"ಟೊಮ್ಯಾಟೋ ಮಾರೋ ಹುಡ್ಗಿ ಇದ್ದಂಗೆ ಇದ್ದಾರಲ್ಲ": ಅನುಶ್ರೀ ಕಾಲೇಜು ಐಡಿಗೆ ಮಸ್ತ್ ಕಮೆಂಟ್
ತಮ್ಮ ಪಟಪಟ ಮಾತುಗಳಿಂದಲೇ ಮನೆ ಕಟ್ಟುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಮಾತಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ನಲ್ಲಿ ತಮ್ಮ ಮಾತಿನ ನೈಪುಣ್ಯತೆಗೆ ಹೆಸರಾಗಿರುವ ಖ್ಯಾತ ಕನ್ನಡ ನಿರೂಪಕಿ ಅನುಶ್ರೀ ಅವರು ಈಗ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಅದ್ಭುತ ಕನ್ನಡ ನಿರೂಪಣೆ ಹಾಗೂ ಸೆನ್ಸ್ ಆಫ್ ಹ್ಯೂಮರ್‌ನಿಂದ ಕನ್ನಡ ಮನೆ ಮನೆಯ ಮಗಳಾಗಿರುವ ಅನುಶ್ರೀ ಅವರು ಕನ್ನಡದ ಯುವ ನಿರೂಪಕರಿಗೆ ಒಂದು ಐಕಾನ್ ಎಂದರೆ ತಪ್ಪಾಗಲ್ಲ.
ಒಂದೆರಡು ಸಿನಿಮಾಗಳನ್ನು ಮಾಡಿದರೂ ಸಿನಿಮಾ ಅಷ್ಟು ಹಿಟ್ ಆಗದೆ ನಿರೂಪಕಿಯಾಗಿಯೇ ಚೆನ್ನಾಗಿ ಹೆಸರು ಮಾಡಿರುವ ನಟಿ ಅನುಶ್ರೀ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್‌ನಲ್ಲಿಯೂ ಹಲವಷ್ಟು ದಿನ ಇದ್ದು ಬಹಳ ಹೆಸರು ಮಾಡಿದ ಇವರು, ವರ್ಷಾನು ವರ್ಷಗಳಿಂದ ಸರಿಗಮಪ ಕನ್ನಡ ಹಾಡಿನ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಷ್ಟೇ ಯಾಕೆ ಇದೀಗ ಇವರ ಜನಪ್ರಿಯತೆ ಹೆಚ್ಚಿದ್ದು ಬೇರೆ ಎಲ್ಲಾ ಸಿನಿಮಾ ಪ್ರಮೋಷನ್ ಶೂಟಿಂಗ್ ಇತ್ಯಾದಿ ಪ್ರೆಸ್ ಮೀಟ್‌ಗಳಿಗೂ ಇವರನ್ನೇ ಜನ ನಿರೂಪಕಿಯಾಗಿ ಕರೆಯುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಾಲ್ಯದ ನೆನಪಿನ ಸಂಕೇತವಾಗಿ ತಮ್ಮ ಶಾಲಾ ಐಡಿ ಕಾರ್ಡ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಹುಡುಗಿ ಯಾರೆಂದು ಹೇಳಿ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಪಡೆದು ಬಹಳಷ್ಟು ಫನ್ನಿ ಕಾಮೆಂಟ್‌ಗಳಿಗೂ ಸಾಕ್ಷಿಯಾಗಿದೆ. ಹೌದು! ಅನುಶ್ರೀ ಅವರ ಬಾಲ್ಯದ ಫೋಟೋವನ್ನು ನೋಡುತ್ತಾ ಅವರ ಅಭಿಮಾನಿಗಳು ಅವರ ಕಾಲಳಿದಿದ್ದು ಬೇರೆ ಬೇರೆ ರೀತಿಯಲ್ಲಿ ತಮ್ಮ ಖುಷಿ ಬೆರಗು ಹಾಗೂ ಸಂತೋಷವನ್ನು ಕಾಮೆಂಟ್ ಮಾಡಿದ್ದಾರೆ.
"ಯಾರೋ ಟೊಮ್ಯಾಟೋ ಮಾರೋ ಹುಡ್ಗಿ ಇದ್ದ ಹಾಗೆ ಇದ್ದಾಳೆ.." ಅಂತ ಒಬ್ಬರು ಕಾಲೆಳೆದರೆ, "ಇನ್ನೂ ಕೆಲವರು ನಿಮ್ಮ ಫೋಟೋವನ್ನೇ ಹಾಕಿ ಯಾರಿದು ಅಂತಾ ಪ್ರಶ್ನೆ ಕೇಳ್ತಿದ್ದೀರಲ್ಲ ನಿಮಗೆ ಏನ್ ಹೇಳೋಣ" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು "ನಮ್ಮನೆ ಪಕ್ಕದಲ್ಲಿರೋ ಶಾಂತಮ್ಮ ಅವರ ಎರಡನೇ ಮಗಳು.." ಎಂದು ಇನ್ನೊಬ್ಬರು ಬರೆದು ಕಾಲೆಳೆದಿದ್ದಾರೆ.

"ಇವರು ಕನ್ನಡದ ಫೇಮಸ್ ಆಂಕರ್ ಅಲ್ವಾ..? ಎಂದು ಕಾಮೆಂಟ್ ಮಾಡಿದ್ದಾರೆ. ಇವ್ಳು ನಮ್ ಹುಡ್ಗಿ ನಮಗೆ ಗೊತ್ತಿಲ್ವಾ.." ಎಂದು ಇದೇ ಪೋಸ್ಟ್‌ನಲ್ಲಿ ಅನುಶ್ರೀಗೆ ಹೇಳಿದ್ದಾರೆ. "ಈ ಹುಡುಗಿ ಬೆಂಗಳೂರಿನಲ್ಲಿ ಕಳೆದು ಹೋಗಿದ್ದಾಳೆ. ದಯವಿಟ್ಟು ಯಾರಿಗಾದರೂ ಕಂಡರೆ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ಒಪ್ಪಿಸಿ" ಎಂದು ಇನ್ನೊಬ್ಬರು ಬರೆದುಕೊಂಡಿದ್ದರೆ, ಮತ್ತೊಬ್ಬರು "ನಿಮ್ಮ ಮದುವೆ ಆಗಿದೆಯಾ ಹಣೆಯಲ್ಲಿ ಕುಂಕುಮ ಇದೆ..' ಎಂದು ತಮ್ಮ ಕುತೂಹಲವನ್ನು ಹೊರಹಾಕಿದ್ದಾರೆ.
ಅನುಶ್ರೀಯವರು ಎಚ್ಚರಿಕೆಯಿಂದ ತಮ್ಮ ಐಡಿ ಕಾರ್ಡ್‌ಅನ್ನು ಕ್ರಾಪ್ ಮಾಡಿದ್ದರೂ, ಕೆಲವರು ಅವರು ಓದಿದ್ದು ಯಾವ ಶಾಲೆ ಹಾಗೂ ಕಾಲೇಜು ಅನ್ನೋದನ್ನ ಬಹಿರಂಗಪಡಿಸಿದ್ದಾರೆ. "ಇದು ಅತ್ತಾವರದ ಸರೋಜಿನಿ ಮಧುಸೂಧನ್ ಖುಷಿ ಕಾಲೇಜು" ಎಂದು ಬರೆದಿದ್ದಾರೆ. "ಈ ಮುಖ ಎಲ್ಲೋ ನೋಡಿರೋ ಹಾಗಿದೆ..", "ಅಲ್ರೀ ನಿಮ್ದೆ ಫೋಟೋ ಹಾಕಿ.. ಯಾರಂತ ಕೇಳ್ತೀರಲ್ಲ......ಎಲ್ಲೋ ಎಳಸು ಅಂತ ಕಾಣತ್ತೆ.." ಎಂದೂ ಕಾಮೆಂಟ್‌ಗಳು ಬಂದಿವೆ. "ಇವ್ಳು ನನ್ ಡವ್, ಟೊಮ್ಯಾಟೋ ಮಾರೋ ಹುಡ್ಗಿ" ಎಂದು ಇನ್ನೊಬ್ಬ ಬರೆದುಕೊಂಡಿದ್ದಾನೆ.
ಸೇಫ್ಟಿ ಗಾಗಿ ಅನುಶ್ರೀ ಅವರು ತಮ್ಮ ಕಾಲೇಜು ಹೆಸರನ್ನು ಕ್ರಾಪ್ ಮಾಡಿ ಹಾಕಿದ್ದರು. ಕಾಲೇಜನ್ನು ಬಹಿರಂಗಪಡಿಸಿ ಅದಕ್ಕೂ ಒಂದಷ್ಟು ಕಮೆಂಟ್ಗಳು ಬಂದಿದೆ. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಲ್ವಾ ಎಂದು ತಮ್ಮ ಫೋಟೋ ಕೆಳಗಡೆ ಕ್ಯಾಪ್ಷನ್ ಹಾಕಿಕೊಂಡಿರುವ ಅನುಶ್ರೀ ಅವರ ಈ ಮಾತಿಗೆ ಹೌದು ಎನ್ನುತ್ತಾ ಒಂದಷ್ಟು ಕಮೆಂಟ್‌ಗಳು ಬಂದರೆ ಅವರ ಬಾಲ್ಯದ ಫೋಟೋ ನೋಡಿ ಒಂದಷ್ಟು ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿಯಾಗಿ ನಿರೂಪಕಿಯಾಗಿ ಇದೀಗ ಕನ್ನಡ ಕರ್ನಾಟಕದಲ್ಲೆಲ್ಲೂ ಮನೆ ಮಾತಾಗಿರುವ ಅನುಶ್ರೀ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವಿದ್ದು ಆಗಾಗ ಒಳ್ಳೊಳ್ಳೆ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಇನ್ನು ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ಇವರು ನಟ ದಿವಂಗತ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಕುರಿತಾಗಿಯೂ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ.


Click it and Unblock the Notifications











