ಆಂಕರ್ ಅನುಶ್ರೀ ಸಂಭಾವನೆ ಹಾಗೂ ಯೂಟ್ಯೂಬ್ ಆದಾಯ ಎಷ್ಟು?
ನಿರೂಪಣೆ, ನೃತ್ಯ, ನಟನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಕನ್ನಡದ ಸ್ಟಾರ್ ಆಂಕರ್ ಎಂದರೆ ಅದು ಅನುಶ್ರೀ. ಅದರಲ್ಲೂ ಜೀ ಕನ್ನಡದಲ್ಲಿ ಪ್ರಸಾರ ಆಗುವ ಹೆಚ್ಚು ಕಡಿಮೆ ಪ್ರತಿಯೊಂದು ರಿಯಾಲಿಟಿ ಶೋಗಳಲ್ಲಿಯೂ ಇವರದ್ದೇ ಕಾರುಬಾರು. ಅತೀ ಹೆಚ್ಚು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿರುವ ಅನುಶ್ರೀ ಅವರು ಇದೂವರೆಗೂ ಇವರು ನಿರೂಪಣೆ ಮಾಡಿದ ಶೋಗಳೆಲ್ಲವೂ ಸೂಪರ್ ಹಿಟ್ ಆಗಿವೆ.
ಈ ಕಾರಣಕ್ಕಾಗಿಯೇ ಕನ್ನಡಿಗರ ಅಚ್ಚು ಮೆಚ್ಚಿನ ನಿರೂಪಕಿಯರಲ್ಲಿ ಅನುಶ್ರೀ ಅವರು ಟಾಪ್ ಸ್ಥಾನದಲ್ಲಿ ಇದ್ದಾರೆ. ಅನುಶ್ರೀ ಕೇವಲ ಟಿವಿ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ, ಸಿನಿಮಾ ಸಮಾರಂಭಗಳು, ಇವೆಂಟ್‌ಗಳಿಗೂ ಇವರು ನಿರೂಪಣೆ ಮಾಡುತ್ತಾರೆ.

ಸುಲಲಿತವಾಗಿ ಕನ್ನಡ ಮಾತಾಡುವ ಅನುಶ್ರೀ ಅವರ ನಿರೂಪಣೆಯ ಕಾರ್ಯಕ್ರಮಗಳನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಕರುನಾಡಿನ ಜನತೆ ಅನುಶ್ರೀ ಅವರ ನಿರೂಪಣೆಯನ್ನು ಎಂಜಾಯ್ ಮಾಡುತ್ತಿರುವುದೇನೋ ನಿಜ.
ತುಳು ಕಾರ್ಯಕ್ರಮದಿಂದ ಎಂಟ್ರಿ
ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಅನುಶ್ರೀ ಅವರು ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈಟಿವಿ ಕನ್ನಡ ವಾಹಿನಿಯ 'ಡಿಮಾಂಡೆಪ್ಪೋ ಡಿಮಾಂಡು' ಕಾರ್ಯಕ್ರಮದ ಮೂಲಕ ಮನೆಮಾತಾದರು. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 1ರಲ್ಲಿ ಭಾಗವಹಿಸಿದ್ದರು. ಬಳಿಕ ಬೆಂಕಿಪಟ್ಟಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇವರು 2011ರಲ್ಲಿ ತೆರೆಕಂಡ ಮುರಳಿ ಮೀಟ್ಸ್ ಮೀರಾ ಚಿತ್ರದ ಡಬ್ಬಿಂಗ್ ಗೆ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದರು. ಹಾಗೆಯೇ 2015 ರಲ್ಲಿ ಜೀ ಕನ್ನಡದ ಪಾಪುಲರ್ ಆಂಕರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಹಲವು ಶೋಗಳ ನಿರೂಪಣೆ
ಇನ್ನು ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್ ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಆಂಕರ್ ಅನುಶ್ರೀ ಅವರು ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. 'ಸರಿಗಮಪ' ಮಾತ್ರವಲ್ಲದೇ, 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ', 'ಕುಣಿಯೋಣು ಬಾರಾ', 'ಮಹಾನಟಿ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಚಿನ್ನದ ಬೇಟೆ', 'ಸೂಪರ್ ಸೀಸನ್' ಹೀಗೆ ಒಂದರ ಮೇಲೆ ಒಂದರಂತೆ ನಿರೂಪಣೆಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಡಿಕೆಡಿ ಮತ್ತು ಸರಿಗಮಪ ರಿಯಾಲಿಟಿ ಶೋಗಳ ಹಲವು ಸೀಸನ್‌ಗಳನ್ನು ಹೋಸ್ಟ್ ಮಾಡಿಕೊಂಡು ಬಂದಿದ್ದಾರೆ.
ಅನುಶ್ರೀ ಆದಾಯ ಎಷ್ಟು ಗೊತ್ತಾ?
ಅಷ್ಟೇ ಅಲ್ಲದೇ ಆಂಕರ್ ಅನುಶ್ರೀ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ನಡೆಸುತ್ತಿದ್ದಾರೆ. ಸೆಲಬ್ರಿಟಿಗಳನ್ನು ಕರೆದು ಸಂದರ್ಶನ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಆದಾಯದ ಬಗ್ಗ ಭಾರೀ ಚರ್ಚೆ ನಡೆಯುತ್ತದೆ. ಆಕೆಯ ಯೂಟ್ಯೂಬ್ ಚಾನೆಲ್‌ಗೆ 1.05 ಮಿಲಿಯನ್ ಸಬ್ಸ್ಕ್ರೈಬರ್ಸ್ ಇದ್ದಾರೆ. ಈಗಾಗಲೇ ಅನುಶ್ರೀ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಟ್ಟು 264 ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ 219 ಲಾಂಗ್ ವಿಡಿಯೋಗಳು ಹಾಗೂ 45 ಶಾರ್ಟ್ಸ್ ಅಪ್ ಲೋಡ್ ಮಾಡಿದ್ದಾರೆ. ಇದರಿಂದ ಇದುವರೆಗೂ ಆಂಕರ್ ಅನುಶ್ರೀ ಅವರು 70 ಲಕ್ಷ ರೂ. ಅಧಿಕ ಆದಾಯ ಬಂದಿರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ.
ನಿರೂಪಣೆಗೆ ಸಂಭಾವನೆ
'ಡಿಮ್ಯಾಂಡಪ್ಪೋ ಡಿಮ್ಯಾಂಡ್' ಶೋ ಪ್ರತಿ ಎಪಿಸೋಡ್‌ಗೆ 250 ರೂ. ಸಿಗುತ್ತಿತ್ತು. ಆದರೆ ಈಗ ಒಂದು ಶೋ ನಿರೂಪಣೆಗೆ 1 ಲಕ್ಷ ರೂ.ಗೂ ಹೆಚ್ಚು ಸಂಭಾವನೆ ಪಡೆಯುವ ಅಂದಾಜಿದೆ. ಒಂದು ಈವೆಂಟ್ ನಿರೂಪಣೆಗೆ 1 ಲಕ್ಷಕ್ಕೂ ಹೆಚ್ಚು ಚಾರ್ಜ್ ಮಾಡುತ್ತಾರಂತೆ. ಇನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಒಂದು ಸಂದರ್ಶನಕ್ಕೂ ಹಣ ಡೆಯುತ್ತಾರೆ. ಒಟ್ಟಾರೆ ನಿರೂಪಣೆಯಿಂದ ಗಳಿಸುವ ಹಣಕ್ಕೆ ಹೋಲಿಸಿಕೊಂಡರೆ ಯೂಟ್ಯೂಬ್‌ನಿಂದ ಬರುವ ಆದಾಯ ಏನೇನು ಅಲ್ಲ ಎನ್ನುವವರು ಇದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಅನುಶ್ರೀ ಬಣ್ಣ ಹಚ್ಚಿದ್ದರು.


Click it and Unblock the Notifications











