ರೋಷನ್ ಅವತ್ತು ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅಂತ ಭಯಪಟ್ಟಿದ್ದೆ; ಅನುಶ್ರೀ

ನಟಿ, ನಿರೂಪಕಿ ಅನುಶ್ರೀ ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟರು. ಸ್ನೇಹಿತ ರೋಷನ್ ಜೊತೆ ಹಸೆಮಣೆ ಏರಿದ್ದರು. ಖಾಸಗಿ ರೆಸಾರ್ಟ್‌ನಲ್ಲಿ ಇಬ್ಬರ ಮದುವೆ ನಡೀತು. ಚಿತ್ರರಂಗದ ತಾರೆಯರು ಕೂಡ ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭ ಹಾರೈಸಿದ್ದರು. ತಮ್ಮ ಹಾಗೂ ರೋಷನ್ ಲವ್ ಸ್ಟೋರಿಯನ್ನು Gold Class With Mayuraa ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಅನುಶ್ರೀ ಮೆಲುಕು ಹಾಕಿದ್ದಾರೆ.

ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಹಾಗೂ ರೋಷನ್ ಬಾಲ್ಯದ ಸ್ನೇಹಿತರು. ಶ್ರೀದೇವಿ ಮೂಲಕ ಮೊದಲ ಬಾರಿಗೆ ಹೊಸಪೇಟೆಯಲ್ಲಿ ರೋಷನ್ ಪರಿಚಯವಾಗಿತ್ತು. ಮೊದಲಿಗೆ ಹಾಯ್, ಬೈ ಫ್ರೆಂಡ್ಸ್ ಎನ್ನುವಂತೆ ಇದ್ದೆವು. ನನ್ನನ್ನು ಕಾಫಿಗೆ ಕರೆದುಕೊಂಡು ಹೋಗಬೇಕು ಎಂದು ಶ್ರೀದೇವಿ ಮೂಲಕ ರೋಷನ್ ಕೇಳಿದ್ದರು. ಆರಂಭದಲ್ಲಿ ನಾನು ಭಯಪಟ್ಟಿದ್ದೆ. ರಾಜ್‌. ಬಿ ಶೆಟ್ಟಿ ಜೊತೆ ಈ ಬಗ್ಗೆ ಚರ್ಚಿಸಿದ್ದೆ. ಅವರು ಧೈರ್ಯ, ಸಲಹೆ ಕೊಟ್ಟ ಮೇಲೆ ರೋಷನ್ ಭೇಟಿಗೆ ಹೋಗಿದ್ದೆ ಎಂದು ಅನುಶ್ರೀ ಹೇಳಿದ್ದಾರೆ.

Anchor Anushree recalls First coffee date with Roshan She reveals her love story

ರೋಷನ್ ಜೊತೆಗಿನ ಫಸ್ಟ್ ಡೇಟ್ ಬಗ್ಗೆ ಮಾತನಾಡಿರುವ ಅನುಶ್ರೀ "ನನ್ನ ಜೀವನದಲ್ಲಿ ಯಾರು ನನ್ನನ್ನು ಕಾಫಿಗೆ ಕರೆದಿರಲಿಲ್ಲ. ಅದರಲ್ಲೂ ಒಬ್ಬ ಹುಡುಗ ಕಾಫಿಗೆ ಹೋಗೋಣ ಎಂದು ಕೇಳಿದ್ದೇ ಇಲ್ಲ. ಬೇಡದವರು ಕೇಳಿದ್ರು.. ಆಗ ಕಾಫಿಗೆ ವಿಷ ಹಾಕೋಣ ಅನ್ನಿಸಿತ್ತು. ರೋಷನ್ ಕೇಳಿದಾಗ ಮೊದಲಿಗೆ ಭಯವಾಗಿತ್ತು. ಶ್ರೀದೇವಿ ಬಳಿ ದುಂಬಾಲು ಬಿದ್ದು ನನ್ನನ್ನು ಕಾಫಿ ಕರೆದುಕೊಂಡು ಹೋಗಲು ರೋಷನ್ ಪ್ರಯತ್ನಿಸಿದ್ರು..ಬಳಿಕ ಈ ಬಗ್ಗೆ ರಾಜ್. ಬಿ ಶೆಟ್ಟಿ ಅವರನ್ನು ಭೇಟಿ ಆಗಿದ್ದೆ" ಎಂದು ಆ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಒಬ್ಬ ಹುಡುಗ ಕಾಫಿ ಕರೀತ್ತಿದ್ದಾನೆ ಎಂದು ರಾಜ್. ಬಿ ಶೆಟ್ಟಿಗೆ ಹೇಳಿದಾಗ ಸೋ ವಾಟ್, ಒಬ್ಬ ಹುಡುಗನ ಜೊತೆ ಕಾಫಿ ಹೋಗೋದ್ರಲ್ಲಿ ಏನಿದೆ ಎನ್ನುವಂತೆ ರಾಜ್ ಎಂದು ಪ್ರತಿಕ್ರಿಯಿಸಿದ್ದಾಗಿ ಅನುಶ್ರೀ ಹೇಳಿದ್ದಾರೆ. "ಹುಡುಗನ ಭೇಟಿಗೆ ಹೋದಾಗ ಜ್ಯೂಸ್‌ನಲ್ಲಿ ಏನಾದರೂ ಮಿಕ್ಸ್ ಮಾಡಿಕೊಟ್ಟುಬಿಟ್ರೆ ಹೇಗೆ ಎಂದು ಭಯ ಆಗ್ತಿದೆ ಎಂದು ರಾಜ್‌ಗೆ ಹೇಳ್ದೆ. ನೀನು ದೊಡ್ಡ ಮಿಸ್ ಯೂನಿವರ್ಸ್, ಐಶ್ವರ್ಯ ರೈ, ನಿನಗೆ ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿಕೊಟ್ಟುಬಿಡ್ತಾರೆ ಅಂದ್ರು.. ರಾಜ್ ಹಾಗೂ ಚೈತ್ರಾ ಆಚಾರ್ ಇಬ್ಬರೂ ಅವತ್ತು ಜೊತೆಗಿದ್ರು.. ಇಬ್ಬರೂ ಹುರಿದುಂಬಿಸಿದ್ರು.. ನೀನು ಹೋಗು ಭೇಟಿ ಆಗು, ನಿನಗೆ ಬಹುಶಃ ಒಬ್ಬ ಒಳ್ಳೆ ಸ್ನೇಹಿತ ಸಿಗಬಹುದು, ಒಳ್ಳೆ ವ್ಯಕ್ತಿ ಸಿಗಬಹುದು.. ಒಮ್ಮೆ ಭೇಟಿ ಮಾಡಿದ ಮಾತ್ರಕ್ಕೆ ಮದುವೆ ಆಗಿಬಿಡುತ್ತೆ ಅಂತ ಯಾಕೆ ಅಂದುಕೊಳ್ತೀಯಾ ಅಂದ್ರು.. ಸರಿ ಎಂದು ಭೇಟಿಗೆ ಒಪ್ಪಿಕೊಂಡೆ ಎಂದು ಅನುಶ್ರೀ ನೆನಪಿಸಿಕೊಂಡಿದ್ದಾರೆ.

Anchor Anushree recalls First coffee date with Roshan She reveals her love story

ಒರಾಯನ್ ಮಾಲ್‌ WTC ಕೆಫೆಯಲ್ಲಿ ರೋಷನ್ ಭೇಟಿ ಮಾಡಿದ್ದೆ.. "ಶೇಕ್ ಹ್ಯಾಂಡ್ ಮಾಡಿದ್ದಾಗ ಕೈ ಬೆವತ್ತು ಹೋಗಿತ್ತು.. ಬಳಿಕ ಮಾತನಾಡಲು ಆರಂಭಿಸಿದೆವು.. ನೋಡ್ತಾ ನೋಡ್ತಾ ಎರಡು ಗಂಡೆ ಆಗಿಬಿಟ್ಟಿತ್ತು. ರಾಜ್ ಬಿ ಶೆಟ್ಟಿ ಫೋನ್ ಮಾಡಿ, ಎಲ್ಲಾ ಓಕೆ ತಾನೇ, ಎರಡು ಗಂಟೆ ಆಯ್ತು ಅದ್ಕೆ ಕೇಳ್ದೆ ಅಂದ್ರು.. ಬಳಿಕ 4 ಗಂಟೆ ಆಯ್ತು.. ಮತ್ತೆ ರಾಜ್. ಬಿ ಶೆಟ್ಟಿ ಫೋನ್ ಮಾಡಿ ಹೋಗಲ್ಲ, ಮೀಟ್ ಮಾಡಲ್ಲ ಎನ್ನುತ್ತಿದ್ದೆ. 4 ಗಂಟೆ ಏನ್ ಮಾತನಾಡ್ತಿದ್ದೀಯಾ ಅಂತ ಕೇಳಿದ್ರು.. ಬಳಿಕ ಮಾತುಕತೆ ಮುಗಿಸಿ ಹೋಗಿ ರಾಜ್ ಭೇಟಿ ಮಾಡ್ದೆ.. ಹುಡುಗ ಇಷ್ಟ ಆದ ಎಂದೆ.. ಏನು ಇಷ್ಟ ಆಯ್ತು ಅಂದಾಗ ಬಹಳ ಒಳ್ಳೆ ಹುಡುಗ, ಆಡಿನರಿ ಹುಡುಗ ಅನ್ನಿಸಿತು ಎಂದು ಹೇಳಿದ್ದೆ.. ಮುಂದೆ ಸ್ನೇಹಿತರಾದೆವು" ಎಂದು ಅನುಶ್ರೀ ವಿವರಿಸಿದ್ದಾರೆ.

ಎರಡು ವರ್ಷ ಡೇಟ್ ಮಾಡಿದ್ವಿ.. ಯಾರಿಗೂ ಗೊತ್ತಾಗಲಿಲ್ಲ. ಯಾರೋ ಸ್ನೇಹಿತ ಅಥವಾ ಬಾಡಿಗಾರ್ಡ್ ಎಂದು ಸಾಕಷ್ಟು ಜನ ಅಂದುಕೊಂಡಿದ್ರು.. ಒಳ್ಳೆ ಸ್ನೇಹಿತರಾಗಿಬಿಟ್ಟೆವು.. ಬಳಿಕ ಇಬ್ಬರು ಮದುವೆ ಆಗೋಣ ಎಂದು ಮಾತನಾಡಿಕೊಂಡೆವು.. ಹೀಗೆ ನಮ್ಮ ಲವ್ ಸ್ಟೋರಿ ಮದುವೆವರೆಗೂ ಬಂತು ಎಂದು ಅನುಶ್ರೀ ತಿಳಿಸಿದ್ದಾರೆ.

More from Filmibeat

Read more about: anushree kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X