನಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರೂಪಣೆಯನ್ನು ಮಾಡುತ್ತಾ ಮನೆ ಮಾತಾದರು.

ನಿರೂಪಕಿಯಿಂದ ನಾಯಕಿಯಾದ ಅನುಶ್ರೀ

ನಿರೂಪಕಿಯಿಂದ ನಾಯಕಿಯಾದ ಅನುಶ್ರೀ

ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾ, ಕರುನಾಡಿನ ಮನೆ ಮಗಳಾದರು. ಇಂದಿಗೂ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್ನು ರಿಯಾಲಿಟಿ ಶೋಗಳನ್ನು ನಡೆಸಿ ಕೊಡುತ್ತಾ ನಿರೂಪಣೆಗಷ್ಟೇ ಮೀಸಲಾಗಿರದ ಅನುಶ್ರೀ, 'ಬೆಂಕಿಪಟ್ಣ' ಚಿತ್ರಕ್ಕೆ ಬಣ್ಣ ಹಚ್ಚಿದರು.

ಏಳು ಬೀಳುಗಳನ್ನು ಕಂಡ ಅನುಶ್ರೀ!

ಏಳು ಬೀಳುಗಳನ್ನು ಕಂಡ ಅನುಶ್ರೀ!

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಸದ್ದು ಮಾಡಲು ಶುರುವಾದಾಗ ಅನುಶ್ರೀ ಹೆಸರು ಕೂಡ ಕೇಳಿ ಬಂತು. ಆದರೆ ಅನುಶ್ರೀ ಇದನ್ನು ಅಲ್ಲಗಳೆದಿದ್ದರು. ಕಳೆದ ವರ್ಷ ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿತ್ತು. ಡ್ರಗ್ಸ್ ಪ್ರಕರಣದ ಆರೋಪಿ ಅನುಶ್ರೀ ಡ್ರಗ್ ಸೇವಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಸುದ್ದಿಯಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು.

More from Filmibeat

English summary
Anchor Anushree Offers Boomi Pooja For New House In Bengalore,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X